RCB 3ನೇ ಸ್ಲಾಟ್ ಮಯಾಂಕ್ ಗೆ – ಪಡಿಕ್ಕಲ್ ಸ್ಥಾನ ನಿಭಾಯಿಸ್ತಾರಾ ಕನ್ನಡಿಗ?
KKR ವಿರುದ್ಧದ ಪಂದ್ಯಕ್ಕೆ ಹೇಗಿದೆ ಟೀಂ?

8 ಪಂದ್ಯಗಳನ್ನ ಗೆದ್ದು 16 ಅಂಕಗಳೊಂದಿಗೆ ಪಾಯಿಂಟ್ಸ್ ಟೇಬಲ್ನಲ್ಲಿ ಎರಡನೇ ಸ್ಥಾನದಲ್ಲಿರೋ ಆರ್ಸಿಬಿಗೆ ಲೀಗ್ ಸ್ಟೇಜಲ್ಲಿ ಮೂರು ಮ್ಯಾಚಸ್ ಇವೆ. ಸೋ ಇನ್ನೊಂದು ಪಂದ್ಯ ಗೆದ್ರೂ ನಾಕೌಟ್ಗೆ ಲಗ್ಗೆ ಇಟ್ಟಂತೆಯೇ ಲೆಕ್ಕ. ಬಟ್ ಈಗ ಇರೋ ಪ್ರಶ್ನೆ ಅಂದ್ರೆ ನಂಬರ್ 3 ಸ್ಲಾಟ್ನಲ್ಲಿ ಯಾರು ಆಡ್ತಾರೆ ಅನ್ನೋದು.
ಇದನ್ನೂ ಓದಿ : ರಾಹುಲ್ Vs ಗಿಲ್.. ಕ್ಯಾಪ್ಟನ್ಸಿ ವಾರ್ – ಟೆಸ್ಟ್ ನಾಯಕತ್ವಕ್ಕೆ ಯಾರು ಬೆಸ್ಟ್?
ಈ ಸೀಸನ್ನಲ್ಲಿ ಮೇ 3ರಂದು ಆರ್ಸಿಬಿ ಸಿಎಸ್ಕೆ ವಿರುದ್ಧ ಆಡಿದ್ಧ ಪಂದ್ಯವೇ ಕೊನೇ. ಆ ಬಳಿಕ ಮೇ 9ರಂದು ಲಕ್ನೋ ವಿರುದ್ಧ ಪಂದ್ಯ ಆಡ್ಬೇಕಿತ್ತು. ಅದೇ ದಿನವೇ ಟೂರ್ನಿಯನ್ನ ಬಿಸಿಸಿಐ ಪೋಸ್ಟ್ ಪೋನ್ ಮಾಡಿತ್ತು. ವಿಷ್ಯ ಅಂದ್ರೆ ಸಿಎಸ್ಕೆ ವಿರುದ್ಧದ ಮ್ಯಾಚ್ ಬಳಿಕ ಕನ್ನಡಿಗ ದೇವದತ್ ಪಡಿಕ್ಕಲ್ ಇಂಜುರಿಯಾಗಿದ್ರು. ಸೋ ಇಡೀ ಟೂರ್ನಿಯಿಂದಲೇ ರೂಲ್ಡ್ ಔಟ್ ಆಗಿದ್ದು ಅವ್ರ ಸ್ಥಾನಕ್ಕೆ ಮತ್ತೊಬ್ಬ ಕನ್ನಡಿಗ ಮಯಾಂಕ್ ಅಗರ್ವಾಲ್ರನ್ನ ಖರೀದಿ ಮಾಡ್ಲಾಗಿದೆ. ಮಯಾಂಕ್ ಆರ್ಸಿಬಿ ಸೇರಿದ ಮೇಲೆ ಆರ್ಸಿಬಿ ಆಡಲಿರುವ ಫಸ್ಟ್ ಮ್ಯಾಚ್ ಇದು. ಹೀಗಾಗಿ ಕೆಕೆಆರ್ ವಿರುದ್ಧದ ಪಂದ್ಯಕ್ಕೆ ಮಯಾಂಕ್ಗೆ ಪ್ಳೇಯಿಂಗ್ 11 ನಲ್ಲಿ ಚಾನ್ಸ್ ಕೊಡ್ತಾರಾ ಅನ್ನೋ ಪ್ರಶ್ನೆ ಮೂಡಿದೆ.
ದೇವದತ್ ಪಡಿಕ್ಕಲ್ ಈ ಸೀಸನ್ನಲ್ಲಿ ಆರ್ಸಿಬಿ ಪರ ನಂಬರ್ 3 ಸ್ಲಾಟ್ನಲ್ಲಿ ಇಂಪ್ರೆಸ್ಸಿವ್ ಇನ್ನಿಂಗ್ಸ್ ಆಡಿದ್ದಾರೆ. ತಂಡದಲ್ಲಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಆಗಮಿಸುತ್ತಿದ್ದ ಪಡಿಕ್ಕಲ್ ಸ್ಫೋಟಕ ಇನ್ನಿಂಗ್ಸ್ ಆಡ್ತಿದ್ರು. ಹೀಗಾಗಿಯೇ 10 ಪಂದ್ಯಗಳಲ್ಲಿ 247 ರನ್ಗಳನ್ನು ಕಲೆ ಹಾಕಿದ್ದಾರೆ. ಇದರಲ್ಲಿ ಎರಡು ಅರ್ಧಶತಕಗಳಿವೆ. ಸ್ಟ್ರೈಕ್ರೇಟ್ 150.61 ಇದೆ. ಐಪಿಎಲ್ನಲ್ಲಿ ಇದು ಅವರ ಬೆಸ್ಟ್ ಪರ್ಫಾಮೆನ್ಸ್ ಕೂಡ ಆಗಿದೆ. ಬಟ್ ಮೇ ಮೂರರಂದು ಸಿಎಸ್ಕೆ ವಿರುದ್ಧದ ಪಂದ್ಯದಲ್ಲಿ 17 ರನ್ ಗಳಿಸಿ ಔಟಾಗಿದ್ರು. ಆ ಬಳಿಕ ಮಂಡಿನೋವಿನ ಗಾಯಕ್ಕೆ ತುತ್ತಾಗಿದ್ದರಿಂದ ಇಡೀ ಐಪಿಎಲ್ನಿಂದಲೇ ಹೊರಗುಳಿದಿದ್ದಾರೆ. ಆರ್ಸಿಬಿಯ ಉಳಿದ ಪಂದ್ಯಗಳಲ್ಲಿ ಪಡಿಕ್ಕಲ್ ಆಡುವುದಿಲ್ಲ. ಇದರಿಂದ ಮಯಾಂಕ್ ಅಗರ್ವಾಲ್ ಅವರನ್ನು ಕರೆದುಕೊಂಡು ಬರಲಾಗಿದೆ.
ಇನ್ನು ಇದೆಲ್ಲದ್ರ ನಡುವೆ ಆರ್ಸಿಬಿಗೆ ಫಾರಿನ್ ಪ್ಲೇಯರ್ಸ್ ರಿಟರ್ನ್ ಆಗಿರೋದ್ರಿಂದ ಪ್ಲೇಯಿಂಗ್ 11ನಲ್ಲಿ ಮೊದಲಿನ ಆಟಗಾರರೇ ಸ್ಥಾನ ಪಡೆಯಬಹುದು. ಬಟ್ ಮೂರನೇ ಸ್ಥಾನ ಅಂತಾ ಬಂದಾಗ ಮಯಾಂಕ್ಗೆ ಅವಕಾಶ ಕೊಡ್ತಾರಾ ಅಥವಾ ಬೆಂಚ್ ಕಾಯಿಸ್ತಾರಾ ಅನ್ನೋದು ಗ್ಯಾರಂಟಿ ಇಲ್ಲ. ಯಾಕಂದ್ರೆ ಮಯಾಂಕ್ ಈ ಸೀಸನ್ನಲ್ಲಿ ಇನ್ನೂ ಯಾವುದೇ ಪಂದ್ಯ ಆಡಿಲ್ಲ. ಮುಂದಿನ ಮ್ಯಾಚ್ಗಳೆಲ್ಲಾ ತುಂಬಾನೇ ಇಂಪಾರ್ಟೆಂಟ್ ಆಗಿರೋದ್ರಿಂದ ಹೇಗೆ ಪರ್ಫಾಮ್ ಮಾಡ್ಬೋದು ಅನ್ನೋದನ್ನ ಜಡ್ಜ್ ಮಾಡೋಕೆ ಆಗಲ್ಲ. ಹೀಗಾಗಿ ಫ್ರಾಂಚೈಸಿ ಕಾದು ನೋಡುವ ತಂತ್ರಕ್ಕೆ ಹೋಗ್ಬೋದು. ಅಥವಾ ದೇಶಿ ಟೂರ್ನಿಯಲ್ಲಿ ಮಯಾಂಕ್ ಅಬ್ಬರಿಸೋದನ್ನ ಪರಿಗಣಿಸಿದ್ರೆ ಚಾನ್ಸ್ ಅಂತೂ ಪಕ್ಕಾ ಸಿಗುತ್ತೆ.
ಇನ್ನು ಕನ್ನಡಿಗ ಮಯಾಂಕ್ ಅಗರ್ವಾಲ್ ಆರ್ಸಿಬಿ ಮೂಲಕವೇ ತಮ್ಮ ಜರ್ನಿಯನ್ನ ಸ್ಟಾರ್ಟ್ ಮಾಡಿದ್ರು. ಒಟ್ಟು 127 ಪಂದ್ಯ ಆಡಿದ್ದು ಒಂದು ಶತಕ ಹಾಗೇ 13 ಹಾಫ್ಸೆಂಚುರಿ ಬಾರಿಸಿದ್ದಾರೆ. ಕಳೆದ ಸೀಸನ್ನಲ್ಲಿ ಹೈದ್ರಾಬಾದ್ ಪರ ಕಣಕ್ಕಿಳಿದಿದ್ದ ಮಯಾಂಕ್ ಈ ಸೀಸನ್ಗೂ ಮುನ್ನ ನಡೆದ ಹರಾಜಿನಲ್ಲಿ ಅನ್ಸೋಲ್ಡ್ ಆಗಿದ್ರು. ಈಗ ಆರ್ಸಿಬಿ 1 ಕೋಟಿ ರೂಪಾಯಿಗೆ ಖರೀದಿ ಮಾಡಿದೆ. ಮಯಾಂಕ್ ಕೂಡ ತಮ್ಮ ಹೋಮ್ ಟೀಮ್ಗೆ ಕಮ್ ಬ್ಯಾಕ್ ಮಾಡಿದ್ದಕ್ಕೆ ಖುಷಿಯಾಗಿದ್ದಾರೆ. ಹಾಗೇ ಬ್ಯಾಟ್ ಬೀಸೋಕೂ ಕಾಯ್ತಿದ್ದಾರೆ.