PBKS ಪಂಕ್ಚರ್.. SRH ಶೇಪ್ ಔಟ್ – ಗುಜರಾತ್ ಗೇಮ್ ಪ್ಲ್ಯಾನ್ ಸಕ್ಸಸ್
ಪ್ಲೇ ಆಫ್ ಲೆಕ್ಕಚಾರ ತಲೆಕೆಳಗಾಯ್ತಾ?

PBKS ಪಂಕ್ಚರ್.. SRH ಶೇಪ್ ಔಟ್ – ಗುಜರಾತ್ ಗೇಮ್ ಪ್ಲ್ಯಾನ್ ಸಕ್ಸಸ್ಪ್ಲೇ ಆಫ್ ಲೆಕ್ಕಚಾರ ತಲೆಕೆಳಗಾಯ್ತಾ?

ಪ್ಲೇ ಆಫ್ ಲೆಕ್ಕಾಚಾರ ಸ್ಟಾರ್ಟ್ ಆಗಿರೋ ಹೊತ್ತಲ್ಲೇ ಟಾಪ್ ನಲ್ಲಿರೋ ಟೀಮ್ಸ್ ಎಡವುತ್ತಿದ್ರೆ ಬಾಟಮ್ ನಲ್ಲಿರೋ ಟೀಮ್ಸ್ ಗೆದ್ದು ಬೀಗುತ್ತಿವೆ. ಪಾಯಿಂಟ್ಸ್ ಪಟ್ಟಿ ಲೆಕ್ಕಾಚಾರ ಟ್ವಿಸ್ಟ್ ಪಡೀತಿದೆ. ಸೂಪರ್ ಸಂಡೇಯ ಎರಡು ಪಂದ್ಯಗಳ ರಿಸಲ್ಟ್ ಬಿಗ್ ಇಂಪ್ಯಾಕ್ಟ್ ಮಾಡಿದೆ. ಭಾನುವಾರದ ಡಬಲ್ ಹೆಡರ್ ಮ್ಯಾಚ್​ಗಳಲ್ಲಿ ಅಚ್ಚರಿಯ ರಿಸಲ್ಟ್ಸ್​ ಬಂದಿದೆ. ಅಂದ್ರೆ ಗೆಲ್ತಾರೆ ಅನ್ಕೊಂಡವ್ರು ಸೋತಿದ್ದಾರೆ ಸೋಲ್ತಾರೆ ಅನ್ಕೊಂಡವ್ರು ಗೆದ್ದು ಬೀಗಿದ್ದಾರೆ. ಈ ಸೋಲು ಗೆಲುವಿನ ಲೆಕ್ಕಾಚಾರ ಪಾಯಿಂಟ್ಸ್ ಪಟ್ಟಿಯಲ್ಲಿ ಹೊಸ ತಿರುವು ನೀಡಿದೆ. ಮೊದ್ಲಿಗೆ ನಿನ್ನೆ ಮಧ್ಯಾಹ್ನ ಹೈದ್ರಾಬಾದ್ ಮತ್ತು ಕೆಕೆಆರ್ ನಡುವೆ ಪಂದ್ಯ ನಡೀತು. ಈ ಮ್ಯಾಚಲ್ಲಿ ಹೈದ್ರಾಬಾದ್ ಗೆಲ್ಲುವಂಥ ಪೇವರೆಟ್ ಟೀಂ ಆಗಿತ್ತು. ಆದ್ರೆ ಕೊಲ್ಕತ್ತಾ ವಿನ್ ಆಯ್ತು. ಫಸ್ಟ್ ಬ್ಯಾಟಿಂಗ್ ಮಾಡಿದ್ದ ಹೈದ್ರಾಬಾದ್ 19 ಓವರ್​ಗಳಲ್ಲೇ 165 ರನ್​ಗಳಿಗೆ ಆಲೌಟ್ ಆದ್ರೆ ಕೆಕೆಆರ್ ಟೀಂ 18.2 ಓವರ್​ಗಳಲ್ಲೇ ಟಾರ್ಗೆಟ್ ರೀಚ್ ಆಯ್ತು. ಇನ್ನು ರಾತ್ರಿ ಮ್ಯಾಚಲ್ಲಿ ಫಸ್ಟ್ ಬ್ಯಾಟಿಂಗ್ ಮಾಡಿದ್ದ ಪಂಜಾಬ್ ಗೆಲ್ಲೋ ಟೀಂ ಅನ್ಸಿದ್ರೂ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳ್ಕೊಂಡು 163 ರನ್ಸ್ ಅಷ್ಟೇ ಗಳಿಸಿದ್ದು. ಈ ಗುರಿ ಬೆನ್ನಟ್ಟಿದ ಗುಜರಾತ್ ಲಾಸ್ಟ್ ಓವರ್​ನಲ್ಲಿ ಇನ್ನೊಂದು ಬಾಲ್ ಬಾಕಿ ಇದ್ದಾಗ ಗೆದ್ದು ಬೀಗಿದೆ. ಹಾಗಂತ ಪಾಯಿಂಟ್ಸ್ ಪಟ್ಟಿಯಲ್ಲಿ ದೊಡ್ಡ ಬದಲಾವಣೆ ಆಗಿಲ್ಲ. ಬಟ್ ಮುಂದಿನ ಪಂದ್ಯಗಳಲ್ಲಿ ಟ್ವಿಸ್ಟ್ ಮೇಲೆ ಟ್ವಿಸ್ಟ್ ಎದುರಾಗುತ್ತೆ.

ಇದನ್ನೂ ಓದಿ : ಹ್ಯಾಟ್ರಿಕ್ ಗೆಲುವಿನ ಸಂಭ್ರಮದಲ್ಲಿ ಗುಜರಾತ್ – GT ಮ್ಯಾಜಿಕ್‌ಗೆ ಪಂಜಾಬ್ ಪಲ್ಟಿ

ಪ್ಲೇ ಆಫ್ ಲೆಕ್ಕಾಚಾರ ಸ್ಟಾರ್ಟ್!

ಪಂಜಾಬ್ 13 ಅಂಕ ಪಡೆದು ಮೊದಲ ಸ್ಥಾನದಲ್ಲೇ ಇದೆ

ಗುಜರಾತ್ ವಿರುದ್ಧ ಗೆದ್ದಿದ್ರೆ 15 ಅಂಕಗಳೊಂದಿಗೆ ಆಲ್ಮೋಸ್ಟ್ ಪ್ಲೇ ಆಫ್ಸ್

ಪಂಜಾಬ್ ವಿರುದ್ಧ ಗುಜರಾತ್ ಗೆದ್ದಿರೋದ್ರಿಂದ ಪ್ಲೇ ಆಫ್ ಗೆ ಹತ್ತಿರ

ಪಾಯಿಂಟ್ಸ್ ಪಟ್ಟಿಯಲ್ಲಿ ಈಗ 4 ತಂಡಗಳು 12 ಅಂಕಗಳು ಪಡೆದಿವೆ

ಬೆಂಗಳೂರು, ಹೈದ್ರಾಬಾದ್, ರಾಜಸ್ಥಾನ ಹಾಗೂ ಗುಜರಾತ್ 12 ಅಂಕ

ಈಗ ಐದು ತಂಡಗಳು ಆಲ್ಮೋಸ್ಟ್ ಪ್ಲೇ ಆಫ್ ರೇಸ್ ಗೆ ಹತ್ತಿರದಲ್ಲಿವೆ

ಹೀಗೆ ಒಂದೊಂದು ತಂಡಗಳ ರಿಸಲ್ಟ್ ಬಂದಾಗ್ಲೂ ಪಾಯಿಂಟ್ಸ್ ಪಟ್ಟಿಯಲ್ಲಿ ವೇರಿಯೇಷನ್ಸ್ ಆಗ್ತಾ ಇರುತ್ತೆ. ಌಂಡ್ ಇಲ್ಲೇ ನೋಡಿ 4 ತಂಡಗಳು 12 ಅಂಕ ಪಡೆದಿದ್ರೂ ಆರ್​ಸಿಬಿ ಯಾಕೆ ಸೆಕೆಂಡ್ ಪ್ಲೇಸ್​ನಲ್ಲಿದೆ ಅಂದ್ರೆ ಅದಕ್ಕೆ ಕಾರಣ ನೆಟ್ ರನ್ ರೇಟ್. ಇದೇ ಕಾರಣಕ್ಕೆ ಬಿಗ್ ಮಾರ್ಜಿನ್ ವಿಕ್ಟರಿಗಳು ಇಂಪಾರ್ಟೆಂಟ್ ಆಗೋದು.

Shantha Kumari