RCBಗೆ ಬೇಕು ಬ್ಯಾಕಪ್ ಬೌಲರ್ – ಹೇಜಲ್ ವುಡ್ ಬಗ್ಗೆ ಪಠಾಣ್ ಎಚ್ಚರಿಕೆ
ಕೊಹ್ಲಿ & ಸಾಲ್ಟ್.. ಹೇಗಿದೆ ಪ್ಲೇಯಿಂಗ್ 11?

RCBಗೆ ಬೇಕು ಬ್ಯಾಕಪ್ ಬೌಲರ್ – ಹೇಜಲ್ ವುಡ್ ಬಗ್ಗೆ ಪಠಾಣ್ ಎಚ್ಚರಿಕೆಕೊಹ್ಲಿ & ಸಾಲ್ಟ್.. ಹೇಗಿದೆ ಪ್ಲೇಯಿಂಗ್ 11?

2026ರ ಐಪಿಎಲ್​ಗೂ ಮುನ್ನ ಎಲ್ಲಾ ತಂಡಗಳಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದಷ್ಟು ಆಟಗಾರರನ್ನ ರಿಲೀಸ್ ಮಾಡಿದೆ. ಬಿಗ್ ಚೇಂಜಸ್ ಅಂತಾ ಇಲ್ದೇ ಇದ್ರೂ ತಂಡದಿಂದ 8 ಆಟಗಾರರನ್ನ ಕೈಬಿಟ್ಟಿದ್ದಾರೆ. 18ನೇ ಸೀಸನ್ ಐಪಿಎಲ್​ನಲ್ಲಿ ಬೆಂಗಳೂರು ತಂಡ ಚೊಚ್ಚಲ ಟ್ರೋಫಿ ಗೆಲ್ಲೋಕೆ ಕಾರಣ ಆದವ್ರೆಲ್ಲಾ ಮುಂದಿನ ಆವೃತ್ತಿಗೂ ಕಂಟಿನ್ಯೂ ಆಗಿದ್ದಾರೆ. ಹೀಗಾಗಿ ನೆಕ್ಸ್​ಟ್ ಸೀಸನ್​ಗೆ ತಂಡದಲ್ಲಿ ಅಂತಾ ದೊಡ್ಡ ಬದಲಾವಣೆಗಳೇನೂ ಇರೋದಿಲ್ಲ. ಹೀಗಿದ್ರೂ ಬೌಲಿಂಗ್ ವಿಭಾಗಕ್ಕೆ ಸ್ಟಾರ್ ಬ್ಯಾಕಪ್​ ಪ್ಲೇಯರ್ಸ್ ಬೇಕೇ ಬೇಕು. ಇರ್ಫಾನ್ ಪಠಾಣ್ ಕೂಡ ಇದನ್ನೇ ಹೇಳಿದ್ದಾರೆ.

ಇದನ್ನೂ ಓದಿ : ರೂಲ್ಸ್‌ ಬ್ರೇಕ್‌ ಮಾಡಿದ ಅಶ್ವಿನಿಗೆ ಬಿಗ್‌ಬಾಸ್‌ ಶಿಕ್ಷೆ! – ಕಾಲು ಮೇಲೆ ಕಾಲು ಹಾಕಿ ಕುಳಿತ ಗಿಲ್ಲಿ ನಟ!

2025ರ ಆವೃತ್ತಿಯಲ್ಲಿ ಸೂಪರ್ ಸಾಲಿಡ್ ಆಗಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಮುಂದಿನ ಆವೃತ್ತಿಗೂ ಬಲಿಷ್ಠ ತಂಡವಾಗಿಯೇ ಮುಂದುವರಿಯುತ್ತೆ. ಯಾಕಂದ್ರೆ ಬಿಗ್ ಪ್ಲೇಯರ್ಸ್ ಎಲ್ರೂ ರಿಟೇನ್ ಆಗಿದ್ದಾರೆ. ಸದ್ಯಕ್ಕೆ ತಂಡದಿಂದ ಹೊರಬಿದ್ದಿರೋ ಪ್ಲೇಯರ್ಸ್ ಅಂದ್ರೆ ಸ್ವಸ್ತಿಕ್ ಚಿಕಾರ – ₹30 ಲಕ್ಷ, ಮಯಾಂಕ್ ಅಗರ್ವಾಲ್ – ₹1 ಕೋಟಿ, ಟಿಮ್ ಸೈಫರ್ಟ್ – ₹2 ಕೋಟಿ, ಮನೋಜ್ ಭಾಂಡಗೆ- ₹30 ಲಕ್ಷ, ಲಿಯಾಮ್ ಲಿವಿಂಗ್‌ಸ್ಟನ್- ₹8.75, ಲುಂಗಿ ಎಂಗಿಡಿ- ₹1 ಕೋಟಿ, ಬ್ಲೆಸ್ಸಿಂಗ್ ಮುಜರಾಬಾನಿ – ₹75 ಲಕ್ಷ, ಮೋಹಿತ್ ರಾಠಿ – ₹30 ಲಕ್ಷ ರೂಪಾಯಿ. ಸೋ ಇದಿಷ್ಟು ಪ್ಲೇಯರ್ಸ್​ ಮಿನಿ ಆಕ್ಷನ್​ಗೆ ರಿಲೀಸ್ ಮಾಡಿದ್ಮೇಲೆ ಆರ್​ಸಿಬಿಯ ಪರ್ಸ್ ಬ್ಯಾಲೆನ್ಸ್ 16.4 ಕೋಟಿ ಇದೆ. ಹಾಗೇ ತಂಡಕ್ಕೆ 8 ಆಟಗಾರರನ್ನ ಫಿಲ್ ಮಾಡಿಕೊಳ್ಬೇಕಿದೆ. ಸ್ಟ್ರಾಂಗ್ ಪ್ಲೇಯರ್ಸ್ ಎಲ್ರೂ ರಿಟೇನ್ ಆಗಿದ್ದಾರೆ ಅಂದ್ರೂ ಕೂಡ ಕೆಲ ಸ್ಟಾರ್ ಬ್ಯಾಕಪ್ ಪ್ಲೇಯರ್ಸ್ ಖರೀದಿ ಮಾಡೋದು ಮುಖ್ಯ ಆಗುತ್ತೆ.

ಹೇಜಲ್ ವುಡ್ ಗೆ ಸಾಲು ಸಾಲು ಪಂದ್ಯ.. ಫೀಲ್ಡಿಗಿಳಿಯದ ದಯಾಳ್!

ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ರಹ್ಮಾಸ್ತ್ರವೇ ಜೋಶ್ ಹೇಜಲ್​ವುಡ್. ಲಾಸ್ಟ್ ಸೀಸನ್​ನಲ್ಲಿ ಆರ್​ಸಿಬಿ ಕಪ್ ಗೆಲ್ಲೋಕೆ ಮುಖ್ಯ ಕಾರಣವೇ ಇವ್ರು. ಪವರ್ ಪ್ಲೇ & ಡೆತ್ ಓವರ್​ಗಳಲ್ಲಿ ರಿಯಲ್ ಗೇಮ್ ಚೇಂಜರ್. ಆಸ್ಟ್ರೇಲಿಯಾದ ಈ ಸೂಪರ್ ಸ್ಟಾರ್ ಸದ್ಯ ಆಲ್ ಫಾರ್ಮೆಟ್ ಬೌಲರ್. ಹೀಗಾಗಿ ಬ್ಯಾಕ್ ಟು ಬ್ಯಾಕ್ ಪಂದ್ಯಗಳಲ್ಲಿ ಆಡೋದ್ರಿಂದ ಹೇಜಲ್​​ವುಡ್ ಗೆ ಬ್ಯಾಕಪ್ ಆಗಿ ಒಬ್ಬ ಪ್ಲೇಯರ್ ಇರ್ಲೇಬೇಕು. ಅಥವಾ ಇಂಜುರಿಯಾದ್ರೆ ಆಪ್ಶನ್ಸ್ ಇರ್ಬೇಕು. ಹಾಗೇ ವೇಗದ ಬೌಲರ್ ಆಗಿರೋ ಯಶ್ ದಯಾಳ್ ಸಿಚುಯೇಷನ್ ಕೂಡ ಡಿಫ್ರೆಂಡ್ ಆಗಿದೆ. ಆರ್​ಸಿಬಿಯ ಪ್ರಮುಖ ವೇಗದ ಬೌಲರ್ ಆಗಿರೋ ಯಶ್ ದಯಾಳ್ ಲಾಸ್ಟ್ ಸೀಸನಲ್ಲಿ ತಂಡದ ಪ್ರಮುಖ ಬೌಲರ್ ಆಗಿದ್ರು. ಅಲ್ದೇ ಮುಂದಿನ ಆವೃತ್ತಿಗೂ ಮುನ್ನ ಫ್ರಾಂಚೈಸಿ ಅವ್ರನ್ನ ರಿಟೇನ್ ಮಾಡ್ಕೊಂಡಿದೆ. ಬಟ್ ದಯಾಳ್ ಪರಿಸ್ಥಿತಿ ಬೇರೆಯದ್ದೇ ಆಗಿದೆ. ಯಾಕಂದ್ರೆ 2025ರ ಐಪಿಎಲ್ ಬಳಿಕ ಮೈದಾನಕ್ಕೆ ಇಳಿದಿಲ್ಲ. ಯುವತಿ ಮೇಲೆ ದೌರ್ಜನ್ಯ ಎಸಗಿದ ಆರೋಪದಲ್ಲಿ ಉತ್ತರ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ ಅವ್ರನ್ನ ಬ್ಯಾನ್ ಮಾಡಿದೆ. ಹೀಗಾಗಿ ಯಾವುದೇ ಡೊಮೆಸ್ಟಿಕ್ ಕ್ರಿಕೆಟ್​ನಲ್ಲೂ ಆಡಿಲ್ಲ. ಹೀಗಾಗಿ ಇವ್ರಿಗೂ ಬ್ಯಾಕಪ್ ಪ್ಲೇಯರ್ ಆಗಿ ಒಬ್ಬರನ್ನ ಚೂಸ್ ಮಾಡಿಕೊಳ್ಬೇಕಾಗುತ್ತೆ. ಇನ್ನು ಮುಂದಿನ ಆವೃತ್ತಿಗೆ ಆರ್​ಸಿಬಿಯ ಪ್ಲೇಯಿಂಗ್ 11 ಹೇಗಿರಬಹುದು ಅನ್ನೋದನ್ನ ಇರ್ಫಾನ್ ಪಠಾಣ್ ಚೂಸ್ ಮಾಡಿದ್ದಾರೆ.

2026ರ ಸಂಭಾವ್ಯ ಪ್ಲೇಯಿಂಗ್ 11

ಆಟಗಾರ                              ಆಡಿದ ಪಂದ್ಯ (2025)               ರನ್ಸ್/ ವಿಕೆಟ್ಸ್

ವಿರಾಟ್ ಕೊಹ್ಲಿ                          15                                    657

ಫಿಲ್ ಸಾಲ್ಟ್                            13                                    403

ದೇವದತ್ ಪಡಿಕ್ಕಲ್                    10                                    247

ರಜತ್ ಪಾಟಿದಾರ್                     15                                     312

ಟಿಮ್ ಡೇವಿಡ್                         12                                     187

ಜಿತೇಶ್ ಶರ್ಮಾ                        15                                     261

ರೊಮಾರಿಯೋ ಶೆಫರ್ಡ್                8                                   70/6

ಕೃನಾಲ್ ಪಾಂಡ್ಯ                       15                                   109/17

ಭುವನೇಶ್ವರ್ ಕುಮಾರ್                 14                                    17

ಜೋಶ್ ಹ್ಯಾಜಲ್‌ವುಡ್                12                                     22

ಯಶ್ ದಯಾಳ್                       15                                    13

ಇಲ್ಲಿ ಇರ್ಫಾನ್ ಪಠಾಣ್ ಹೇಳಿರೋ ಪ್ಲೇಯಿಂಗ್ 11 ಆಟಗಾರರನ್ನೆಲ್ಲಾ ಸದ್ಯ ಆರ್​ಸಿಬಿ ತಂಡ ರಿಟೇನ್ ಮಾಡ್ಕೊಂಡಿದೆ. ಹೀಗಾಗಿ ಇದೇ ಟೀಮ್​ನೇ 2026ರ ಐಪಿಎಲ್​ಗೂ ಕಣಕ್ಕಿಳಿಸಬಹುದು. ಌಂಡ್ ಇಲ್ಲಿ ರಿಲೀಸ್ ಆಗಿರೋ 8 ಆಟಗಾರರ ಪೈಕಿ ಲಿಯಾಮ್ ಲಿವಿಂಗ್​ಸ್ಟೋನ್ ಮಾತ್ರನೇ ಹೆಚ್ಚಿನ ಪಂದ್ಯಗಳನ್ನ ಆಡಿದ್ರು. ಸೋ ನೆಕ್ಸ್​ಟ್ ಸೀಸನ್​ಗೆ ಅವ್ರಿಲ್ಲ ಅಂದ್ರೂ ಹೆಚ್ಚಿನ ಎಫೆಕ್ಟ್ ಏನೂ ಆಗೋದಿಲ್ಲ. ಪ್ಲೇಯಿಂಗ್ 11 ನಲ್ಲಿ ಕಣಕ್ಕಿಳಿಸಬಹುದಾದ ಪ್ಲೇಯರ್ಸ್ ಎಲ್ರೂ ಸದ್ಯ ತಂಡದಲ್ಲೇ ಇದ್ದಾರೆ.

Shantha Kumari