ಪ್ರಫುಲ್- ಸಾಕಿಬ್ ಬೆಂಕಿ ಬೌಲಿಂಗ್ – ರಾಜಸ್ಥಾನ್ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದ SRH

ಪ್ರಫುಲ್ ಹಿಂಗೆ ಹಾಗೂ ಸಾಕಿಬ್ ಹುಸೇನ್ ಅವರ ಮಾರಕ ಬೌಲಿಂಗ್ ದಾಳಿಯ ಸಹಾಯದಿಂದ ಸನ್ರೈಸರ್ಸ್ ಹೈದರಾಬಾದ್ ತಂಡ, 2026ರ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿತು. ಇಶಾನ್ ಕಿಶನ್ ನಾಯಕತ್ವದ ಎಸ್ಆರ್ಎಚ್ ತಂಡ 57 ರನ್ಗಳಿಂದ ಉದ್ಘಾಟನಾ ಆವೃತ್ತಿಯ ಚಾಂಪಿಯನ್ಸ್ ಎದುರು ಗೆದ್ದು ಬೀಗಿತು. ಇದು ಆತಿಥೇಯ ಹೈದರಾಬಾದ್ ತಂಡಕ್ಕೆ ಈ ಸೀಸನ್ನಲ್ಲಿ ಎರಡನೇ ಗೆಲುವಾಗಿದೆ. ಆರ್ಆರ್ ಚೇಸಿಂಗ್ನ ಮೊದಲ ಓವರ್ನಲ್ಲಿಯೇ 3 ವಿಕೆಟ್ ಕಿತ್ತ ಪ್ರಫುಲ್ ಹಿಂದೆ (34 ಕ್ಕೆ4) ಅವರು ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಸೋಮವಾರ ಇಲ್ಲಿನ ರಾಜೀವ್ ಗಾಂಧಿ ಇಂಟರ್ನ್ಯಾಷನಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಸನ್ರೈಸರ್ಸ್ ಹೈದರಾಬಾದ್ ನೀಡಿದ್ದ 217 ರನ್ಗಳ ಗುರಿಯನ್ನು ಹಿಂಬಾಲಿಸಿದ ರಾಜಸ್ಥಾನ್ ರಾಯಲ್ಸ್ಗೆ ಪದಾರ್ಪಣೆ ಪಂದ್ಯದ ಮೊದಲ ಓವರ್ನಲ್ಲಿಯೇ ಪ್ರಫುಲ್ ಹಿಂಗೆ ತಮ್ಮ ಮಾರಕ ದಅಳಿಯ ಮೂಲಕ ಆರಂಭಿಕ ಆಘಾತ ನೀಡಿದರು. ಅವರು ತಮ್ಮ ಐಪಿಎಲ್ ವೃತ್ತಿ ಜೀವನದ ಮೊದಲನೇ ಓವರ್ನಲ್ಲಿಯೇ ಅಪಾಯಕಾರಿ ವೈಭವ್ ಸೂರ್ಯವಂಶಿ, ಧ್ರುವ್ ಜುರೆಲ್ ಹಾಗೂ ಲ್ಯೂನ್ ಪ್ರೆಟೋರಿಯಸ್ ಅವರನ್ನು ಶೂನ್ಯಕ್ಕೆ ವಿಕೆಟ್ ಒಪ್ಪಿಸಿದರು. ಆ ಮೂಲಕ ತಮ್ಮ ವೃತ್ತಿ ಜೀವನದ ಮೊದಲ ಓವರ್ ಅನ್ನೇ ಸ್ಮರಣೀಯವಾಗಿಸಿಕೊಂಡರು. ಆ ಮೂಲಕ ಮೊದಲ ಓವರ್ನಲ್ಲಿಯೇ ಆರ್ಆರ್ ಒಂದು ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಇದನ್ನೂ ಓದಿ: ರೈಲು ಪ್ರಯಾಣಿಕರಿಗೆ ಗುಡ್ನ್ಯೂಸ್! – ಇನ್ಮುಂದೆ ನಿಮ್ಮ ಸೀಟಿಗೆ ಬರಲಿದೆ ನಿಮ್ಮಿಷ್ಟದ ಆಹಾರ!
ನಂತರ ಮತ್ತೊಬ್ಬ ಡೆಬ್ಯೂಟಂಟ್ ಸಾಕಿಬ್ ಹುಸೇನ್ ಕೂಡ ತಮ್ಮ ಐಪಿಎಲ್ ವೃತ್ತಿ ಜೀವನದ ಮೊದಲ ಓವರ್ನಲ್ಲಿಯೇ ಯಶಸ್ವಿ ಜೈಸ್ವಾಲ್ ಅವರನ್ನು ಔಟ್ ಮಾಡಿದರು. ನಂತರ ಮೂರನೇ ಓವರ್ಗೆ ಮರಳಿದ ಪ್ರಫುಲ್ ನಾಯಕ ರಿಯಾನ್ ಪರಾಗ್ ಅವರನ್ನು ಔಟ್ ಮಾಡಿ ತಮ್ಮ ಪದಾರ್ಪಣೆ ಪಂದ್ಯದಲ್ಲಿ 4 ವಿಕೆಟ್ ಸಾಧನೆ ಮಾಡಿದರು. ಆ ಮೂಲಕ ರಾಜಸ್ಥಾನ್ ರಾಯಲ್ಸ್ ತಂಡದ ಅಗ್ರ ಕ್ರಮಾಂಕದ ಬ್ಯಾಟ್ಸ್ಮನ್ಗಳನ್ನು ಔಟ್ ಮಾಡಿ ಎಸ್ಆರ್ಎಚ್ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಒಟ್ಟು ನಾಲ್ಕು ಓವರ್ಗೆ 34 ರನ್ ನೀಡಿ ನಾಲ್ಕು ವಿಕೆಟ್ ಸಾಧನೆ ಮಾಡಿದರು.

ನೋಡಿರಿ

