ಮನೀಶ್ ತಾಳ್ಮೆಗೆ ಮುಗ್ಗರಿಸಿದ ಮುಂಬೈ – KKRಗೆ ಈಗ ಪ್ಲೇ ಆಫ್ಸ್ ಅದೃಷ್ಟ ಪರೀಕ್ಷೆ
MI ಪಾಲಿಗೆ ಸ್ಟಾರ್ ಗಳೇ ಶಾಪವಾದ್ರಾ?

ಒಂದ್ಕಡೆ ಕೋಲ್ಕತ್ತಾಗೆ ಪ್ಲೇ ಆಫ್ ರೇಸ್ ನಲ್ಲಿ ಉಳಿಯೋ ಆಸೆ. ಇನ್ನೊಂದ್ಕಡೆ ಮುಂಬೈಗೆ ಪ್ರತಿಷ್ಠೆಯ ಪ್ರಶ್ನೆ. ಮತ್ತೊಂದ್ಕಡೆ ಮಳೆ ಕಾಟ. ಮೈದಾನದಲ್ಲಿ ಬೌಲರ್ಗಳು ಆರ್ಭಟಿಸ್ತಾ ಇದ್ರೆ ಬ್ಯಾಟರ್ಸ್ ಧೂಳೀಪಟ ಆಗ್ತಿದ್ರು. ಟಾಪ್ 4 ಟಿಕೆಟ್ ಕನಸಿನಲ್ಲಿ ಮೈದಾನಕ್ಕೆ ಇಳಿದ ಕೆಕೆಆರ್ ಪಾಲಿಗೆ ಆಪತ್ಪಾಂಧವನಾಗಿ ನಿಂತದ್ದೇ ಕನ್ನಡಿಗ ಮನೀಶ್ ಪಾಂಡೆ. ಆತನ ತಾಳ್ಮೆಯೇ ಕೊಲ್ಕತ್ತಾಗೆ ಪ್ಲೇ ಆಫ್ ಆಸೆಯನ್ನ ಜೀವಂತವಾಗಿರಿಸಿದೆ.
ಇದನ್ನೂ ಓದಿ : CSKಗೆ ಇಂದು ಮಾಡು ಇಲ್ಲವೇ ಮಡಿ – ಚೆನ್ನೈ ಗೆಲುವಿಗಾಗಿ ಕಾದು ಕುಳಿತ RCB
ಕೋಲ್ಕತ್ತಾದ ಈಡನ್ ಗಾರ್ಡನ್ಸ್‌ನಲ್ಲಿ ನಡೆದ ಕೋಲ್ಕತ್ತಾ ನೈಟ್ ರೈಡರ್ಸ್ ವರ್ಸಸ್ ಮುಂಬೈ ಇಂಡಿಯನ್ಸ್ ಇಂಡಿಯನ್ಸ್ ನಡುವಿನ ಮ್ಯಾಚಲ್ಲಿ ಕೆಕೆಆರ್ ಗೆದ್ದಿದೆ. ಈ ಗೆಲುವು ಕೆಕೆಆರ್‌ನ ಪ್ಲೇಆಫ್ ತಲುಪುವ ಭರವಸೆಯನ್ನು ಜೀವಂತವಾಗಿರಿಸಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಮುಂಬೈ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 147 ರನ್ ಗಳಿಸಲಷ್ಟೇ ಸಾಧ್ಯವಾಯ್ತು. ಕೆಕೆಆರ್‌ಗೆ ಗೆಲ್ಲಲು 148 ರನ್‌ಗಳ ಗುರಿಯನ್ನು ನೀಡಿತು. ಟಾರ್ಗೆಟ್ ಬೆನ್ನಟ್ಟಿದ ಕೆಕೆಆರ್ ಆರಂಭದಲ್ಲಿ ಮುಗ್ಗರಿಸದ್ರೂ ಮನೀಶ್ ಪಾಂಡೆ ಮತ್ತು ರೊವ್ಮನ್ ಪೊವೆಲ್ ಸಮಯೋಜಿತ ಆಟದಿಂದ 18.5 ಓವರ್‌ಗಳಲ್ಲಿ 6 ವಿಕೆಟ್‌ಗಳಿಗೆ 148 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದಿತು. ಈ ಮೂಲಕ 13 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ 6ನೇ ಸ್ಥಾನಕ್ಕೇರಿದೆ. ಮುಂಬೈ ತಂಡ ಮತ್ತೆ ಮುಗ್ಗರಿಸಿ 9ನೇ ಸ್ಥಾನದಲ್ಲೇ ಉಳಿದುಕೊಳ್ತು.
ಮಾಡು ಇಲ್ಲವೇ ಮಡಿ ಮ್ಯಾಚಲ್ಲಿ ಆಸರೆಯಾದ ಮನೀಶ್ ಪಾಂಡೆ!
ಕೆಕೆಆರ್ ಪರ ಸತತ 4 ಪಂದ್ಯಗಳಿಂದ ಬೆಂಚ್ ಕಾದಿದ್ದ ಮನೀಶ್ ಪಾಂಡೆಗೆ ಮುಂಬೂ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ಸಿಗ್ತು. ಕೆಕೆಆರ್ ಗೆಲ್ಲಲು ಬೇಕಾಗಿದ್ದು 148 ರನ್‌ಗಳ ಸಾಧಾರಣ ಗುರಿಯೇ ಆಗಿದ್ರು ಸ್ಫೋಟಕ ಓಪನರ್ ಫಿನ್ ಅಲೆನ್ 8 ರನ್ಗೆ ಔಟಾಗಿದ್ರು. ಅಜಿಂಕ್ಯ ರಹಾನೆ 21 ರನ್ ಹಾಗೇ ಕ್ಯಾಮರೋನ್ ಗ್ರೀನ್ 4 ರನ್. ಆರಂಭದಲ್ಲೇ 3 ವಿಕೆಟ್ ಕಳ್ಕೊಂಡು ಒತ್ತಡಕ್ಕೆ ಸಿಲುಕಿದ್ದ ಕೊಲ್ಕತ್ತಾಗೆ ಮನೀಶ್ ಹಾಗೇ ರೊವ್ಮನ್ ಪೊವೆಲ್ ಅದ್ಭುತ ಜೊತೆಯಾಟವಾಡಿದ್ರು. ಮನೀಶ್ 33 ಬಾಲಲ್ಲಿ 45 ರನ್ ಗಳಿಸಿದ್ರೆ ಪೊವೆಲ್ 30 ಎಸೆತಗಳಲ್ಲಿ 40 ರನ್ ಗಳಿಸಿದ್ರು. ಈ ಮೂಲಕ ಎರಡೂ ಇನ್ನಿಂಗ್ಸ್ಗಳಲ್ಲಿ ಮನೀಶ್ ಪಾಂಡೆ ಹೈಯೆಸ್ಟ್ ರನ್ ಸ್ಕೋರರ್ ಆದ್ರು. ಮನೀಶ್ ತಾಳ್ಮೆಯಾಟದಿಂದಲೇ ಕೆಕೆಆರ್ ಗೆಲುವಿನ ದಡ ಮುಟ್ಟಿತು. ಹಾಗೇ 6 ವರ್ಷಗಳ ಬಳಿಕ ಮನೀಶ್ ಪಾಂಡೆಗೆ ‘ಪ್ಲೇಯರ್ ಆಫ್ ದಿ ಮ್ಯಾಚ್’ ಪ್ರಶಸ್ತಿ ಸಿಕ್ಕಿತ್ತು. ಈ ವೇಳೆ ಭಾವುಕರಾಗಿದ್ದ ಮನೀಶ್, ನಾನು ಕೆಕೆಆರ್ ಫ್ಯಾಮಿಲಿಯನ್ನು ಮನಸಾರೆ ಪ್ರೀತಿಸುತ್ತೇನೆ. ನನ್ನ ಅತ್ಯಂತ ಕೆಟ್ಟ ದಿನಗಳಲ್ಲಿ ಇಡೀ ಜಗತ್ತೇ ನನ್ನನ್ನು ಮರೆತಾಗ ಈ ಕೆಕೆಆರ್ ಮ್ಯಾನೇಜ್‌ಮೆಂಟ್ ಬೆನ್ನಿಗೆ ನಿಂತ್ರು. ನಾನು ಇವತ್ತು ಈ ಜಾಗದಲ್ಲಿ ನಿಲ್ಲಲು ಕೆಕೆಆರ್ ಕಾರಣ ಎಂದು ಭಾವುಕನಾದ್ರು. ಇನ್ನು ಕೊಹ್ಲಿ ಮತ್ತು ರೋಹಿತ್ ಜೊತೆ ಐಪಿಎಲ್ನ ಪ್ರತೀ ಸೀಸನ್ನಲ್ಲೂ ಬ್ಯಾಟ್ ಬೀಸಿದ ಮತ್ತೊಬ್ಬ ಆಟಗಾರ ಈ ಮನೀಶ್ ಪಾಂಡೆ ಮಾತ್ರ. ಈ ಲಿಸ್ಟ್ನಲ್ಲಿ ಧೋನಿ ಇದ್ದರತಾದ್ರೂ ಈ ಸೀಸನ್ನಲ್ಲಿ ಧೋನಿ ಆಡಿಲ್ಲ. ಹೀಗಾಗಿ ಮೊದಲ ಸೀಸನ್ನಿಂದ ಈ ಸೀಸನ್ವರೆಗೆ ಆಡಿದ ಆಟಗಾರರು ಕೊಹ್ಲಿ, ರೊಹಿತ್ ಜೊತೆ ಮನೀಶ್ ಮಾತ್ರವೇ. ಹೀಗೆ ಕೊಲ್ಕತ್ತಾ ಗೆದ್ದು ಸಂಭ್ರಮಿಸಿದ್ರೆ ಇತ್ತ ಮುಂಬೈ ಮಾತ್ರ ಸೋಲಿನ ಸುಳಿಯಲ್ಲೇ ಬಿದ್ದು ಒದ್ದಾಡ್ತಿದೆ. ಸ್ಟಾರ್ ಆಟಗಾರರ ದಂಡೇ ಇದ್ರೂ ಗೆಲುವು ಮಾತ್ರ ದಕ್ಕುತ್ತಿಲ್ಲ. ಒಂದು ರೀತಿ ಸ್ಟಾರ್ಗಳೇ ಶಾಪವಾದಂತಿದೆ.

ನೋಡಿರಿ

