IPL ಎಕ್ಸ್​ ಚೇಂಜ್ ಡೀಲ್ ಸ್ಟಾರ್ಟ್ – 10 ಟೀಂ.. ಪರ್ಸ್ ಬ್ಯಾಲೆನ್ಸ್ ಹೇಗಿದೆ?
ಸಂಜು-ಜಡ್ಡು ಫಿಕ್ಸ್.. RCB ಕಥೆ ಏನು?

IPL ಎಕ್ಸ್​ ಚೇಂಜ್ ಡೀಲ್ ಸ್ಟಾರ್ಟ್ – 10 ಟೀಂ.. ಪರ್ಸ್ ಬ್ಯಾಲೆನ್ಸ್ ಹೇಗಿದೆ?ಸಂಜು-ಜಡ್ಡು ಫಿಕ್ಸ್.. RCB ಕಥೆ ಏನು?

2026ರ ಐಪಿಎಲ್ ಫೀವರ್ ಶುರುವಾಯ್ತು. ನವೆಂಬರ್ 15ಕ್ಕೆ ರಿಟೇನ್ ಌಂಡ್ ರಿಲೀಸ್ ಲಿಸ್ಟ್​ ಅನೌನ್ಸ್​ಗೆ ಡೆಡ್​​ಲೈನ್ ಕೊಟ್ಟಿದ್ರೆ ಅತ್ತ ಡಿಸೆಂಬರ್ ಸೆಕೆಂಡ್ ವೀಕಲ್ಲಿ ಮಿನಿ ಆಕ್ಷನ್ ನಡೆಯೋದು ಕನ್ಫರ್ಮ್ ಆಗಿದೆ. ಸೋ ಈ ವೀಕೆಂಡ್​ನಲ್ಲಿ ಯಾವ್ಯಾವ ತಂಡದಿಂದ ಯಾರೆಲ್ಲಾ ಹೊರ ಬೀಳ್ತಾರೆ ಅನ್ನೋದು ಗೊತ್ತಾಗುತ್ತೆ. ಆಲ್ರೆಡಿ ಹತ್ತೂ ಫ್ರಾಂಚೈಸಿಗಳಲ್ಲಿ ಪಟ್ಟಿಯಂತೂ ರೆಡಿಯಾಗಿದೆ. ದುಬಾರಿ ಸಂಭಾವನೆ ಪಡೆದ್ರೂ ತಂಡಕ್ಕೆ ದಂಡವಾಗಿರೋ ಆಟಗಾರರನ್ನ ರಿಲೀಸ್ ಮಾಡಿ ಪರ್ಸ್ ಬ್ಯಾಲೆನ್ಸ್ ಹೆಚ್ಚಿಸಿಕೊಳ್ಳೋ ಪ್ಲ್ಯಾನ್​ನಲ್ಲಿದ್ದಾರೆ. ಜಗತ್ತಿನ ಶ್ರೀಮಂತ ಲೀಗ್​ ಐಪಿಎಲ್​ನ ಮತ್ತೊಂದು ಆವೃತ್ತಿಗೆ ಉಳಿದಿರೋದು ಜಸ್ಟ್ ನಾಲ್ಕು ತಿಂಗಳಷ್ಟೇ. 2026ರಲ್ಲಿ ಟಿ-20 ವಿಶ್ವಕಪ್ ಮುಗಿದ ಬೆನ್ನಲ್ಲೇ ಐಪಿಎಲ್ ಅಬ್ಬರ ಸ್ಟಾರ್ಟ್ ಆಗುತ್ತೆ. ಮಾರ್ಚ್​ನಿಂದ ಮೇ ಎಂಡ್​ವರೆಗೂ ಕ್ರಿಕೆಟ್​ನದ್ದೇ ಗುಂಗು. 19ನೇ ಆವೃತ್ತಿಯ ಚಾಂಪಿಯನ್ ಪಟ್ಟಕ್ಕೇರೋಕೆ ಹತ್ತೂ ಫ್ರಾಂಚೈಸಿಗಳೂ ಗೇಮ್​ಪ್ಲ್ಯಾನ್ ಮಾಡಿಕೊಳ್ತಿವೆ. ಅದಕ್ಕೂ ಮುಂಚೆ ತಂಡವನ್ನ ಸೂಪರ್ ಸ್ಟ್ರಾಂಗ್ ಮಾಡಿಕೊಳ್ಳೋಕೆ ಮಿನಿ ಆಕ್ಷನ್​ನಲ್ಲಿ ಒಂದಷ್ಟು ಆಟಗಾರರನ್ನ ಕೈಬಿಟ್ಟು ಹೊಸ ಆಟಗಾರರನ್ನ ಸೆಲೆಕ್ಟ್ ಮಾಡಿಕೊಳ್ತಾರೆ. ಈ 10 ತಂಡಗಳಲ್ಲಿ ಹೆಚ್ಚಿನ ಸಂಭಾವನೆ ಪಡೆದು ಕಳಪೆ ಪ್ರದರ್ಶನ ನೀಡಿದವ್ರೂ ಇದ್ದಾರೆ. ಅವ್ರೆಲ್ಲಾ ರಿಲೀಸ್ ಆಗೋದು ಪಕ್ಕಾ.

ಇದನ್ನೂ ಓದಿ : CSK ತಂಡದಲ್ಲಿ ರಾಕ್‌ಸ್ಟಾರ್ ರವೀಂದ್ರ ಜಡೇಜಾ ಯುಗಾಂತ್ಯ – 12 ವರ್ಷಗಳ ಪಯಣ ಮುಗಿಯೋದು ಪಕ್ಕಾ.!

ರಾಜಸ್ಥಾನ ಮತ್ತು ಚೆನ್ನೈ ನಡುವೆ ಟ್ರೇಡ್ ಡೀಲ್ ಕನ್ಫರ್ಮ್!

ಐಪಿಎಲ್ ಸೀಸನ್-19ರ ಮಿನಿ ಆಕ್ಷನ್​ಗೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಲ್​ರೌಂಡರ್ ರವೀಂದ್ರ ಜಡೇಜಾ ರಾಜಸ್ಥಾನ ಸೇರೋದು ಕನ್ಫರ್ಮ್ ಆಗಿದೆ. ರಾಜಸ್ಥಾನ ನಾಯಕ ಸಂಜು ಸ್ಯಾಮ್ಸನ್​ ಸಿಎಸ್​ಕೆಗೆ ಬರ್ತಾರೆ. ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯು ರವೀಂದ್ರ ಜಡೇಜಾ ಹಾಗೂ ಸ್ಯಾಮ್ ಕರನ್ ಅವರನ್ನು ನೀಡಿ ಸಂಜು ಸ್ಯಾಮ್ಸನ್ ಅವರನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಮುಂದಾಗಿದೆ. ಇವತ್ತು ಅಥವಾ ನಾಳೆಯೊಳಗೆ ಅಫಿಶಿಯಲ್ ಆಗಿ ಅನೌನ್ಸ್ ಮಾಡ್ತಾರೆ. ಇವ್ರಿಷ್ಟೇ ಅಲ್ಲದೇ ಎಲ್ಲಾ ತಂಡಗಳಲ್ಲೂ ಒಂದಷ್ಟು ಆಟಗಾರರು ರಿಲೀಸ್ ಲಿಸ್ಟ್​ನಲ್ಲಿದ್ದಾರೆ. ಲಾಸ್ಟ್ ಸೀಸನಲ್ಲಿ ಅತ್ಯಂತ ಹೀನಾಯ ಪ್ರದರ್ಶನ ನೀಡಿದ್ದ ಸಿಎಸ್​ಕೆನಲ್ಲೇ ಹೊರಹೋಗುವಂತ ತುಂಬಾ ಪ್ಲೇಯರ್ಸ್ ಇದ್ದಾರೆ.

ಸಿಎಸ್​ ಕೆ  ( ಉಳಿತಾಯ – ₹35.25 ಕೋಟಿ )

ಆಟಗಾರ                                       ಸಂಭಾವನೆ

ರವೀಂದ್ರ ಜಡೇಜಾ                   $18 ಕೋಟಿ

ಡೆವೊನ್ ಕಾನ್ವೇ                     ₹6.25 ಕೋಟಿ

ಸ್ಯಾಮ್ ಕರನ್                      ₹2.40 ಕೋಟಿ

ನಾಥನ್ ಎಲ್ಲಿಸ್                     ₹2 ಕೋಟಿ

ಮುಖೇಶ್ ಚೌಧರಿ                   ₹30 ಲಕ್ಷ

ವಿಜಯ್ ಶಂಕರ್                     ₹1.2 ಕೋಟಿ

ದೀಪಕ್ ಹೂಡಾ                      ₹1.7 ಕೋಟಿ

ರಾಹುಲ್ ತ್ರಿಪಾಠಿ                    ₹3.40 ಕೋಟಿ

ಹೀಗೆ ಒಟ್ಟು 7 ಆಟಗಾರರನ್ನ ಕೈಬಿಟ್ಟು ಹೊಸ ಟೀಂ ಫಾರ್ಮ್​ ಮಾಡೋ ಯೋಚನೆಯಲ್ಲಿದ್ದಾರೆ. ಈಗೀಗ ಜಡ್ಡುನ ಕೈಬಿಡ್ಬೋದು ಅನ್ನೋ ಟಾಕ್ ಶುರುವಾಗಿದೆ. ಈ ಮೇಲಿನ 7 ಆಟಗಾರರನ್ನ ಕೈಬಿಟ್ರೆ ಟೋಟಲ್ಲಾಗಿ ₹35.25 ಕೋಟಿ ರೂ ಸೇವಿಂಗ್ಸ್ ಆಗುತ್ತೆ. ಆಗ ಇದೇ ಮೊತ್ತವನ್ನ ಬೇರೆಯವ್ರ ಮೇಲೆ ಇನ್ವೆಸ್ಟ್ ಮಾಡಿ ಒಳ್ಳೆ ಟೀಂ ಫಾರ್ಮ್ ಮಾಡೋ ಲೆಕ್ಕಾಚಾರದಲ್ಲಿದ್ದಾರೆ. ಇನ್ನು ಸನ್ ರೈಸರ್ಸ್ ಹೈದ್ರಾಬಾದ್ ತಂಡದಿಂದ 7 ಆಗಟಾರರಿಗೆ ಗೇಟ್ ಪಾಸ್ ಸಿಗೋ ಹಿಂಟ್ ಸಿಕ್ಕಿದೆ.

ಎಸ್ ಆರ್ ಹೆಚ್  ( ಉಳಿತಾಯ ₹28.95 ಕೋಟಿ  )

ಆಟಗಾರ                                             ಸಂಭಾವನೆ

ಮೊಹಮ್ಮದ್ ಶಮಿ                   ₹10 ಕೋಟಿ

ಇಶಾನ್ ಕಿಶನ್                           ₹11.25 ಕೋಟಿ

ಅಭಿನವ್ ಮನೋಹರ್               ₹3.20 ಕೋಟಿ

ಆಡಮ್ ಝಂಪಾ                         ₹2.40 ಕೋಟಿ

ಸಿಮರ್‌ ಜೀತ್ ಸಿಂಗ್                      ₹1.50 ಕೋಟಿ

ಅಥರ್ವ ತೈಡೆ                                 ₹30 ಲಕ್ಷ

ಸಚಿನ್ ಬೇಬಿ                                  ₹30 ಲಕ್ಷ

ಹೀಗೆ ಒಂದಷ್ಟು ಟಾಪ್ ಕ್ಲಾಸ್ ಪ್ಲೇಯರ್ಸ್ ಜೊತೆ ಬೇಸ್ ಪ್ರೈಸ್​ಗೆ ತಂಡಕ್ಕೆ ಸೇರಿ ಪ್ಲೇಯಿಂಗ್​ 11ನಲ್ಲಿ ಚಾನ್ಸ್ ಪಡೆಯದೇ ಇದ್ದವರಿಗೂ ಗೇಟ್​ಪಾಸ್ ಕೊಡ್ಬೋದು. ಇದಿಷ್ಟು ಆಟಗಾರರು ರಿಲಿಸ್​ ಲಿಸ್ಟ್​ನಲ್ಲಿದ್ದು ಹೈದ್ರಾಬಾದ್ ತಂಡ ₹28.95 ಕೋಟಿ ರೂಪಾಯಿ ಸೇವಿಂಗ್ಸ್ ಮಾಡೋ ಲೆಕ್ಕಾಚಾರದಲ್ಲಿದೆ. ಇನ್ನು ಮಾಜಿ ಚಾಂಪಿಯನ್ ಕೆಕೆಆರ್ ಟೀಂ ಕೂಡ ಲಾಸ್ಟ್ ಇಯರ್ ಸಾಕಷ್ಟು ಸ್ಟ್ರಗಲ್ಸ್ ಕಂಡಿತ್ತು. ಸೋ ಅವ್ರ ತಂಡದಲ್ಲಿ 6 ಆಟಗಾರರು ರಿಲೀಸ್ ಲಿಸ್ಟಲ್ಲಿದ್ದಾರೆ.

ಕೆಕೆಆರ್    (ಉಳಿತಾಯ 39.35 ಕೋಟಿ )

ಆಟಗಾರ                                                  ಸಂಭಾವನೆ

ವೆಂಕಟೇಶ್ ಅಯ್ಯರ್                   ₹23.75 ಕೋಟಿ

ರಮಣದೀಪ್ ಸಿಂಗ್                      ₹4 ಕೋಟಿ

ಕ್ವಿಂಟನ್ ಡಿ ಕಾಕ್                       ₹3.60 ಕೋಟಿ

ಮನೀಶ್ ಪಾಂಡೆ                          ₹75 ಲಕ್ಷ

ಅನ್ರಿಚ್ ನಾರ್ಟ್ಜೆ                           ₹6.50 ಕೋಟಿ

ಚೇತನ್ ಸಕರಿಯಾ                        ₹75 ಲಕ್ಷ

ಹೀಗೆ ಕೆಕೆಆರ್ ಟೀಮ್​ಗೆ ಅತೀ ಹೊರೆಯಾಗಿರೋದು ವೆಂಕಟೇಶ್ ಅಯ್ಯರ್. ಅವ್ರಿಗೆ ಕೊಟ್ಟಿರೋ ಕಾಸಲ್ಲಿ ನಾಲ್ಕೈದು ಸ್ಟಾರ್ ಆಟಗಾರರನ್ನೇ ಖರೀದಿ ಮಾಡ್ಬೋದು. ಈ ಆರೂ ಆಟಗಾರರನ್ನ ರಿಲಿಸ್ ಮಾಡಿದ್ರೆ ಕೆಕೆಆರ್ ಪರ್ಸ್​ನಲ್ಲಿ 39.35 ಕೋಟಿ ರೂಪಾಯಿ ಉಳಿಯುತ್ತೆ. ಆಗ ಬೇರೆ ಪ್ಲೇಯರ್ಸ್ ಖರೀದಿಗೆ ಅನುಕೂಲ ಆಗುತ್ತೆ. ಌಂಡ್ ಕ್ಯಾಪ್ಟನ್ಸಿ ಹುಡುಕಾಟದಲ್ಲಿ ಇರೋದ್ರಲ್ಲಿ ಬಿಗ್ ಅಮೌಂಟ್ ಬೇಕಾಗುತ್ತೆ. ಇನ್ನು ಮುಂಬೈ ಇಂಡಿಯನ್ಸ್ ತಂಡದ ಬಗ್ಗೆ ನೋಡೋದಾದ್ರೆ ಐವರು ಆಟಗಾರರ ಹೆಸರು ಚರ್ಚೆಯಲ್ಲಿದೆ..

ಎಂಐ  ( ಉಳಿತಾಯ 17.55 ಕೋಟಿ )

ಆಟಗಾರ                                 ಸಂಭಾವನೆ

ದೀಪಕ್ ಚಹಾರ್               ₹9.25 ಕೋಟಿ

ವಿಲ್ ಜ್ಯಾಕ್ಸ್                   ₹5.25 ಕೋಟಿ

ರಾಬಿನ್ ಮಿಂಜ್                  ₹65 ಲಕ್ಷ

ಕರ್ಣ್ ಶರ್ಮಾ                    ₹50 ಲಕ್ಷ

ರೀಸ್ ಟಾಪ್ಲಿ                        ₹1.90

ಅದೂ ಅಲ್ದೇ ಮುಂಬೈ ಇಂಡಿಯನ್ಸ್ ತಂಡ ಇಶಾನ್ ಕಿಶನ್​ರನ್ನ ವಾಪಸ್ ಕರೆತರೋ ಪ್ಲ್ಯಾನ್​ನಲ್ಲಿದೆ ಅನ್ನೋ ಸುದ್ದಿ ಇದೆ. ಹೀಗಾಗಿ ಮೇಲಿನ ಐದು ಆಟಗಾರರನ್ನ ಕೈಬಿಟ್ರೆ 17.55 ಕೋಟಿ ಸೇವಿಂಗ್ಸ್ ಆಗುತ್ತೆ. ಈ ಮೊತ್ತದಲ್ಲೇ ಬೇರೆ ಆಟಗಾರರ ಮೇಲೆ ಬಿಡ್ ಮಾಡೋ ಲೆಕ್ಕಾಚಾರದಲ್ಲಿದೆ. ಇನ್ನು ಚೊಚ್ಚಲ ಟ್ರೋಫಿಯನ್ನ ಎದುರು ನೋಡ್ತಿರೋ ಲಕ್ನೋ ಸೂಪರ್ ಜೇಂಟ್ಸ್ ತಂಡ ಕೂಡ ಆರು ಆಟಗಾರರನ್ನ ಕೈಬಿಡಬಹುದು.

ಎಲ್ ಎಸ್ ಜಿ  ( ಉಳಿತಾಯ  20.25 ಕೋಟಿ )

ಆಟಗಾರ                                             ಸಂಭಾವನೆ

ಡೇವಿಡ್ ಮಿಲ್ಲರ್                   ₹7.50 ಕೋಟಿ

ಆವೇಶ್ ಖಾನ್                       ₹9.75 ಕೋಟಿ

ಎಂ ಸಿದ್ಧಾರ್ಥ್                        ₹2.40 ಕೋಟಿ

ಯುವರಾಜ್ ಚೌಧರಿ                  ₹30 ಲಕ್ಷ

ಪ್ರಿನ್ಸ್ ಯಾದವ್                        ₹30 ಲಕ್ಷ

ಹೀಗೆ ಆರು ಆಟಗಾರರನ್ನ ತಂಡದಿಂದ ಕೈಬಿಟ್ರೆ 20.25 ಕೋಟಿ ರೂಪಾಯಿ ಸೇವಿಂಗ್ಸ್ ಆಗುತ್ತೆ. ಬೇರೆ ಆಟಗಾರರನ್ನ ಖರೀದಿ ಮಾಡೋ ಪ್ಲ್ಯಾನ್ ಮಾಡಿದೆ. ಇತ್ತ ಡೆಲ್ಲಿ ಕ್ಯಾಪಿಟಲ್ಸ್ ನಿಂದ ಐವರು ಹೊರಬೀಳೋ ಆತಂಕದಲ್ಲಿದ್ದಾರೆ.

ಡಿಸಿ  ( ಉಳಿತಾಯ 12 ಕೋಟಿ )

ಆಟಗಾರ                                     ಸಂಭಾವನೆ

ಫಾಫ್ ಡುಪ್ಲೆಸಿಸ್                   ₹2 ಕೋಟಿ

ಮಾಧವ್ ತಿವಾರಿ                   ₹40 ಲಕ್ಷ

ದರ್ಶನ್ ನಲ್ಕಂಡೆ                    ₹30 ಲಕ್ಷ

ಡೊನೊವನ್ ಫೆರೀರಾ               ₹75 ಲಕ್ಷ

ಜೇಕ್ ಫ್ರೇಸರ್-ಮೆಕ್‌ಗುರ್ಕ್          ₹ 9 ಕೋಟಿ

ಡೆಲ್ಲಿ ಕ್ಯಾಪಿಟಲ್ಸ್ ಕಳೆದ ಸೀಸನಲ್ಲಿ ಫಸ್ಟ್ ಆಫ್ ಚೆನ್ನಾಗಿ ಪರ್ಫಾಮ್ ಮಾಡಿದ್ರೂ ಸೆಕೆಂಡ್ ಆಫ್ ಡಲ್ ಆಗಿತ್ತು. ಸೋ ಬೆಟರ್ ಟೀಂ ಫಾರ್ಮ್ ಮಾಡೊ ಸಲುವಾಗಿ ಇವ್ರನ್ನೆಲ್ಲಾ ರಿಲಿಸ್ ಮಾಡಿದ್ರೆ 12.45 ಕೋಟಿ ಉಳಿತಾಯ ಆಗುತ್ತೆ. ಅದನ್ನ ಬೇರೆಯವ್ರ ಮೇಲೆ ಬಿಡ್ ಮಾಡಬಹುದು.

ಪಿಬಿಕೆಎಸ್  ( ಉಳಿತಾಯ  5.75 ಕೋಟಿ )

ಆಟಗಾರ                                                 ಸಂಭಾವನೆ

ಗ್ಲೆನ್ ಮ್ಯಾಕ್ಸ್ ವೆಲ್                      ₹4.20 ಕೋಟಿ

ಪೈಲಾ ಅವಿನಾಶ್                            ₹30 ಲಕ್ಷ

ವಿಷ್ಣು ವಿನೋದ್                            ₹95 ಲಕ್ಷ

ಪ್ರವೀಣ್ ದುಬೆ                                 ₹30 ಲಕ್ಷ

ಌಕ್ಚುಲಿ ಪಂಜಾಬ್ ಟೀಂ ಬ್ಯಾಲೆನ್ಸ್​ಡ್ ಆಗಿ ಕಾಣ್ತಿದೆ. ಲಾಸ್ಟ್ ಸೀಸನ್ ಅದ್ಭುತ ಪ್ರದರ್ಶನ ನೀಡಿದೆ. ಌಂಡ್ ಫೈನಲ್ ಪ್ರವೇಶಿಸಿ ರನ್ನರ್ ಅಪ್ ಕೂಡ ಆಗಿತ್ತು. ಹೀಗಿದ್ರೂ ನಾಲ್ವರನ್ನ ರಿಲೀಸ್ ಮಾಡ್ಬೋರು. ಌಂಡ್ 5.75 ಕೋಟಿ ಉಳಿತಾಯವಾಗುತ್ತೆ.

ಜಿಟಿ  ( ಉಳಿತಾಯ 1.90 ಕೋಟಿ )

ಆಟಗಾರ                                               ಸಂಭಾವನೆ

ನಿಶಾಂತ್ ಸಿಂಧು                            ₹30 ಲಕ್ಷ

ಗುರ್ನೂರ್ ಬ್ರಾರ್                          ₹1.30 ಕೋಟಿ

ಮಾನವ್ ಸುತಾರ್                          ₹30 ಲಕ್ಷ

ಗುಜರಾತ್ ಪರ ಸದ್ಯಕ್ಕೆ ಅಂತಾ ದೊಡ್ಡ ಹೆಸರುಗಳ್ಯಾವು ರಿಲೀಸ್ ಲಿಸ್ಟಲ್ಲಿಲ್ಲ. ಈ ಮೂವರು ಹೊರ ಬೀಳೋ ಚಾನ್ಸಸ್ ಇದೆಯಷ್ಟೇ. ಇನ್ನು ರಾಜಸ್ಥಾನ ಬಗ್ಗೆ ನೋಡೋದಾದ್​ರೆ

ಆರ್ ಆರ್  ( ಉಳಿತಾಯ 25.4 ಕೋಟಿ )

ಆಟಗಾರ                                                    ಸಂಭಾವನೆ

ಸಂಜು ಸ್ಯಾಮ್ಸನ್                            ₹18 ಕೋಟಿ

ತುಷಾರ್ ದೇಶಪಾಂಡೆ                   ₹6.50 ಕೋಟಿ

ಕುಮಾರ್ ಕಾರ್ತಿಕೇಯ                 ₹30 ಲಕ್ಷ

ಅಶೋಕ್ ಶರ್ಮಾ                         ₹30 ಲಕ್ಷ

ಕುನಾಲ್ ಸಿಂಗ್ ರಾಥೋಡ್            ₹30 ಲಕ್ಷ

ಆರ್​ಆರ್​ನಲ್ಲಿ ಈ ಸಲ ನಾಯಕನೇ ಬದಲಾಗೋದು ಪಕ್ಕಾ ಆಗಿದೆ. ಸಂಜು ಸಿಎಸ್​ಕೆ ಸೇರೋದ್ರಿಂದ ರಾಜಸ್ಥಾನಕ್ಕೆ ಯಾರು ನಾಯಕ ಆಗ್ತಾರೆ ಅನ್ನೋದನ್ನ ನೋಡ್ಬೇಕು. ಇನ್ನು ಆರ್​ಸಿಬಿಯ ರಿಲೀಸ್ ಲಿಸ್ಟ್ ನೋಡೋದಾದ್ರೆ

ಆರ್ ಸಿಬಿ ( ಉಳಿತಾಯ 19.75 ಕೋಟಿ )

ಆಟಗಾರ                                                           ಸಂಭಾವನೆ

ಲಿಯಾಮ್ ಲಿವಿಂಗ್ ಸ್ಟೋನ್              ₹8.75 ಕೋಟಿ

ಯಶ್ ದಯಾಳ್                                    ₹ 5 ಕೋಟಿ

ರಸಿಕ್ ಸಲಾಂ ದಾರ್                            ₹6 ಕೋಟಿ

ಈ ಮೂವರೂ ಕೂಡ ಬಿಗ್ ಪ್ಲೇಯರ್ಸ್. ಇವ್ರನ್ನ ರಿಲೀಸ್ ಮಾಡೋದ್ರಿಂದ ಟೋಟಲ್ಲಾಗಿ 19.75 ಕೋಟಿ ಸೇವಿಂಗ್ಸ್ ಆಗುತ್ತೆ. ಅದನ್ನ ಬೇರೆ ಆಟಗಾರರ ಮೇಲೆ ಬಿಡ್ ಮಾಡಬಹುದು. ಕಳೆದ ಮೆಗಾ ಹರಾಜಿನಲ್ಲಿ ಆರ್‌ಸಿಬಿ ₹119.25 ಕೋಟಿ ಖರ್ಚು ಮಾಡಿತ್ತು ಮತ್ತು ₹ 75 ಲಕ್ಷ ಮಾತ್ರ ಬಾಕಿ ಉಳಿದಿತ್ತು.  ಸೋ 2026ರ ಐಪಿಎಲ್​ಗೂ ಮುನ್ನ ನಾಯಕ ರಜತ್ ಪಾಟಿದಾರ್, ಫ್ರಾಂಚೈಸಿಯ ಐಕಾನ್ ಪ್ಲೇಯರ್ ವಿರಾಟ್ ಕೊಹ್ಲಿ, ಭುವನೇಶ್ವರ್ ಕುಮಾರ್, ಜಿತೇಶ್ ಶರ್ಮಾ, ದೇವದತ್ ಪಡಿಕ್ಕಲ್, ಕೃನಾಲ್ ಪಾಂಡ್ಯ, ಟಿಮ್ ಡೇವಿಡ್, ಫಿಲ್ ಸಾಲ್ಟ್ ಮತ್ತು ಜೋಶ್ ಹ್ಯಾಜಲ್‌ವುಡ್ ಅವರನ್ನ ರಿಟೇನ್ ಮಾಡಿಕೊಳ್ಬೋದು.

Shantha Kumari