KKRಗಿಲ್ಲ ಕ್ಯಾಪ್ಟನ್.. MIಗೆ ಬೇಕು ಲೀಡರ್ – ಪಟ್ಟದ ಆಟದಲ್ಲಿ SAFE ಆದವರೆಷ್ಟು?
2027ರ IPLನ ನಾಯಕರು ಯಾರೆಲ್ಲಾ?

ಐಪಿಎಲ್ ಮಿನಿ ಆಕ್ಷನ್ಗೆ ಆಟಗಾರರ ರಿಲೀಸ್ ಪಟ್ಟಿ ಅನೌನ್ಸ್ ಆಗೋ ಮೊದಲು ಕ್ಯಾಪ್ಟನ್ಗಳ ವಿಚಾರದಲ್ಲೂ ಸಾಕಷ್ಟು ಕ್ಯೂರಿಯಾಸಿಟಿ ಇತ್ತು. ರಿಟೇನ್ ಲಿಸ್ಟ್ನಲ್ಲಿ ಯಾವೆಲ್ಲಾ ಕ್ಯಾಪ್ಟನ್ಸ್ ಸೇಫ್ ಆಗ್ತಾರೆ ಯಾರು ಹೊರ ಬರ್ತಾರೆ ಅನ್ನೋ ಬಗ್ಗೆ ಸಾಕಷ್ಟು ಚರ್ಚೆಗಳಾಗಿದ್ವು. ಈಗ ಈ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಿದೆ.
ಇದನ್ನೂ ಓದಿ : ದಾಖಲೆ ಮುರಿದರೆ ಫೆರಾರಿ ಕಾರು ಕೊಡಿಸೋದಾಗಿ ಅಪ್ಪನ ಸವಾಲು –ಆರ್ಯವೀರ್ ಸೆಹ್ವಾಗ್ ಕೈ ತಪ್ಪಿದ ಕಾರು..!
20ನೇ ಐಪಿಎಲ್ಗೆ ಸಿದ್ಧವಾಗ್ತಿರೋ ತಂಡಗಳಿಗೆ ಅದನ್ನ ಸಮರ್ಥವಾಗಿ ಮುನ್ನಡೆಸೋ ಸಾರಥಿಯ ಆಯ್ಕೆಯೂ ತುಂಬಾನೇ ಮುಖ್ಯ. ಬಹುತೇಕ ಟೀಮ್ಗಳಲ್ಲಿ ಯಾವುದೇ ಬದಲಾವಣೆಗಳನ್ನ ಮಾಡದೇ ಹಿಂದಿನ ನಾಯಕರೇ ಮುಂದಿನ ಆವೃತ್ತಿಯಲ್ಲೂ ಕ್ಯಾಪ್ಟನ್ಸ್ ಆಗಿರ್ತಾರೆ. ಬಟ್ ಮೂರು ತಂಡಗಳಿಗೆ ಹೊಸ ನಾಯಕರ ಅನಿವಾರ್ಯತೆ ಇದೆ. ಌಂಡ್ ರೇಸ್ ಕೂಡ ಸ್ಟಾರ್ಟ್ ಆಗಿದೆ. ಕೆಲ ತಂಡಗಳಲ್ಲಿ ಈಗ್ಲೂ ಬದಲಾವಣೆ ರೂಮರ್ಸ್ ಅಂತೂ ಇದ್ದೇ ಇದೆ.
20ನೇ ಸೀಸನ್.. ಹೊಸ ಕ್ಯಾಪ್ಟನ್ಸ್!
ತಂಡ 2026ರ ಕ್ಯಾಪ್ಟನ್ ಕಾರಣ
ಮುಂಬೈ ಹಾರ್ದಿಕ್ ಪಾಂಡ್ಯ ಪಂಜಾಬ್ ಗೆ ಟ್ರೇಡ್
ಲಕ್ನೋ ರಿಷಭ್ ಪಂತ್ ಡೆಲ್ಲಿಗೆ ಟ್ರೇಡ್
ಕೊಲ್ಕತ್ತಾ ಅಜಿಂಕ್ಯ ರಹಾನೆ ತಂಡದಿಂದ ರಿಲೀಸ್
ಅಲ್ಲಿಗೆ ಮೂರು ತಂಡಗಳಲ್ಲಿ ಅಟ್ ಪ್ರಸೆಂಟ್ ಕ್ಯಾಪ್ಟನ ಇಲ್ಲ. ಹೀಗಾಗಿ 20ನೇ ಆವೃತ್ತಿಗೂ ಮುನ್ನ ಹೊಸ ನಾಯಕನನ್ನ ನೇಮಕ ಮಾಡೋದು ಅನಿವಾರ್ಯ ಇದೆ. ಮುಂಬೈನಲ್ಲಂತೂ ಕ್ಯಾಪ್ಟನ್ಸಿ ರೇಸ್ನಲ್ಲಿ ಸಾಕಷ್ಟು ಆಪ್ಶನ್ಸ್ ಇದೆ. ಇನ್ನು ಕೆಕೆಆರ್ ಹಾಗೇ ಲಕ್ನೋ ಸೂಪರ್ ಜೇಂಟ್ಸ್ ಮಿನಿ ಆಕ್ಷನ್ ಬಳಿಕ ನಾಯಕ ಯಾರು ಅನ್ನೋದನ್ನ ಘೋಷಣೆ ಮಾಡ್ಬೋದು. ಹಾಗೇ ಮಿನಿ ಆಕ್ಷನ್ನಲ್ಲಿ ಖರೀದಿ ಮಾಡಿ ಕ್ಯಾಪ್ಟನ್ಸಿ ನೀಡಬಹುದಾದ ಬಿಗ್ ನೇಮ್ಸ್ ಅಂತಾ ಯಾರೂ ಇಲ್ಲ. ಇದ್ದವ್ರೆಲ್ಲಾ ಡೈರೆಕ್ಟ್ ಟ್ರೇಡ್ ಡೀಲ್ ಆಗಿರೋದ್ರಿಂದ ಬಹುಶಃ ಟೀಮ್ನಲ್ಲಿ ಇರೋರನ್ನೇ ಫೈನಲ್ ಮಾಡ್ಬೋದು.
ಕ್ಯಾಪ್ಟನ್ ಬದಲಾವಣೆ ಬೇಕಿಲ್ಲ!
ತಂಡ ನಾಯಕ
ಬೆಂಗಳೂರು ರಜತ್ ಪಾಟಿದಾರ್
ಹೈದ್ರಾಬಾದ್ ಪ್ಯಾಟ್ ಕಮ್ಮಿನ್ಸ್
ಚೆನ್ನೈ ರುತುರಾಜ್ ಗಾಯಕ್ವಾಡ್
ರಾಜಸ್ಥಾನ ರಿಯಾನ್ ಪರಾಗ್
ಗುಜರಾತ್ ಶುಭ್ ಮನ್ ಗಿಲ್
ಡೆಲ್ಲಿ ಅಕ್ಷರ್ ಪಟೇಲ್
ಪಂಜಾಬ್ ಶ್ರೇಯಸ್ ಅಯ್ಯರ್
ಸದ್ಯಕ್ಕೆ ಸೇಫ್ ಝೋನ್ನಲ್ಲಿ ಇರೋವ್ರ ಪೈಕಿ ಕೆಲವರ ಲೀಡರ್ಶಿಪ್ ಬಗ್ಗೆ ಫ್ರಾಂಚೈಸಿಗಳಲ್ಲೇ ಪರವಿರೋಧ ಇದೆ. ಅವ್ರ ಅಂಡರ್ನಲ್ಲಿ ತಂಡಗಳ ಪರ್ಫಾಮೆನ್ಸ್ ಅಷ್ಟಕ್ಕಷ್ಟೇ ಇರೋದ್ರಿಂದ ಬದಲಾವಣೆ ಮಾತುಗಳೂ ಆಗಾಗ ಕೇಳಿ ಬರ್ತಾ ಇರುತ್ತೆ. ಬಟ್ 20ನೇ ಆವೃತ್ತಿಗೆ ಆಲ್ಮೋಸ್ಟ್ ಇದೇ ಕ್ಯಾಪ್ಟನ್ಗಳ ಅಡಿಯಲ್ಲೇ ಆಡಿ 2028ರ ಐಪಿಎಲ್ಗೆ ಮೇಜರ್ ಸರ್ಜರಿಗಳನ್ನ ಮಾಡೋ ಸಾಧ್ಯತೆಗಳಿವೆ. ಯಾಕಂದ್ರೆ 2027ರ ಐಪಿಎಲ್ ಬಳಿಕ 3 ವರ್ಷದ ಆಕ್ಷನ್ ಸೈಕಲ್ ಕಂಪ್ಲೀಟ್ ಆಗಲಿದ್ದು 21ನೇ ಆವೃತ್ತಿಗೂ ಮುನ್ನ ಮೆಗಾ ಆಕ್ಷನ್ ನಡೆಯಲಿದೆ. ಆಗ ಪ್ರತೀ ತಂಡಗಳು ಕೂಡ ನಾಲ್ಕರಿಂದ ಐವರನ್ನ ಮಾತ್ರ ರಿಟೇನ್ ಮಾಡಿಕೊಳ್ಳೋಕೆ ಅಧಿಕಾರ ಇರೋದ್ರಿಂದ ಬಿಗ್ ಪ್ಲೇಯರ್ಗಳೇ ಮೆಗಾ ಆಕ್ಷನ್ಗೆ ಬರ್ತಾರೆ. ಆಗ ಕ್ಯಾಪ್ಟನ್ಸಿ ಬದಲಾವಣೆ ಮಾಡಬಹುದು.

ನೋಡಿರಿ

