SRHಗಿಲ್ಲ ಶಮಿ.. CSKಗೆ ಬೇಡ ತ್ರಿಪಾಠಿ – 2026ಕ್ಕೆ KKRನಿಂದ ಮೂವರು ಔಟ್
ಫ್ಲ್ಯಾಪ್ ಶೋ ಲಿಸ್ಟ್ ನಲ್ಲಿ ಯಾರೆಲ್ಲಾ?

SRHಗಿಲ್ಲ ಶಮಿ.. CSKಗೆ ಬೇಡ ತ್ರಿಪಾಠಿ – 2026ಕ್ಕೆ KKRನಿಂದ ಮೂವರು ಔಟ್ಫ್ಲ್ಯಾಪ್ ಶೋ ಲಿಸ್ಟ್ ನಲ್ಲಿ ಯಾರೆಲ್ಲಾ?

18ನೇ ಸೀಸನ್ ಐಪಿಎಲ್​ಗೆ ಈಗಾಗ್ಲೇ ಟ್ರೇಡ್ ವಿಂಡೋ ಓಪನ್​ ಆಗಿದ್ದು ಫ್ರಾಂಚೈಸಿಗಳಲ್ಲಿ ಲೆಕ್ಕಾಚಾರಗಳು ಶುರುವಾಗಿದೆ. ಕ್ಯಾಶ್ ಡೀಲ್ ಅಥವಾ ಸ್ವ್ಯಾಪ್ ಮೂಲಕ ಎಕ್ಸ್​ಚೇಂಜ್ ಮಾಡಿಕೊಳ್ಳೋ ಮಾತುಕತೆಗಳೂ ನಡೆದಿವೆ. ಇನ್ನೂ ಕೆಲ ತಂಡಗಳಲ್ಲಿ ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನ ರಿಲೀಸ್ ಮಾಡೋ ಸಿದ್ಧತೆಗಳಾಗಿವೆ.  ಅದ್ರಲ್ಲೂ ಈ ಐದು ಸ್ಟಾರ್ ಪ್ಲೇಯರ್​ಗಳನ್ನ ಬಿಡುಗಡೆ ಮಾಡೋದು ಪಕ್ಕಾ ಎನ್ನುವಂತೆಯೇ ಇದೆ.

ಇದನ್ನೂ ಓದಿ : ಮುಂಬೈನಲ್ಲಿ ಮಳೆರಾಯನ ಆರ್ಭಟ – ವಿಮಾನ ನಿಲ್ದಾಣಕ್ಕೂ ನುಗ್ಗಿದ ಮಳೆ ನೀರು

ಗುಜರಾತ್ ಟೈಟನ್ಸ್ ಪರ ಎರಡು ಸೀಸನ್​ಗಳಲ್ಲಿ ಶೈನ್ ಆಗಿದ್ದ ಮೊಹಮ್ಮದ್ ಶಮಿ ಒಟ್ಟು 48 ವಿಕೆಟ್‌ಗಳನ್ನು ಬೇಟೆಯಾಡಿದ್ರು. ಆದರೆ ಪಾದದ ಗಾಯದಿಂದಾಗಿ 2024 ರ ಆವೃತ್ತಿಯನ್ನು ಮಿಸ್ ಮಾಡಿಕೊಂಡಿದ್ರು. ಹೀಗಾಗಿ ಐಪಿಎಲ್ 2025 ರ ಮೆಗಾ ಹರಾಜಿಗೂ ಮುನ್ನ ಜಿಟಿ ಮಾಲೀಕರು ಶಮಿಯನ್ನ ರಿಲೀಸ್ ಮಾಡಿದ್ರು. ಈ ವೇಳೆ ಸನ್‌ರೈಸರ್ಸ್ ಹೈದರಾಬಾದ್  ₹10 ಕೋಟಿ ರೂಪಾಯಿಗೆ ಖರೀದಿಸಿತು. ಆದ್ರೆ ಶಮಿ ಲಯ ಕಂಡುಕೊಳ್ಳೋಕೆ ಆಗ್ಲಿಲ್ಲ. ಮೇನ್ ಬೌಲರ್ ಆಗಿದ್ರೂ ಹೈದ್ರಾಬಾದ್ ಪರ ಒಂಬತ್ತು ಪಂದ್ಯಗಳಿಂದ ಕೇವಲ ಆರು ವಿಕೆಟ್‌ಗಳನ್ನು ಬೇಟೆಯಾಡಿದ್ರು. ಅದೂ ಕೂಡ 11.23 ರ ದುಬಾರಿ ಎಕಾನಮಿ ರೇಟ್​​ನಲ್ಲಿ. ಪರಿಣಾಮ ಕೊನೇ ಪಂದ್ಯಗಳಲ್ಲಿ ಅವ್ರನ್ನ ಪ್ಲೇಯಿಂಗ್ 11ನಿಂದ ಕೈಬಿಡ್ಲಾಗಿತ್ತು. ಹೀಗಾಗಿ 2026ರ ಮಿನಿ ಹರಾಜಿಗೂ ಮೊದಲು SRH ತಂಡದಿಂದ ಅವರನ್ನು ಬಿಡುಗಡೆ ಮಾಡುವ ಸಾಧ್ಯತೆ ಇದೆ.

ಇನ್ನು ಶ್ರೇಯಸ್ ಅಯ್ಯರ್ ಕೆಕೆಆರ್ ತಂಡದಿಂದ ಹೊರಬಿದ್ದ ಮೇಲೆ ಅಜಿಂಕ್ಯ ರಹಾನೆ ಅವ್ರನ್ನ ಐಪಿಎಲ್ 2025 ರಲ್ಲಿ ಕೆಕೆಆರ್ ತಂಡದ ನಾಯಕನನ್ನಾಗಿ ನೇಮಕ ಮಾಡ್ಲಾಗಿತ್ತು. ಮೊದಲ ಪಂದ್ಯದಲ್ಲೇ ಆರ್​ಸಿಬಿ ವಿರುದ್ಧ 56 ರನ್ ಗಳಿಸಿ ಮಿಂಚಿದ್ರು. ಆದ್ರೆ ಮುಂದಿನ ಪಂದ್ಯಗಳಲ್ಲಿ ಬ್ಯಾಟಿಂಗ್ ಮತ್ತು ಕ್ಯಾಪ್ಟನ್ಸಿ ಎರಡೂ ಶೈನ್ ಆಗ್ಲಿಲ್ಲ. ಪರಿಣಾಮ ಕೆಕೆಆರ್ ಟೂರ್ನಿಯಲ್ಲಿ ಎಂಟನೇ ಸ್ಥಾನ ಗಳಿಸಿತು. ಹೀಗಾಗಿ 2026ರ ಐಪಿಎಲ್​ಗೆ ಹೊಸ ನಾಯಕನ ನೇಮಕದ ಪ್ಲ್ಯಾನ್​ನಲ್ಲಿರೋ ಕೊಲ್ಕತ್ತಾ ರಹಾನೆ ಅವ್ರನ್ನ ಹೊರಗಿಡೋ ಸಾಧ್ಯತೆ ಇದೆ.

ಕೆಕೆಆರ್‌ ತಂಡದ ಪ್ರಮುಖ ಆಟಗಾರರಲ್ಲಿ ಒಬ್ಬರಾಗಿರೋ ವೆಂಕಟೇಶ್ ಅಯ್ಯರ್ 2024 ರಲ್ಲಿ ಕೆಕೆಆರ್‌ನ ಚಾಂಪಿಯನ್ ಮಾಡುವಲ್ಲಿ ಕೀ ರೋಲ್ ಪ್ಲೇ ಮಾಡಿದ್ರು. ಹೀಗಾಗಿ ಕೆಕೆಆರ್ ವೆಂಕಿಯನ್ನ ತಂಡದಲ್ಲೇ ಉಳಿಸಿಕೊಳ್ಳೋದೆ ದುಬಾರಿ ಬೆಲೆ ತೆರಬೇಕಾಯ್ತು. ಹರಾಜಿನಲ್ಲಿ ಬರೋಬ್ಬರಿ 23.75 ಕೋಟಿ ರೂಪಾಯಿ ನೀಡಿ ಖರೀದಿ ಮಾಡಿತ್ತು. ಆದ್ರೆ ಸೀಸನ್ ಉದ್ದಕ್ಕೂ ಕಳಪೆ ಫಾರ್ಮ್ ನಿಂದ ಬಳಲಿದ ವೆಂಕಿ 11 ಪಂದ್ಯಗಳಲ್ಲಿ ಕೇವಲ 142 ರನ್ ಗಳಿಸಿದರು. ಹೀಗಾಗಿ ವೆಂಕಿಯನ್ನ ರಿಲೀಸ್ ಮಾಡಿದ್ರೆ 23 ಕೋಟಿ ರೂಪಾಯಿ ಸೇವ್ ಆಗಲಿದೆ. ಇದ್ರಿಂದ ಮತ್ತೊಬ್ಬ ಸ್ಟಾರ್ ಆಟಗಾರರನ್ನ ಖರೀದಿ ಮಾಡ್ಬೋದು ಅನ್ನೋ ಲೆಕ್ಕಾಚಾರ ಕೆಕೆಆರ್ ನದ್ದಾಗಿದೆ.

2025 ರ ಐಪಿಎಲ್‌ನಲ್ಲಿ ಕೆಕೆಆರ್ ನಲ್ಲಿ ಕ್ವಿಂಟನ್ ಡಿ ಕಾಕ್ ಅವರ ಫಾರ್ಮ್ ಏರಿಳಿತಗಳನ್ನು ಕಂಡಿತು. ಒಂದು ಪಂದ್ಯದಲ್ಲಿ 97 ರನ್ ಗಳಿಸಿ ಅದ್ಭುತ ಪ್ರದರ್ಶನ ನೀಡಿದರು. ಆದ್ರೆ ಟೂರ್ನಿಯುದ್ದಕ್ಕೂ ಅದನ್ನ ಕಂಟಿನ್ಯೂ ಮಾಡೋಕೆ ಆಗ್ಲಿಲ್ಲ. 8 ಇನ್ನಿಂಗ್ಸ್‌ಗಳಲ್ಲಿ 21.71 ಸರಾಸರಿಯಲ್ಲಿ ಕೇವಲ 152 ರನ್‌ಗಳನ್ನು ಮಾತ್ರ ಗಳಿಸಿದರು.  ಹೀಗಾಗಿ ವಿಕೆಟ್ ಕೀಪಿಂಗ್ ಮಾಡುವ ಸಾಮರ್ಥ್ಯವಿರುವ ಕೆಎಲ್ ರಾಹುಲ್ ಮೇಲೆ ಕೆಕೆಆರ್ ಆಸಕ್ತಿ ಹೊಂದಿದೆ. ಸೋ ಡಿ ಕಾಕ್ ಕೈಬಿಟ್ರೆ ಬೇರೆ ಆಟಗಾರನ ಮೇಲೆ ಬಿಡ್ ಮಾಡಬಹುದು ಅನ್ನೋ ಸ್ಟ್ರಾಟರ್ಜಿ ಮಾಡ್ಕೊಂಡಿದ್ದಾರೆ.

ರಾಹುಲ್ ತ್ರಿಪಾಠಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ತಂಡ ಕಳೆದ ಸೀಸನ್​ಗೂ ಮುನ್ನ 3.40 ಕೋಟಿಗೆ ಖರೀದಿಸಿತು. 2024 ರಲ್ಲಿ ತ್ರಿಪಾಟಿ ಆರು ಪಂದ್ಯಗಳಲ್ಲಿ 143.48 ಸ್ಟ್ರೈಕ್ ರೇಟ್‌ನಲ್ಲಿ 165 ರನ್ ಗಳಿಸಿದರು. ಆದ್ರೆ 18ನೇ ಸೀಸನ್​ನಲ್ಲಿ CSK ಪರ ಕಂಪ್ಲಿಟ್ ಡಲ್ ಆಗಿದ್ರು. ಐದು ಪಂದ್ಯಗಳಲ್ಲಿ ಕೇವಲ 55 ರನ್‌ಗಳನ್ನು ಗಳಿಸಲು ಸಾಧ್ಯವಾಯಿತು. ಅದೂ ಕೂಡ ಕೇವಲ 96.49 ಸ್ಟ್ರೈಕ್ ರೇಟ್‌ನೊಂದಿಗೆ. ಹೀಗಾಗಿ ನೆಕ್ಸ್​ಟ್ ಸೀಸನ್​ಗೂ ಮುನ್ನ ರಿಲೀಸ್ ಮಾಡೋ ಎಲ್ಲಾ ಚಾನ್ಸಸ್ ಇದೆ.

Shantha Kumari