250 ರನ್ಸ್ ಫೇಲ್.. 300 ಟಾರ್ಗೆಟ್! – ಬೆಂಕಿ ಬ್ಯಾಟಿಂಗ್ ಬಂದ್ರಷ್ಟೇ ಗೆಲುವು
ಶ್ರೇಯಸ್ Vs ಹೋಪ್.. ಯಾರಿಗೆ ಸರಣಿ?

ಕ್ಲೈಮ್ಯಾಕ್ಸ್ ಕದನ.. ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಟಿ-20ಐ ಕ್ಲೈಮ್ಯಾಕ್ಸ್ ಕದನಕ್ಕೆ ಕೌಂಟ್ಡೌನ್ ಸ್ಟಾರ್ಟ್ ಆಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರೋ ರಣರೋಚಕ ಪಂದ್ಯಕ್ಕೆ ಎರಡೂ ತಂಡಗಳು ಸಿದ್ಧವಾಗಿವೆ. ಌಂಡ್ ಈಕ್ವೆಶನ್ ಕೂಡ ಸಿಂಪಲ್ ಆಗಿದ್ದು ಮ್ಯಾಚ್ ಗೆದ್ದವ್ರು ಸರಣಿ ವಿನ್ನರ್ಸ್ ಕೂಡ. ಹಾಗಂತ ಎರಡೂ ತಂಡಗಳಿಗೆ ಈಸಿ ಇಲ್ವೇಇಲ್ಲ.
ಇದನ್ನೂ ಓದಿ : ಭಾರತಕ್ಕೆ ವೆಸ್ಟ್ ಇಂಡೀಸ್ ಶಾಕ್! – 4ನೇ T20ಯಲ್ಲಿ ಟೀಂ ಇಂಡಿಯಾ ಧೂಳೀಪಟ!
ತವರಿನಲ್ಲಿ ಸರಣಿ ಗೆಲ್ಬೇಕು ಅನ್ನೋ ಟಾರ್ಗೆಟ್ನಲ್ಲಿರೋ ಶ್ರೇಯಸ್ ಅಯ್ಯರ್.. ಅದ್ಭುತ ಬ್ಯಾಟಿಂಗ್ ಜೊತೆ ವಿಂಡೀಸ್ಗೆ ಗೆಲುವಿನ ಟಾನಿಕ್ ನೀಡ್ಬೇಕು ಎನ್ನುತ್ತಿರೋ ಶಾಯ್ ಹೋಪ್. ಸಿಕ್ಸರ್ಗಳ ಸುರಿಮಳೆ ನಡುವೆ ಇವತ್ತಿನ ಪಂದ್ಯ ಗೆಲ್ಲೋದ್ಯಾರು ಅನ್ನೋದು ಎಲ್ಲರ ಕುತೂಹಲ. ಹಾಗಂತ ಇವತ್ತಿನ ಮ್ಯಾಚ್ನಲ್ಲಿ ಇಂಥವ್ರೇ ಗೆಲ್ಲಬಹುದು ಅಂತಾ ಪ್ರೆಡಿಕ್ಟ್ ಕೂಡ ಮಾಡೋಕಾಗಲ್ಲ. ಫೇವರೆಟ್ ಟೀಂ ಕೂಡ ಇಲ್ಲ. ಸರಣಿಯಲ್ಲಿ ಎರಡೂ ಕಡೆಯ ಪರ್ಫಾಮೆನ್ಸ್ ಚೆನ್ನಾಗಿರೋದ್ರಿಂದ ಕೊನೇ ಮ್ಯಾಚಲ್ಲಿ ಏನ್ ಬೇಕಾದ್ರೂ ಆಗ್ಬೋದು.
ಯಾರಿಗೆ ಸರಣಿ ಗೆಲುವು?
ಸರಣಿ ಸಮಬಲ ಆಗಿರೋದ್ರಿಂದ ಎರಡೂ ತಂಡಗಳಿಗೆ ಗೆಲುವಿನ ಪ್ರೆಶರ್
ಉಭಯ ತಂಡಗಳಲ್ಲೂ ಬ್ಯಾಟಿಂಗ್ ನಲ್ಲಿ ಡೇಂಜರಸ್ ಆಗಿರುವ ಪ್ಲೇಯರ್ಸ್
ಚಿನ್ನಸ್ವಾಮಿ ಮೈದಾನದಲ್ಲಿ ಸಣ್ಣ ಬೌಂಡರಿಗಳು ಇರೋದ್ರಿಂದ ಬಿಗ್ ಇನ್ನಿಂಗ್ಸ್
ಡೆತ್ ಓವರ್ ಗಳಲ್ಲಿ ರನ್ಸ್ ಕಂಟ್ರೋಲ್ ಮಾಡುವ ತಂಡಕ್ಕೆ ಪ್ಲಸ್ ಪಾಯಿಂಟ್
ಎರಡೂ ಕಡೆ ಬೌಲಿಂಗ್ ವೀಕ್ ನೆಸ್.. ಭಾರತದ ಫೀಲ್ಡಿಂಗ್ ಇನ್ನೂ ಕಳಪೆ
ಭಾರತಕ್ಕೆ ಟಾಪ್ ಆರ್ಡರ್ ಬ್ಯಾಟಿಂಗ್ ಕೈಕೊಟ್ರೆ ಮಿಡಲ್ ಆರ್ಡರ್ ಕಷ್ಟ
ವಿಂಡೀಸ್ ನಲ್ಲಿ ಟೇಲ್ ಎಂಡರ್ಸ್ ಕೂಡ ಬಿಗ್ ಹಿಟ್ಟರ್ಸ್ ಇರೋದು ಪ್ಲಸ್
ಶಾಯ್ ಹೋಪ್ 261, ರುದರ್ಫೋರ್ಡ್ 221 ರನ್ಸ್ ಗಳಿಸಿ ಹೈ ಸ್ಕೋರರ್ಸ್
ಇನ್ನು ಭಾರತದ ಪರ ಸದ್ಯಕ್ಕೆ ಈ ಸಿರೀಸ್ನಲ್ಲಿ ಯಾವ ಬ್ಯಾಟರ್ ಕೂಡ ಕನ್ಸಿಸ್ಟೆನ್ಸಿ ಪರ್ಫಾಮೆನ್ಸ್ ನೀಡಿಲ್ಲ. ಶ್ರೇಯಸ್ ಅಯ್ಯರ್ 159 ರನ್ಸ್ ಗಳಿಸಿದ್ದೇ ಭಾರತದ ಪರ ಸರಣಿಯ ಹೈಸ್ಕೋರರ್ ಆಗಿದ್ದಾರೆ. ಹೀಗಾಗಿ ಕೊನೇ ಮ್ಯಾಚ್ ಇಂಥವ್ರೇ ವಿನ್ ಆಗ್ತಾರೆ ಅನ್ನೋದನ್ನ ಊಹೆ ಮಾಡೋದು ಕಷ್ಟವೇ. ಭಾರತಕ್ಕೆ ಬೌಲಿಂಗ್ ಸ್ವಲ್ಪ ಸಪೋರ್ಟ್ ಸಿಕ್ರೆ ಮ್ಯಾಚ್ ವಿನ್ ಆಗ್ಬೋದು. ಅಥವಾ ವಿಂಡೀಸ್ ಪರ ಬ್ಯಾಟಿಂಗ್ ಆರ್ಡರ್ ಇದೇ ಥರ ಅಬ್ಬರಿಸಿದ್ರೆ ಅವ್ರೇ ಗೆದ್ದು ಬೀಗಬಹುದು. ಌಂಡ್ ಇಲ್ಲಿ ಕಳೆದ ನಾಲ್ಕೂ ಪಂದ್ಯಗಳಲ್ಲೇ ಬ್ಯಾಟರ್ಗಳೇ ಗೇಮ್ ಡಿಸೈಡರ್ಸ್ ಆಗಿದ್ದಾರೆ. ಯಾವ ತಂಡ ಬ್ಯಾಟಿಂಗ್ನಲ್ಲಿ ಬೊಂಬಾಟ್ ಪ್ರದರ್ಶನ ನೀಡಿದ್ಯೋ ಅವ್ರೇ ಗೆದ್ದಿದ್ದಾರೆ. ಌಂಡ್ ಎಲ್ಲೂ ಕೂಡ ಗೇಮ್ ಕ್ಲೋಸ್ ಆಗಿಲ್ಲ. ಲಾಸ್ಟ್ ಬಾಲ್ ಥ್ರಿಲ್ಲರ್ವರೆಗೂ ಹೋಗಿಲ್ಲ. ಹೀಗಾಗಿ ಇಂದಿನ ಮ್ಯಾಚಲ್ಲೂ ಫಸ್ಟ್ ಬ್ಯಾಟಿಂಗ್ ಮಾಡುವವರು ಏನಿಲ್ಲ ಅಂದ್ರೂ 250 ರನ್ಸ್ ಹತ್ರ ನೋಡೇ ನೋಡ್ತಾರೆ. ಆಲ್ರೆಡಿ 250 ಟಾರ್ಗೆಟ್ ಕೂಡ ಚೇಸ್ ಆಗಿರೋದ್ರಿಂದ ಬಹುಶಃ ಭಾರತ ಏನಾದ್ರೂ ಫಸ್ಟ್ ಬ್ಯಾಟಿಂಗ್ ಮಾಡಿ ಗೆಲ್ಬೇಕು ಅಂದ್ರೆ 300 ರನ್ಸ್ ಟಾರ್ಗೆಟ್ ಫಿಕ್ಸ್ ಮಾಡ್ಬೇಕು ಅನ್ಸುತ್ತೆ. ಯಾಕಂದ್ರೆ ಭಾರತದ ಬೌಲಿಂಗ್ ಅಷ್ಟು ಖರಾಬಾಗಿದೆ. ಹೀಗಾಗಿ ಈ ಪಂದ್ಯ ಕೂಡ ಬಿಗ್ ಟಾರ್ಗೆಟ್ನ ಮ್ಯಾಚ್ ಆಗ್ಬೋದು. ಹಾಗಂತ ಈ ಪಂದ್ಯದ ಸೋಲು ಗೆಲುವು ಬರೀ ಮ್ಯಾಚ್ಗಷ್ಟೇ ಸೀಮಿತವಾಗಲ್ಲ. ಸರಣಿ ನಿರ್ಣಾಯಕ ಕೂಡ ಆಗೋದ್ರಿಂದ ಉಭಯ ತಂಡಗಳ ಆಟಗಾರರು ಪ್ರೆಶರ್ ಹೇಗೆ ಹ್ಯಾಂಡಲ್ ಮಾಡ್ತಾರೆ.

ನೋಡಿರಿ

