ಯುದ್ಧ ಭೀತಿಗೆ IPL ಟೂರ್ನಿ ರದ್ದು.. 16 ಪಂದ್ಯ ಬಾಕಿ.. ರಿಸಲ್ಟ್ ಹೇಗೆ? – RCB ಕಪ್ ಕನಸು ನನಸಾಗಲ್ವಾ?

ಫಿನಾಲೆಗೆ ಹತ್ತಿರವಾಗ್ತಿರೋ ಐಪಿಎಲ್.. ಪ್ಲೇಆಫ್ಗೆ ಹೊಸ್ತಿಲಲ್ಲಿರೋ ಟೀಮ್ಸ್.. ಟ್ರೋಫಿ ಎತ್ತಿ ಹಿಡಿಯೋ ಕನಸಿನಲ್ಲಿರೋ ಪ್ಲೇಯರ್ಸ್. ಇನ್ನೇನು 18ನೇ ಸೀಸನ್ ಐಪಿಎಲ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂತು ಅನ್ನುವಾಗ್ಲೇ ಟೂರ್ನಿಯೇ ಪೋಸ್ಟ್ಪೋನ್ ಆಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ಈಗ ಐಪಿಎಲ್ ಗೂ ಬಿಸಿ ಮುಟ್ಟಿಸಿದ್ದು ಇಡೀ ಟೂರ್ನಿಯನ್ನ ಅನಿರ್ಧಿಷ್ಟಾವಧಿಗೆ ಮುಂದೂಡಿಕೆ ಮಾಡ್ಲಾಗಿದೆ.
ಇದನ್ನೂ ಓದಿ: ಆರ್ ಸಿಬಿಯಲ್ಲಿ ಮ್ಯಾಚ್ ವಿನ್ನಿಂಗ್ ಫಾರಿನ್ ಪ್ಲೇಯರ್ಸ್ – ಬೌಲಿಂಗ್ & ಬ್ಯಾಟಿಂಗ್ ಬೊಂಬಾಟ್!
18ನೇ ಸೀಸನ್ ಐಪಿಎಲ್ ಆರ್ಸಿಬಿ ಫ್ಯಾನ್ಸ್ಗಂತ ತುಂಬಾನೇ ಸ್ಪೆಷಲ್ ಆಗಿದೆ. ಅವೇ ಪಿಚ್ನಲ್ಲಿ ಆರ್ಸಿಬಿನ ಮುಟ್ಟೋರೇ ಇಲ್ಲ. ಸೋ ಇವತ್ತಿನ ಲಕ್ನೋ ವಿರುದ್ಧದ ಮ್ಯಾಚಲ್ಲೂ ರೆಡ್ ಆರ್ಮಿಯೇ ವಿನ್ ಆಗಿ ಟೇಬಲ್ ಟಾಪರ್ ಆಗೋದ್ರ ಜೊತೆಗೆ ಪ್ಲೇಆಫ್ ಟಿಕೆಟ್ ಫಿಕ್ಸ್ ಅಂತಾ ಆರ್ಸಿಬಿ ಫ್ಯಾನ್ಸ್ ಫುಲ್ ಖುಷಿಯಾಗಿದ್ರು. ಆದ್ರೆ ಇವತ್ತಿನ ಮ್ಯಾಚ್ ಜೊತೆಗೆ ಇಡೀ ಟೂರ್ನಿಯೇ ಸ್ಥಗಿತಗೊಳಿಸಲಾಗಿದೆ.
ಐಪಿಎಲ್ ನ ಉಳಿದ ಎಲ್ಲಾ ಪಂದ್ಯಗಳು ಅನಿರ್ಧಿಷ್ಟಾವಧಿಗೆ ಮುಂದೂಡಿಕೆ!
ಪಹಲ್ಗಾಂ ದಾಳಿ ಬಳಿಕ ಭಾರತ ಮತ್ತು ಪಾಕಿಸ್ತಾನ ದೇಶಗಳ ಮಧ್ಯೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದೀಗ ಆಟಗಾರರ ಸುರಕ್ಷತೆ ದೃಷ್ಟಿಯಿಂದ ಇಂದಿನಿಂದ ನಡೆಯಬೇಕಿದ್ದ ಎಲ್ಲ ಐಪಿಎಲ್ ಪಂದ್ಯಾವಳಿಗಳನ್ನು ಬಿಸಿಸಿಐ ರದ್ದುಗೊಳಿಸಿದೆ. ಇದೇ ಮೇ 25ರ ತನಕ ಐಪಿಎಲ್ ಕ್ರಿಕೆಟ್ ಟೂರ್ನಿ ನಡೆಯಬೇಕಿತ್ತು. ಆದರೆ ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಸ್ಥಿತಿ ನಿರ್ಮಾಣವಾಗಿರುವುದರಿಂದ ಎಲ್ಲ ಪಂದ್ಯಗಳನ್ನು ಅನಿರ್ದಿಷ್ಟಾವಧಿಯಾಗಿ ಮುಂದೂಡಲಾಗಿದೆ. ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷ ತಾರಕಕ್ಕೇರಿದ್ದು ಮುನ್ನೆಚ್ಚರಿಕಾ ಕ್ರಮವಾಗಿ ಐಪಿಎಲ್ 2025ರ ಅನ್ನು ಅರ್ಧಕ್ಕೆ ರದ್ದುಗೊಳಿಸಲಾಗಿದೆ.
ಲೀಗ್ ಹಂತದಲ್ಲಿ ಇನ್ನೂ 12 ಪಂದ್ಯಗಳು ಬಾಕಿ ಇದ್ವು!
ಪಾಕಿಸ್ತಾನ ಗುರುವಾರ ರಾತ್ರಿ ಭಾರತದ ಮೇಲೆ ದಾಳಿಗೆ ಯತ್ನಿಸಿದೆ. ಹೀಗಾಗಿ ಇವತ್ತು ಬಿಸಿಸಿಐ ಮಹತ್ವದ ಸಭೆ ನಡೆಸಿದ್ದು, ಆಟಗಾರರು ಮತ್ತು ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಐಪಿಎಲ್ 2025ರ ಸೀಸನ್ ಅನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಈವರೆಗೂ ಐಪಿಎಲ್ನಲ್ಲಿ 58 ಪಂದ್ಯಗಳು ಮುಕ್ತಾಯಗೊಂಡಿದ್ದವು. ಲೀಗ್ ಹಂತದಲ್ಲಿ ಇನ್ನೂ 12 ಪಂದ್ಯಗಳು ಬಾಕಿ ಉಳಿದಿದ್ದವು. ಲಕ್ನೋ, ಹೈದರಾಬಾದ್, ಅಹಮದಾಬಾದ್, ದೆಹಲಿ, ಚೆನ್ನೈ, ಬೆಂಗಳೂರು, ಮುಂಬೈ ಮತ್ತು ಜೈಪುರ ನಗರಗಳಲ್ಲಿ ಉಳಿದ ಪಂದ್ಯಗಳು ನಡೆಯಬೇಕಿತ್ತು. ಇವುಗಳಲ್ಲಿ ಮೂರು ಪಂದ್ಯಗಳು ಅಹಮದಾಬಾದ್‌ನಲ್ಲಿ, ತಲಾ ಎರಡು ಪಂದ್ಯಗಳು ಲಕ್ನೋ ಮತ್ತು ಬೆಂಗಳೂರಿನಲ್ಲಿ ಮತ್ತು ತಲಾ ಒಂದು ಪಂದ್ಯ ಹೈದರಾಬಾದ್, ದೆಹಲಿ, ಚೆನ್ನೈ, ಮುಂಬೈ ಮತ್ತು ಜೈಪುರದಲ್ಲಿ ನಡೆಯುವುದು ಬಾಕಿ ಇತ್ತು.
ಪಂಜಾಬ್ ಮತ್ತು ಡೆಲ್ಲಿ ಪಂದ್ಯ ಅರ್ಧಕ್ಕೇ ಕ್ಯಾನ್ಸಲ್!
ಭಾರತ ಮತ್ತು ಪಾಕಿಸ್ತಾನ ನಡುವಿನ ಮಿಲಿಟರಿ ಕಾರ್ಯಾಚರಣೆ ಎಫೆಕ್ಟ್ ಹಿನ್ನೆಲೆ ನಿನ್ನೆಯೇ ಧರ್ಮಶಾಲಾದಲ್ಲಿ ನಡೆಯುತ್ತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನು ರದ್ದುಗೊಳಿಸಲಾಗಿತ್ತು. ಪಂಜಾಬ್ ಕಿಂಗ್ಸ್ ತಂಡ ಬ್ಯಾಟಿಂಗ್ ಮಾಡುತ್ತಿದ್ದ ವೇಳೆ 9 ಗಂಟೆ 29 ನಿಮಿಷಕ್ಕೆ ಮೈದಾನದ ದೀಪಗಳನ್ನು ಆಫ್ ಮಾಡಲಾಯ್ತು. ಈ ವೇಳೆ ಮೈದಾನದಲ್ಲಿದ್ದ ಆಟಗಾರರು ಪೆವಿಲಿಯನ್ ಸೇರಿಕೊಂಡ್ರೆ ಮ್ಯಾಚ್ ನೋಡ್ತಿದ್ದ ಪ್ರೇಕ್ಷಕರನ್ನ ಮೈದಾನದಿಂದ ಹೊರಗೆ ಕಳಿಸಲಾಯ್ತು. ಪಂದ್ಯ ರದ್ದಾದ ಕಾರಣ ಎರಡೂ ತಂಡಗಳಿಗೆ ತಲಾ ಒಂದೊಂದು ಅಂಕವನ್ನು ನೀಡಲಾಗಿದೆ. ವಾಸ್ತವವಾಗಿ ಈ ಪಂದ್ಯದಲ್ಲಿ ಪಂಜಾಬ್ ಮೇಲುಗೈ ಸಾಧಿಸಿತ್ತು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡ್ತಿದ್ದ ಪಂಜಾಬ್ 10 ಓವರ್ಗಳ ಅಂತ್ಯಕ್ಕೆ 1 ವಿಕೆಟ್ ಕಳೆದುಕೊಂಡು 122 ರನ್ ಕಲೆಹಾಕಿತ್ತು.
ಒಟ್ನಲ್ಲಿ ಈ ಸೀಸನ್ ಆರ್ಸಿಬಿ ಫ್ಯಾನ್ಸ್ಗಂತೂ ಸಿಕ್ಕಾಪಟ್ಟೆ ಸ್ಪೆಷಲ್ ಆಗಿತ್ತು. 11 ಪಂದ್ಯಗಳನ್ನ ಆಡಿ 8ರಲ್ಲಿ ಗೆಲುವು ಕಂಡಿತ್ತು. 16 ಅಂಕಗಳೊಂದಿಗೆ ಪಾಯಿಂಟ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿ ಇತ್ತು. ಈ ಮೂಲಕ ಕಪ್ ಗೆಲ್ಲುವ ಕನಸನ್ನು ಕಾಣುತ್ತಿತ್ತು. 18 ವರ್ಷಗಳ ಕಪ್ ಗೆಲ್ಲುವ ಕನಸು ನನಸಾಗಲಿದೆ ಎಂದು ಆರ್ಸಿಬಿ ಅಭಿಮಾನಿಗಳು ಕೂಡ ಕಾತುರದಿಂದ ಕಾದಿದ್ದರು. ಬಟ್ ಬ್ಯಾಡ್ಲಕ್ ಇಡೀ ಟೂರ್ನಿಯೇ ಪೋಸ್ಟ್ಪೋನ್ ಆಗಿದೆ. ಇಲ್ಲಿ ಐಪಿಎಲ್ಗಿಂತ ದೇಶ ಮೊದ್ಲು ಅನ್ನೋದನ್ನ ಇಡೀ ಭಾರತೀಯರೇ ಒಪ್ಕೊಂಡಿದ್ದಾರೆ. ಭಾರತೀಯ ಸೇನೆ ಕೂಡ ಕುತಂತ್ರಿ ಪಾಕಿಸ್ತಾನವನ್ನ ಬಗ್ಗು ಬಡಿಯುತ್ತಿದೆ. ಅಖಂಡ ಭಾರತಕ್ಕೆ ಮಗ್ಗುಲ ಮುಳ್ಳಿನಂತಾಗಿರೋ ಪಾಕಿಸ್ತಾನಕ್ಕೆ ತಕ್ಕ ಶಾಸ್ತಿ ಕಲಿಸಿದ ಬಳಿಕ ಮತ್ತೆ ಐಪಿಎಲ್ ಟೂರ್ನಿ ಆರಂಭವಾಗಲಿದೆ.