ಸಾಲ್ಟ್ ಇಲ್ಲ.. ಬೆಥೆಲ್ ಸಪ್ಪೆ – RCBಗೆ ಹೊರೆಯಾಗುತ್ತಾ ಇಂಜುರಿ?
ಕೊಹ್ಲಿ ಜತೆ ಬೆಸ್ಟ್ ಓಪನರ್ ಯಾರು?

ಸಾಲ್ಟ್ ಇಲ್ಲ.. ಬೆಥೆಲ್ ಸಪ್ಪೆ – RCBಗೆ ಹೊರೆಯಾಗುತ್ತಾ ಇಂಜುರಿ?ಕೊಹ್ಲಿ ಜತೆ ಬೆಸ್ಟ್ ಓಪನರ್ ಯಾರು?

ಡಿಫೆಂಡಿಂಗ್ ಚಾಂಪಿಯನ್ಸ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಈ ಸೀಸನ್​ನಲ್ಲಿ ಚೆನ್ನಾಗೇ ಸ್ಟಾರ್ಟ್ ಮಾಡಿದ್ರು. ಹಾಗೇ ಕಂಟಿನ್ಯೂ ಕೂಡ ಆಗ್ತಿದ್ದಾರೆ. ಡೇ ಒನ್​ನಿಂದ ಪಾಯಿಂಟ್ಸ್ ಪಟ್ಟಿಯಲ್ಲಿ ಟಾಪ್ ಆರ್ಡರ್​ನಲ್ಲೇ ಇದ್ದಾರೆ. ಟೆನ್ಷನ್ ಆಗೋ ಥರ ಪೊಸಿಷನ್ ಇಲ್ಲ. ಹಾಗಂತ ರಿಲ್ಯಾಕ್ಸ್ ಮೋಡ್​ನಲ್ಲೂ ಇರೋಕಾಗಲ್ಲ. ಯಾಕಂದ್ರೆ ಟಾಪ್ 2 ನಲ್ಲಿ ಲೀಗ್ ಹಂತವನ್ನ ಫಿನಿಶ್ ಮಾಡ್ಬೇಕು ಅಂದ್ರೆ ಮುಂದಿನ ಪ್ರತೀ ಪಂದ್ಯಗಳೂ ಮಸ್ಟ್ ವಿನ್ ಮ್ಯಾಚಸ್ ಆಗಿರುತ್ತೆ. ಬಟ್ ಇಂಥಾ ಟೈಮಲ್ಲಿ ಆರ್​ಸಿಬಿಗೆ ಇರೋ ದೊಡ್ಡ ಟೆನ್ಷನ್ ಅಂದ್ರೆ ಓಪನರ್. ಫಿಲ್ ಸಾಲ್ಟ್ ಇಂಜುರಿ ಬಳಿಕ ಜೇಕಬ್ ಬೆಥೆಲ್​ಗೆ ಚಾನ್ಸ್ ಕೊಟ್ರೂ ಯಾಕೋ ಅಂದುಕೊಂಡಂತ ಇಂಪ್ಯಾಕ್ಟ್ ಮಾಡಿಲ್ಲ.

ಇದನ್ನೂ ಓದಿ : ತಮಿಳುನಾಡಿನಲ್ಲಿ ವಿಜಯ ಪರ್ವ – ಕಾಲಿವುಡ್ ನಟರಿಂದ ವಿಜಯ್ ದಳಪತಿಗೆ ಶುಭಾಶಯ

ಆರ್​ಸಿಬಿ ಪರ ಫಿಲ್ ಸಾಲ್ಟ್ ಮತ್ತು ವಿರಾಟ್ ಕೊಹ್ಲಿ ಇನ್ನಿಂಗ್ಸ್ ಆರಂಭ ಮಾಡೋದು ನಿಮ್ಗೆಲ್ಲಾ ಗೊತ್ತೇ ಇದೆ. ಲಾಸ್ಟ್ ಸೀಸನ್ ಕೂಡ ಈ ಜೋಡಿ ಕ್ಲಿಕ್ ಆಗಿತ್ತು. ಌಂಡ್ ಈ ಸೀಸನ್ ಕೂಡ ಹಾಗೇ ಸ್ಟಾರ್ಟ್ ಮಾಡಿದ್ರು. ಪವರ್ ಪ್ಲೇನಲ್ಲಿ ಒಂದೊಳ್ಳೆ ಪಾರ್ಟ್ನರ್​ಶಿಪ್ ಬರ್ತಿತ್ತು. ಆದ್ರೆ ಸಾಲ್ಟ್ ಇಂಜುರಿ ಕಾರಣಕ್ಕೆ ಕಳೆದ ಮೂರು ಪಂದ್ಯಗಳಿಂದ ಬೆಂಗಳೂರು ಪರ ಆಡಿಲ್ಲ. ಹೋಗ್ಲಿ ಲಕ್ನೋ ವಿರುದ್ಧದ ಪಂದ್ಯಕ್ಕಾದ್ರೂ ಬರ್ತಾರಾ ಅಂದ್ರೆ ಅದೂ ಕೂಡ ಡೌಟ್ ಎನ್ನುವಂತಿದೆ.

ಬೆರಳಿನ ಗಾಯದ ಸ್ಕ್ಯಾನ್ ಗಾಗಿ ಯುಕೆಗೆ ತೆರಳಿದ ಸಾಲ್ಟ್!

ವಿರಾಟ್ ಕೊಹ್ಲಿಯವ್ರ ಜೊತೆ ಆರ್​ಸಿಬಿಗೆ ಅಗ್ರೆಸ್ಸಿವ್ ಓಪನರ್ ಆಗಿದ್ದ ಫಿಲ್ ಸಾಲ್ಟ್  ಆರು ಇನ್ನಿಂಗ್ಸ್‌ಗಳಲ್ಲಿ 168.33 ಸ್ಟ್ರೈಕ್ ರೇಟ್‌ನಲ್ಲಿ 202 ರನ್ ಗಳಿಸಿದ್ದರು. ಆದ್ರೆ ಏಪ್ರಿಲ್ 18ರಂದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದಿದ್ದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಮ್ಯಾಚಲ್ಲಿ ಗಾಯಗೊಂಡಿದ್ರು.  ಎರಡನೇ ಇನ್ನಿಂಗ್ಸ್‌ನ ಆರನೇ ಓವರ್‌ನಲ್ಲಿ ಡೀಪ್ ಬ್ಯಾಕ್‌ವರ್ಡ್ ಸ್ಕ್ವೇರ್ ಲೆಗ್‌ನಲ್ಲಿ ಬೌಂಡರಿ ಉಳಿಸಲು ಡೈವಿಂಗ್ ಮಾಡುವಾಗ ಎಡಗೈಯ ಬೆರಳಿಗೆ ಗಾಯ ಮಾಡಿಕೊಂಡಿದ್ದಾರೆ. ಇಂಜುರಿ ಸ್ವಲ್ಪ ಡೀಪ್ ಇರೋದ್ರಿಂದ ಕಳೆದ ಮೂರು ಪಂದ್ಯಗಳಿಂದ ಆರ್​ಸಿಬಿ ಪರ ಆಡಿಲ್ಲ. ಅದೂ ಅಲ್ದೇ ಇಂಗ್ಲೆಂಡ್ ಕ್ರಿಕೆಟ್ ಬೋರ್ಡ್​ನಲ್ಲಿ  ಕೇಂದ್ರೀಯ ಒಪ್ಪಂದ ಮಾಡಿಕೊಂಡಿರುವ ಸಾಲ್ಟ್ ಇಂಗ್ಲೆಂಡ್ ಆಡಳಿತ ಮಂಡಳಿಯ ಸೂಚನೆ ಮೇರೆಗೆ ಇಂಗ್ಲೆಂಡ್​ಗೆ ಹಾರಿದ್ದಾರೆ. ಹಾಗೇ ಇಂಜುರಿಯಾಗಿರುವ ಬೆರಳಿಗೆ ಸ್ಕ್ಯಾನ್ ಮಾಡಲಾಗಿದೆ. ಹೀಗಾಗಿ ಸಾಲ್ಟ್ ಕಂ ಬ್ಯಾಕ್ ಸ್ವಲ್ಪ ಡಿಲೇ ಆಗ್ಬಹುದು. ಅಥವಾ ಗಾಯದ ತೀವ್ರತೆ ಜಾಸ್ತಿ ಇದ್ರೆ ಸಾಲ್ಟ್ ಟೂರ್ನಿಯಿಂದಲೇ ಹೊರಗುಳಿಯಬಹುದು. ಒಂದ್ಕಡೆ ಸಾಲ್ಟ್ ಇಂಜುರಿಗೆ ಫ್ರಾಂಚೈಸಿಗೆ ಶಾಕ್ ಕೊಟ್ಟಿದ್ರೆ ಮತ್ತೊಂದೆಡೆ ಜೇಕಬ್ ಬೆಥೆಲ್ ಇಂಪ್ಯಾಕ್ಟ್ ಮಾಡ್ತಿಲ್ಲ ಅನ್ನೋದೇ ತಲೆಬಿಸಿ ತಂದಿಟ್ಟಿದೆ. ಯಾಕಂದ್ರೆ ಸಾಲ್ಟ್ ಜಾಗದಲ್ಲಿ ಜೇಕಬ್ ಬೆಥೆಲ್​ಗೆ ಚಾನ್ಸ್ ನೀಡಲಾಗ್ತಿದೆ. ಆದ್ರೆ ಬೆಥೆಲ್ ಓಪನಿಂಗ್​ನಲ್ಲಿ ಯಾಕೋ ಸಪ್ಪೆ ಅನ್ನಿಸ್ತಿದ್ದಾರೆ. ಆರಂಭದಲ್ಲಿ ವ್ಹಾವ್ ಅನ್ನೋ ಥರ ಕಾಣ್ಸಿದ್ರು ಆ ನಂತ್ರದಲ್ಲಿ ಅದನ್ನ ಬಿಗ್ ಇನ್ನಿಂಗ್ಸ್ ಆಗಿ ಕನ್ವರ್ಟ್ ಮಾಡುವಲ್ಲಿ ಫೇಲ್ಯೂರ್ ಆಗ್ತಿದ್ದಾರೆ.

ಭಾರವಾದ್ರಾ ಬೆಥೆಲ್?

ಎದುರಾಳಿ                                ಸ್ಕೋರ್

ಗುಜರಾತ್ ಟೈಟನ್ಸ್                       14(10)

ಡೆಲ್ಲಿ ಕ್ಯಾಪಿಟಲ್ಸ್                          20(11)

ಗುಜರಾತ್ ಟೈಟನ್ಸ್                       5(5)

ಇಲ್ಲಿ ಕಳೆದ ಮೂರು ಪಂದ್ಯಗಳಲ್ಲಿ ಜೇಕಬ್ ಬೆಥೆಲ್​ ಕಡೆಯಿಂದ ಇಂಪ್ರೆಸ್ಸಿವ್ ಇನ್ನಿಂಗ್ಸ್ ಬಂದಿಲ್ಲ. ಟಿ-20 ವಿಶ್ವಕಪ್ ಟೈಮಲ್ಲಿ ಭಾರತದ ವಿರುದ್ಧವೇ ಶತಕ ಸಿಡಿಸಿ ಅಬ್ಬರಿಸಿದ್ದ ಬೆಥೆಲ್ ಸ್ವಲ್ಪ ಸಪ್ಪೆ ಅನ್ನಿಸ್ತಿದ್ದಾರೆ. ಮೂರೂ ಇನ್ನಿಂಗ್ಸ್ ಸೇರಿ 39 ರನ್​ಗಳನ್ನ ಕಲೆ ಹಾಕಿದ್ದಾರೆ. ಒಂದ್ಕಡೆ ಸಾಲ್ಟ್ ಇಂಜುರಿ ಮತ್ತೊಂದ್ಕಡೆ ಬೆಥೆಲ್ ಸಪ್ಪೆ ಅನ್ನಿಸ್ತಿರೋದು ಫ್ರಾಂಚೈಸಿಗೆ ಸ್ವಲ್ಪ ತಲೆಬಿಸಿಯಾಗ್ತಿದೆ. ಯಾಕಂದ್ರೆ ಯಾವುದೇ ತಂಡಕ್ಕೂ ಪವರ್ ಪ್ಲೇನಲ್ಲಿ ಬರೋ ರನ್ಸ್ ಮೋಸ್ಟ್ ಇಂಪಾರ್ಟೆಂಟ್ ಆಗುತ್ತೆ. ನೆಕ್ಸ್​ಟ್ ಟಾರ್ಗೆಟ್ ಸೆಟ್ ಮಾಡೋಕೆ ಮೊದಲ ಆರು ಓವರ್​ಗಳಲ್ಲಿ ಬರೋ ರನ್ಸ್ ಮುಖ್ಯ. ಆದ್ರೆ ಬೇಗನೇ ವಿಕೆಟ್ ಬಿದ್ದಾಗ ನೆಕ್ಸ್​ಟ್ ಬರೋರಿಗೆ ಪ್ರೆಶರ್ ಇದ್ದೇ ಇರುತ್ತೆ.

Shantha Kumari