ಆರ್ಸಿಬಿ ಫ್ಯಾನ್ಸ್ಗೆ ಗುಡ್ನ್ಯೂಸ್ – ಚಿನ್ನಸ್ವಾಮಿಯಲ್ಲೇ ನಡೆಯಲಿದ ಉದ್ಘಾಟನಾ ಪಂದ್ಯ ಸೇರಿ 5 ಪಂದ್ಯ

ಐಪಿಎಲ್ ಪ್ರಾರಂಭಕ್ಕೂ ಮೊದಲು ಆರ್ಸಿಬಿ ಫ್ಯಾನ್ಸ್ಗಳಿಗೆ ಶುಭ ಸುದ್ದಿಯೊಂದು ಸಿಕ್ಕಿದೆ. ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಪಂದ್ಯಗಳು ಚಿನ್ನಸ್ವಾಮಿ ಕ್ರೀಡಾಂಗಣದಲ್ಲೇ ನಡೆಯಲಿವೆ. IPL 2026ರ ಉದ್ಘಾಟನಾ ಪಂದ್ಯವೂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಅಲ್ಲದೇ ಈ ಋತುವಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತನ್ನ ಐದು ತವರು ಪಂದ್ಯಗಳನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆಡಲಿದೆ. ಉಳಿದ ಎರಡು ತವರು ಪಂದ್ಯಗಳನ್ನು ರಾಯ್ಪುರದಲ್ಲಿ ಆಡಲಿದೆ.
ಈ ಕುರಿತು ಆರ್ಸಿಬಿ ಮಾಹಿತಿ ಹಂಚಿಕೊಂಡಿದ್ದು ಬೆಂಗಳೂರಿನಲ್ಲಿ ಪಂದ್ಯಗಳನ್ನು ಆಯೋಜಿಸುವಲ್ಲಿ ಮಾರ್ಗದರ್ಶನ, ಸಹಕಾರ ಮತ್ತು ಬೆಂಬಲಕ್ಕಾಗಿ ಕರ್ನಾಟಕ ಸರ್ಕಾರ, ಕರ್ನಾಟಕ ರಾಜ್ಯ ಕ್ರಿಕೆಟ್ ಸಂಘ ಮತ್ತು ಕರ್ನಾಟಕ ಪೊಲೀಸರಿಗೆ ಆರ್ಸಿಬಿ ಪ್ರಾಮಾಣಿಕ ಕೃತಜ್ಞತೆಯನ್ನು ಸಲ್ಲಿಸುತ್ತದೆ. ಐಪಿಎಲ್ ಋತುವಿಗೆ ಸಕಾಲದಲ್ಲಿ ಮೂಲಸೌಕರ್ಯ ಮತ್ತು ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಲು ಆದ್ಯತೆ ನೀಡಲಾಗುತ್ತದೆ.
ಇದನ್ನೂ ಓದಿ: ಟೀಂ INDಗೆ RO-KO ರಿಟರ್ನ್ಸ್ – 15 ಪಂದ್ಯದ ಮೇಲೆ ನಿಂತ ರೋಹಿತ್, ಕೊಹ್ಲಿ ODI ವಿಶ್ವಕಪ್ ಭವಿಷ್ಯ
ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಸಿಇಒ ರಾಜೇಶ್ ಮೆನನ್ ಪ್ರತಿಕ್ರಿಯಿಸಿ, “ಎಂ. ಚಿನ್ನಸ್ವಾಮಿ ಕ್ರೀಡಾಂಗಣವು ನಮ್ಮ ತವರು ಮೈದಾನಕ್ಕಿಂತ ಹೆಚ್ಚಿನದು, ಇದು ಒಂದು ತಂಡವಾಗಿ ನಮ್ಮ ಗುರುತನ್ನು ಜೀವಂತಗೊಳಿಸುವ ಸ್ಥಳವಾಗಿದೆ. ಬೆಂಗಳೂರು ಮೈದಾನಕ್ಕೆ ಅಭಿಮಾನಿಗಳು ತರುವ ಶಕ್ತಿಯು ನಮ್ಮ ಆಟಗಾರರಿಗೆ ಇದ್ದು ಇದು ಅವರಿಗೆ ಪ್ರೇರಕವಾಗಿರುತ್ತದೆ ಆಟದ ಪ್ರತಿಯೊಂದು ಹಂತದಲ್ಲೂ ಅವರಿಗೆ ಸ್ಫೂರ್ತಿ ನೀಡುತ್ತದೆ. ನಮ್ಮ ಅಭಿಮಾನಿಗಳು ಸದಾ ನಮ್ಮೊಂದಿಗೆ ಇರುವ ಕಾರಣ ತಮ್ಮ ನೆಚ್ಚನ ತಂಡದ ಸ್ಪರ್ಧೆಗಳನ್ನು ಮನೆಯಲ್ಲಿ ತವರಿನಲ್ಲಿ ವೀಕ್ಷಿಸಲು ಅವರು ಅರ್ಹರು ಎಂದಿದ್ದಾರೆ.

ನೋಡಿರಿ

