RCB Vs PBKS.. ಯಾರಿಗೆ ಫೈನಲ್ – ರೆಡ್ ಆರ್ಮಿ ಅಸ್ತ್ರವಾಗ್ತಾರಾ ಸೈಫರ್ಟ್?
ಪ್ಲೇಯಿಂಗ್ 11 ಫಿಕ್ಸ್.. ಟೆನ್ಷನ್ ಏನು?

ಲೀಗ್ ಹಂತಕ್ಕೆ ಗುಡ್ ಬೈ ಹೇಳಿ ಪ್ಲೇಆಫ್ಸ್ ಫೈಟ್ ಹೊಸ್ತಿಲಲ್ಲಿರೋ 18ನೇ ಸೀಸನ್ ಐಪಿಎಲ್ನಲ್ಲಿ ಉಳಿದಿರೋದೇ ನಾಲ್ಕು ಮ್ಯಾಚ್.. 10 ಟೀಮ್ಗಳಲ್ಲಿ ನಾಲ್ಕು ಟೀಮ್ಸ್ ಚಾಂಪಿಯನ್ ಪಟ್ಟಕ್ಕಾಗಿ ಪೈಪೋಟಿ ನಡೆಸಲಿವೆ. ಅದರ ಮೊದಲ ಹೆಜ್ಜೆಯಾಗಿಯೇ ಮೇ 29ರಂದ್ರೆ ಗುರುವಾರ ಕ್ವಾಲಿಫೈಯರ್ 1 ಕದನ ನಡೆಯಲಿದೆ. ಈ ಹೈವೋಲ್ಟೇಜ್ ಮ್ಯಾಚ್ನಲ್ಲಿ ಟೇಬಲ್ ಟಾಪರ್ಸ್ ಆಗಿರೋ ಪಂಜಾಬ್ ಮತ್ತು ಬೆಂಗಳೂರು ಆಟಗಾರರು ಮೈದಾನದಕ್ಕಿಳಿಯಲಿದ್ದಾರೆ. ಲಕ್ನೋವನ್ನ ಸೋಲಿಸಿ ಫುಲ್ ಜೋಶ್ನಲ್ಲಿರೋ ಆರ್ಸಿಬಿ ಬಾಯ್ಸ್ ಅದೇ ಮೊಮೆಂಟಮ್ನಲ್ಲೇ ಪಂಜಾಬ್ನೂ ಬೇಟೆಯಾಡೋ ಲೆಕ್ಕಾಚಾರದಲ್ಲಿದ್ದಾರೆ. ಅದಕ್ಕಾಗಿ ಪ್ಲೇಯಿಂಗ್ 11ನಲ್ಲಿ ಬಿಗ್ ಚೇಂಜಸ್ ಕೂಡ ಆಗಲಿವೆ.
ಇದನ್ನೂ ಓದಿ : LSG ಬೆಂಡೆತ್ತಿ RCB ಚರಿತ್ರೆ.. ಜಿತೇಶ್ ಜೋಶ್ಗೆ ಮಂಕಾದ ಪಂತ್ – ಕೀಳು ಮಟ್ಟಕ್ಕಿಳಿದು ಕೆಟ್ಟ ದಿಗ್ವೇಶ್
ಆರ್ಸಿಬಿ ಪರ ಓಪನರ್ಸ್ ಆಗಿ ಕಣಕ್ಕಿಳಿತಾ ಇರೋ ವಿರಾಟ್ ಕೊಹ್ಲಿ ಮತ್ತು ಫಿಲ್ ಸಾಲ್ಟ್ ಪಾರ್ಟ್ನರ್ಶಿಪ್ ಸಖತ್ತಾಗೇ ವರ್ಕ್ ಆಗ್ತಿದೆ. ಹೀಗಾಗಿ ಪಂಜಾಬ್ ವಿರುದ್ಧದ ಪಂದ್ಯಕ್ಕೂ ಈ ಇಬ್ಬರೇ ಇನ್ನಿಂಗ್ಸ್ ಆರಂಭ ಮಾಡ್ತಾರೆ. ಇನ್ನು ಮೂರನೇ ಕ್ರಮಾಂಕದಲ್ಲಿ ರಜತ್ ಪಾಟಿದಾರ್ ಬರ್ತಾರೆ. ಬಟ್ ಪಾಟಿದಾರ್ ಇಂಜುರಿಯಿಂದಾಗಿ ಬಳಲ್ತಿದ್ದು ಫಾರ್ಮ್ ಕೂಡ ಕಳ್ಕೊಂಡಿದ್ದಾರೆ. ಸೋ ಈ ಹೈವೋಲ್ಟೇಜ್ ಮ್ಯಾಚಲ್ಲಿ ಹೇಗೆ ಆಡ್ತಾರೆ ಅನ್ನೋದು ಇಂಪಾರ್ಟೆಂಟ್ ಆಗ್ಲಿದೆ. ಇನ್ನು ನಾಲ್ಕನೇ ಸ್ಲಾಟ್ಗೆ ಟಿಮ್ ಡೇವಿಡ್ ಬರೋ ಚಾನ್ಸಸ್ ಇದೆ. ಇಂಜುರಿ ಕಾರಣದಿಂದ ಲಕ್ನೋ ವಿರುದ್ಧದ ಮ್ಯಾಚಲ್ಲಿ ಟಿಮ್ ಡೇವಿಡ್ ಹೊರಗುಳಿದಿದ್ರು. ಒಂದು ವೇಳೆ ಇವ್ರು ಕಂಪ್ಲೀಟ್ ಆಗಿ ರಿಕವರ್ ಆಗಿಲ್ಲ ಅಂದ್ರೆ ಟಿಮ್ ಸೈಫರ್ಟ್ ಅವ್ರನ್ನ ಕಣಕ್ಕಿಳಿಸೋ ಚಾನ್ಸಸ್ ಇದೆ. ಬೆಥೆಲ್ ಬದ್ಲಿಗೆ ಖರೀದಿ ಮಾಡಿರೋ ಸೈಫರ್ಟ್ಗೆ ಪ್ಲೇಯಿಂಗ್ 11ನಲ್ಲಿ ಚಾನ್ಸ್ ಸಿಗ್ಬೋದು. ಹಾಗೆ ಲಿಯಾಮ್ ಲಿವಿಂಗ್ಸ್ಟೋನ್ ಆಡುವ ಬಳಗದಿಂದ ಹೊರಗುಳಿಯಲಿದ್ದಾರೆ. ಏಕೆಂದರೆ ಲಿಯಾಮ್ ಲಿವಿಂಗ್ಸ್ಟೋನ್ ಆರ್ಸಿಬಿ ಪರ 8 ಪಂದ್ಯಗಳನ್ನಾಡಿದ್ದು, ಈ ವೇಳೆ ಕಲೆಹಾಕಿರುವುದು ಕೇವಲ 87 ರನ್ಗಳು ಮಾತ್ರ. ಅದರಲ್ಲೂ ಎಲ್ಎಸ್ಜಿ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ಮೊದಲ ಎಸೆತದಲ್ಲೇ ವಿಕೆಟ್ ಒಪ್ಪಿಸಿದ್ದರು. ಹೀಗಾಗಿ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಿಂದ ಲಿವಿಂಗ್ಸ್ಟೋನ್ ಅವರನ್ನು ಕೈ ಬಿಡುವುದು ಖಚಿತ. ಇನ್ನು ಐದನೇ ಕ್ರಮಾಂಕದಲ್ಲಿ ಮಯಾಂಕ್ ಅಗರ್ವಾಲ್ ಬ್ಯಾಟ್ ಬೀಸಲಿದ್ದಾರೆ. ಮಯಾಂಕ್ ಲಕ್ನೋ ವಿರುದ್ಧದ ಮ್ಯಾಚಲ್ಲೂ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಮಾಡಿದ್ರು. ಸೋ ಅವ್ರನ್ನ ಇದೇ ಸ್ಲಾಟ್ನಲ್ಲಿ ಕಂಟಿನ್ಯೂ ಮಾಡಿಸಬಹುದು. ಹಾಗೇ ಆರನೇ ಕ್ರಮಾಂಕದಲ್ಲಿ ಕೃನಾಲ್ ಪಾಂಡ್ಯ ಕಾಣಿಸಿಕೊಂಡರೆ, ಫಿನಿಶರ್ ರೋಲ್ನಲ್ಲಿ ರೊಮಾರಿಯೊ ಶೆಫರ್ಡ್ ಬ್ಯಾಟ್ ಬೀಸ್ತಾರೆ. ಇನ್ನು ಬೌಲರ್ಗಳಾಗಿ ಜೋಶ್ ಹೇಝಲ್ವುಡ್, ಯಶ್ ದಯಾಳ್ ಹಾಗೂ ಭುವನೇಶ್ವರ್ ಕುಮಾರ್ ಕಣಕ್ಕಿಳಿಯುವುದು ಖಚಿತ. ಭುಜದ ನೋವಿನ ಕಾರಣ ಕಳೆದ ಕೆಲ ಪಂದ್ಯಗಳಿಂದ ಹೊರಗುಳಿದಿದ್ದ ಜೋಶ್ ಹೇಝಲ್ವುಡ್ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದಾರೆ. ಹೀಗಾಗಿ ನುವಾನ್ ತುಷಾರ ಪ್ಲೇಯಿಂಗ್ ಇಲೆವೆನ್ನಿಂದ ಹೊರಬೀಳಬಹುದು. ಬಟ್ ನುವಾನ್ ತುಷಾರ ಆರ್ ಸಿಬಿ ಈ ಸೀಸನ್ನ ಡೆಬ್ಯೂ ಮ್ಯಾಚಲ್ಲೇ ಮ್ಯಾಜಿಕ್ ಮಾಡಿದ್ರು. 6.50 ಎಕಾನಮಿಯಲ್ಲಿ ರನ್ ಕೊಟ್ಟಿ ವಿಕೆಟ್ ಕೂಡ ತೆಗೆದಿದ್ರು. ಇನ್ನು ಸುಯಾಶ್ ಶರ್ಮಾ ಇಂಪ್ಯಾಕ್ಟ್ ಪ್ಲೇಯರ್ ರೋಲ್ ಪ್ಲೇ ಮಾಡ್ತಾರೆ.
ಅಷ್ಟಕ್ಕೂ ನಾಕೌಟ್ಗೆ ಸೆಲೆಕ್ಟ್ ಆದ ಟೀಮ್ಗಳಿಗೆ ಒಂದೊಂದು ಪಂದ್ಯವೂ ಗೇಮ್ ಚೇಂಜಿಂಗ್ ಆಗ್ಲಿದೆ. ಬಟ್ ಅಡ್ವಾಂಟೇಜ್ ಸಿಗೋದು ಕ್ವಾಲಿಫೈಯರ್ 1 ಆಡೋರಿಗೆ. ಇಲ್ಲಿ ಗೆದ್ದರು ಫಿನಾಲೆ ತಲುಪಿದ್ರೆ ಸೋತವ್ರು ಮತ್ತೊಂದು ಅವಕಾಶ ಪಡೆಯುತ್ತಾರೆ. ಎಲಿಮಿನೇಟರ್ ಆಡವ್ರು ಒಬ್ರು ಮನೆಗೆ ಹೋದ್ರೆ ಇನ್ನೊಂದು ಕ್ವಾಲಿಫೈಯರ್ ಟುಗೆ ಸೆಲೆಕ್ಟ್ ಆಗ್ತಾರೆ. ಹೀಗಾಗಿ ಸೋತ್ರೂ ಇನ್ನೊಂದು ಚಾನ್ಸ್ ಇದೆ ಅಂತಾ ಆರ್ಸಿಬಿ ಈಸಿಯಾಗಿ ತೆಗೆದುಕೊಳ್ಳೆ ಪಂಜಾಬ್ ವಿರುದ್ಧ ಗೆದ್ದು ಸೀದಾ ಫೈನಲ್ ತಲುಪಿದ್ರೆ ಒಳ್ಳೇದು.

ನೋಡಿರಿ

