ಶ್ರೇಯಸ್ + ರಿಕಿ = ಶಿಕಾರಿ – 6 ಪಂದ್ಯಗಳಲ್ಲೂ UNBEATEN ಆಗಿದ್ದೇಗೆ?
ಪ್ರಚಂಡ ಪಂಜಾಬ್ ಟ್ರೋಫಿ ಗೆಲ್ಲುತ್ತಾ?

ಶ್ರೇಯಸ್ + ರಿಕಿ = ಶಿಕಾರಿ – 6 ಪಂದ್ಯಗಳಲ್ಲೂ UNBEATEN ಆಗಿದ್ದೇಗೆ?ಪ್ರಚಂಡ ಪಂಜಾಬ್ ಟ್ರೋಫಿ ಗೆಲ್ಲುತ್ತಾ?

ಪಂಜಾಬ್ ಕಿಂಗ್ಸ್.. 2025ರ ಐಪಿಎಲ್ ಸೀಸನ್​ಗೂ ಮುನ್ನ ಹತ್ತರಲ್ಲಿ ಒಂದು ಅನ್ನೋ ಥರ ಇದ್ದ ಟೀಂ. ಆದ್ರೀಗ ನಂಬರ್ 1 ಟೀಂ ಆಗಿ ಮುನ್ನುಗ್ತಿದೆ. ಲಾಸ್ಟ್ ಸೀಸನ್​ನಲ್ಲಿ ಫೈನಲಿಸ್ಟ್.. ಈ ಸೀಸನ್​ನಲ್ಲಿ ಈವರೆಗೆ ಅನ್ ಬೀಟನ್ ಟೀಂ. ರಿಕಿ ಪಾಂಟಿಂಗ್ ಗೈಡೆನ್ಸ್​ನಲ್ಲಿ ಶ್ರೇಯಸ್ ಅಯ್ಯರ್ ಲೀಡರ್​ಶಿಪ್​ನಲ್ಲಿ ಮೋಸ್ಟ್ ಡೇಂಜರಸ್ ಆಗಿ ಪರ್ಫಾಮ್ ಮಾಡ್ತಿದ್ದಾರೆ. ಌಂಡ್ ಟ್ರೋಫಿ ಎತ್ತಿ ಹಿಡಿಯೋಕೆ ಮೋಸ್ಟ್ ಡಿಸರ್ವಿಂಗ್ ಕೂಡ ಇದ್ದಾರೆ.

ಇದನ್ನೂ ಓದಿ : 22ಕ್ಕೆ 19 ರನ್.. ನೆಕ್ಸ್​ಟ್ 23ಕ್ಕೆ 82 ರನ್ – ಮುಂಬೈ ಗೆ ಗೆಲುವಿನ ತಿಲಕವಿಟ್ಟ ಅಶ್ವನಿ     

2026ರ ಐಪಿಎಲ್ ಸೀಸನ್​ನಲ್ಲಿ ಅನ್ ಬೀಟನ್ ಟೀಂ ಆಗಿರೋ ಏಕೈಕ ತಂಡ ಅಂದ್ರೆ ಅದು ಪಂಜಾಬ್ ಕಿಂಗ್ಸ್.. ಕೆಕೆಆರ್ ವಿರುದ್ಧದ ಮ್ಯಾಚ್ ಮಳೆ ಕಾರಣಕ್ಕೆ ರದ್ದಾಗಿದ್ದು ಬಿಟ್ರೆ ಉಳಿದ ಐದು ಪಂದ್ಯಗಳಲ್ಲೂ ಗೆದ್ದು ಟೇಬಲ್ ಟಾಪರ್ ಆಗಿದ್ದಾರೆ. ಟೋಟಲ್ 11 ಅಂಕಗಳೊಂದಿಗೆ ಡಾಮಿನೇಟ್ ಮಾಡ್ತಿದ್ದು ಆಲ್ರೆಡಿ ಪ್ಲೇ ಆಫ್ ಲೆಕ್ಕಾಚಾರ ಶುರು ಮಾಡಿದ್ದಾರೆ. ಯಶಸ್ವೀ ತಂಡಗಳನ್ನೂ ಸೋಲಿಸಿ ಮುನ್ನುಗ್ತಿರೋ ಪಂಜಾಬ್ ಈಗ ನಡೆದಿದ್ದೇ ದಾರಿಯಾಗಿದೆ.

ಐಪಿಎಲ್ ಇತಿಹಾಸದಲ್ಲೇ ಮೊದಲ 6 ಪಂದ್ಯ ಸೋಲದ ತಂಡ ಪಂಜಾಬ್!

ಈ ಸೀಸನ್​ನಲ್ಲಿ ಒಟ್ಟು ಆರು ಪಂದ್ಯಗಳನ್ನ ಆಡಿರೋ ಪಂಜಾಬ್ ಹೊಸ ಇತಿಹಾಸವನ್ನೇ ನಿರ್ಮಿಸಿದೆ.  ಐಪಿಎಲ್ ಇತಿಹಾಸದಲ್ಲಿ ಮೊದಲ 6 ಪಂದ್ಯಗಳಲ್ಲಿ ಒಂದೇ ಒಂದು ಸೋಲು ಕಾಣದ ಮೊದಲ ತಂಡ ಎನ್ನುವ ಚರಿತ್ರೆ ಬರೆದಿದೆ. ಇದಕ್ಕೂ ಮುನ್ನ ಇಂತಹದೊಂದು ಅಪರೂಪದ ದಾಖಲೆ ರಾಜಸ್ಥಾನ್ ರಾಯಲ್ಸ್ ತಂಡದ ಹೆಸರಿನಲ್ಲಿತ್ತು. 2015 ರಲ್ಲಿ ರಾಜಸ್ಥಾನ್ ರಾಯಲ್ಸ್ ಮೊದಲ 5 ಪಂದ್ಯಗಳಲ್ಲಿ ಗೆಲುವು ದಾಖಲಿಸಿ ಒಟ್ಟು 10 ಅಂಕಗಳನ್ನು ಪಡೆದುಕೊಂಡಿದ್ದರು. ಈ ಮೂಲಕ ಐಪಿಎಲ್​ ಇತಿಹಾಸದಲ್ಲಿ ಮೊದಲ ಐದು ಮ್ಯಾಚ್​ಗಳಲ್ಲಿ ಗೆದ್ದ ತಂಡವೆಂಬ ದಾಖಲೆ ನಿರ್ಮಿಸಿದ್ದರು. ಆ ದಾಖಲೆಯನ್ನ ಬ್ರೇಕ್ ಮಾಡುವಲ್ಲಿ ಪಂಜಾಬ್ ಯಶಸ್ವಿಯಾಗಿದೆ. 11 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಹಾಗೇ ಈ ಆವೃತ್ತಿಯಲ್ಲಿ ಪಂಜಾಬ್ ಆಡಿರೋ ಪ್ರತೀ ಮ್ಯಾಚ್​ನಲ್ಲೂ ಅದ್ಭುತ ಪ್ರದರ್ಶನ ನೀಡಿಯೇ ಗೆದ್ದು ಬೀಗಿದ್ದಾರೆ.

5 ಪಂದ್ಯಗಳಲ್ಲಿ ಚೇಸ್.. ಒಂದು ಪಂದ್ಯದಲ್ಲಿ ಡಿಫೆನ್ಸ್!

ಅಷ್ಟಕ್ಕೂ ಈ ಸೀಸನ್ ನಲ್ಲಿ ಪಂಜಾಬ್ ಆಡಿರುವ 6 ಪಂದ್ಯಗಳಲ್ಲಿ ಮೊದಲ ಐದು ಪಂದ್ಯಗಳಲ್ಲೂ ಚೇಸಿಂಗ್ ಮಾಡಿದ್ದಾರೆ.  ಅಂದ್ರೆ ಮೊದಲ 5 ಪಂದ್ಯಗಳಲ್ಲೂ ಚೇಸಿಂಗ್ ಮಾಡಿಯೇ ಗೆದ್ದಿದ್ದ ಪಂಜಾಬ್ ಲಕ್ನೋ ವಿರುದ್ಧ ಡಿಫೆನ್ಸ್ ಮಾಡಿಕೊಳ್ಳೋದ್ರಲ್ಲೂ ಸೈ ಎನಿಸಿಕೊಂಡಿದ್ದಾರೆ. ಗುಜರಾತ್, ಚೆನ್ನೈ, ಕೊಲ್ಕತ್ತಾ, ಹೈದ್ರಾಬಾದ್ ಹಾಗೇ ಮುಂಬೈ ವಿರುದ್ಧ ಚೇಸ್ ಮಾಡಿ ಗೆದ್ದಿದ್ದ ಪಂಜಾಬ್ ಲಕ್ನೋ ವಿರುದ್ಧ ಪಸ್ಟ್ ಬ್ಯಾಟಿಂಗ್ ಮಾಡಿ 254 ರನ್ಸ್ ಹೊಡೆದಿದ್ರು. ಈ ಸೀಸನ್​ನ ಹೈಸ್ಕೋರ್ ಇದು. ಈ ಮ್ಯಾಚಲ್ಲಿ 54 ರನ್​ಗಳ ಅಂತರದಲ್ಲಿ ಗೆದ್ದು ಬೀಗಿದ್ರು. ಈ ಮೂಲಕ ಈ ಆವೃತ್ತಿಯಲ್ಲಿ ಕಿಂಗ್ಸ್ ಆಗಿ ಮೆರೀತಿದ್ದಾರೆ. ಅಷ್ಟಕ್ಕೂ ಗುಂಪಲ್ಲಿ ಗೋವಿಂದ ಅನ್ನೋ ಥರ ಇದ್ದ ಪಂಜಾಬ್ ನಂಬರ್ 1 ಸ್ಥಾನಕ್ಕೇರಿದ್ದರ ಹಿಂದಿನ ಮಾಸ್ಟರ್ ಮೈಂಡ್ ರಿಕಿ ಪಾಂಟಿಂಗ್ ಗೇಮ್ ಪ್ಲ್ಯಾನ್ಸ್ ಮತ್ತು ಶ್ರೇಯಸ್ ಅಯ್ಯರ್ ಎಕ್ಸಿಕ್ಯೂಷನ್.

ಡಗ್ ಔಟ್ ನಲ್ಲಿ ರಿಕಿ ಪ್ಲ್ಯಾನ್.. ಆನ್ ಫೀಲ್ಡ್ ನಲ್ಲಿ ಶ್ರೇಯಸ್ ಶಿಕಾರಿ!

ಆಸ್ಟ್ರೇಲಿಯಾ ಕ್ರಿಕೆಟ್ ನಲ್ಲಿ ದಂತಕತೆಯಾಗಿರೋ ರಿಕಿ ಪಾಂಟಿಂಗ್ ಪಂಜಾಬ್ ತಂಡದ ಹೆಡ್ ಕೋಚ್ ಆಗಿ 2025ರ ಐಪಿಎಲ್​ಗೂ ಮುನ್ನ ಜವಾಬ್ದಾರಿ ತಗೊಳ್ತಾರೆ. ಌಂಡ್ ಅದೇ ಮೆಗಾ ಆಕ್ಷನ್​ನಲ್ಲಿ ಶ್ರೇಯಸ್ ಅಯ್ಯರ್ ಪಂಜಾಬ್ ನಾಯಕನಾಗಿ ಸೇರಿಕೊಳ್ತಾರೆ. ಅಲ್ಲಿಂದ ಈಚೆಗೆ ಪಂಜಾಬ್ ಲಕ್ ಬದಲಾಗಿದೆ. ರಿಕಿ ಪಾಂಟಿಂಗ್ ತಮ್ಮಲ್ಲಿರೋ ಅಷ್ಟೂ ಎಕ್ಸ್​ಪೀರಿಯನ್ಸ್​ನ ಆಟಗಾರರ ಪರ್ಫಾಮೆನ್ಸ್ ಮೇಲೆ ಹಾಕ್ತಿದ್ದಾರೆ. ಹಾಗೇ ಶ್ರೇಯಸ್ ಅಯ್ಯರ್ ತಮ್ಮಲ್ಲಿರೋ ಎಬಿಲಿಟಿ ಮೂಲಕ ತಂಡವನ್ನ ಲೀಡ್ ಮಾಡ್ತಿದ್ದಾರೆ. ಇಬ್ಬರ ಕಾಂಬಿನೇಷನ್ ಚೆನ್ನಾಗಿ ವರ್ಕ್ ಆಗ್ತಿದೆ. ಹಾಗೇ ತಂಡದಲ್ಲಿರೋ ಆಟಗಾರರು ಕೂಡ ಬೆಂಕಿಯಂಥ ಪರ್ಫಾಮೆನ್ಸ್ ಕೊಡ್ತಿದ್ದಾರೆ. ದೇಶೀ ಪ್ರತಿಭೆಗಳಾಗಿರೋ ಪ್ರಿಯಾನ್ಶ್ ಆರ್ಯ ಮತ್ತು ಪ್ರಭ್ ಸಿಮ್ರಾನ್ ಸಿಂಗ್ ಓಪನರ್​ಗಳಾಗಿ ಇನಿಶಿಯೇಟ್ ತಗೊಳ್ತಿದ್ದಾರೆ. ಕೂಪರ್ ಕೊನೊಲಿ ಸೂಪರ್ ಫಾರ್ಮ್​ನಲ್ಲಿದ್ದಾರೆ. ಇನ್ನು ಶ್ರೇಯಸ್ ಕಡೆಯಿಂದಲೂ ಮ್ಯಾಚ್ ವಿನ್ನಿಂಗ್ ಪರ್ಫಾಮೆನ್ಸ್ ಬರ್ತಿದೆ. ಹಾಗೇ ಬೌಲಿಂಗ್​ನಲ್ಲಿ ಅರ್ಶದೀಪ್ ಸಿಂಗ್​ ಫಾರ್ಮ್​ಗೆ ಬಂದಿರೋದು ಆನೆ ಬಲ ಬಂದಂತಾಗಿದೆ. ನಮ್ಮ ಕನ್ನಡಿಗ ವೈಶಾಕ್ ವಿಜಯ್ ಕುಮಾರ್ ಕೂಡ ಬ್ಯಾಟರ್​ಗಳ ಪಾಲಿಗೆ ಸಿಂಹಸ್ವಪ್ನವಾಗಿದ್ದಾರೆ. ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ಮಿಡಲ್ ಓವರ್​ಗಳಲ್ಲಿ ಎಕ್ಸ್​ಟ್ರಾರ್ಡಿನರಿ ಸ್ಪೆಲ್​ಗಳನ್ನ ಹಾಕ್ತಿದ್ದಾರೆ. ಮಾರ್ಕೋ ಜಾನ್ಸೆನ್, ಕ್ಸೇವಿಯರ್ ಬಾರ್ಟ್ಲೆಟ್ ಕೂಡ ಸಾಥ್ ಕೊಡ್ತಿದ್ದಾರೆ. ಹೀಗೆ ಪಂಜಾಬ್ ಟಾಪ್ ಟು ಬಾಟಮ್ ಸೂಪರ್ ಸ್ಟ್ರಾಂಗ್ ಆಗಿದ್ದು ಎದುರಾಳಿಗಳನ್ನ ಮಕಾಡೆ ಮಲಗಿಸ್ತಿದ್ದಾರೆ.

ಇನ್ನು ಪಂಜಾಬ್ ತಂಡದ ಸ್ಕಿಪ್ಪರ್ ಶ್ರೇಯಸ್ ಸೆಂಟ್ರ್ ಆಫ್ ಅಟ್ರ್ಯಾಕ್ಷನ್. ಯಾಕಂದ್ರೆ ಐಪಿಎಲ್​ನಲ್ಲಿ ನಾಯಕನಾಗಿ ಮೂರು ತಂಡಗಳನ್ನ ಫೈನಲ್​ಗೆ ಮುನ್ನಡೆಸಿದ ಏಕೈಕ ನಾಯಕ. 2020ರಲ್ಲಿ ಡೆಲ್ಲಿ ತಂಡವನ್ನ ಫೈನಲ್​ಗೆ ಮುನ್ನಡೆಸಿದ್ರು. ರನ್ನರ್ ಅಪ್ ಆಗಿದ್ರು. 2024ರಲ್ಲಿ ಕೆಕೆಆರ್ ತಂಡವನ್ನ ಚಾಂಪಿಯನ್ ಮಾಡಿದ್ರು. 2025ರಲ್ಲಿ ಪಂಜಾಬ್ ತಂಡವನ್ನ ಫೈನಲಿಸ್ಟ್ ಮಾಡಿದ್ರು. ಈಗ ಮತ್ತೆ ಪ್ಲೇಆಫ್ ಪ್ರವೇಶ ಪಡೆಯೋ ಮೊದಲನೇ ತಂಡವಾಗಿ ಮುನ್ನುಗ್ತಿದ್ದಾರೆ. ಶ್ರೇಯಸ್ ತಾನೊಬ್ಬ ಉತ್ತಮ ಬ್ಯಾಟರ್, ಕ್ಯಾಪ್ಟನ್ ಅನ್ನೋದಷ್ಟೇ ಅಲ್ಲದೆ ಫೀಲ್ಡರ್ ಕೂಡ ಅನ್ನೋದನ್ನ ಸಾಕಷ್ಟು ಸಲ ಪ್ರೂವ್ ಮಾಡಿದ್ದಾರೆ. ಸದ್ಯ ಈ ಸೀಸನ್​ನಲ್ಲಿ ಪಂಜಾಬ್ ತಂಡ ಪ್ರಚಂಡವಾಗಿ ನುಗ್ಗುತ್ತಿದ್ದು ಟ್ರೋಫಿ ಗೆಲ್ಲೋ ಫೇವರೆಟ್ ಟೀಂ ಆಗಿ ಕಾಣ್ತಿದೆ.

Shantha Kumari