RCBಗೆ 14 ಅಲ್ಲ 16 ಮ್ಯಾಚ್ – ಬೆಂಗಳೂರಲ್ಲಿ ಎಷ್ಟು ಮ್ಯಾಚ್ ಆಡ್ತಾರೆ?
ಆಟಗಾರರಿಗೆ BCCI ಖಡಕ್ ರೂಲ್ಸ್

19ನೇ ಸೀಸನ್ ಐಪಿಎಲ್ ಬಿಗ್ಗೆಸ್ಟ್ ಎವರ್ ಸೀಸನ್ ಆಗೋದು ಕನ್ಫರ್ಮ್ ಆಗಿದೆ. ಅಂದ್ರೆ ಈ ಸೀಸನ್ನಲ್ಲಿ 10 ಎಕ್ಸ್ಟ್ರಾ ಮ್ಯಾಚಸ್ ಇರುತ್ತೆ. ಪ್ರತೀ ತಂಡಗಳ ಪಂದ್ಯಗಳೂ ಹೆಚ್ಚಾಗ್ತಿದೆ. ಸೋ ಲೀಗ್ ಹಂತದಲ್ಲಿ ಪ್ರತೀ ತಂಡಗಳಿಗೆ ಎಷ್ಟು ಮ್ಯಾಚಸ್ ಇರುತ್ತೆ. ಇಂಡಿಯನ್ ಪ್ರೀಮಿಯರ್ ಲೀಗ್‌ನ 19 ನೇ ಆವೃತ್ತಿ ಮಾರ್ಚ್ 28 ರಂದು ಪ್ರಾರಂಭವಾಗಲಿದೆ. ಮೇ 31 ರವರೆಗೆ ಟೂರ್ನಿ ನಡೆಯಲಿದ್ದು ಈ ಸೀಸನ್ ಸ್ಪೆಷಾಲಿಟಿ ಅಂದ್ರೆ 10 ಹೆಚ್ಚಿನ ಪಂದ್ಯಗಳು ಌಡ್ ಆಗ್ತಿವೆ. ಅಂದ್ರೆ ಕಳೆದ ಸೀಸನ್ಗಳಲ್ಲಿ ಟೋಟಲ್ 74 ಪಂದ್ಯಗಳು ನಡೆದಿತ್ತು. ಈ ಸಲ ಇದು 84ಕ್ಕೆ ಏರಿಕೆ ಆಗಲಿದೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೇ ಸನ್ ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯದೊಂದಿಗೆ ಟೂರ್ನಿ ಆರಂಭ ಆಗಲಿದೆ.
ಇದನ್ನೂ ಓದಿ : ಓಪನರ್ ಗಳೇ IPL ಗೇಮ್ ಚೇಂಜರ್ಸ್ – ಅಭಿಷೇಕ್, ಹೆಡ್, ಸೂರ್ಯವಂಶಿ ಡೇಂಜರಸ್
ಚುನಾವಣೆಯಿಂದಾಗಿ ಪೂರ್ಣ ಪ್ರಮಾಣದ ಶೆಡ್ಯೂಲ್ ಡಿಲೇ!
ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಐದು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆಗಳು ನಡೆಯಲಿಲಿದೆ. ಹೀಗಾಗಿ ಐಪಿಎಲ್ನ ಪೂರ್ಣ ಪಟ್ಟಿಯನ್ನ ರಿಲೀಸ್ ಮಾಡಿಲ್ಲ. ಪಶ್ಚಿಮ ಬಂಗಾಳ, ತಮಿಳುನಾಡು ಮತ್ತು ಅಸ್ಸಾಂ ಚುನಾವಣೆಗೆ ಹೋಗುತ್ತಿವೆ. ಹೀಗಾಗಿ ಲೀಗ್ ಮಾರ್ಚ್ 28 ರಿಂದ ಏಪ್ರಿಲ್ 12 ರವರೆಗೆ ನಡೆಯಲಿರುವ ಮೊದಲ 20 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಇನ್ನು ಈ ಸೀಸನ್ನ ಫೈನಲ್ ಮೇ 31 ರಂದು ಬೆಂಗಳೂರಿನಲ್ಲಿ ನಡೆಯಲಿದೆ ಎಂದು ದೃಢಪಡಿಸಿದೆ. ಮೊದಲ ಕ್ವಾಲಿಫೈಯರ್ ಮೇ 26 ರಂದು, ನಂತರ ಮೊದಲ ಎಲಿಮಿನೇಟರ್ ಮೇ 27 ರಂದು ಮತ್ತು ಎರಡನೇ ಕ್ವಾಲಿಫೈಯರ್ ಮೇ 29 ರಂದು ನಡೆಯಲಿದೆ. ಇನ್ನು ಈ ಸೀಸನ್ನಲ್ಲಿ ಏಳು ತಂಡಗಳು ಒಂದೇ ಹೋಂ ಪಿಚ್ನಲ್ಲಿ ಆಡಿದ್ರೆ ಬೆಂಗಳೂರು, ಪಂಜಾಬ್ ಮತ್ತು ರಾಜಸ್ಥಾನಗಳು ತಲಾ ಎರಡು ತವರು ಮೈದಾನಗಳನ್ನು ಹೊಂದಿರುತ್ತವೆ. ಮುಖ್ಯವಾಗಿ 13 ವರ್ಷಗಳ ಅಂತರದ ನಂತರ ರಾಯ್‌ಪುರದ ಶಹೀದ್ ವೀರ್ ನಾರಾಯಣ್ ಸಿಂಗ್ ಕ್ರೀಡಾಂಗಣದಲ್ಲಿ ಐಪಿಎಲ್ ಪಂದ್ಯವನ್ನು ಆಡಲು ನಿರ್ಧರಿಸಲಾಗಿದೆ. ಇದು ಆರ್ಸಿಬಿಗೆ ಎರಡನೇ ಹೋಂ ಪಿಚ್ ಆಗಲಿದೆ. ಈಗಾಗ್ಲೇ ಆರ್ಸಿಬಿ ಬೆಂಗಳೂರಲ್ಲಿ 5 ಹಾಗೇ ರಾಯ್ಪುರದಲ್ಲಿ 2 ಪಂದ್ಯ ಆಡೋದಾಗಿ ಹೇಳಿದೆ. ಆದ್ರೆ ಈಗ ಪ್ರತೀ ತಂಡಕ್ಕೆ 2 ಹೆಚ್ಚುವರಿ ಪಂದ್ಯಗಳನ್ನ ನಿಗದಿ ಮಾಡ್ಲಾಗುತ್ತೆ. ಹೀಗಾಗಿ ಆರ್ಸಿಬಿ ಉಳಿದ 2 ಪಂದ್ಯಗಳನ್ನ ಎಲ್ಲಿ ಆಡ್ತಾರೆ ಅನ್ನೋ ಕುತೂಹಲವೂ ಇದೆ. ಇನ್ನು ಇದೆಲ್ಲದ್ರ ನಡುವೆ ಬಿಸಿಸಿಐ ಕೆಲ ರೂಲ್ಸ್ನೂ ಜಾರಿ ಮಾಡಿದೆ.
ಐಪಿಎಲ್ ಗೆ ಬಿಸಿಸಿಐ ರೂಲ್ಸ್!
ಪಂದ್ಯದ ದಿನಗಳಲ್ಲಿ ತಂಡಗಳು ನೆಟ್ ಪ್ರಾಕ್ಟೀಸ್ ನಡೆಸುವುದು ನಿಷೇಧ
ಪಿಚ್ ಖಾಲಿಯಾಗಿದ್ದರೂ ಬೇರೆ ಫ್ರಾಂಚೈಸಿಯ ನೆಟ್ ಗಳನ್ನು ಬಳಸುವಂತಿಲ್ಲ
ಆಟಗಾರರು ತಂಡದ ಬಸ್ ಮೂಲಕ ಮಾತ್ರ ಪ್ರಯಾಣ ಮಾಡಬೇಕು
ಫ್ಯಾಮಿಲಿಗೆ ಆತಿಥ್ಯ ವಲಯದಲ್ಲಷ್ಟೇ ಅವಕಾಶ, ಡಗ್ ಔಟ್, ಫೀಲ್ಡ್ ಗಿಲ್ಲ
ಆರೆಂಜ್, ಪರ್ಪಲ್ ಕ್ಯಾಪ್ ಗೆದ್ದವ್ರು ಪಂದ್ಯಗಳ ವೇಳೆ ಕ್ಯಾಪ್ ಧರಿಸಬೇಕು
ಇನ್ನಿಂಗ್ಸ್‌ನ ಮೊದಲ ಎರಡು ಓವರ್ ಗಳಿಗಾದ್ರೂ ಕ್ಯಾಪ್ ಕಡ್ಡಾಯ
ಪೋಸ್ಟ್ ಮ್ಯಾಚ್ ಪ್ರಸೆಂಟೇಷನ್ ವೇಳೆ ಸ್ಲೀವ್ ಲೆಸ್ ಜೆರ್ಸಿ ಬಳಕೆ ಇಲ್ಲ

ನೋಡಿರಿ

