RCB Vs GT ಫೈನಲ್ ಫೈಟ್ – ಸುದರ್ಶನ್ ಬ್ಯಾಟ್ ಗೆ ಗಮ್ ಹಾಕ್ಬೇಕಾ?
ಸೂರ್ಯವಂಶಿಗೊಂದು SALUTE

RCB Vs GT ಫೈನಲ್ ಫೈಟ್ – ಸುದರ್ಶನ್ ಬ್ಯಾಟ್ ಗೆ ಗಮ್ ಹಾಕ್ಬೇಕಾ?ಸೂರ್ಯವಂಶಿಗೊಂದು SALUTE

ಹಿಸ್ಟರಿ ರಿಪೀಟ್ ಅನ್ನೋ ಥರ ಲಾಸ್ಟ್ ಸೀಸನ್​ನಲ್ಲಿ ಏನಾಗಿತ್ತೋ ಈಗ್ಲೂ ಅದೇ ಆಗಿದೆ. ಹೋದ ವರ್ಷ ಪಂಜಾಬ್ ತಂಡ ಆರ್​ಸಿಬಿ ವಿರುದ್ಧ ಸೋತು ಮತ್ತೆ ಕ್ವಾಲಿಫೈಯರ್ 2ನಲ್ಲಿ ಗೆದ್ದು ಫೈನಲ್​ಗೆ ಬಂದಿದ್ರು. ಈ ವರ್ಷ ಗುಜರಾತ್ ತಂಡ ಫಸ್ಟ್ ಸೋತು ಆಮೇಲೆ ಕ್ವಾಲಿಫೈಯರ್ 2ನಲ್ಲಿ ಗೆದ್ದು ಮತ್ತೆ ಫೈನಲ್​ಗೆ ಬಂದಿದ್ದಾರೆ. ಬ್ಯಾಡ್​ಲಕ್ ಏನಂದ್ರೆ ರಾಜಸ್ಥಾನ ತಂಡ ಸೋತಿದ್ದು ಬೇಜಾರ್ ಆಗಿದ್ದಕ್ಕಿಂತ ಬಾಸ್ ಬೇಬಿ ಪರ್ಫಾಮೆನ್ಸ್​ ಗೆ ಫಲಿತಾಂಶ ಸಿಗ್ಲಿಲ್ವಲ್ಲ ಅಂತಾ ಹರ್ಟ್ ಆದವ್ರೇ ಜಾಸ್ತಿ. ಕ್ವಾಲಿಫೈಯರ್ 2ನಲ್ಲಿ ರಾಜಸ್ಥಾನ್ ತಂಡವನ್ನು ಸೋಲಿಸೋ ಮೂಲಕ ಗುಜರಾತ್ ಟೈಟನ್ಸ್ ಫೈನಲ್ ಗೆ ಲಗ್ಗೆ ಇಟ್ಟಿದೆ. ಆರ್ ಸಿಬಿ ಮತ್ತು ಗುಜರಾತ್ ನಡುವೆ ಚಾಂಪಿಯನ್ ಪಟ್ಟಕ್ಕಾಗಿ ನಾಳೆ ಫೈಟ್ ನಡೆಯಲಿದೆ.

ಇದನ್ನೂ ಓದಿ : RCBಯಲ್ಲಿ ಅನುಭವಿಗಳದ್ದೇ ಆರ್ಭಟ – ಕೊಹ್ಲಿ, ಭುವಿ, ಕೃನಾಲ್ ಸಕ್ಸಸ್ STARS

ಮಾಡು ಇಲ್ಲವೇ ಮಡಿ ಮ್ಯಾಚಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ರಾಜಸ್ಥಾನ್ ತಂಡ ವೈಭವ್ ಸೂರ್ಯವಂಶಿ ಅವರ ಅದ್ಭುತ ಇನ್ನಿಂಗ್ಸ್‌ನಿಂದ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 214 ರನ್ ಗಳಿಸಿತು. ಈ ಟಾರ್ಗೆಟ್ ಬೆನ್ನಟ್ಟಿದ ಗುಜರಾಥ್ 18.4 ಓವರ್‌ಗಳಲ್ಲಿ ಮೂರು ವಿಕೆಟ್‌ಗಳಿಗೆ 219 ರನ್ ಬಾರಿಸಿ ಪಂದ್ಯವನ್ನು ಗೆದ್ದುಕೊಂಡಿತು. ಅಲ್ಲಿಗೆ ರಾಜಸ್ಥಾನ ಟೂರ್ನಿಗೆ ಗುಡ್ ಬೈ ಹೇಳಿದ್ರೆ ಗುಜರಾಥ್ ಕಪ್ ಗೆಲ್ಲೋಕೆ ಫೈನಲ್ ಟಿಕೆಟ್ ಗಿಟ್ಟಿಸಿಕೊಂಡು ಬಂದಿದೆ.

 ರಾಜಸ್ಥಾನ ಸೋಲಿಗೆ ಕಾರಣಗಳು!

ಟಾಸ್ ಗೆದ್ದ ರಾಜಸ್ಥಾನ ನಾಯಕ ರಿಯಾನ್ ಪರಾಗ್ ಫೀಲ್ಡಿಂಗ್ ಆಯ್ಕೆ

ಇನ್ನಿಂಗ್ಸ್ ಆರಂಭ ಆದಾಗ ಜೈಸ್ವಾಲ್, ಜುರೇಲ್ 2 ಓವರ್ ಗಳಲ್ಲೇ ಔಟ್

4ನೇ ಸ್ಲಾಟಲ್ಲಿ ಜಡ್ಡು ಬಂದ್ರೂ ಇಂಜುರಿ ಅಂತಾ ರಿಟೈರ್ಡ್ ಹರ್ಟ್ ಆಗ್ತಾರೆ

ಸೂರ್ಯವಂಶಿ 96 ರನ್ಸ್,, ಜಡ್ಡು ಅಜೇಯ 4, ಫೆರೆರಾ 38(11) ರನ್ಸ್

214 ರನ್ಸ್ ಇದ್ದಿದ್ರಿಂದ ತುಂಬಾ ಒತ್ತಡ ಇಲ್ಲದೆ ಜಿಟಿ ಚೇಸಿಂಗ್

ಫಸ್ಟ್ ಓವರ್ ನಿಂದಲೇ ಗಿಲ್ ಮತ್ತು ಸುದರ್ಶನ್ ಬ್ಯಾಟಿಂಗ್ ಖದರ್

ಮೊದಲ ವಿಕೆಟ್ ಗೆ 167 ರನ್ಸ್ ಜೊತೆಯಾಟ, ಗಿಲ್ ಶತಕದ ಆರ್ಭಟ

ಇನ್ನೂ 8 ಬಾಲ್ ಇದ್ದಂತೆಯೇ 4 ವಿಕೆಟ್ ಕಳ್ಕೊಂಡು ಟಾರ್ಗೆಟ್ ರೀಚ್

ರಾಜಸ್ಥಾನ ಬೌಲಿಂಗ್ ವೀಕ್, ಬರ್ಗರ್ ಮಾತ್ರವೇ 8.75 ಎಕಾನಮಿ ರನ್ಸ್

ಹೀಗೆ ಬ್ಯಾಟಿಂಗ್ ಌಂಡ್ ಬೌಲಿಂಗ್ ಕಂಪ್ಲೀಟ್ ಡಾಮಿನೇಟ್ ಮಾಡಿ ಗುಜರಾಥ್ ಗೆದ್ದು ಫೈನಲ್​ಗೆ ನುಗ್ಗಿದೆ. ಌಂಡ್ ಈ ಮ್ಯಾಚಲ್ಲಿ ಇಂಟ್ರೆಸ್ಟಿಂಗ್ ಅಂದ್ರೆ ಸಾಯಿ ಸುದರ್ಶನ್ ಮತ್ತೆ ಹಿಟ್ ವಿಕೆಟ್ ಆಗಿದ್ದು. ಆರ್ ಸಿಬಿ ವಿರುದ್ಧ ಬ್ಯಾಟ್ ಅವ್ರ ಕೈಯಿಂದ ಜಾರಿ ವಿಕೆಟ್ಸ್ ಗೆ ಬಿದ್ದು ಔಟ್ ಆಗಿದ್ರು. ನಿನ್ನೆ ಮ್ಯಾಚಲ್ಲಿ ಸೇಮ್ ಬ್ಯಾಟ್ ಮಿಸ್ ಆಗಿ ಜಾರಿ ವಿಕೆಟ್ಸ್ ಮೇಲೆಯೇ ಬಿದ್ದು ಔಟ್ ಆದ್ರು. ಬ್ಯಾಕ್ ಟು ಬ್ಯಾಕ್ ಹಿಟ್ ವಿಕೆಟ್ ಆಗಿದ್ದಕ್ಕೆ ಸುದರ್ಶನ್ ಕೈ ಮತ್ತು ಬ್ಯಾಟ್​​ಗೆ ಗಂ ಹಾಕ್ಬೇಕು ಅಥವಾ ಟೇಪ್ ಹಾಕ್ಬೇಕು ಅಂತಾ ಕೆಲವ್ರು ಟ್ರೋಲ್ ಮಾಡ್ತಿದ್ದಾರೆ. ಮತ್ತೊಂದಷ್ಟು ಫ್ಯಾನ್ಸ್ ವೈಭವ್ ಸೂರ್ಯವಂಶಿ ಬಗ್ಗೆ  ಹರ್ಟ್ ಆಗಿದ್ದಾರೆ.

ಒಂದೇ ಆವೃತ್ತಿಯಲ್ಲಿ 3 ಶತಕ ಮಿಸ್ ಮಾಡಿಕೊಂಡ ಬಾಸ್ ಬೇಬಿ!

ಇನ್ನು ಜಿಟಿ ವಿರುದ್ಧ ವೈಭವ್‌ ಸೂರ್ಯವಂಶಿ 96 ರನ್‌ಗಳಿಗೆ ಔಟಾಗುವ ಮೂಲಕ ಮತ್ತೊಮ್ಮೆ ಶತಕದಿಂದ ವಂಚಿತರಾದರು. ಈ ಮೂಲಕ ಈ ಆವೃತ್ತಿಯಲ್ಲಿ ಮೂರನೇ ಬಾರಿಗೆ 90ರ ಗಡಿಯಲ್ಲಿ ವಿಕೆಟ್ ಒಪ್ಪಿಸಿದ್ರು. ಲೀಗ್ ಹಂತದಲ್ಲಿ ಲಕ್ನೋ ವಿರುದ್ಧ 38 ಬಾಲಲ್ಲೇ 93 ರನ್ ಗಳಿಸಿ ಔಟ್ ಆಗಿದ್ರು. ಎಲಿಮಿನೇರ್ ಮ್ಯಾಚಲ್ಲಿ 29 ಬಾಲಲ್ಲೇ 97 ರನ್ ಸಿಡಿಸಿ ಔಟ್ ಆಗಿದ್ರು. ಈ ಮೂಲಕ 10 ದಿನಗಳ ಅಂತರದಲ್ಲೇ ಮೂರು ಬಾರಿ 90+ ರನ್ಸ್ ಗಳಿಸಿ ಶತಕ ಮಿಸ್ ಮಾಡಿಕೊಂಡಿದ್ದಾರೆ. ವೈಭವ್ ಔಟ್ ಆಗಿದ್ದು ಮತ್ತೊಮ್ಮೆ ಎಲ್ಲರಲ್ಲೂ ಬೇಸರ ಮೂಡಿಸಿತು.

Shantha Kumari

Leave a Reply

Your email address will not be published. Required fields are marked *