RCB ಕನ್ಸಿಸ್ಟೆನ್ಸಿ.. GTಗೆ ಬೌಲಿಂಗ್ ಶಕ್ತಿ – SRH & RRಗೆ ಓಪನರ್ ಗಳೇ ಪವರ್
4 ಟೀಂ.. 4 ಮ್ಯಾಚ್.. ಯಾರಿಗೆ ಕಪ್?

2026ರ ಐಪಿಎಲ್ನ ಲೀಗ್ ಫೈಟ್ ಕಂಪ್ಲೈಟ್ ಆಗಿದ್ದು ಈಗ ನಾಕೌಟ್ ಮ್ಯಾಚ್ಗಳ ಥ್ರಿಲ್ಲರ್ ಸ್ಟಾರ್ಟ್ ಆಗಲಿದೆ. ನಂಬರ್ 1 ಹಾಗೇ ನಂಬರ್ 2ನಲ್ಲಿರೋ ಬೆಂಗಳೂರು ಮತ್ತು ಗುಜರಾತ್ ಮೇ 26 ಅಂದ್ರೆ ನಾಳೆ ಮುಖಾಮುಖಿ ಆದ್ರೆ ನಂಬರ್ 3 ಹಾಗೇ ನಂಬರ್ 4ನಲ್ಲಿರೋ ಹೈದ್ರಾಬಾದ್ ಮತ್ತು ರಾಜಸ್ಥಾನ ತಂಡಗಳು ಮೇ 27ಕ್ಕೆ ಎಲಿಮಿನೇಟರ್ ಮ್ಯಾಚಲ್ಲಿ ಮುಖಾಮುಖಿ ಆಗ್ತಾರೆ. ಆಮೇಲೆ ಮೇ 29ಕ್ಕೆ ಕ್ವಾಲಿಫೈಯರ್ 2 & ನೆಕ್ಸ್ಟ್ 31ಕ್ಕೆ ಫೈನಲ್ ಫೈಟ್. ಹೀಗಾಗಿ ಮುಂದಿನ ಒಂದೊಂದು ಪಂದ್ಯಗಳು ಡು ಆರ್ ಡೈ. ಗೆದ್ದವ್ರು ಕಪ್ಗೆ ಹತ್ತಿರ ಆಗ್ತಾರೆ ಸೋತವ್ರೂ ಗಂಟುಮೂಟೆ ಕಟ್ಟೋಕೆ ರೆಡಿ ಆಗ್ತಾರೆ.
ಪಾಯಿಂಟ್ಸ್ ಟೇಬಲ್ನಲ್ಲಿ ಸದ್ಯ ಬೆಂಗಳೂರು, ಗುಜರಾತ್ ಹಾಗೇ ಹೈದ್ರಾಬಾದ್ ತಂಡಗಳು ಈಕ್ವಲ್ ಪಾಯಿಂಟ್ಸ್ ಪಡೆದು ಪ್ಲೇಆಫ್ಸ್ಗೆ ಕ್ವಾಲಿಫೈ ಆಗಿವೆ. ಅದ್ರಲ್ಲಿ ಮೂರೂ ತಂಡಗಳು 18 ಅಂಕ ಇದ್ರೆ ನೆಟ್ ರನ್ರೇಟ್ ನಲ್ಲಿ ಬೆಂಗಳೂರು ಟಾಪ್ನಲ್ಲಿದೆ. ಇನ್ನು 16 ಅಂಕ ಪಡೆದ ರಾಜಸ್ಥಾನ ತಂಡ ನಾಲ್ಕನೇ ಸ್ಥಾನದಲ್ಲಿ ಟಿಕೆಟ್ ಪಡ್ಕೊಂಡಿದೆ. ಹಾಗೆ ನೋಡಿದ್ರೆ ಈ ಸೀಸನ್ನಲ್ಲಿ ಈ ನಾಲ್ಕೂ ತಂಡಗಳೂ ಡೇಂಜರಸ್ ಟೀಮ್ಗಳೇ. ಬ್ಯಾಟಿಂಗ್ ಬೌಲಿಂಗ್ ಹೀಗೆ ಎಲ್ಲದ್ರಲ್ಲೂ ಬೆಸ್ಟ್ ಅನ್ನೋ ಕಾರಣಕ್ಕೆ ಇವತ್ತು ಟಾಪ್ ಪೊಸಿಷನ್ನಲ್ಲಿ ಇರುವಂಥದ್ದು. ಅಟ್ ದಿ ಟೇಮ್ ಕೆಲ ವೀಕ್ನೆಸ್ಗಳೂ ಇದೆ.
ಇದನ್ನೂ ಓದಿ : RRಗೆ ಲಕ್.. ಟಾಪ್-4 ಫೈನಲ್ – ಅದೃಷ್ಟದ ಆಟದಲ್ಲಿ ಸೋತ PBKS
ಬೆಂಗಳೂರು ಪ್ಲಸ್ & ಮೈನಸ್!
ಪಾಯಿಂಟ್ಸ್ ಪಟ್ಟಿಯಲ್ಲಿ ನಂಬರ್ 1 ಸ್ಥಾನದಲ್ಲಿ ಲೀಗ್ ಫಿನಿಶ್ ಕಾನ್ಫಿಡೆನ್ಸ್
ಬ್ಯಾಟಿಂಗ್ & ಬೌಲಿಂಗ್ ಸೂಪರ್.. ಸೀಸನ್ ನಲ್ಲಿ ಕನ್ಸಿಸ್ಟೆನ್ಸಿ ಪ್ರದರ್ಶನ
ವಿರಾಟ್ ಕೊಹ್ಲಿ ಮತ್ತೊಮ್ಮೆ 500 ಕ್ಕೂ ಹೆಚ್ಚು ರನ್ ಗಳಿಸಿ ಅಬ್ಬರ
ಪಡಿಕ್ಕಲ್, ಪಾಟಿದಾರ್, ಟಿಮ್ ಡೇವಿಡ್ ಜೊತೆಗೆ ಕೃನಾಲ್ ಫಿನಿಷರ್ಸ್
ಹೇಜಲ್ ವುಡ್ & ಭುವಿ ಪವರ್ ಪ್ಲೇ & ಡೆತ್ ಓವರ್ ಡಾಮಿನೇಷನ್
ಮಿಡಲ್ ಆರ್ಡರ್ ರನ್ಸ್ ಬೇಕು, ಹೇಜಲ್ ವುಡ್ ದುಬಾರಿ ಬೌಲಿಂಗ್
ಫೀಲ್ಡಿಂಗ್ ಕಳಪೆಯಾಗಿದ್ದು ಕ್ಯಾಚ್ ಡ್ರಾಪ್ ಜೊತೆ ರನ್ಸ್ ದಾನ
ಗುಜರಾತ್ ಪ್ಲಸ್ & ಮೈನಸ್!
ಗುಜರಾತ್ ತಂಡದಲ್ಲಿ ಬ್ಯಾಟಿಂಗ್ & ಬೌಲಿಂಗ್ ಕಾಂಬಿನೇಷನ್ ಸೂಪರ್
ಸಾಯಿ ಸುದರ್ಶನ್ ಮತ್ತು ಶುಭ್ ಮನ್ ಗಿಲ್ 1,200+ ರನ್ಸ್ ಗಳಿಕೆ
ಜೋಸ್ ಬಟ್ಲರ್ ಮತ್ತು ವಾಷಿಂಗ್ಟನ್ ಸುಂದರ್ ಕ್ರೂಶಿಯಲ್ ರನ್ಸ್
ಬೌಲಿಂಗ್ ನಲ್ಲಿ ರಬಾಡ, ಸಿರಾಜ್, ಹೋಲ್ಡರ್ & ರಶೀದ್ ರಣಾರ್ಭಟ
ಜಿಟಿ ತಂಡದ ಫೀಲ್ಡಿಂಗ್ ಕೂಡ ತುಂಬಾ ಉತ್ತಮ, ಆಟಗಾರರ ಡೆಡಿಕೇಷನ್
ಗುಜರಾತ್ ಮೈನಸ್ ಅಂದ್ರೆ ಮಿಡಲ್ ಆರ್ಡರ್ ಬ್ಯಾಟಿಂಗ್ ಅಷ್ಟಕ್ಕಷ್ಟೇ
ಹೈದರಾಬಾದ್ ಪ್ಲಸ್ & ಮೈನಸ್!
ಹೈದ್ರಾಬಾದ್ ತಂಡದ ಅತಿದೊಡ್ಡ ಶಕ್ತಿಯೇ ಬ್ಯಾಟಿಂಗ್ ಲೈನಪ್
ಅಭಿ, ಹೆಡ್, ಕಿಶನ್ ಹಾಗೂ ಕ್ಲಾಸೆನ್.. ಮೂವರು 500+ ರನ್ಸ್
250+ ರನ್ಸ್ ದಾಖಲು ಮಾಡುವಲ್ಲಿ ಸಾಧನೆ.. 6 ಸಲ ಅಬ್ಬರ
ಸಕಿಬ್ ಹುಸೇನ್ ಮತ್ತು ಎಶಾನ್ ಮಾಲಿಂಗ ಅವರ ಅದ್ಭುತ ಬೌಲಿಂಗ್
ಸ್ಲೋವರ್ 1 ಎಸೆತಗಳ ಮೂಲಕ ಎದುರಾಳಿ ಪಡೆಯ ವಿಕೆಟ್ಸ್ ಬೇಟೆ
ಕೆಲವೊಮ್ಮೆ ಬ್ಯಾಟಿಂಗ್ ನಲ್ಲಿ ಕಂಪ್ಲೀಟ್ ಫೇಲ್ಯೂರ್ ಆಗುವ ಪ್ಲೇಯರ್ಸ್
ಟಾಪ್-4 ಬ್ಯಾಟಿಂಗ್ ಮೇಲೆಯೇ ಜಾಸ್ತಿ ಡಿಪೆಂಡ್ ಆಗಿರುವ ತಂಡ
ರಾಜಸ್ಥಾನ ಪ್ಲಸ್ & ಮೈನಸ್!
ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಜೊತೆಯಾಟ ಬೊಂಬಾಟ್
ಬಿಗ್ ಟಾರ್ಗೆಟ್ ಸೆಟ್ ಅಥವಾ ಚೇಸಿಂಗ್ ನಲ್ಲಿ ರಾಜಸ್ಥಾನದ ಪ್ರದರ್ಶನ ಚೆನ್ನಾಗಿದೆ
ಬೌಲಿಂಗ್ ನಲ್ಲಿ ಫಸ್ಟ್ ಬಾಲ್ ನಿಂದಲೇ ಅಟ್ಯಾಕಿಂಗ್ ನಲ್ಲಿರುವ ಜೋಫ್ರಾ ಆರ್ಚರ್
ರವೀಂದ್ರ ಜಡೇಜಾರಂಥ ಅನುಭವಿ ಜೊತೆಗೆ ಯಶ್ ಪುಂಜಾ ಬೌಲಿಂಗ್ ಸೂಪರ್
ಓಪನರ್ ಜೋಡಿ ಮೇಲೆಯೇ ಬ್ಯಾಟಿಂಗ್ ಕಂಪ್ಲೀಟ್ ಡಿಪೆಂಡ್.. ಪರಾಗ್ ಸಪ್ಪೆ
ಕನ್ಸಿಸ್ಟೆನ್ಸಿ ಪ್ರದರ್ಶನದ ಕೊರತೆಯಿಂದ ಏಳುಬೀಳಿನ ಜರ್ನಿ ಕಂಡಿರುವ ರಾಜಸ್ಥಾನ

ನೋಡಿರಿ

