HEADನೇ ಕಳ್ಕೊಂಡ ಹೈದ್ರಾಬಾದ್ – ಸೂರ್ಯವಂಶಿ ಇದ್ರೂ RRಗೆ ತಲೆಬಿಸಿ
Costly ಪ್ಲೇಯರ್ ಗಳೇ ಕಾಸ್ಟ್ಲಿ ಆಗ್ತಾರಾ?

HEADನೇ ಕಳ್ಕೊಂಡ ಹೈದ್ರಾಬಾದ್ – ಸೂರ್ಯವಂಶಿ ಇದ್ರೂ RRಗೆ ತಲೆಬಿಸಿCostly ಪ್ಲೇಯರ್ ಗಳೇ ಕಾಸ್ಟ್ಲಿ ಆಗ್ತಾರಾ?

2027ರ ಐಪಿಎಲ್​ಗೆ ರಿಟೇನ್ ಹಾಗೆ ರಿಲೀಸ್ ಲಿಸ್ಟ್ ಅನೌನ್ಸ್ ಆಗಿದೆ. ಇನ್ನೇನಿದ್ರೂ ಮಿನಿ ಆಕ್ಷನ್ ಗೆ ರೆಡಿ ಆಗೋದಷ್ಟೇ ಬಾಕಿ. ಆದ್ರೆ ಕೆಲ ಫ್ರಾಂಚೈಸಿಗಳು ಗೇಮ್ ​ಚೇಂಜರ್​ಗಳನ್ನೇ ರಿಲೀಸ್ ಮಾಡಿದ್ದಾರೆ. ಸೋ ನೆಕ್ಸ್​ಟ್ ಖರೀದಿ ವೇಳೆ ಬಿಗ್ ಫಿಶ್​ಗಳಿಗೇ ಗಾಳ ಹಾಕ್ಬೇಕಿದೆ. 20ನೇ ಸೀಸನ್ ಐಪಿಎಲ್​ನ ಸಿದ್ಧತೆ ಶುರುವಾಯ್ತು. ಫ್ರಾಂಚೈಸಿಗಳ ರಿಲೀಸ್ ಹಾಗೇ ರಿಟೇನ್ ಲಿಸ್ಟ್ ಹೊರಬಿದ್ದಿದ್ದು ಈ ಪೈಕಿ ಕೆಲ ತಂಡಗಳು ಅರ್ಧಕ್ಕರ್ಧ ಪ್ಲೇಯರ್​ಗಳನ್ನ ರಿಲೀಸ್ ಮಾಡಿದ್ರೆ ಇನ್ನೂ ಕೆಲವ್ರು ಜಸ್ಟ್ ಬೆಂಚ್​ನಲ್ಲಿದ್ದವ್ರನ್ನ ಮಾತ್ರ ಬಿಟ್ಟುಕೊಟ್ಟಿದ್ದಾರೆ. ಅದ್ರಲ್ಲೂ ಕೆಲ ಕಾಸ್ಟ್ಲಿ ಪ್ಲೇಯರ್​ಗಳನ್ನ ರಿಲೀಸ್ ಮಾಡಿ ಪರ್ಸ್ ಬ್ಯಾಲೆನ್ಸ್ ಹೆಚ್ಚಿಸಿಕೊಂಡಿರೋ ತಂಡಗಳಿಗೆ ಮಿನಿ ಆಕ್ಷನ್ ಕಾಸ್ಟ್ಲಿಯಾಗೋ ಸಾದ್ಯತೆಗಳೂ ಇದೆ.

ಇದನ್ನೂ ಓದಿ : KL ಓಪನರ್.. DDPಗಿಲ್ವಾ ಚಾನ್ಸ್? – ನಾಲ್ವರು ಫಾಸ್ಟ್ ಬೌಲರ್ಸ್ ಯಾಕೆ?

ರಾಜಸ್ಥಾನದಿಂದ ಹೊರಬಂದ ಶಿಮ್ರಾನ್ ಹೆಟ್ಮೆಯರ್!

ರಾಜಸ್ಥಾನ ರಾಯಲ್ಸ್ ತಂಡ ಶಿಮ್ರಾನ್ ಹೆಟ್ಮೆಯರ್ ಅವರನ್ನು ಬಿಡುಗಡೆ ಮಾಡಿ 11 ಕೋಟಿ ರೂಪಾಯಿ ಉಳಿಸಿಕೊಂಡಿದೆ. ಫಿನಿಶಿಂಗ್ ರೋಲ್​ನಲ್ಲಿ ಗೇಮ್ ಚೇಂಜರ್ ಆಗಿದ್ದ ಹೆಟ್ಮೆಯರ್ ರಿಲೀಸ್ ಆಗಿದ್ರಿಂದ ಮಿನಿ ಆಕ್ಷನ್​ನಲ್ಲೂ ಬೆಸ್ಟ್ ಫಿನಿಶರ್​ನೇ ಹುಡುಕ್ಬೇಕಿದೆ. ಹೆಟ್ಮೆಯರ 94 ಐಪಿಎಲ್ ಪಂದ್ಯಗಳಲ್ಲಿ 1,560 ರನ್ ಗಳಿಸಿದ್ದಾರೆ, 96 ಸಿಕ್ಸರ್‌ಗಳು ಮತ್ತು ಸುಮಾರು 149 ವೃತ್ತಿಜೀವನದ ಸ್ಟ್ರೈಕ್ ರೇಟ್ ಹೊಂದಿದ್ದಾರೆ. 2022 ರಲ್ಲಿ ರಾಜಸ್ಥಾನ ಫೈನಲ್ ಪ್ರವೇಶಿಸಿದ್ದು ಆ ಸೀಸನ್​ನಲ್ಲಿ 314 ರನ್‌ಗಳನ್ನು ಗಳಿಸಿದರು. ಆದ್ರೆ 2026 ರಲ್ಲಿ ಹೆಟ್ಮೆಯರ್ 113.04 ರ ಸ್ಟ್ರೈಕ್ ರೇಟ್‌ನಲ್ಲಿ ಕೇವಲ 78 ರನ್‌ಗಳನ್ನು ಗಳಿಸಿದರು. ಹೀಗಾಗಿ ಆರ್​​ಆರ್ ಫಿನಿಶಿಂಗ್ ಪವರ್ ಹುಡುಕಿಕೊಳ್ಬೇಕಿದೆ.

ಚೆನ್ನೈ ತಂಡದಿಂದ ಹೊರ ಬಂದ ಮ್ಯಾಟ್ ಹೆನ್ರಿ!

ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲೂ ಸಾಕಷ್ಟು ಬದಲಾವಣೆಗಳಾಗಿವೆ. ನ್ಯೂಜಿಲೆಂಡ್ ವೇಗಿ ಮ್ಯಾಟ್ ಹೆನ್ರಿ ಅವರನ್ನು ಬಿಡುಗಡೆ ಮಾಡಿದೆ. ಹೆನ್ರಿ ಇತ್ತೀಚೆಗೆ ಚೆನ್ನಾಗಿ ಪರ್ಫಾಮ್ ಮಾಡ್ತಿದ್ರು. ನವೆಂಬರ್ 13 ರಂದು,  ಮೌಂಟ್ ಮೌಂಗನುಯಿಯಲ್ಲಿ ತಮ್ಮ ವೃತ್ತಿಜೀವನದ ಅತ್ಯುತ್ತಮ 6/27 ಗಳಿಸಿದರು. ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ತಮ್ಮ ಆರಂಭಿಕ ಓವರ್‌ನಲ್ಲಿ ಡಕ್ ಔಟ್ ಮಾಡಿದರು. ಭಾರತವು 89 ರನ್‌ಗಳಿಗೆ ಆಲೌಟ್ ಆಗಿದ್ದರಿಂದ ನ್ಯೂಜಿಲೆಂಡ್ 244 ರನ್‌ಗಳಿಂದ ಗೆದ್ದಿತು. ಸೋ ಈಗ ಹೆನ್ರಿಗಿಂತ ಬೆಟರ್ ಆಪ್ಶನ್ ಹುಡುಕ್ಬೇಕಿದೆ.

ಆಡಮ್ ಮಿಲ್ನೆಯನ್ನು ಕೈಬಿಟ್ಟ ರಾಜಸ್ಥಾನ!

ಇನ್ನಯ ಹೈಪ್ರೊಫೈಲ್ ರಿಲೀಸ್​ಗಳ ಪೈಕಿ ಆಡಂ ಮಿಲ್ನೆ ಕೂಡ ಇದ್ದಾರೆ. ಇತ್ತಿಚೆಗೆ ಟಿ-20ಐ ಪ್ರದರ್ಶನ ಚೆನ್ನಾಗಿತ್ತು. ಇತ್ತೀಚೆಗೆ ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ನಡೆದ ಐದು ಪಂದ್ಯಗಳ ಟಿ-20ಐ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತದ ವಿರುದ್ಧ ನ್ಯೂಜಿಲೆಂಡ್ ಏಳು ವಿಕೆಟ್‌ಗಳ ಜಯ ಸಾಧಿಸಿತ್ತು. ಈ ಮ್ಯಾಚಲ್ಲಿ  ರಾಜಸ್ಥಾನ್ ರಾಯಲ್ಸ್ ಪರ ಆಡ್ತಿದ್ದ ವೇಗಿ ಆಡಮ್ ಮಿಲ್ನೆ ಪಂದ್ಯಶ್ರೇಷ್ಠರಾಗಿದ್ರು. ನಾಲ್ಕು ಓವರ್‌ಗಳಲ್ಲಿ 19 ರನ್ ನೀಡಿ 4 ವಿಕೆಟ್ ಪಡೆದು, ಪಂದ್ಯದ ಯಾವುದೇ ಬೌಲರ್ ಗಳಿಸಿದ ಅತ್ಯುತ್ತಮ ಬೌಲರ್ ಎನಿಸಿಕೊಂಡರು. ಆದ್ರೀಗ ಮಿಲ್ನೆಯನ್ನ ಕೈಬಿಟ್ಟಿರೋದು ಆರ್​ಆರ್​ಗೆ ಸ್ವಲ್ಪ ಕ್ರೂಶಿಯಲ್ ಆಗಬಹುದು.

ಐಪಿಎಲ್ ನಿಂದ ಹೊರಬಂದ ಹೆಡ್.. ಹೈದ್ರಾಬಾದ್ ಗೆ ತಲೆಬಿಸಿ!

ಇನ್ನು ಐಪಿಎಲ್​ನಲ್ಲಿ ಮೋಸ್ಟ್ ಡೇಂಜರಸ್ ಓಪನರ್ಸ್ ಆಗಿದ್ದಂತ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಕಾಂಬಿನೇಷನ್ ಮುಂದಿನ ಸೀಸನ್​ಗೆ ನೋಡೋಕೆ ಸಿಗಲ್ಲ. ಯಾಕಂದ್ರೆ ಟ್ರಾವಿಸ್ ಹೆಡ್ 2027ರ ಐಪಿಎಲ್ ಆಡದಿರಲು ನಿರ್ಧರಿಸಿದ್ದಾರೆ. ಇಂಟರ್ ನ್ಯಾಷನಲ್ ಪಂದ್ಯಗಳ ಶೆಡ್ಯೂಲ್​ನಿಂದ ಹಿಂದೆ ಸರಿದಿದ್ದಾರೆ. ಹೀಗಾಗಿ ಹೈದ್ರಾಬಾದ್​ಗೆ ಮತ್ತೊಬ್ಬ ಪವರ್ ಹಿಟ್ಟರ್ ಓಪನರ್​ನೇ ಹುಡಕಬೇಕಿದೆ. ಅಭಿಷೇಕ್ ಜೊತೆ ಯಾರು ಇನ್ನಿಂಗ್ಸ್ ಓಪನ್ ಮಾಡ್ತಾರೆ ಅನ್ನೋದೇ ಈಗಿರೋ ಪ್ರಶ್ನೆ. ಹೀಗೆ ಸಾಕಷ್ಟು ಫ್ರಾಂಚೈಸಿಗಳಿಂದ ಗೇಮ್​ ಚೇಂಜರ್​ಗಳೇ ಹೊರ ಬಿದ್ದಿರೋದ್ರಿಂದ ಮಿನಿ ಆಕ್ಷನ್ ಫೈಪೋಟಿ ಕೂಡ ಜೋರಾಗಿರುತ್ತೆ.

Shantha Kumari

Leave a Reply

Your email address will not be published. Required fields are marked *