ಪ್ಲೇಆಫ್ಸ್ ಗೆ GT, RCB, PBKS – 1 ಸ್ಥಾನ.. 3 ಟೀಮ್ಸ್.. ಹೇಗಿದೆ ಫೈಟ್?
ಕಪ್ ಗೆಲ್ಲೋ ಅಡ್ವಾಂಟೇಜ್ ಯಾರಿಗೆ?

18ನೇ ಸೀಸನ್ ಐಪಿಎಲ್ ಈಗ ಪ್ರಮುಖ ಘಟ್ಟಕ್ಕೆ ಬಂದಿದೆ. ಪ್ಲೇಆಫ್ಸ್ ಪೈಪೋಟಿಗೆ ಮೂರು ಟೀಮ್ಗಳು ಸ್ಥಾನ ಪಡೆದಿದ್ದು ನಾಲ್ಕನೇ ಸ್ಥಾನ ಯಾರಿಗೆ ಅನ್ನೋದು ಫೈನಲ್ ಆಗಿಲ್ಲ. ಭಾನುವಾರ ರಾತ್ರಿ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ವರ್ಸಸ್ ಡೆಲ್ಲಿ ನಡುವಿನ ಪಂದ್ಯದಲ್ಲಿ ಗುಜರಾತ್ ಗೆಲುವು ಕಂಡಿದೆ. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ ಕೆ.ಎಲ್. ರಾಹುಲ್ ಅವರ ಭರ್ಜರಿ ಶತಕದ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ ಮೂರು ವಿಕೆಟ್ ಕಳೆದುಕೊಂಡು 199 ರನ್ ಗಳಿಸಿತು. 200 ರನ್ ಗಳ ಗೆಲುವಿನ ಗುರಿ ಬೆನ್ನತ್ತಿದ ಗುಜರಾತ್ ಟೈಟನ್ಸ್, ಸಾಯಿ ಸುದರ್ಶನ್108 ರನ್ ಗಳಿಸಿದ್ರೆ ಶುಭಮನ್ ಗಿಲ್ 93 ರನ್ ಬಾರಿಸಿ ಮಿಂಚಿದ್ರು. ಇವ್ರಿಬ್ಬರ ಅಬ್ಬರದ ಅರ್ಧಶತಕದ ನೆರವಿನಿಂದ ಯಾವುದೇ ವಿಕೆಟ್ ನಷ್ಟವಿಲ್ಲದೆ 19 ಓವರ್ ಗಳಲ್ಲಿ 205 ರನ್ ಗಳಿಸುವ ಮೂಲಕ 10 ವಿಕೆಟ್ ಗಳಿಂದ ಗೆಲುವು ಸಾಧಿಸಿತು. ಸೋ ಇದೇ ಗೆಲುವು ಪ್ಲೇಆಫ್ ಕನ್ಫ್ಯೂಷನ್ಸ್ಗೆ ದೊಡ್ಡ ಬ್ರೇಕ್ ಹಾಕಿದೆ.
ಇದನ್ನೂ ಓದಿ : GT ಗೆಲುವಿನೊಂದಿಗೆ ಪ್ಲೇ ಆಫ್‌ಗೆ ಎಂಟ್ರಿ ಕೊಟ್ಟ 3 ತಂಡಗಳು – ಆರ್‌ಸಿಬಿ , ಪಂಜಾಬ್, ಗುಜರಾತ್ ಪ್ಲೇ ಆಫ್ ಪ್ರವೇಶ
ಡೆಲ್ಲಿ ವಿರುದ್ಧ ಗೆದ್ದಿದ್ದು ಗುಜರಾತೇ ಇರ್ಬೋದು. ಬಟ್ ತನ್ನ ಜೊತೆ ಮತ್ತೆರಡು ಟೀಮ್ನೂ ಪ್ಲೇಆಫ್ಸ್ ದಡ ಮುಟ್ಟಿಸಿದೆ. ಗುಜರಾತ್, ಆರ್ ಸಿಬಿ ಹಾಗೂ ಪಂಜಾಬ್ ಕಿಂಗ್ಸ್ ಪ್ಲೇ-ಆಫ್‌ಗೆ ಎಂಟ್ರಿ ನೀಡಿವೆ. ಈ ಮೂರು ತಂಡಗಳು ಪ್ಲೇ-ಆಫ್ನಲ್ಲಿ ಆಡೋದು ಕನ್ಫರ್ಮ್ ಆಗಿದೆ. 18 ಅಂಕಗಳೊಂದಿಗೆ ಗುಜರಾತ್ ತಂಡ ಪಾಯಿಂಟ್ಸ್ ಟೇಬಲ್ನಲ್ಲಿ ನಂಬರ್ 1 ಸ್ಥಾನಕ್ಕೇರಿದ್ರೆ 17 ಅಂಕಗಳನ್ನ ಪಡೆದಿರೋ ಆರ್‌ಸಿಬಿ ಎರಡನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್ ಕೂಡ 17 ಅಂಕಗಳನ್ನ ಪಡೆದಿದ್ದು ನೆಟ್ ರನ್ ರೇಟ್ ಸ್ವಲ್ಪ ಕಡಿಮೆ ಇರೋದ್ರಿಂದ ಮೂರನೇ ಸ್ಥಾನದಲ್ಲಿದೆ. ಈ ಮೂರು ತಂಡಗಳಿಗೆ ಲೀಗ್ಸ್ ಹಂತದಲ್ಲಿ ಇನ್ನೂ ಎರಡೆರಡು ಪಂದ್ಯಗಳು ಬಾಕಿ ಇರೋದ್ರಿಂದ ಟೇಬಲ್ ಟಾಪ್ ಸ್ಥಾನಗಳಿಗಾಗಿ ಪೈಪೋಟಿ ನಡೆಸಲಿವೆ. ಸದ್ಯ ಗುಜರಾತ್, ಬೆಂಗಳೂರು ಹಾಗೇ ಪಂಜಾಬ್ ತಂಡಗಳು ಪ್ಲೇಆಫ್ಗೆ ಸೆಲೆಕ್ಟ್ ಆಗಿದ್ದು ಇನ್ನೊಂದು ಸ್ಥಾನ ಅಷ್ಟೇ ಬಾಕಿ ಇದೆ. ಅದೇ ಒಂದು ಪ್ಲೇಸ್ಗಾಗಿ ಮೂರು ತಂಡಗಳ ನಡುವೆ ಪ್ಲೇಆಫ್ ಪೈಪೋಟಿ ನಡೆಯಲಿದೆ
1 ಸ್ಥಾನ.. ಮೂವರ ಪೈಪೋಟಿ!
ನಾಲ್ಕನೇ ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ 2 ಪಂದ್ಯ ಬಾಕಿ
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಗೆದ್ರೆ ಮುಂಬೈ ಪ್ಲೇಆಫ್ ಸೀಟ್ ಪಕ್ಕಾ
ಲಕ್ನೋ ತಂಡ ಮೂರೂ ಮ್ಯಾಚ್ ಗೆದ್ದು ನೆಟ್ ರನ್ ರೇಟ್ ಕೌಂಟ್
ಅಂಕ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿರುವ ಡೆಲ್ಲಿಗೆ 2 ಮ್ಯಾಚ್ ಬಾಕಿ
ಲಕ್ನೋ 3 ಪಂದ್ಯಗಳಲ್ಲಿ ಒಂದು ಮ್ಯಾಚ್ ಸೋತ್ರೆ ಡೆಲ್ಲಿಗೆ ಅಡ್ವಾಂಟೇಜ್
ಒಟ್ಟು 17 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ ಗೇರಬಹುದು
ಲಕ್ನೋ ತಂಡ ಪ್ರಸ್ತುತ ಪಾಯಿಂಟ್ಸ್ ಟೇಬಲ್ ನಲ್ಲಿ 7ನೇ ಸ್ಥಾನದಲ್ಲಿದೆ
ಮೂರು ಪಂದ್ಯಗಳು ಬಾಕಿ ಇದ್ದು ಮೂರರಲ್ಲೂ ಗೆದ್ರಷ್ಟೇ ಪ್ಲೇಆಫ್ಸ್ ಸಾಧ್ಯತೆ
ಡೆಲ್ಲಿ ವಿರುದ್ಧ ಮುಂಬೈ ಸೋಲಬೇಕು, ಡೆಲ್ಲಿ ವಿರುದ್ಧ ಪಂಜಾಬ್ ಗೆಲ್ಲಬೇಕು
ನೆಟ್ ರನ್ ರೇಟ್ ಮೂಲಕ ಲಕ್ನೋ ಅಂಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಬಹುದು
ಎಂಐ, ಡಿಸಿ ಹಾಗೇ ಎಲ್ಎಸ್ಜಿ ಟೀಮ್ಗಳಲ್ಲಿ ಒಬ್ಬರಿಗಂತೂ ಪ್ಲೇಆಫ್ ಟಿಕೆಟ್ ಪಕ್ಕಾ ಸಿಗಲಿದೆ. ಇನ್ನುಳಿದಂತೆ ಚೆನ್ನೈ ಸೂಪರ್ ಕಿಂಗ್ಸ್, ಸನ್ರೈಸರ್ಸ್ ಹೈದರಾಬಾದ್, ಕೊಲ್ಕತ್ತಾ ನೈಟ್ ರೈಡರ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಈಗಾಗಲೇ ಪ್ಲೇಆಫ್ ರೇಸ್ನಿಂದ ಹೊರಬಿದ್ದಿದೆ. ಒಟ್ನಲ್ಲಿ 18ನೇ ಸೀಸನ್ ಐಪಿಎಲ್ ಆಲ್ಮೋಸ್ಟ್ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದಿವೆ. ಟ್ರೋಫಿ ಎತ್ತಿ ಹಿಡಿಯೋ ರೇಸ್ಗೆ ಮೂರು ಟೀಮ್ಗಳು ಎಂಟ್ರಿ ಕೊಟ್ಟಿದ್ದು ನಾಲ್ಕನೇ ತಂಡ ಯಾರು ಅನ್ನೋ ಕುತೂಹಲ ಜೋರಾಗಿದೆ.