ಪಂತ್ & ಶ್ರೇಯಸ್ IPL ಕುಬೇರರು – RCBಯಲ್ಲಿ ಕೊಹ್ಲಿಯೇ ಕಾಸ್ಟ್ಲಿ KING
10 ಫ್ರಾಂಚೈಸಿ.. ದುಬಾರಿ ಸ್ಟಾರ್ಸ್ ಯಾರು?

ಇಂಡಿಯನ್ ಪ್ರೀಮಿಯರ್ ಲೀಗ್ ಸದ್ಯ ಜಗತ್ತಿನ ಶ್ರೀಮಂತ ಲೀಗ್. ಸೋ ಇಲ್ಲಿ ಆಡೋರಿಗೆ ನೇಮ್, ಫೇಮ್ ಜೊತೆ ಹಣ ಕೂಡ ಹೊಳೆಯಂತೆ ಹರಿದು ಬರುತ್ತೆ. 2025ರ ಐಪಿಎಲ್ ಗೂ ಮುನ್ನ ಮೆಗಾ ಹರಾಜಿನಲ್ಲಿ ದಾಖಲೆಗಳೇ ಛಿದ್ರವಾಗುವಂತೆ ಬಿಡ್ಡಿಂಗ್ ಆಗಿತ್ತು. ಮೊನ್ನೆಯಷ್ಟೇ ಡಬ್ಲ್ಯೂಪಿಎಲ್ನಲ್ಲೂ ಆಟಗಾರ್ತಿಯರ ಮೇಲೆ ಕೋಟಿಗಳ ಲೆಕ್ಕದಲ್ಲಿ ಹರಾಜು ನಡೆದಿದೆ.
ಇದನ್ನೂ ಓದಿ : SA ಸರಣಿ RO-KOಗೆ ಪ್ರತಿಷ್ಠೆ – 6 ಟಾಸ್ಕ್.. 2027ರ ವಿಶ್ವಕಪ್ ಫಿಕ್ಸ್?
ಗುರುವಾರವಷ್ಟೇ ಡಬ್ಲ್ಯೂಪಿಎಲ್ ಸೀಸನ್ 4ಗೆ ಮೆಗಾ ಹರಾಜು ನಡೆದಿದ್ದು ಇದೀಗ ಎಲ್ಲರ ಕಣ್ಣು ಐಪಿಎಲ್ ಮಿನಿ ಆಕ್ಷನ್ ಮೇಲೆ ನೆಟ್ಟಿದೆ. ಡಿಸೆಂಬರ್ 16 ರಂದು ನಡೆಯಲಿರುವ ಹರಾಜಿನಲ್ಲಿ ಸ್ಟಾರ್ ಪ್ಲೇಯರ್ಗಳೂ ಅಖಾಡದಲ್ಲಿದ್ದಾರೆ. ಈ ಪೈಕಿ ಕೋಲ್ಕತ್ತಾ ನೈಟ್ ರೈಡರ್ಸ್ ಅತಿ ಹೆಚ್ಚು ಪರ್ಸ್ ಬ್ಯಾಲೆನ್ಸ್ನೊಂದಿಗೆ ಕಣಕ್ಕಿಳಿಯಲಿದೆ. ಕೆಕೆಆರ್ ತಂಡವು ತನ್ನ 10 ಆಟಗಾರರನ್ನು ಬಿಡುಗಡೆ ಮಾಡಿದ್ದು 64.3 ಕೋಟಿ ರೂ ಬ್ಯಾಲೆನ್ಸ್ ಇದೆ. ಮತ್ತೊಂದೆಡೆ ಮುಂಬೈ ಇಂಡಿಯನ್ಸ್ ಮಿನಿ ಹರಾಜಿನಲ್ಲಿ ಅತಿ ಕಡಿಮೆ ಅಂದ್ರೆ 2.75 ಕೋಟಿ ರೂಪಾಯಿ ಮಾತ್ರ ಬಾಕಿ ಇದೆ. ಎಲ್ಲಾ ತಂಡಗಳ ಪರ್ಸ್ ಬಗ್ಗೆ ನೋಡೋದಾದ್ರೆ 237.55 ಕೋಟಿ ಪಾಯಿಗಳಿದೆ. ಬಟ್ ಖರೀದಿ ಮಾಡಬೇಕಿರೋದು 77 ಕೋಟಿ ಆಗಿರೋದ್ರಿಂದ ಅತೀ ಹೆಚ್ಚು ಬಿಡ್ ಆಗೋ ಪ್ಲೇಯರ್ಸ್ ಯಾರೆಲ್ಲಾ ಅನ್ನೋ ಕ್ಯೂರಿಯಾಸಿಟಿಯೂ ಇದೆ. ಪ್ರಸ್ತುತ 10 ಫ್ರಾಂಚೈಸಿಗಳಲ್ಲಿ ಉಳ್ಕೊಂಡಿರೋ ದುಬಾರಿ ಪ್ಲೇಯರ್ ಯಾರು ಅನ್ನೋದನ್ನ ನೋಡ್ತಾ ಹೋಗೋಣ. ಅಂದ್ರೆ ಮಿನಿ ಹರಾಜಿಗೂ ಮುನ್ನ ರಿಟೇನ್ ಆಗಿರೋ ಪ್ಲೇಯರ್ಗಳು.
10 ಫ್ರಾಂಚೈಸಿಗಳ ದುಬಾರಿ ಆಟಗಾರರು!
ತಂಡ ಆಟಗಾರ ಸಂಭಾವನೆ
ಲಕ್ನೋ ರಿಷಭ್ ಪಂತ್ ₹27 ಕೋಟಿ
ಪಂಜಾಬ್ ಶ್ರೇಯಸ್ ಅಯ್ಯರ್ ₹26.75 ಕೋಟಿ
ಹೈದರಾಬಾದ್ ಹೆನ್ರಿಚ್ ಕ್ಲಾಸೆನ್ ₹23 ಕೋಟಿ
ಬೆಂಗಳೂರು ವಿರಾಟ್ ಕೊಹ್ಲಿ ₹21 ಕೋಟಿ
ಚೆನ್ನೈ ಸಂಜು & ರುತುರಾಜ್ ₹18 ಕೋಟಿ
ರಾಜಸ್ಥಾನ ಯಶಸ್ವಿ ಜೈಸ್ವಾಲ್ ₹18 ಕೋಟಿ
ಮುಂಬೈ ಜಸ್ಪ್ರೀತ್ ಬುಮ್ರಾ ₹18 ಕೋಟಿ
ಡೆಲ್ಲಿ ಅಕ್ಷರ್ ಪಟೇಲ್ ₹16.50 ಕೋಟಿ
ಗುಜರಾತ್ ರಶೀದ್ ಖಾನ್ ₹18 ಕೋಟಿ
ಕೊಲ್ಕತ್ತಾ ರಿಂಕು ಸಿಂಗ್ ₹13 ಕೋಟಿ
ಇವ್ರಿಷ್ಟು ಕೂಡ 10 ಫ್ರಾಂಚೈಸಿಗಳಲ್ಲಿರೋ ಹೈಯೆಸ್ಟ್ ಪೇಯ್ಡ್ ಪ್ಲೇಯರ್ಸ್ ಆಗಿದ್ದಾರೆ. ಮಿನಿ ಆಕ್ಷನ್ ಆದ್ಮೇಲೂ ಬಹುಶಃ ಇವ್ರೇ ಆಯಾ ಫ್ರಾಂಚೈಸಿಗಳ ಟಾಪ್ 1 ದುಬಾರಿ ಪ್ಲೇಯರ್ಸ್ ಆಗಿರಬಹುದು. ಇನ್ನು ಮಿನಿ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಅತೀ ಹೆಚ್ಚು ಆಟಗಾರರನ್ನ ಖರೀದಿ ಮಾಡಬೇಕಾಗುತ್ತೆ. ಮಿನಿ ಹರಾಜಿನಲ್ಲಿ ಕೆಕೆಆರ್ ಒಟ್ಟು 13 ಆಟಗಾರರನ್ನು ಖರೀದಿಸಬೇಕು. ಇನ್ನು ಪಂಜಾಬ್ ಮತ್ತು ಮುಂಬೈ ಕಡಿಮೆ ಆಟಗಾರರನ್ನ ಖರೀದಿ ಮಾಡಬೇಕು. ಪಂಜಾಬ್ ತಂಡ ಕೇವಲ 4 ಸ್ಥಾನಗಳನ್ನು ಭರ್ತಿ ಮಾಡಬೇಕಿದೆ. ಅವರ ಪರ್ಸ್ ನಲ್ಲಿ 11.5 ಕೋಟಿ ರೂ. ಇದೆ. ಪಂಜಾಬ್ ತಂಡ ಹರಾಜಿನಲ್ಲಿ ಫಿನಿಶರ್ಗಳ ಮೇಲೆ ಬಿಡ್ ಮಾಡಲಿದೆ. ಒಟ್ನಲ್ಲಿ ಕೋಟಿ ಕೋಟಿ ಬ್ಯಾಲೆನ್ಸ್ನೊಂದಿಗೆ ಮಿನಿ ಹರಾಜಿಗೆ ಸಿದ್ಧವಾಗಿರೋ ಫ್ರಾಂಚೈಸಿಗಳು ಸ್ಟಾರ್ ಆಟಗಾರರ ಮೇಲೆಯೇ ಕಣ್ಣಿಟ್ಟಿದ್ದಾರೆ.

ನೋಡಿರಿ

