ತಪ್ಪತಸ್ಥ ವೈಭವ್‌.. BCCIಯಿಂದ ಶಿಕ್ಷೆ? ಜೂನ್ 20ಕ್ಕೆ ರೋಹಿತ್ ನಿವೃತ್ತಿ!?
ಟೀಂ IND ಹೆಡ್‌ ಕೋಚ್ DK?

ತಪ್ಪತಸ್ಥ ವೈಭವ್‌.. BCCIಯಿಂದ ಶಿಕ್ಷೆ?  ಜೂನ್ 20ಕ್ಕೆ ರೋಹಿತ್ ನಿವೃತ್ತಿ!?ಟೀಂ IND ಹೆಡ್‌ ಕೋಚ್ DK?

ಕ್ರಿಕೆಟ್ ಲೋಕದ ಇಂಟ್ರೆಸ್ಟಿಂಗ್ ಸುದ್ದಿಗಳು ನಿಮಗಾಗಿ.

ಇದನ್ನೂ ಓದಿ: 2027ರ ವಿಶ್ವಕಪ್ ರೇಸ್ ಗೆ ಕಿಶನ್ – ಸೆಂಚುರಿಯಲ್ಲೇ SLOT ಕೇಳಿದ್ರಾ?

ಮಹಿಳಾ T20 ವಿಶ್ವಕಪ್ 2026 ರಲ್ಲಿ ಭಾರತ ತಂಡ ನೆದರ್ಲ್ಯಾಂಡ್ಸ್ ವಿರುದ್ಧ 95 ರನ್‌ಗಳ ಐತಿಹಾಸಿಕ ಗೆಲುವು ಸಾಧಿಸಿದೆ. ರನ್‌ಗಳ ವಿಷಯದಲ್ಲಿ ವಿಶ್ವಕಪ್‌ನಲ್ಲಿ ಭಾರತದ ಅತಿದೊಡ್ಡ ಗೆಲುವಾಗಿದೆ. ಭಾರತ 209 ರನ್ ಗಳಿಸಿ, ನೆದರ್ಲ್ಯಾಂಡ್ಸ್ ತಂಡವನ್ನು 114 ರನ್‌ಗಳಿಗೆ ಆಲೌಟ್ ಮಾಡಿತು.  ಈ ಗೆಲುವಿನೊಂದಿಗೆ ಭಾರತ ಗ್ರೂಪ್ ಎ ಪಾಯಿಂಟ್‌ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಟಿ20 ವಿಶ್ವಕಪ್‌ನಲ್ಲಿ ನೆದರ್ಲ್ಯಾಂಡ್ಸ್‌ ವಿರುದ್ದದ ಪಂದ್ಯದಲ್ಲಿ ಸ್ಟಾರ್ ಸ್ಪಿನ್ನರ್ ಶ್ರೇಯಾಂಕ ಪಾಟೀಲ್ ಗಂಭೀರ ಗಾಯಗೊಂಡಿದ್ದಾರೆ. ಶ್ರೇಯಾಂಕ ಎಸೆದ ಮೊದಲ ಎಸೆತವನ್ನು ಸ್ಟ್ರೈಕ್‌ನಲ್ಲಿದ್ದ ಮೊಲ್ಕೆನ್‌ಬೋರ್ ಮಿಡ್-ಆನ್ ಕಡೆಗೆ ಆಡಿದರು. ಶ್ರೇಯಾಂಕ ಬೌಲಿಂಗ್ ಮಾಡಿದ ಬಳಿಕ ಚೆಂಡನ್ನು ಹಿಡಿಯಲು ಅದರ ಹಿಂದೆ ಓಡಿದರು. ಈ ವೇಳೆ ಶ್ರೇಯಾಂಕ  ಬಲಗಾಲು ಟ್ವಿಸ್ಟ್ ಆಗಿದೆ. ನಡೆದುಕೊಂಡು ಹೋಗಲು ಕೂಡ ಶ್ರೇಯಾಂಕಗೆ ಆಗಿಲ್ಲ, ಹೀಗಾಗಿ ಸ್ಟ್ರೆಚರ್ ಮೂಲಕ ಹೊರಗೆ ಹೋಗುವಂತೆ ಆಯ್ತು.

ಲಕ್ನೋದಲ್ಲಿ ಅಫ್ಘಾನಿಸ್ತಾನ ವಿರುದ್ಧದ ಏಕದಿನ ಪಂದ್ಯದಲ್ಲಿ ಭಾರತ 170 ರನ್‌ಗಳಿಂದ ಭರ್ಜರಿ ಜಯ ಸಾಧಿಸಿದೆ. ಇದರೊಂದಿಗೆ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ. ಶುಭ್​ಮನ್ ಗಿಲ್ ನಾಯಕನಾಗಿ ತಮ್ಮ ಮೊದಲ ಏಕದಿನ ಸರಣಿಯನ್ನು ಗೆದ್ದು ಇತಿಹಾಸ ನಿರ್ಮಿಸಿದರು. ಎರಡನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ 49.5 ಓವರ್‌ಗಳಲ್ಲಿ 402 ರನ್‌ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಅಫ್ಘಾನಿಸ್ತಾನ 44.3 ಓವರ್​ಗಳಲ್ಲಿ 232 ರನ್​ಗಳಿಗೆ ಆಲೌಟ್ ಆಯಿತು.

ಭಾರತದಲ್ಲೂ ಏಕದಿನ ಕ್ರಿಕೆಟ್ ಪಂದ್ಯಗಳು ಜನರನ್ನ ಸೆಳೆಯುವಲ್ಲಿ ವಿಪಲವಾಗುತ್ತಿದ್ದು, ರಣಜಿ ಪಂದ್ಯಗಳಿಗೆ ಸೇರುವ ಜನ ಅಂತಾರಾಷ್ಟ್ರೀಯ ಪಂದ್ಯಕ್ಕೆ ಬರುತ್ತಿಲ್ಲ. ಸೂಪರ್‌ಸ್ಟಾರ್ ಸಂಸ್ಕೃತಿಗೆ ಅಂತ್ಯ ಹಾಡಬೇಕು ಎಂದು ಗೌತಮ್ ಗಂಭೀರ್ ಬಯಸಿದ್ದರು. ಈಗ ಅದು ನಿಜವಾಗಿಯೂ ಆಗಿರುವಂತೆ ಕಾಣುತ್ತಿದೆ. ಲಕ್ನೋನ ಏಕನಾ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ  ಅಘ್ಘಾನ್ Vs ಟೀಂ ಇಂಡಿಯಾ ಪಂದ್ಯದಲ್ಲಿ ರೋಹಿತ್ ಶರ್ಮಾ, ಗಿಲ್ ಇದ್ದರೂ ಕೂಡ ಇಡೀ ಸ್ಟೇಡಿಯಂ ಖಾಲಿ ಖಾಲಿಯಾಗಿದ್ದು, ಇದ್ದಕ್ಕೆ ಸಾಕ್ಷಿಯಾಗಿದೆ.

ಅಫ್ಘಾನಿಸ್ತಾನ ಎ  ವಿರುದ್ಧದ ಪಂದ್ಯದಲ್ಲಿ  15 ವರ್ಷದ ವೈಭವ್ ಸೂರ್ಯವಂಶಿ ಅದ್ಭುತ ಡೈವಿಂಗ್ ಕ್ಯಾಚ್ ಹಿಡಿದು ಗಮನ ಸೆಳೆದಿದ್ದಾರೆ. ಭಾರತದ ಬೌಲರ್ ಅಂಶುಲ್ ಕಂಬೋಜ್ ಎಸೆದ ಚೆಂಡನ್ನು ಅಫ್ಘಾನ್ ಬ್ಯಾಟರ್ ಖಾಲಿದ್ ತಾನಿಪಾಲ್ ಲೆಗ್ ಸೈಡ್‌ಗೆ ಬಾರಿಸಿದರು. ಆಗ ಶಾರ್ಟ್ ಮಿಡ್-ವಿಕೆಟ್‌ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಸೂರ್ಯವಂಶಿ ಬಳಿ ಬಾಲ್ ಹೋಯ್ತು. ಆದರೆ, ಮೊದಲ ಪ್ರಯತ್ನದಲ್ಲಿ ಅವರಿಗೆ ಸರಿಯಾಗಿ ಕ್ಯಾಚ್ ಹಿಡಿಯಲು ಆಗಲಿಲ್ಲ. ಆದ್ರೆ ಕೈಯಿಂದ ಜಾರಿದ ಚೆಂಡು ನೆಲಕ್ಕೆ ಬೀಳುವ ಮುನ್ನವೇ, ಸೂರ್ಯವಂಶಿ ಸ್ವಲ್ಪವೂ ಧೈರ್ಯ ಕಳೆದುಕೊಳ್ಳದೆ ಮತ್ತೆ ಹಾರಿ ಕ್ಯಾಚ್ ಕಂಪ್ಲೀಟ್ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಪಂದ್ಯದ ವೇಳೆ ವೈಭವ್ ಸೂರ್ಯವಂಶಿಯ ವರ್ತನೆಯನ್ನು ಟೀಮ್ ಇಂಡಿಯಾದ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಖಂಡಿಸಿದ್ದಾರೆ.  ನಾನೇನಾದರೂ ಭಾರತ ಎ ತಂಡದ ಕೋಚ್ ಅಥವಾ ಮ್ಯಾನೇಜರ್ ಆಗಿರುತ್ತಿದ್ದರೆ, ಅಫ್ಘಾನಿಸ್ತಾನ್ ಎ ವಿರುದ್ಧದ ಪಂದ್ಯದಿಂದ ವೈಭವ್ ಸೂರ್ಯವಂಶಿ ಅವರನ್ನು ಖಂಡಿತವಾಗಿಯೂ ಹೊರಗಿಡುತ್ತಿದ್ದೆ. ಮೈದಾನದಲ್ಲಿ ಎಂತಹದ್ದೇ ಪ್ರಚೋದನೆ ಸಿಕ್ಕರೂ ಸಹ, ದೈಹಿಕವಾಗಿ ಜಗಳವಾಡುವುದು ಸರಿಯಲ್ಲ ಎಂಬುದನ್ನು ಅವರಿಗೆ ಅರ್ಥ ಮಾಡಿಸಲು ಈ ಕಠಿಣ ನಿರ್ಧಾರ ಅಗತ್ಯವಾಗಿತ್ತು ಎಂದು ಹೇಳಿದ್ದಾರೆ.

ಡಂಬುಲ್ಲಾದಲ್ಲಿ ನಡೆದ ಭಾರತ ಎ ಮತ್ತು ಶ್ರೀಲಂಕಾ ಎ  ನಡುವಿನ ಪಂದ್ಯದ ವೇಳೆ ನಡೆದ ವಿವಾದದಲ್ಲಿ ವೈಭವ್ ಸೂರ್ಯವಂಶಿ ಅವರಿಗೆ ಪಂದ್ಯ ಶುಲ್ಕದ ಶೇ.50 ರಷ್ಟು ಮತ್ತು ನಾಯಕ ತಿಲಕ್ ವರ್ಮಾಗೆ ಶೇ.30 ರಷ್ಟು ದಂಡ ವಿಧಿಸಲಾಗಿದೆ. ಶ್ರೀಲಂಕಾ ಆಟಗಾರನ ಜೊತೆಗಿನ ದೈಹಿಕ ವಾಗ್ವಾದ ಮತ್ತು ಅಂಪೈರ್ ಜೊತೆಗಿನ ವಾಗ್ವಾದಕ್ಕಾಗಿ ಬಿಸಿಸಿಐ  ಈ ಕ್ರಮ ಕೈಗೊಂಡಿದೆ.

ಜೂನ್ 20ಕ್ಕೆ ಅಫ್ಘಾನ್ ವಿರುದ್ದ ಚೆನ್ನೈ ಚಿಪಕ್ ಮೈದಾನದಲ್ಲಿ ನಡೆಯಲಿರುವ ಪಂದ್ಯವೇ ರೋಹಿತ್ ಶರ್ಮಾ ಕೊನೆಯ ಪಂದ್ಯ ಅನ್ನೋ ಮಾತುಗಳು, ಪೋಸ್ಟರ್‌ಗಳು ಹರಿದಾಡುತ್ತಿದೆ. ಆದ್ರೆ ಇದರ ಸತ್ಯ ಈಗ ರಿವಿಲ್ ಆಗಿದ್ದು, ರೋಹಿತ್ ಶರ್ಮಾ ಯಾವುದೇ ವಿದಾಯ ಘೋಷಣೆ ಮಾಡಿಲ್ಲ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ರೋಹಿತ್ ವಿದಾಯದ ಪೋಸ್ಟರ್ ನಕಲಿಯಾಗಿದೆ. ಈ ಕುರಿತು ಯಾವುದೇ ಘೋಷಣೆಯಾಗಲಿ, ಬಿಸಿಸಿಐಗೆ ಯಾವುದೇ ವಿದಾಯ ಪತ್ರವನ್ನು, ಸುಳಿವನ್ನು ನೀಡಿಲ್ಲ. ಇದು ಫೇಕ್ ಸುದ್ದಿಯಾಗಿದೆ.

ಭಾರತೀಯ ಕ್ರಿಕೆಟ್ ತಂಡದ ಮುಂದಿನ ಹೆಡ್ ಕೋಚ್ ಸ್ಥಾನಕ್ಕೆ ಯಾರು ಬರಲಿದ್ದಾರೆ ಎಂಬ ಚರ್ಚೆಗಳು ದಿನದಿಂದ ದಿನಕ್ಕೆ ಜೋರಾಗುತ್ತಿದ್ದು, ಈ ಮಧ್ಯೆ ವಿಕೆಟ್ ಕೀಪರ್ ಬ್ಯಾಟರ್ ಜಿತೇಶ್ ಶರ್ಮಾ ನೀಡಿರುವ ಹೇಳಿಕೆ ಭಾರಿ ಸಂಚಲನ ಸೃಷ್ಟಿಸಿದೆ. ಟೀಮ್ ಇಂಡಿಯಾದ ಹೆಡ್ ಕೋಚ್ ಆಗಲು ಬೇಕಾದ ಎಲ್ಲಾ ಅರ್ಹತೆ, ಕ್ರಿಕೆಟ್ ಜ್ಞಾನ ಮತ್ತು ಅದ್ಭುತ ಸಾಮರ್ಥ್ಯ ದಿನೇಶ್ ಕಾರ್ತಿಕ್ ಅವರ ಬಳಿ ಇದೆ ಎಂದು ಜಿತೇಶ್ ಶರ್ಮಾ ಅಭಿಪ್ರಾಯಪಟ್ಟಿದ್ದಾರೆ.

IPL ಸೀಸನ್-20 ಆರಂಭಕ್ಕೆ ತಾತ್ಕಾಲಿಕ ಡೇಟ್ ಫಿಕ್ಸ್ ಮಾಡಲಾಗಿದೆ. ಅದರಂತೆ ಐಪಿಎಲ್ 2027 ಮಾರ್ಚ್ 10 ರಿಂದ ಶುರುವಾಗಲಿದೆ. ಅಲ್ಲದೆ ಫೈನಲ್ ಪಂದ್ಯವನ್ನು ಮೇ 15 ರೊಳಗೆ ಮುಗಿಸಲು ಯೋಜನೆ ರೂಪಿಸಲಾಗಿದೆ. ಪ್ರಸ್ತುತ ಇರುವ 74 ಪಂದ್ಯಗಳ ಸ್ವರೂಪದಲ್ಲೇ 2027ರ ಐಪಿಎಲ್ ಟೂರ್ನಿ ಮುಂದುವರಿಯಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ಹೇಳಿದ್ದಾರೆ.

Kishor KV