RCBಯಲ್ಲಿ ರಿಲೀಸ್ ಲೆಕ್ಕಾಚಾರ – ಶೆಫರ್ಡ್ & ಸುಯಾಶ್ ಹೊರ ಬೀಳ್ತಾರಾ?
HAT-TRICK ಕಪ್.. ಹೇಗಿರುತ್ತೆ ಸರ್ಜರಿ?

RCBಯಲ್ಲಿ ರಿಲೀಸ್ ಲೆಕ್ಕಾಚಾರ – ಶೆಫರ್ಡ್ & ಸುಯಾಶ್ ಹೊರ ಬೀಳ್ತಾರಾ?HAT-TRICK ಕಪ್.. ಹೇಗಿರುತ್ತೆ ಸರ್ಜರಿ?

ಐಪಿಎಲ್​ನಲ್ಲಿ ಬ್ಯಾಕ್ ಟು ಬ್ಯಾಕ್ ಕಪ್​ಗಳನ್ನ ಗೆದ್ದಿರೋ ಆರ್​ಸಿಬಿಯ ನೆಕ್ಸ್​ಟ್ ಟಾರ್ಗೆಟ್ ಹ್ಯಾಟ್ರಿಕ್ ಟ್ರೋಫಿ  ಬೇಕು ಅನ್ನೋದು. ರಜತ್ ಪಾಟಿದಾರ್ ನಾಯಕತ್ವದಲ್ಲಿ ಚರಿತ್ರೆಯನ್ನೇ ಬರೆಯೋ ಪಣ ತೊಟ್ಟಿದ್ದಾರೆ. ಫ್ರಾಂಚೈಸಿ ಡೈರೆಕ್ಟರ್ ಮೊ ಬೊಬಾಟ್ ಕೂಡ ಇದನ್ನೇ ಹೇಳಿದ್ದಾರೆ. ಬೆಂಗಳೂರು ಟೀಂ ಪ್ರದರ್ಶನ, ತಂಡದಲ್ಲಿರೋ ಪ್ಲೇಯರ್ಸ್ ನೋಡಿದ್ರೆ ಸತತ ಮೂರು ಕಪ್ ಗೆಲ್ಲೋ ಎಲ್ಲಾ ಎಬಿಲಿಟಿಯೂ ಇದೆ. ಆದ್ರೆ ಇಲ್ಲಿ ಇರೋ ಪ್ರಶ್ನೆ ಅಂದ್ರೆ ಆರ್​ಸಿಬಿ ಮುಂದಿನ ಮಿನ್ ಆಕ್ಷನ್​ನಲ್ಲಿ ಯಾರನ್ನ ರಿಲೀಸ್ ಮಾಡ್ತಾರೆ ಅನ್ನೋದು. ಚಾಂಪಿಯನ್ ಟೀಮ್​ನಲ್ಲಿ ಎಲ್ಲರ ಕಾಂಟ್ರಿಬ್ಯೂಷನ್ ಕೂಡ ಚೆನ್ನಾಗಿದೆ. ಬಟ್ ರಿಲೀಸ್ ಅಂತಾ ಬಂದಾಗ ಕೆಲವರ ಹೆಸರು ಆಲ್ರೆಡಿ ಚರ್ಚೆಯಲ್ಲಿದೆ.

ಇದನ್ನೂ ಓದಿ : IPL ಮುಂದೆ ICC ಪಂದ್ಯಗಳೂ ಡಲ್ – ರಾಷ್ಟ್ರೀಯ ತಂಡಗಳಿಗೆ ಸ್ಟಾರ್ಸ್ ಗುಡ್ ಬೈ

2026ರ ಐಪಿಎಲ್​ನಲ್ಲಿ ಅತೀ ಕಡಿಮೆ ಬದಲಾವಣೆಗಳನ್ನ ಮಾಡಿ ಚಾಂಪಿಯನ್ ಪಟ್ಟಕ್ಕೇರಿದ ಟೀಂ ಆರ್​ಸಿಬಿ. ಇಡೀ ಸೀಸನ್​ನಲ್ಲಿ ಟೋಟಲ್ 16 ಪ್ಲೇಯರ್​ಗಳನ್ನ ಮಾತ್ರ ಆಡಿಸಿರುವಂಥದ್ದು. ಸೋ ಇಲ್ಲೇ ಗೊತ್ತಾಗುತ್ತೆ. ಬೇರೆಲ್ಲಾ ತಂಡಗಳಿಗೆ ಕಂಪೇರ್ ಮಾಡಿದ್ರೆ ಆರ್​ಸಿಬಿ ಆಟಗಾರರ ಕನ್ಸಿಸ್ಟೆನ್ಸಿ ಹೇಗಿದೆ ಅನ್ನೋದು. ಅದೂ ಅಲ್ದೇ  ಬೆಂಗಳೂರು ತಂಡ ಕಂಪ್ಲೀಟ್ ಬ್ಯಾಲೆನ್ಸ್​ಡ್ ಆಗಿದ್ದು ಮೆಗಾ ಆಕ್ಷನ್ಸ್ ಇಲ್ದೇ ಇದ್ರೆ ಐಪಿಎಲ್​ನಲ್ಲಿ ಇನ್ಮುಂದೆ ಟ್ರೋಫಿಗಳೆಲ್ಲಾ ಅವ್ರದ್ದೇ ಅಂತಾ ಮಾಜಿ ಕ್ರಿಕೆಟರ್ಸ್ ಇರ್ಫಾನ್ ಪಠಾಣ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಬರ್ಕೊಂಡಿದ್ರು. ಹೌದು. ಆರ್​ಸಿಬಿ ಟೀಂ ಚೆನ್ನಾಗಿದೆ ಸತತ ಎರಡು ಕಪ್​ಗಳನ್ನೂ ಗೆದ್ದಿದೆ. ಹೀಗಿದ್ರೂ ಕೆಲವ್ರನ್ನ ತಂಡದಿಂದ ಹೊರಗೆ ಕಳಿಸ್ಲೇಬೇಕಾಗುತ್ತೆ.

ಯಾರಿಗೆಲ್ಲಾ ಗೇಟ್ ಪಾಸ್?

ಬೆಂಗಳೂರು ತಂಡದಿಂದ ಹೊರಬೀಳುವ ಲಿಸ್ಟ್ ನಲ್ಲಿ ಸುಯಾಶ್ ಶರ್ಮಾ

ಒಟ್ಟಾರೆ 27 ಐಪಿಎಲ್ ಪಂದ್ಯಗಳಿಂದ 18 ವಿಕೆಟ್ ಪಡೆದಿದ್ದು ನಿರಾಸೆ

2.6 ಕೋಟಿ ರೂ. ಸಂಭಾವನೆ, 2025ರಲ್ಲಿ 8 ವಿಕೆಟ್, 2026ರಲ್ಲಿ 9 ವಿಕೆಟ್ಸ್

ಬೌಲಿಂಗ್ ವಿಭಾಗದಲ್ಲಿ ದಿ ಬೆಸ್ಟ್ ಎನ್ನುವಂತ ಸ್ಪಿನ್ನರ್ ಆಯ್ಕೆಗೆ ಸುಯಾಶ್ ಔಟ್

ರೊಮ್ಯಾರಿಯೋ ಶೆಫರ್ಡ್ ರನ್ನೂ ರಿಲೀಸ್ ಮಾಡುವಂತೆ ಒತ್ತಡ ಜಾಸ್ತಿ

1.5 ಕೋಟಿ ರೂ ಸಂಭಾವನೆ, 75 ರನ್ಸ್, 5 ವಿಕೆಟ್ ಪಡೆದಿರುವ ಶೆಫರ್ಡ್

5 ಕೋಟಿ ಸಂಭಾವನೆಯ ಯಶ್ ದಯಾಳ್ ರಿಲೀಸ್ ಮಾಡುವ ಸಾಧ್ಯತೆ

30 ಲಕ್ಷ ಬೆಲೆಯ ಅಭಿನಂದನ್ ಸಿಂಗ್ ಕಡೆಯಿಂದ ಕಳಪೆ ಪ್ರದರ್ಶನ

58 ಎಸೆತಗಳಲ್ಲಿ 3 ವಿಕೆಟ್ ಪಡೆದು 122 ರನ್ ಗಳನ್ನ ನೀಡಿ ದುಬಾರಿ

ನುವಾನ್ ತುಷಾರ ಬದಲಿಗೆ ಬಂದ ರಿಚರ್ಡ್ ಗ್ಲೀಸನ್ ರನ್ನೂ ಬಿಡುಗಡೆ

1.60 ಕೋಟಿ ರೂಪಾಯಿಗೆ ಸೇರಿಸಿಕೊಂಡಿದ್ದು ಬಿಡುಗಡೆ ಸಾಧ್ಯತೆ ಹೆಚ್ಚು

ಬಹುಶಃ ಇಷ್ಟು ಆಟಗಾರರು ಮಿನಿ ಆಕ್ಷನ್​ನಲ್ಲಿ ರಿಲೀಸ್ ಆಗಬಹುದು. ಹೆಚ್ಚಿನ ಬದಲಾವಣೆ ಮಾಡಲು ಫ್ರಾಂಚೈಸಿ ಕೂಡ ಮುಂದಾಗಲ್ಲ. ವಿನ್ನಿಂಗ್ ಟೀಂ ಕಾಂಬಿನೇಷನ್ ಹಾಗೂ ಕೋರ್ ತಂಡವನ್ನು ಬದಲಿಸೋ ರಿಸ್ಕ್ ಇರಲ್ಲ. ಹೀಗಿದ್ರೂ ಹರಾಜಿನಲ್ಲಿ ಕಾಣಿಸಿಕೊಳ್ಳಬೇಕಿದ್ದರೆ ಪರ್ಸ್ ಮೊತ್ತ ಇರಲೇಬೇಕು. ಹೀಗಾಗಿ ಕೆಲವೇ ಕೆಲವು ಆಟಗಾರರನ್ನು ಮಾತ್ರ ಬಿಡುಗಡೆ ಮಾಡಲು ಪ್ಲ್ಯಾನ್ ರೂಪಿಸಲಿದೆ.

Shantha Kumari