IPL 10 ಟೀಂ.. ರಿಲೀಸ್ ಲಿಸ್ಟ್ ರೆಡಿ – 2026ಕ್ಕೆ ಬಿಗ್ ಸ್ಟಾರ್ಸ್ ಗೂ ಗೇಟ್ ಪಾಸ್?
UNSOLD ಆಗ್ತಾರಾ ಸ್ಟಾರ್ ಪ್ಲೇಯರ್ಸ್?

IPL 10 ಟೀಂ.. ರಿಲೀಸ್ ಲಿಸ್ಟ್ ರೆಡಿ – 2026ಕ್ಕೆ ಬಿಗ್ ಸ್ಟಾರ್ಸ್ ಗೂ ಗೇಟ್ ಪಾಸ್?UNSOLD ಆಗ್ತಾರಾ ಸ್ಟಾರ್ ಪ್ಲೇಯರ್ಸ್?

ಐಪಿಎಲ್​ನಲ್ಲಿ ಸೀಸನ್​ನಿಂದ ಸೀಸನ್​ಗೆ ಒಂದಷ್ಟು ಪ್ಲೇಯರ್ಸ್ ಬದಲಾವಣೆ ಆಗ್ತಾರೆ. ಕಳೆದ ಬಾರಿ ಮೆಗಾ ಹರಾಜು ಇದ್ದಿದ್ರಿಂದ ಸ್ಟಾರ್ ಆಟಗಾರರೇ ಟೀಂ ಚೇಂಜ್ ಮಾಡಿದ್ರು. ಇದೀಗ 19ನೇ ಸೀಸನ್​ಗೂ ಮುನ್ನ ಮಿನಿ ಆಕ್ಷನ್ ನಡೆಯೋದ್ರಿಂದ ಒಂದಷ್ಟು ಪ್ಲೇಯರ್ಸ್ ಅಂತೂ ತಂಡಗಳಿಂದ ಹೊರಬಂದು ಬೇರೆ ಟೀಂ ಸೇರಿಕೊಳ್ತಾರೆ. ಕಳೆದ ಸೀಸನ್​ನಲ್ಲಿ ಕಳಪೆ ಪ್ರದರ್ಶನ ನೀಡಿದ್ದವ್ರ ಲಿಸ್ಟ್ ರೆಡಿಯಾಗಿದ್ದು ಅವ್ರನ್ನ ಕೈಬಿಡೋಕೆ ಫ್ರಾಂಚೈಸಿಗಳು ರೆಡಿಯಾಗಿವೆ. ಯಾವ ಟೀಮ್​ನಲ್ಲಿ ಯಾರು ಈ ಲಿಸ್ಟ್ ನಲ್ಲಿ ಇದ್ದಾರೆ ಅನ್ನೋದನ್ನ ನೋಡೋಣ.

ಬಿಡುಗಡೆಯಾಗುವ ಸಂಭಾವ್ಯರ ಪಟ್ಟಿ!

ಚೆನ್ನೈ ಸೂಪರ್ ಕಿಂಗ್ಸ್

ಮುಖೇಶ್ ಚೌಧರಿ, ಶ್ರೇಯಸ್ ಗೋಪಾಲ್, ರಾಹುಲ್ ತ್ರಿಪಾಠಿ, ದೀಪಕ್ ಹೂಡಾ, ವಿಜಯ್ ಶಂಕರ್

ಡೆಲ್ಲಿ ಕ್ಯಾಪಿಟಲ್ಸ್

ಜೇಕ್ ಫ್ರೇಸರ್-ಮೆಕ್‌ಗುರ್ಕ್, ಸಮೀರ್ ರಿಜ್ವಿ, ಫಾಫ್ ಡು ಪ್ಲೆಸಿಸ್, ದುಷ್ಮಂತ ಚಮೀರ, ಡೊನೊವನ್ ಫೆರೇರಾ

ಗುಜರಾತ್ ಟೈಟಾನ್ಸ್

ಅನುಜ್ ರಾವತ್, ಕರೀಮ್ ಜನತ್, ಕುಲ್ವಂತ್ ಖೇಜ್ರೋಲಿಯಾ, ಇಶಾಂತ್ ಶರ್ಮಾ

ಕೋಲ್ಕತ್ತಾ ನೈಟ್ ರೈಡರ್ಸ್

ವೆಂಕಟೇಶ್ ಅಯ್ಯರ್, ರಮಣದೀಪ್ ಸಿಂಗ್, ಕ್ವಿಂಟನ್ ಡಿ ಕಾಕ್, ಮೋಯಿನ್ ಅಲಿ, ವೈಭವ್ ಅರೋರಾ, ಸ್ಪೆನ್ಸರ್ ಜಾನ್ಸನ್, ಮಯಾಂಕ್ ಮಾರ್ಕಂಡೆ

ಲಕ್ನೋ ಸೂಪರ್ ಜೇಂಟ್ಸ್

ಮಾಯಾಂಕ್ ಯಾದವ್, ಮೊಹ್ಸಿನ್ ಖಾನ್, ರವಿ ಬಿಷ್ಣೋಯ್, ಡೇವಿಡ್ ಮಿಲ್ಲರ್, ಆಕಾಶ್ ದೀಪ್, ಶಮರ್ ಜೋಸೆಫ್

ಮುಂಬೈ ಇಂಡಿಯನ್ಸ್

ಮುಜೀಬ್ ಉರ್ ರೆಹಮಾನ್, ಅಶ್ವನಿ ಕುಮಾರ್, ಕಾರ್ಬಿನ್ ಬಾಷ್

ಪಂಜಾಬ್ ಕಿಂಗ್ಸ್

ಗ್ಲೆನ್ ಮ್ಯಾಕ್ಸ್‌ ವೆಲ್‌

ರಾಜಸ್ಥಾನ ರಾಯಲ್ಸ್​

ಶಿಮ್ರಾನ್ ಹೆಟ್ಮೆಯರ್, ವನಿಂದು ಹಸರಂಗ, ಮಹೇಶ್ ತೀಕ್ಷಣ, ಫಜಲ್ಹಕ್ ಫಾರೂಕಿ, ಶುಭಂ ದುಬೆ

ರಾಯಲ್ ಚಾಲೆಂಜರ್ಸ್ ಬೆಂಗಳೂರು

ಲಿಯಾಮ್ ಲಿವಿಂಗ್‌ಸ್ಟೋನ್, ರಸಿಕ್ ದಾರ್ ಸಲಾಂ

ಸನ್‌ ರೈಸರ್ಸ್ ಹೈದರಾಬಾದ್

ಇಶಾನ್ ಕಿಶನ್, ಅಭಿನವ್ ಮನೋಹರ್, ಅಥರ್ವ ತೈಡೆ, ಸಿಮರ್‌ಜೀತ್ ಸಿಂಗ್, ಆಡಮ್ ಜಂಪಾ, ಮೊಹಮ್ಮದ್ ಶಮಿ

Shantha Kumari