ಪಿಚ್ನಲ್ಲೇ ಬುಮ್ರಾ- ಹಾರ್ದಿಕ್ ಜಗಳ! – ವಿರೋಧಕ್ಕೆ ಕಾರಣವಾಗ್ತಿದ್ಯಾ ಪಾಂಡ್ಯ ವರ್ತನೆ?

ಮುಂಬೈ ಇಂಡಿಯನ್ಸ್ ತಂಡದ ನಾಯಕನಾಗಿರುವ ಹಾರ್ದಿಕ್ ಪಾಂಡ್ಯ ಅವರು ದರ್ಪ ತೋರಿದ ವಿಡಿಯೊವೊಂದು ವೈರಲ್ ಆಗಿದೆ. ಪಾಂಡ್ಯ ವರ್ತನೆಗೆ ಜಸ್ಪ್ರೀತ್ ಬುಮ್ರಾ ನೀಡಿರುವ ಪ್ರತಿಕ್ರಿಯೆ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ. ಮಾತ್ರವಲ್ಲದೆ ಪಾಂಡ್ಯ ವರ್ತನೆಗೆ ಹಲವರು ವಿರೋಧ ವ್ಯಕ್ತಪಡಿಸಿದ್ದಾರೆ.
ಗುರುವಾರ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಸಮಯದಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ತೆಗೆದುಕೊಂಡ ನಿರ್ಧಾರದಿಂದ ಸ್ಟಾರ್ ವೇಗಿ ಜಸ್ಪ್ರೀತ್ ಬುಮ್ರಾ ಅತೃಪ್ತರಾದರು. ಪಂದ್ಯದ ಪ್ರಮುಖ ಹಂತದಲ್ಲಿ ನಾಯಕ ಪಾಂಡ್ಯ ತನ್ನದೇ ಆದ ತಂತ್ರದ ಪ್ರಕಾರ ಮೈದಾನದಲ್ಲಿ ಫೀಲಿಂಗ್ ಹೊಂದಿಸಲು ನಿರ್ಧರಿಸಿದರು. ಆದರೆ ಅದು ಬುಮ್ರಾಗೆ ಸರಿಹೊಂದಲಿಲ್ಲ. ಆರಂಭದಲ್ಲಿ ವಾದ ಮಾಡಿದರೂ, ಬುಮ್ರಾ ಅಂತಿಮವಾಗಿ ತನ್ನ ನಾಯಕನ ನಿರ್ಧಾರವನ್ನು ಒಪ್ಪಿಕೊಂಡರು ಮತ್ತು ನಿರಾಶೆಗೊಂಡಂತೆ ಕಂಡುಬಂದರು. ಅದೇ ದೃಶ್ಯದಲ್ಲಿ, ಹಾರ್ದಿಕ್ ಫೀಲ್ಡರ್ಗಳನ್ನು ಜೋರಾಗಿ ಬೈಯುತ್ತಿರುವುದನ್ನು ಕಾಣಬಹುದು. ಪಾಂಡ್ಯ ವರ್ತನೆ ಕಂಡು ಡಗೌಟ್ನಲ್ಲಿ ಕುಳಿತಿದ್ದ ಮಾಜಿ ನಾಯಕ ರೋಹಿತ್ ಶರ್ಮ ತಲೆ ಮೇಲೆ ಕೈಯಿಟ್ಟು ನಿರಾಶಭಾವದಿಂದ ಕಂಡುಬಂದರು.
ಇದನ್ನೂ ಓದಿ: ಖಾಸಗಿ ಬಸ್ ಮತ್ತು ಕಾರಿನ ಮಧ್ಯೆ ಭೀಕರ ಅಪಘಾತ! – ಇಬ್ಬರು ಮಕ್ಕಳು ಸೇರಿ ಐವರು ಸಜೀವ ದಹನ!
ಹಾರ್ದಿಕ್ ಪಾಂಡ್ಯ ಅವರಿಗೆ ಮುಂಬೈ ನಾಯಕತ್ವ ನೀಡಿದಾಗಲೇ ತಂಡದ ಅಭಿಮಾನಿಗಳು ವಿರೋಧ ವ್ಯಕ್ತಪಡಿಸಿದ್ದರು. ಅವರನ್ನು ನಾಯಕ ಸ್ಥಾನದಿಂದ ಕೈಬಿಡಬೇಕು ಎಂಬ ಕೂಗು ಬಹಿರಂಗವಾಗಿಯೇ ಕೇಳಿ ಬಂದಿತ್ತು. ಬಾರಿ ತಂಡ ಸತತ 4 ಸೋಲು ಕಂಡಿರುವ ಕಾರಣ ಪಾಂಡ್ಯ ವಿರುದ್ಧ ಆಕ್ರೋಶ ಮತಷ್ಟು ಹೆಚ್ಚಿದೆ. ಪಾಂಡ್ಯ ವರ್ತನೆ ತಂಡದ ಉಳಿದ ಆಟಗಾರರಿಗೂ ಹೊಂದಾಣಿಕೆ ಆಗದಂತೆ ಕಾಣುತ್ತಿದೆ. ಒಟ್ಟಾರೆ ತಂಡದ ವಾತಾವರಣ ಅಷ್ಟು ಸರಿಯಾಗಿಲ್ಲದಂತೆ ತೋರುತ್ತಿದೆ.
ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ ಸೋಲಿನ ಬಳಿಕ ಮಾತನಾಡಿದ ಪಾಂಡ್ಯ, ತಂಡದ ಪ್ರದರ್ಶನ ಕುರಿತು ಬೇಸರ ವ್ಯಕ್ತಪಡಿಸಿದರು. ಮಾತ್ರವಲ್ಲ, ಮುಂದಿನ ಪಂದ್ಯಗಳಿಗೆ ಕೆಲವು ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವ ಸುಳಿವು ನೀಡಿ ಆಟಗಾರರಿಗೆ ಎಚ್ಚರಿಕೆ ನೀಡಿದರು.

ನೋಡಿರಿ

