IPL ಹರಾಜಿನಲ್ಲಿ UNSOLD ಸ್ಟಾರ್ಸ್ – ಟ್ಯಾಲೆಂಟ್ ಇದ್ರೂ ಅದೃಷ್ಟ ಕೈಕೊಡ್ತಾ?
2026ರ ಮಿನಿ ಆಕ್ಷನ್.. ಹೇಗಿದೆ ಸ್ಟ್ರೆಂಥ್?

2026ರ ಐಪಿಎಲ್ಗೆ ಡಿಸೆಂಬರ್ನಲ್ಲಿ ನಡೆಯಲಿರೋ ಮಿನಿ ಆಕ್ಷನ್ ಮೇಲೆ ಎಲ್ಲರ ಕಣ್ಣಿದೆ. ಯಾವ್ಯಾವ ಆಟಗಾರರು ರಿಲೀಸ್ ಆಗ್ತಾರೆ. ಹರಾಜಿಗೆ ಬಂದವ್ರು ಯಾವ ಟೀಂ ಸೇರ್ತಾರೆ ಅನ್ನೋ ಕ್ಯೂರಿಯಾಸಿಟಿ ಇದೆ. ಬಟ್ ಈ ಸಲ ಆಕ್ಷನ್ನಲ್ಲಿ ಈ ಆಟಗಾರರು ಫ್ರಾಂಚೈಸಿಗಳಿಗೆ ಬೆಸ್ಟ್ ಚಾಯ್ಸ್ ಆಗಬಹುದು. ಹಾಗಂತ ಇವ್ರೆಲ್ಲಾ ಪ್ರಸ್ತುತ ಯಾವ ತಂಡದಲ್ಲೂ ಇಲ್ಲ. ಌಕ್ಚುಲಿ ಇವ್ರು ಅನ್ಸೋಲ್ಡ್ ಪ್ಲೇಯರ್ಸ್. ಇವ್ರಲ್ಲಿರೋ ಸ್ಟ್ರೆಂಥ್ ನೋಡಿದ್ರೆ ಈ ಸಲ ಬಿಡ್ನಲ್ಲಿ ಸೇಲ್ ಆಗೋದಂತೂ ಗ್ಯಾರಂಟಿ. ಐಪಿಎಲ್ನ ಬೆಸ್ಟ್ ಥಿಂಗ್ ಏನಂದ್ರೆ ಹತ್ತಾರು ಉದಯೋನ್ಮುಕ ಆಟಗಾರರಿಗೆ ಭವಿಷ್ಯ ಕಟ್ಟಿಕೊಟ್ಟಿದೆ. ರಾಷ್ಟ್ರೀಯ ತಂಡಗಳಲ್ಲೂ ಚಾನ್ಸ್ ಸಿಗುವಂತೆ ಮಾಡಿದೆ. ಅಟ್ ದಿ ಸೇಮ್ ಟೈಂ ಸಾಕಷ್ಟು ಪ್ರತಿಭಾವಂತ ಆಟಗಾರರು ಸಾಮರ್ಥ್ಯ ಇದ್ದೂ ಕೂಡ ಐಪಿಎಲ್ನಲ್ಲಿ ಚಾನ್ಸ್ ಮಿಸ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ : ಮೇಕೆದಾಟು ಪರವಾಗಿ ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು – ತಮಿಳುನಾಡು ಸಲ್ಲಿಸಿದ್ದ ಅರ್ಜಿ ವಜಾ
ವೇಯ್ಟ್ ಲಾಸ್.. ಸರ್ಫರಾಜ್ ಗೆ ಸಿಗುತ್ತಾ ಚಾನ್ಸ್?
ಸರ್ಫರಾಜ್ ಖಾನ್. ಐಪಿಎಲ್ ನಲ್ಲಿ ಸದ್ದು ಮಾಡಿ ರಾಷ್ಟ್ರೀಯ ತಂಡದಲ್ಲೂ ಚಾನ್ಸ್ ಗಿಟ್ಟಿಸಿಕೊಂಡಿದ್ದ ಆಟಗಾರ. ಆದ್ರೆ ಶಾಕಿಂಗ್ ಎನ್ನುವಂತೆ ಐಪಿಎಲ್ ನಲ್ಲಿ ಅನ್ ಸೋಲ್ಡ್ ಆಗಿರೋ ಪ್ಳೇಯರ್. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್ ಹಾಗೇ ಡೆಲ್ಲಿ ಕ್ಯಾಪಿಟಲ್ಸ್ ತಂಡಗಳಿಗೆ ಆಡಿದ್ದಾರೆ. 2015ರಲ್ಲಿ ಕೇವಲ 17 ವರ್ಷ ವಯಸ್ಸಿನಲ್ಲಿ RCB ಪರ ಐಪಿಎಲ್ನಲ್ಲಿ ಆಡಿದ್ರು. ಆದ್ರೆ 2024ರ ಹರಾಜಿನಲ್ಲಿ ಯಾವುದೇ ತಂಡ ಸೆಲೆಕ್ಟ್ ಮಾಡಿಲ್ಲ. ಸ್ಫೋಟಕ ಬ್ಯಾಟಿಂಗ್ಗೆ ಹೆಸರಾಗಿರೋ ಸರ್ಫರಾಜ್ ವೇಯ್ಟ್ ಲಾಸ್ನೊಂದಿಗೆ ಅವಕಾಶದ ನಿರೀಕ್ಷೆಯಲ್ಲಿದ್ದಾರೆ.
ರಣಜಿ ಹೀರೋ ಔಕಿಬ್ ನಬಿಗೆ ಒಲಿಯುತ್ತಾ ಅದೃಷ್ಟ?
2024-25ರ ರಣಜಿ ಟ್ರೋಫಿಯಲ್ಲಿ ಔಕಿಬ್ ನಬಿ ಅಕ್ಷರಶಃ ಹೀರೋ ಪ್ರದರ್ಶನ ನೀಡಿದ್ದಾರೆ. 8 ಪಂದ್ಯಗಳಿಂದ 13.93 ಸರಾಸರಿಯಲ್ಲಿ 44 ವಿಕೆಟ್ಗಳನ್ನು ಪಡೆದು ಎರಡನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಸ್ಥಾನ ಪಡೆದಿದ್ದಾರೆ. 6 ಸಲ ಫೈಫರ್ ವಿಕೆಟ್ಸ್ ಪಡೆದಿದ್ದಾರೆ. 2025-26ರ ರಣಜಿ ಸೀಸನಲ್ಲಿ 4 ಪಂದ್ಯಗಳಲ್ಲಿ 24 ವಿಕೆಟ್ಗಳನ್ನು ಗಳಿಸುವ ಮೂಲಕ ಪ್ರಮುಖ ವೇಗಿಯಾಗಿದ್ದಾರೆ. ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುವ ಮತ್ತು ರಿವರ್ಸ್ ಸ್ವಿಂಗ್ ಮಾಡುವ ಸಾಮರ್ಥ್ಯ ಇದೆ. ಸೋ ಐಪಿಎಲ್ನಲ್ಲೂ ಸದ್ದು ಮಾಡೋ ನಿರೀಕ್ಷೆಯಲ್ಲಿದ್ದಾರೆ.
ಐಪಿಎಲ್ ಟೂರ್ನಿ ನಿರೀಕ್ಷೆಯಲ್ಲಿ ಪೃಥ್ವಿ ಶಾ!
ಐಪಿಎಲ್ನಲ್ಲಿ ಅನ್ ಸೋಲ್ಡ್ ಆಗಿರೋ ಪೃಥ್ವಿ ಶಾ ಐಪಿಎಲ್ ವೃತ್ತಿಜೀವನದ ದಾಖಲೆಯಲ್ಲಿ 147.46 ರ ಸ್ಟ್ರೈಕ್ ರೇಟ್ ನಲ್ಲಿ ಬ್ಯಾಟ್ ಬೀಸಿದ್ದಾರೆ. ಸ್ಫೋಟಕ ಇನ್ನಿಂಗ್ಸ್ ಮತ್ತು ಅಗ್ರೆಸ್ಸಿವ್ ಬ್ಯಾಟ್ಸ್ಮನ್ ಆಗಿ ಅದ್ಭುತ ಇನ್ನಿಂಗ್ಸ್ ಆಡಿದ್ದಾತೆ. ಪ್ರಸ್ತುತ ದೇಶೀ ಟೂರ್ನಿಗಳಲ್ಲೂ ಸದ್ದು ಮಾಡಿದ್ದು ಮತ್ತೊಮ್ಮೆ ಐಪಿಎಲ್ ಅಂಗಳಕ್ಕೆ ಬರೋ ವಿಶ್ವಾಸದಲ್ಲಿದ್ದಾರೆ.
ಮಿನಿ ಆಕ್ಷನ್ ನಲ್ಲಿ ಶಿವಂ ಮಾವಿಗೆ ಒಲಿಯುತ್ತಾ ಅದೃಷ್ಟ?
ಒಂದು ಕಾಲದಲ್ಲಿ ಭಾರತದ ಅತ್ಯಂತ ಪ್ರತಿಭಾನ್ವಿತ ವೇಗದ ಬೌಲಿಂಗ್ ಆಟಗಾರರಲ್ಲಿ ಒಬ್ಬರಾಗಿ ಕಾಣಿಸಿಕೊಂಡಿದ್ದ ಶಿವಂ ಮಾವಿ 2018 ರ ಅಂಡರ್-19 ವಿಶ್ವಕಪ್ನಲ್ಲಿ ಮೊದಲ ಬಾರಿಗೆ ಎಲ್ಲರ ಗಮನ ಸೆಳೆದಿದ್ರು. ಅವ್ರ ಬೌಲಿಂಗ್ ವೇಗ, ಅಕ್ಯುರೆಸಿ ಹೈಲೆಟ್ ಆಗಿತ್ತು. ಌಂಡ್ ಅದೇ ವರ್ಷ ಕೆಕೆಆರ್ ಪರ ಐಪಿಎಲ್ಗೂ ಪದಾರ್ಪಣೆ ಮಾಡಿ ಅದ್ಭುತ ಪ್ರದರ್ಶನ ನೀಡಿದ್ರು. ಕೆಕೆಆರ್ ಬಳಿಕ ಮಾವಿಯನ್ನು 2023ರ ಐಪಿಎಲ್ಗೂ ಮುನ್ನ ಗುಜರಾತ್ ಟೈಟಾನ್ಸ್ 6 ಕೋಟಿಗೆ ಖರೀದಿ ಮಾಡಿತ್ತು. ಬಟ್ ಬ್ಯಾಡ್ಲಕ್ ಅಂದ್ರೆ ಆ ವರ್ಷ ಒಂದೇ ಒಂದು ಪಂದ್ಯವನ್ನೂ ಆಡೋಕೆ ಆಗಿರಲಿಲ್ಲ. 2024ರಲ್ಲಿ ಲಕ್ನೋ ತಂಡದ ಪಾಲಾಗ ಮಾವಿಗೆ ಇಂಜುರಿ ಭೂತ ಕಾಡಿತ್ತು. ಸೋ ಇಡೀ ಟೂರ್ನಿಯಿಂದಲೇ ರೂಲ್ಡ್ ಔಟ್ ಆಗಿದ್ರು. ಭಾರತದ ಪರ ಆರು ಟಿ20ಐಗಳಲ್ಲಿ ಭಾರತವನ್ನು ಪ್ರತಿನಿಧಿಸಿರುವ ಬಲಗೈ ವೇಗಿ ಈಗ ಕಂಪ್ಲೀಟ್ ಆಗಿ ಫಿಟ್ ಆಗಿದ್ದಾರೆ. ದೇಶೀಯ ವೇಗಿಗಳ ಮೇಲೆ ಕಣ್ಣಿಟ್ಟಿರೋ ಫ್ರಾಂಚೈಸಿಗಳಿಗೆ ಮಾವಿ ಬೆಸ್ಟ್ ಚಾಯ್ಸ್ ಆಗಬಹುದು.
ರೇಸ್ ನಲ್ಲಿದ್ದಾರೆ ಆಸ್ಟ್ರೇಲಿಯಾ ಆಲ್ ರೌಂಡರ್ ಮ್ಯಾಥ್ಯೂ ಶಾರ್ಟ್!
ಆಸ್ಟ್ರೇಲಿಯಾದ ಆಲ್ರೌಂಡರ್ ಮ್ಯಾಥ್ಯೂ ಶಾರ್ಟ್ ಐಪಿಎಲ್ 2023 ರಲ್ಲಿ ಪಂಜಾಬ್ ಕಿಂಗ್ಸ್ ಪರ ಆಡಿದ್ರು. 6 ಪಂದ್ಯಗಳಲ್ಲಿ 117 ರನ್ ಗಳಿಸಿದರು.. ಪವರ್-ಹಿಟ್ಟರ್ & ಎಮರ್ಜಿಂಗ್ ಆಫ್-ಸ್ಪಿನ್ನರ್ ಆಗಿದ್ದು ಅವ್ರನ್ನ ಪಂಜಾಬ್ ತಂಡ ರಿಲೀಸ್ ಮಾಡಿತ್ತು. ಬ್ಯಾಡ್ಲಕ್ ಅಂದ್ರೆ 2024 ಮತ್ತು 2025 ರ ಹರಾಜಿನಲ್ಲಿ ಅನ್ ಸೋಲ್ಡ್ ಆಗಿದ್ರು. ಈಗ ಆಸ್ಟ್ರೇಲಿಯಾದ ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡ್ತಿದ್ದಾರೆ. ಬ್ಯಾಟ್ & ಬಾಲ್ ಎರಡರಲ್ಲೂ ಎಫೆಕ್ಟಿವ್ ಆಗಿದ್ದಾರೆ. ಸೋ ಈ ವರ್ಷ ಬೆಸ್ಟ್ ಆಲ್ ರೌಂಡರ್ ಹುಡುಕಾಟದಲ್ಲಿರೋ ತಂಡಗಳಿಗೆ ಮ್ಯಾಥ್ಯೂ ಶಾರ್ಟ್ ರನ್ನ ಸೆಲೆಕ್ಟ್ ಮಾಡಿಕೊಳ್ಬೋದು.
ಇವ್ರಿಷ್ಟೇ ಅಲ್ಲದೆ ವಿಕೆಟ್ ಕೀಪರ್ ಬ್ಯಾಟರ್ ಆಗಿರುವಂತ ತುಷಾರ್ ರಹೇಜಾ, ತಮಿಳುನಾಡು ಮೂಲದ ವಿಕೆಟ್ ಕೀಪರ್ ಬ್ಯಾಟರ್ ಎನ್ ಜಗದೀಶನ್, ವೆಸ್ಟ್ ಇಂಡೀಸ್ ತಂಡದ ಮಾಜಿ ನಾಯಕ ಜೇಸನ್ ಹೋಲ್ಡರ್ ಕೂಡ ರೇಸ್ನಲ್ಲಿದ್ದಾರೆ.

ನೋಡಿರಿ

