ಪಂಜಾಬ್ ಪರ ಕ್ಯಾಪ್ಟನ್ ಅಯ್ಯರ್ ಭರ್ಜರಿ ಬ್ಯಾಟಿಂಗ್ – ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್‌ಗೆ 11 ರನ್‌ಗಳ ರೋಚಕ ಗೆಲುವು

ಪಂಜಾಬ್ ಪರ ಕ್ಯಾಪ್ಟನ್ ಅಯ್ಯರ್ ಭರ್ಜರಿ ಬ್ಯಾಟಿಂಗ್ – ಗುಜರಾತ್ ಟೈಟನ್ಸ್ ವಿರುದ್ಧ ಪಂಜಾಬ್‌ಗೆ 11 ರನ್‌ಗಳ ರೋಚಕ ಗೆಲುವು

ಐಪಿಎಲ್​ನ ಐದನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್​ ವಿರುದ್ಧ ಗುಜರಾತ್​ ಟೈಟನ್ಸ್ ಹೀನಾಯ ಸೋಲು ಅನುಭವಿಸಿದೆ. 11 ರನ್​ಗಳ ಗೆಲುವು ಪಡೆದ ಶ್ರೇಯಸ್​ ಅಯ್ಯರ್ ನೇತೃತ್ವದ ಪಂಜಾಬ್​ ಕಿಂಗ್ಸ್, 18ನೇ ಆವೃತ್ತಿಯಲ್ಲಿ ಶುಭಾರಂಭ ಮಾಡಿದೆ.

ಇದನ್ನೂ ಓದಿ: ದೆಹಲಿಯ ಬಜೆಟ್ ಮಂಡಿಸಿದ ಸಿಎಂ ರೇಖಾ ಗುಪ್ತಾ- ಹಿಂದಿನ ಕೇಜ್ರಿವಾಲ್ ಸರ್ಕಾರಕ್ಕೆ ಟಾಂಗ್

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ಕಿಂಗ್ಸ್ ನಿಗದಿತ 20 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿತು. ಈ ಬೃಹತ್ ಗುರಿಯನ್ನು ಬೆನ್ನಟ್ಟಿದ ಗುಜರಾತ್‌ ನಿಗದಿತ ಓವರ್‌ಗಳಲ್ಲಿ 232 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಗುಜರಾತ್‌ ಪರ ಸಾಯಿ ಸುದರ್ಶನ್‌ 41 ಎಸೆತಗಳಲ್ಲಿ 6 ಸಿಕ್ಸರ್‌, 4 ಬೌಂಡರಿ ನೆರವಿಂದ 74 ರನ್, ಜೋಸ್ ಬಟ್ಲರ್ 33 ಎಸೆತಗಳಲ್ಲಿ 4 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 54 ರನ್‌ ಕಲೆ ಹಾಕಿದರು. ಶೆರ್ಫೇನ್ ರುದರ್ಫೋರ್ಡ್ 28 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್‌ ಸಿಡಿಸಿ ತಂಡಕ್ಕೆ 46 ರನ್‌ ಕೊಡುಗೆ ಕೊಟ್ಟರು. ಶುಭಮನ್‌ ಗಿಲ್‌ 14 ಎಸೆತಗಳಲ್ಲಿ 3 ಸಿಕ್ಸರ್‌, 2 ಬೌಂಡರಿ ನೆರವಿಂದ 33 ರನ್‌ ಗಳಿಸಿದರು.

ಪಂಜಾಬ್ ಪರ ಅರ್ಶದೀಪ್‌ ಸಿಂಗ್‌2 ವಿಕೆಟ್‌, ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕೊ ಜಾನ್ಸೆನ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು. ಪಂಜಾಬ್ ಪರ ನಾಯಕ ಶ್ರೇಯಸ್ ಅಯ್ಯರ್ ಕೇವಲ 42 ಎಸೆತಗಳಲ್ಲಿ 9 ಸಿಕ್ಸರ್ ಮತ್ತು 5 ಬೌಂಡರಿಗಳ ನೆರವಿನಿಂದ 97 ರನ್ ಸಿಡಿಸಿ, ಅಜೇಯರಾಗಿ ಉಳಿದರು. ಈ ಮೂಲಕ ಕೇವಲ 3 ರನ್ ಅಂತರದಲ್ಲಿ ಶತಕ ಮಿಸ್ ಮಾಡಿಕೊಂಡಿದ್ದಾರೆ. ಪ್ರಿಯಾಂಶ್ ಆರ್ಯ 23 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 47 ರನ್ ಕಲೆಹಾಕಿದರು. ಶಶಾಂಕ್ ಸಿಂಗ್ 16 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್‌ ನೆರವಿನಿಂದ 44 ರನ್ ಗಳಿಸಿ ಅಜೇಯರಾಗಿ ಉಳಿದರು. ಗುಜರಾತ್ ಪರ ಸಾಯಿ ಕಿಶೋರ್ 3 ವಿಕೆಟ್ ಪಡೆದರೆ, ಕಾಗಿಸೋ ರಬಾಡಾ ಮತ್ತು ರಷೀದ್ ಖಾನ್ ತಲಾ 1 ವಿಕೆಟ್ ಉರುಳಿಸಿದರು.

Shwetha M

Leave a Reply

Your email address will not be published. Required fields are marked *