CSK ಫ್ಯಾನ್ಸ್ ಗೀಗ ತಲಾ ತಲೆಬಿಸಿ  – RCB ವಿರುದ್ಧ ಆಡಲ್ಲ ಧೋನಿ
ಟೂರ್ನಿಯನ್ನೇ ಮಿಸ್ ಮಾಡಿಕೊಳ್ತಾರಾ?

CSK ಫ್ಯಾನ್ಸ್ ಗೀಗ ತಲಾ ತಲೆಬಿಸಿ  – RCB ವಿರುದ್ಧ ಆಡಲ್ಲ ಧೋನಿಟೂರ್ನಿಯನ್ನೇ ಮಿಸ್ ಮಾಡಿಕೊಳ್ತಾರಾ?

ಐಪಿಎಲ್​ನಲ್ಲಿ ಹೋಂ ಟೀಮ್​ಗಳಿಗೆ ಅಭಿಮಾನಿಗಳು ಸಪೋರ್ಟ್ ಮಾಡೋದು ಕಾಮನ್. ಆದ್ರೆ ತಂಡ, ಫ್ರಾಂಚೈಸಿಗಳ ಗಡಿ ಇಲ್ಲದೆ ಫ್ಯಾನ್ ಬೇಸ್ ಇರೋ ಪ್ಲೇಯರ್ಸ್ ಅಂದ್ರೆ ಅದು ವಿರಾಟ್ ಕೊಹ್ಲಿ, ಮಹೇಂದ್ರ ಸಿಂಗ್ ಧೋನಿ ಹಾಗೇ ರೋಹಿತ್ ಶರ್ಮಾ ಮಾತ್ರನೇ. ಈ ಮೂವರು ಆಡ್ತಾರೆ ಅನ್ನೋ ಕಾರಣಕ್ಕೆ ಆ ತಂಡಗಳನ್ನೂ ಸಪೋರ್ಟ್ ಮಾಡೋ ಬಹುದೊಡ್ಡ ಬಳಗವೇ ಇದೆ. ಬಟ್ ಈ ಸಲ ಧೋನಿ ಫ್ಯಾನ್ಸ್ ಶಾಕ್ ಆಗೋ ನ್ಯೂಸ್​ವೊಂದು ಹೊರಬಿದ್ದಿದೆ.

ಇದನ್ನೂ ಓದಿ : RCB Vs CSK ರಿವೇಂಜ್ ಫೈಟ್ ಇಲ್ಲ – ಬೆಂಗಳೂರಲ್ಲಿ ಫಸ್ಟ್ ಆಫ್ ಮಾತ್ರ ಯಾಕೆ?

ಆರ್​ಸಿಬಿ ವರ್ಸಸ್ ಎಸ್​ಆರ್​ಹೆಚ್ ಪಂದ್ಯದೊಂದಿಗೆ 19ನೇ ಸೀಸನ್ ಸ್ಟಾರ್ಟ್ ಆಗ್ತಿದ್ದು, ಕ್ರಿಕೆಟ್ ಪ್ರೇಮಿಗಳೆಲ್ಲಾ ಕಾಯ್ತಾ ಇದ್ದಾರೆ. ಭಾನುವಾರ ಎರಡನೇ ಪಂದ್ಯದಲ್ಲಿ ಕೆಕೆಆರ್ ಮತ್ತು ಮುಂಬೈ ಇಂಡಿಯನ್ಸ್ ಮುಖಾಮುಖಿ ಆಗ್ತಾರೆ.  ಮಾರ್ಚ್ 30 ರಂದು ನಡೆಯಲಿರುವ ರಾಜಸ್ಥಾನ್ ರಾಯಲ್ಸ್ ವಿರುದ್ಧದ ಪಂದ್ಯದ ಮೂಲಕ ಸಿಎಸ್​ಕೆ ಐಪಿಎಲ್ ಅಭಿಯಾನ ಆರಂಭಿಸಲಿದೆ. ಆದರೆ ಈ ಪಂದ್ಯದಲ್ಲಿ ಮಹೇಂದ್ರ ಸಿಂಗ್ ಧೋನಿ ಆಡಲ್ಲ. ಌಂಡ್ 2 ವಾರ ಮೈದಾನಕ್ಕಿಳಿಯಲ್ಲ ಅನ್ನೋದು ಕನ್ಫರ್ಮ್ ಆಗಿದೆ.

2 ವಾರ ಧೋನಿ ಐಪಿಎಲ್ ನಿಂದ ದೂರ!

ಸಿಎಸ್​ಕೆ ಮ್ಯಾಚಸ್ ಅನ್ನೋದಕ್ಕಿಂತ ಧೋನಿ ಆಟ ನೋಡ್ಬೆಕು ಅಂತಾ ಫ್ಯಾನ್ಸ್ ಕಾಯ್ತಾ ಇರ್ತಾರೆ. ಬಟ್ ನೀವು ಧೋನಿಯನ್ನ ಮೈದಾನದಲ್ಲಿ ನೋದ್ಬೇಕು ಅಂದ್ರೆ ಎರಡು ವಾರ ಅಂತೂ ಕಾಯಲೇಬೇಕು. ಸ್ವತಃ ಸಿಎಸ್​ಕೆ ಫ್ರಾಂಚೈಸಿಯೇ ಇದನ್ನ ಘೋಷಣೆ ಮಾಡಿದೆ. ಎಂ.ಎಸ್. ಧೋನಿ ಅವರು ಸ್ನಾಯು ಸೆಳೆತದ ಸಮಸ್ಯೆಯಿಂದ  ಬಳಲುತ್ತಿದ್ದು, ಮೊದಲ ಎರಡು ವಾರಗಳ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ ಎಂದು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಮಾಹಿತಿ ನೀಡಿದೆ. ಸಂಪೂರ್ಣ ಫಿಟ್​ನೆಸ್ ಸಾಧಿಸಿದರೆ ಮಹೇಂದ್ರ ಸಿಂಗ್ ಧೋನಿ ಏಪ್ರಿಲ್ 19 ರಂದು ನಡೆಯಲಿರುವ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯಬಹುದು. ಅಂದರೆ ಏಪ್ರಿಲ್ 15ರ ತನಕ ಧೋನಿ ವಿಶ್ರಾಂತಿ ಪಡೆಯಲಿದ್ದಾರೆ.

ಈ ವರ್ಷ ಆರ್ ಸಿಬಿ ವಿರುದ್ಧವೂ ಆಡಲ್ಲ  ಧೋನಿ!

ಆರ್​ಸಿಬಿ ಮತ್ತು ಸಿಎಸ್​ಕೆ ನಡುವಿನ ಕ್ಲಾಶ್ ಅಂದ್ರೇನೇ ಅಭಿಮಾನಿಗಳಿಗೆ ಥ್ರಿಲ್. ಅದ್ರಲ್ಲೂ ಧೊನಿ ಮತ್ತು ಕೊಹ್ಲಿ ಮುಖಾಮುಖಿಗಾಗಿ ಕಾಯ್ತಾ ಇರ್ತಾರೆ. ಬಟ್ ಈ ವರ್ಷ ಧೋನಿ ಆರ್​ಸಿಬಿ ವಿರುದ್ಧ ಆಡೋದೇ ಇಲ್ಲ. ಯಾಕಂದ್ರೆ ರಿಲೀಸ್ ಆಗಿರೋ ಶೆಡ್ಯೂಲ್ ಪ್ರಕಾರ ಆರ್ಸಿಬಿ ಮತ್ತು ಸಿಎಸ್​ಕೆ ನಡುವೆ ಇರೋದೇ ಒಂದು ಪಂದ್ಯ. ರಿವೇಂಜ್ ಮ್ಯಾಚ್ ಇಲ್ಲ. ಅದೂ ಕೂಡ ಏಪ್ರಿಲ್ 5 ರಂದು ಬೆಂಗಳೂರಲ್ಲಿ ನಡೆಯಲಿದೆ. ಮುಂದಿನ ಭಾನುವಾರ. ಸೋ ಪಂದ್ಯದ ವೇಳೆಗೆ ಧೋನಿ ತಂಡವನ್ನ ಸೇರಿಕೊಳ್ಳದ ಕಾರಣ ಈ ಸಲ ಆರ್​ಸಿಬಿ ವಿರುದ್ಧದ ಮ್ಯಾಚಲ್ಲಿ ಮಾಹಿಯನ್ನ ನೋಡೋಕೆ ಆಗಲ್ಲ. ಹಾಗೇ  ರಾಜಸ್ಥಾನ್ ರಾಯಲ್ಸ್, ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯಗಳಿಗೆ ಧೋನಿ ಅಲಭ್ಯರಾಗುವುದು ಬಹುತೇಕ ಖಚಿತ. ಧೋನಿ ಆಬ್ಸೆನ್ಸ್​ನಲ್ಲಿ ಈಗ ಸಂಜುಗೆ ಹೊಸ ಜವಾಬ್ದಾರಿ ಸಿಗಲಿದೆ.

ಸಂಜು ಸ್ಯಾಮ್ಸನ್ ಕೈಗೆ ವಿಕೆಟ್ ಕೀಪಿಂಗ್ ಗ್ಲೌಸ್!

ಇನ್ನು ಧೋನಿ ಆಬ್ಸೆನ್ಸ್​ನಲ್ಲಿ ಸಂಜು ಸ್ಯಾಮ್ಸನ್ ಸಿಎಸ್​ಕೆಯಲ್ಲಿ ಕೀಪಿಂಗ್ ರೆಸ್ಪಾನ್ಸಿಬಿಲಿಟಿ ತಗೊಳ್ಬೇಕಾಗುತ್ತೆ. ಧೋನಿ ಪ್ಲೇಯಿಂಗ್ 11ನಲ್ಲಿ ಇದ್ರೆ ಅವ್ರೇ ವಿಕೆಟ್ ಕೀಪಿಂಗ್ ಮಾಡ್ತಾರೆ. ಬಟ್ ಆರಂಭದ ಪಂದ್ಯಗಳನ್ನ ಮಿಸ್ ಮಾಡಿಕೊಳ್ತಾ ಇರೋದ್ರಿಂದ ಸಂಜು ಸ್ಯಾಮ್ಸನ್ ಅವ್ರೇ ಧೋನಿ ಪ್ಲೇಸ್​ನಲ್ಲಿ ಕೀಪಿಂಗ್ ಮಾಡ್ಬೇಕಾಗುತ್ತೆ. ಌಕ್ಚುಲಿ ತಂಡದ ಮ್ಯಾನೇಜ್‌ಮೆಂಟ್ ಸಂಜು ಅವರನ್ನು ಧೋನಿಯ ಉತ್ತರಾಧಿಕಾರಿ ಎಂದೇ ಪರಿಗಣಿಸಿದೆ. ಕಳೆದ ಡಿಸೆಂಬರ್‌ನಲ್ಲಿ ನಡೆದ ಹರಾಜಿಗೂ ಮುನ್ನ, ಒಂದು ದೊಡ್ಡ ಟ್ರೇಡ್ ಮೂಲಕ ಸಂಜು ಚೆನ್ನೈ ತಂಡಕ್ಕೆ ಬಂದಿದ್ದರು. ಸೋ ಈ ವರ್ಷ ನೋಡ್ಕೊಂಡು ಮುಂದಿನ ಸೀಸನ್​ನಲ್ಲಿ ಪಟ್ಟಾಭಿಷೇಕ ಮಾಡೋ ಚಾನ್ಸಸ್ ಇದೆ. ಒಟ್ನಲ್ಲಿ ಸಿಎಸ್​ಕೆ ಅಂದ್ರೆ ಧೋನಿ ಧೋನಿ ಅಂಧ್ರೆ ಸಿಎಸ್​ಕೆ. ಅಲ್ಲಿನ ಅಭಿಮಾನಿಗಳಂತೂ ಟಾಪ್ ಆರ್ಡರ್ ಬ್ಯಾಟರ್ಸ್ ಔಟ್ ಆದ್ರೂ ಸೆಲೆಬ್ರೇಟ್ ಮಾಡ್ತಾರೆ. ಯಾಕಂದ್ರೆ ಧೋನಿ ಬ್ಯಾಟಿಂಗ್​ಗೆ ಬರ್ತಾರೆ ಅಂತಾ. ಬಟ್ ಈ ಸಲ 15 ದಿನ ಐಪಿಎಲ್​ನಿಂದಲೇ ಹೊರಗುಳಿಯುತ್ತಾ ಇರೋದ್ರಿಂದ ಫ್ಯಾನ್ಸ್ ಅಂತೂ ಸಿಕ್ಕಾಪಟ್ಟೆ ಮಿಸ್ ಮಾಡಿಕೊಳ್ತಾರೆ.

Shantha Kumari