RCBಯಿಂದ 8 ಪ್ಲೇಯರ್ಸ್ OUT – 10 ಟೀಮ್.. ಯಾರಿಗೆಲ್ಲಾ ಗೇಟ್ ಪಾಸ್?
ಮಿನಿ ಆಕ್ಷನ್ ನ ತಿಮಿಂಗಿಲಗಳು ಯಾರು?

RCBಯಿಂದ 8 ಪ್ಲೇಯರ್ಸ್ OUT – 10 ಟೀಮ್.. ಯಾರಿಗೆಲ್ಲಾ ಗೇಟ್ ಪಾಸ್?ಮಿನಿ ಆಕ್ಷನ್ ನ ತಿಮಿಂಗಿಲಗಳು ಯಾರು?

2026ರ ಐಪಿಎಲ್ ಅಸಲಿ ಖದರ್ ಸ್ಟಾರ್ಟ್ ಆಯ್ತು. ಟ್ರೇಡ್​ ವಿಂಡೋನಲ್ಲೇ ಘಟಾನುಘಟಿಗಳ ಡೀಲ್ ನೋಡಿ ಶಾಕ್ ಆಗಿದ್ದ ಐಪಿಎಲ್ ಫ್ಯಾನ್ಸ್ ಈಗ ರಿಟೇನ್ ಌಂಡ್ ರಿಲೀಸ್ ಲಿಸ್ಟ್ ರಿಲೀಸ್ ಆದ್ಮೇಲೆ ಫುಲ್ ಶೇಕ್ ಆಗಿದ್ದಾರೆ. ಹತ್ತೂ ಫ್ರಾಂಚೈಸಿಗಳು ಮಿನಿ ಆಕ್ಷನ್​ಗೆ ಆಟಗಾರರನ್ನ ರಿಲೀಸ್ ಮಾಡಿದ್ದಾರೆ.

ಫೈನಲಿ ರಿಲೀಸ್ ಌಂಡ್ ರೀಟೆನ್ಷನ್ ಲಿಸ್ಟ್ ಔಟ್ ಆಗಿದೆ. ಹತ್ತೂ ಫ್ರಾಂಚೈಸಿಗಳು ನೆಕ್ಸ್​ಟ್ ಸೀಸನ್​ಗೂ ಮುನ್ನ ತಂಡದ ಸ್ಟ್ರೆಂಥ್ ಹೆಚ್ಚಿಸಿಕೊಳ್ಳೋಕೆ ಒಂದಷ್ಟು ಆಟಗಾರರನ್ನ ರಿಲೀಸ್ ಮಾಡಿದ್ದಾರೆ. ಌಂಡ್ ಇಂಟ್ರೆಸ್ಟಿಂಗ್ ಅಂದ್ರೆ ಬಿಗ್ ಪ್ಲೇಯರ್​ಗಳೇ ಮಿನಿ ಆಕ್ಷನ್​​ಗೆ ಬರೋದು ಕನ್ಫರ್ಮ್ ಆಗಿದೆ. ಇದಕ್ಕೆ ಆರ್​ಸಿಬಿ ಕೂಡ ಹೊರತಾಗಿಲ್ಲ. ಆರ್​ಸಿಬಿಯಲ್ಲಿ ಬಿಗ್ ಚೇಂಜಸ್ ಅಂತಾ ಇಲ್ದೇ ಇದ್ರೂ 8 ಆಟಗಾರರು ಹೊರ ಬಂದಿದ್ದಾರೆ.

ಇದನ್ನೂ ಓದಿ : ಡೈರೆಕ್ಟ್ ಡೀಲ್.. 8 ಜನ ಟ್ರೇಡ್ – ಸಂಜು, ಜಡ್ಡು, ಶಮಿ.. ಯಾರೆಲ್ಲಾ?

ರಾಯಲ್ ಚಾಲೆಂಜರ್ಸ್ ಬೆಂಗಳೂರು (8 )

ಸ್ವಸ್ತಿಕ್ ಚಿಕಾರಾ, ಮಯಾಂಕ್ ಅಗರ್ವಾಲ್, ಟಿಮ್ ಸೀಫರ್ಟ್, ಲಿಯಾಮ್ ಲಿವಿಂಗ್‌ಸ್ಟೋನ್, ಮನೋಜ್ ಭಾಂಡಗೆ, ಲುಂಗಿ ಎನ್‌ಗಿಡಿ, ಬ್ಲೆಸ್ಸಿಂಗ್ ಮುಜರಾಬಾನಿ, ಮೋಹಿತ್ ರಾಠಿ.

 

ಚೆನ್ನೈ ಸೂಪರ್ ಕಿಂಗ್ಸ್ (12)

ರಾಹುಲ್ ತ್ರಿಪಾಠಿ, ವಂಶ್ ಬೇಡಿ, ಸಿ ಆಂಡ್ರೆ ಸಿದ್ದಾರ್ಥ್, ರಚಿನ್ ರವೀಂದ್ರ, ಡೆವೊನ್ ಕಾನ್ವೇ, ಸ್ಯಾಮ್ ಕುರಾನ್ (ಟ್ರೇಡ್), ರವೀಂದ್ರ ಜಡೇಜಾ (ಟ್ರೇಡ್), ದೀಪಕ್ ಹೂಡಾ, ವಿಜಯ್ ಶಂಕರ್, ಶೇಕ್ ರಶೀದ್, ಕಮಲೇಶ್ ನಾಗರಕೋಟಿ ಮತ್ತು ಮಥೀಶ ಪತಿರಾನ

 

ಗುಜರಾತ್ ಟೈಟಾನ್ಸ್ (6)

ಶೆರ್ಫೇನ್ ರುದರ್‌ಫೋರ್ಡ್ (ಟ್ರೇಡ್), ಮಹಿಪಾಲ್ ಲೊಮ್ರೋರ್, ಕರೀಂ ಜನತ್, ದಸುನ್ ಶನಕ, ಜೆರಾಲ್ಡ್ ಕೋಟ್ಜಿ, ಕುಲ್ವಂತ್ ಖೆಜ್ರೋಲಿಯಾ

 

ಸನ್ ರೈಸರ್ಸ್ ಹೈದರಾಬಾದ್  (8)

ಮೊಹಮ್ಮದ್ ಶಮಿ (ಟ್ರೇಡ್), ಆಡಮ್ ಝಂಪಾ, ರಾಹುಲ್ ಚಹಾರ್, ವಿಯಾನ್ ಮುಲ್ಡರ್, ಅಭಿನವ್ ಮನೋಹರ್, ಅಥರ್ವ ಟೈಡೆ, ಸಚಿನ್ ಬೇಬಿ, ಸಮರ್ಜೀತ್ ಸಿಂಗ್

 

ಪಂಜಾಬ್ ಕಿಂಗ್ಸ್ (4)

ಗ್ಲೆನ್ ಮ್ಯಾಕ್ಸ್‌ವೆಲ್, ಜೋಶ್ ಇಂಗ್ಲಿಸ್, ಆರನ್ ಹಾರ್ಡಿ, ಕುಲ್ದೀಪ್ ಸೇನ್

 

ಮುಂಬೈ ಇಂಡಿಯನ್ಸ್ (9)

ಸತ್ಯನಾರಾಯಣ ರಾಜು, ರೀಸ್ ಟೋಪ್ಲಿ, ಕೆಎಲ್ ಶ್ರೀಜಿತ್, ಕರ್ಣ್ ಶರ್ಮಾ, ಅರ್ಜುನ್ ತೆಂಡೂಲ್ಕರ್ (ಟ್ರೇಡ್), ಬೆವನ್ ಜೇಕಬ್ಸ್, ಮುಜೀಬ್ ಉರ್ ರೆಹಮಾನ್, ಲಿಜಾದ್ ವಿಲಿಯಮ್ಸ್, ವಿಘ್ನೇಶ್ ಪುತ್ತೂರು

 

ಕೊಲ್ಕತ್ತಾ ನೈಟ್ ರೈಡರ್ಸ್ ( 6)

ಆಂಡ್ರೆ ರಸೆಲ್, ವೆಂಕಟೇಶ್ ಅಯ್ಯರ್, ಕ್ವಿಂಟನ್ ಡಿ ಕಾಕ್, ಮೊಯಿನ್ ಅಲಿ, ಅನ್ರಿಚ್ ನಾರ್ಟ್ಜೆ, ಮಯಾಂಕ್ ಮಾರ್ಕಾಂಡೆ (ಟ್ರೇಡ್)

 

ಡೆಲ್ಲಿ ಕ್ಯಾಪಿಟಲ್ಸ್ (7)

ಫಾಫ್ ಡು ಪ್ಲೆಸಿಸ್, ಜೇಕ್ ಫ್ರೇಸರ್-ಮೆಕ್‌ಗುರ್ಕ್, ಡೊನೊವನ್ ಫೆರೇರಾ (ಟ್ರೇಡ್), ಸೇಡಿಕುಲ್ಲಾ ಅಟಲ್, ಮನ್ವಂತ್ ಕುಮಾರ್, ಮೋಹಿತ್ ಶರ್ಮಾ, ದರ್ಶನ್ ನಲ್ಕಂಡೆ

 

ಲಕ್ನೋ ಸೂಪರ್ ಜೇಂಟ್ಸ್ (8)

ಆರ್ಯನ್ ಜುಯಲ್, ಡೇವಿಡ್ ಮಿಲ್ಲರ್, ಯುವರಾಜ್ ಚೌಧರಿ, ರಾಜವರ್ಧನ್ ಹಂಗರ್ಗೇಕರ್, ಶಾರ್ದೂಲ್ ಠಾಕೂರ್ (ಟ್ರೇಡ್ ), ಆಕಾಶ್ ದೀಪ್, ರವಿ ಬಿಷ್ಣೋಯ್, ಶಮರ್ ಜೋಸೆಫ್

 

ರಾಜಸ್ಥಾನ ರಾಯಲ್ಸ್ ( 4)

ಸಂಜು ಸ್ಯಾಮ್ಸನ್ (ಟ್ರೇಡ್), ನಿತೀಶ್ ರಾಣಾ ( ಟ್ರೇಡ್), ವನಿಂದು ಹಸರಂಗ, ಮಹೇಶ್ ತೀಕ್ಷಣ

 

ಹತ್ತು ಫ್ರಾಂಚೈಸಿಗಳು ತಮ್ಮ ತಂಡದಿಂದ ಆಟಗಾರರನ್ನ ರಿಲೀಸ್ ಮಾಡಿದ್ದಾರೆ. ಅದ್ರಲ್ಲೂ ಈ ರಿಲೀಸ್ ಲಿಸ್ಟ್​ನಲ್ಲಿ ಬಿಗ್ ಬಿಗ್ ಪ್ಲೇಯರ್​ಗಳೇ ಇದ್ದಾರೆ. ವೆಂಕಟೇಶ್ ಅಯ್ಯರ್, ಆಂಡ್ರೆ ರಸೆಲ್, ಲಿಯಾಮ್ ಲಿವಿಂಗ್ ಸ್ಟೋನ್ ಹೀಗೆ ಕೋಟಿ ಕೋಟಿ ಸಂಭಾವನೆ ಪಡೀತಿದ್ದ ಪ್ಲೇಯರ್ಸ್ ಇದ್ದಾರೆ. ಅದ್ರಲ್ಲೂ ಈ ಲಿಸ್ಟ್​ನಲ್ಲಿ ಆರ್​ಸಿಬಿ ಕೂಡ ತುಂಬಾ ಇಂಟೆಲಿಜೆಂಟ್ ಆಗಿ ರಿಲೀಸ್ ಮಾಡಿದ್ರೂ ಇಬ್ಬರು ಕರ್ನಾಟಕದ ಪ್ಲೇಯರ್​ಗಳನ್ನ ಕೈಬಿಟ್ಟಿದೆ. ಮೊದ್ಲಿಗೆ ದುಬಾರಿ ಆಟಗಾರ ಲಿಯಾಮ್ ಲಿವಿಂಗ್​ಸ್ಟೋನ್​ ಅವರನ್ನು ತಂಡದಿಂದ ಬಿಡುಗಡೆ ಮಾಡಿದ್ದಾರೆ. ದೇವದತ್ ಪಡಿಕ್ಕಲ್ ಗಾಯಗೊಂಡಾಗ ಮಯಾಂಕ್ ಅಗರ್ವಾಲ್ ಅವರನ್ನು ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿತ್ತು. ಅವ್ರನ್ನೂ ಬಿಟ್ಟಿದ್ದಾರೆ. ಮುಝರಬಾನಿ ಅವರನ್ನು ತಾತ್ಕಾಲಿಕ ಬದಲಿ ಆಟಗಾರನಾಗಿ ಆಯ್ಕೆ ಮಾಡಲಾಗಿದೆ. ಹೀಗೆ ಆಯ್ಕೆಯಾದ ಆಟಗಾರರನ್ನು ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ. ಬದಲಿ ಆಟಗಾರನಾಗಿ ಆಯ್ಕೆಯಾಗಿರುವ ಸೈಫರ್ಟ್ ಅವರನ್ನು ಸಹ ತಂಡದಲ್ಲಿ ಉಳಿಸಿಕೊಳ್ಳುವಂತಿಲ್ಲ. ಹೀಗಾಗಿ ಟಿಮ್ ಸೈಫರ್ಟ್ ಅವರನ್ನು ಸಹ ಆರ್​ಸಿಬಿ ಬಿಡುಗಡೆ ಮಾಡಿದೆ. ಆರ್​ಸಿಬಿ ತಂಡದಲ್ಲಿರುವ ಯುವ ಆಲ್​ರೌಂಡರ್ ಮೋಹಿತ್ ರಾಥಿ ಕೂಡ ಈ ಬಾರಿ ಒಂದೇ ಒಂದು ಪಂದ್ಯದಲ್ಲಿ ಕಣಕ್ಕಿಳಿದಿರಲಿಲ್ಲ. ಅವ್ರನ್ನೂ ಬಿಟ್ಟಿದ್ದಾರೆ.  ಆರ್​ಸಿಬಿ ತಂಡದಲ್ಲಿದ್ದ ಕರ್ನಾಟಕದ ಯುವ ಆಲ್​​ರೌಂಡರ್ ಮನೋಜ್ ಭಾಂಡಗೆ ಅವರನ್ನು ಸಹ ಮುಂದಿನ ಸೀಸನ್​​ಗಾಗಿ ತಂಡದಲ್ಲಿ ಉಳಿಸಿಕೊಂಡಿಲ್ಲ. ಇನ್ನು ಒಂದೇ ಒಂದು ಪಂದ್ಯದಲ್ಲೂ ಅವಕಾಶ ಪಡೆಯದ ಸ್ವಸ್ತಿಕ್ ಚಿಕಾರ ಅವರನ್ನು ಸಹ ರಿಟೈನ್ ಮಾಡಿಕೊಂಡಿಲ್ಲ. ಕಳೆದ ಸೀಸನ್​ನಲ್ಲಿ 2 ಮ್ಯಾಚ್ ಆಡಿದ್ದ ಸೌತ್ ಆಫ್ರಿಕಾ ವೇಗಿ ಲುಂಗಿ ಎನ್​ಗಿಡಿ ಅವರನ್ನು ಸಹ ರಿಲೀಸ್ ಮಾಡಲಾಗಿದೆ.

Shantha Kumari