KLಗೆ ₹2 ಕೋಟಿ.. ಉಳಿದವರಿಗೆಷ್ಟು? – 24 ಕನ್ನಡಿಗರ IPL ಅದೃಷ್ಟಪರೀಕ್ಷೆ
RCB ಸೇರ್ತಾರಾ ಕರುನಾಡ ಮಕ್ಕಳು?
ಕ್ರಿಕೆಟ್ ಲೋಕದಲ್ಲಿ ಈಗ ಐಪಿಎಲ್ ಮೆಗಾ ಆಕ್ಷನ್ನದ್ದೇ ಸದ್ದು. ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿರೋ ಹರಾಜಿನಲ್ಲಿ ಯಾರ ಮೇಲೆ ಹೈಯೆಸ್ಟ್ ಬಿಡ್ ನಡೆಯುತ್ತೆ. ಚರಿತ್ರೆ ಸೃಷ್ಟಿಸೋರು ಯಾರು? ಸೂಪರ್ ಸ್ಟಾರ್ ಪ್ಲೇಯರ್ಸ್ ಯಾವ್ಯಾವ ಟೀಂ ಸೇರ್ತಾರೆ ಅನ್ನೋ ಕ್ಯೂರಿಯಾಟಿಸಿ. ಇದೇ ಹರಾಜಿನಲ್ಲಿ ನಮ್ಮ ಕರ್ನಾಟಕದ 24 ಆಟಗಾರರೂ ಸಹ ಇದ್ದಾರೆ. ಹಾಗಾದ್ರೆ ಯಾವೆಲ್ಲಾ ಕನ್ನಡಿಗರು ಅದೃಷ್ಟ ಪರೀಕ್ಷೆ ಇಳಿದಿದ್ದಾರೆ? ಅವ್ರ ಮೂಲ ಬೆಲೆ ಎಷ್ಟು? ಟಾಪ್ ರೇಂಜ್ನಲ್ಲಿರೋ ಪ್ಲೇಯರ್ಸ್ ಯಾರು? ಯಾರ್ಯಾರ ಭವಿಷ್ಯ ಬದ್ಲಾಗುತ್ತಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಇದನ್ನೂ ಓದಿ: atsapp ವೆಡ್ಡಿಂಗ್ ಕಾರ್ಡ್ ಡೇಂಜರ್ – ಕ್ಲಿಕ್ ಮಾಡಿದ್ರೆ ಅಕೌಂಟ್ ಖಾಲಿ ಖಾಲಿ
13 ವರ್ಷದ ಬಾಲಕನಿಂದ ಹಿಡಿದು 42 ವರ್ಷದ ಸೂಪರ್ ಸ್ಟಾರ್ ಪ್ಲೇಯರ್ವರೆಗೂ ಐಪಿಎಲ್ ಆಕ್ಷನ್ನಲ್ಲಿದ್ದಾರೆ. 2025ರ ಐಪಿಎಲ್ಗೆ ಒಟ್ಟಾರೆ 1,574 ಆಟಗಾರರು ತಮ್ಮ ಹೆಸ್ರನ್ನ ನೋಂದಾಯಿಸಿಕೊಂಡಿದ್ರು. ಈ ಪೈಕಿ 574 ಮಂದಿಯನ್ನಷ್ಟೇ ಬಿಸಿಸಿಐ ಫೈನಲ್ ಮಾಡಿದೆ. ಅದ್ರಲ್ಲಿ 366 ಭಾರತೀಯರು, 208 ವಿದೇಶಿ ಕ್ರಿಕೆಟಿಗರು ಸ್ಥಾನ ಪಡೆದಿದ್ದಾರೆ. ಸೌದಿ ಅರೇಬಿಯಾದ ಜೆದ್ದಾ ನಗರದಲ್ಲಿ ನವೆಂಬರ್ 24, 25ರಂದು ಆಟಗಾರರ ಬಿಡ್ಡಿಂಗ್ ಫೆಸ್ಟಿವಲ್ ನಡೆಯಲಿದೆ. ಹತ್ತು ಫ್ರಾಂಚೈಸಿಗಳು 70 ವಿದೇಶಿಗರು ಸೇರಿ 204 ಆಟಗಾರರನ್ನು ಖರೀದಿಸಲು ಅವಕಾಶ ಇದೆ. ಈ ಮೆಗಾ ಹರಾಜಿನಲ್ಲಿ 24 ಕನ್ನಡಿಗರು ಕೂಡ ಅಖಾಡದಲ್ಲಿದ್ದಾರೆ. ಹೀಗೆ ಹರಾಜಿನಲ್ಲಿರುವವರ ಬಗ್ಗೆ ಒಂದಷ್ಟು ಮಾಹಿತಿ ನೀಡ್ತಾ ಹೋಗ್ತೇನೆ ನೋಡಿ.
ಐಪಿಎಲ್ ಹರಾಜಿನಲ್ಲಿ ಭಾರತ & ವಿದೇಶಗಳ ದಿಗ್ಗಜ ಆಟಗಾರರ ದಂಡು!
ಹೌದು. 2025ರ ಐಪಿಎಲ್ ಹಿಂದೆಂದಿಗಿಂತಲೂ ಬಾರೀ ಕುತೂಹಲ ಮೂಡಿಸಿದೆ, ದೇಶ ವಿದೇಶಗಳ ನೂರಾರು ಕ್ರಿಕೆಟರ್ಸ್ ಐಪಿಎಲ್ ಆಡೋಕೆ ಇಂಟ್ರೆಸ್ಟ್ ತೋರಿಸಿದ್ರು. ಬಟ್ ಒಂದೂವರೆ ಸಾವಿರ ಆಟಗಾರರ ಪೈಕಿ ಎಲ್ರನ್ನೂ ಫಿಲ್ಟರ್ ಮಾಡಿ ಬಿಸಿಸಿಐ ಅಂತಿಮವಾಗಿ 574 ಮಂದಿಯನ್ನಷ್ಟೇ ಸೆಲೆಕ್ಟ್ ಮಾಡಿದೆ.
ಹರಾಜಿನಲ್ಲಿ ದಿಗ್ಗಜರ ದಂಡು!
ಸದ್ಯ ಹರಾಜಿನಲ್ಲಿ ಫೈನಲ್ ಆಗಿರೋರ ಪೈಕಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದ 48 ಭಾರತೀಯರಿದ್ದಾರೆ. ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕಣಕ್ಕಿಳಿದ ವಿದೇಶಿಗರ ಆಟಗಾರರು 193 ಜನರಿದ್ದಾರೆ. ಭಾರತದ ಅನ್ ಕ್ಯಾಪ್ಡ್ ಆಟಗಾರರ ಸಂಖ್ಯೆ 318 ಇದ್ರೆ ವಿದೇಶದ ಅನ್ ಕ್ಯಾಪ್ಡ್ ಆಟಗಾರರ ಸಂಖ್ಯೆ 12 ಇದೆ. ಹಾಗೇ ಐಸಿಸಿ ಅಸೋಸಿಯೇಟ್ ರಾಷ್ಟ್ರಗಳ ಆಟಗಾರರು ಮೂವರಿದ್ದಾರೆ.
ವಿದೇಶಿ ಆಟಗಾರರ ಹವಾ!
ಆಸ್ಟ್ರೇಲಿಯಾ – 37 ಆಟಗಾರರು, ಇಂಗ್ಲೆಂಡ್‌ನ – 37 ಆಟಗಾರರು, ನ್ಯೂಜಿಲೆಂಡ್ – 24 ಆಟಗಾರರು, ದಕ್ಷಿಣ ಆಫ್ರಿಕಾ – 31 ಆಟಗಾರರು, ವೆಸ್ಟ್‌ಇಂಡೀಸ್ – 22 ಆಟಗಾರರು, ಅಫ್ಘಾನಿಸ್ತಾನ – 18 ಆಟಗಾರರು, ಬಾಂಗ್ಲಾದೇಶ – 12 ಆಟಗಾರರು, ಶ್ರೀಲಂಕಾ – 19 ಆಟಗಾರರು ಹೀಗೆ ಆಕ್ಷನ್ನಲ್ಲಿ 8 ರಾಷ್ಟ್ರಗಳ ಆಟಗಾರರು ಭಾಗಿಯಾಗಲಿದ್ದಾರೆ. ಇನ್ನು ಹರಾಜಿನಲ್ಲಿ ಕೆಲವೊಂದಷ್ಟು ಪ್ಲೇಯರ್ಸ್ ಅವ್ರ ಮೂಲಬೆಲೆಯನ್ನೂ ಫಿಕ್ಸ್ ಮಾಡಿಕೊಂಡಿದ್ದಾರೆ.
2 ಕೋಟಿ ರೂ. ಮೂಲಬೆಲೆ!
81 ಆಟಗಾರರು – 2 ಕೋಟಿ, 27 ಆಟಗಾರರು – 1.50 ಕೋಟಿ, 18 ಆಟಗಾರರು – 1.25 ಕೋಟಿ, 23 ಆಟಗಾರರು – 1 ಕೋಟಿ, ,92 ಆಟಗಾರರು – 75 ಲಕ್ಷ, 8 ಆಟಗಾರರು – 50 ಲಕ್ಷ, ,5 ಆಟಗಾರರು – 40 ಲಕ್ಷ, 320 ಆಟಗಾರರು – 30 ಲಕ್ಷ ಹೀಗೆ 30 ಲಕ್ಷ ರೂಪಾಯಿಯಿಂದ 2 ಕೋಟಿ ರೂಪಾಯಿವರೆಗೂ ತಮ್ಮ ಮೂಲಬೆಲೆಯನ್ನ ಫಿಕ್ಸ್ ಮಾಡಿಕೊಂಡಿದ್ದಾರೆ. ಹರಾಜಿನಲ್ಲಿರುವ ಅತ್ಯಂತ ಕಿರಿಯ ಪ್ಲೇಯರ್ ಭಾರತದ ವೈಭವ್ ಸೂರ್ಯವಂಶಿ. 13 ವರ್ಷದ ಸೂರ್ಯವಂಶಿ ಮೂಲಬೆಲೆ 30 ಲಕ್ಷ ರೂಪಾಯಿ. ಹಾಗೇ ಇಂಗ್ಲೆಂಡ್‌ನ ಜೇಮ್ಸ್ ಆಂಡರ್ಸನ್ ಗೆ 42 ವರ್ಷ ವಯಸ್ಸಾಗಿದ್ದು ಇವ್ರೇ ಮೊಸ್ಟ್ ಸೀನಿಯರ್ ಪ್ಲೇಯರ್. ಮೂಲಬೆಲೆ 1.25 ಕೋಟಿ ರೂಪಾಯಿ ಇದೆ. ಇನ್ನು ಇದೆಲ್ಲದ್ರ ನಡುವೆ ಹರಾಜಿನಲ್ಲಿ ಕರ್ನಾಟಕದ 24 ಪ್ಲೇಯರ್ಸ್ ಇದ್ದಾರೆ. ಅದ್ರಲ್ಲಿ ಟೀಂ ಇಂಡಿಯಾ ಆಟಗಾರ ನಮ್ಮ ಕನ್ನಡಿಗ.
ಕರ್ನಾಟಕದ 24 ಆಟಗಾರರು!
ಕೆಎಲ್ ರಾಹುಲ್ – ಮೂಲ ಬೆಲೆ 2 ಕೋಟಿ, ದೇವದತ್ ಪಡಿಕ್ಕಲ್ – ಮೂಲ ಬೆಲೆ 2 ಕೋಟಿ, ಪ್ರಸಿದ್ಧ್ ಕೃಷ್ಣ – ಮೂಲ ಬೆಲೆ 2 ಕೋಟಿ, ಮಯಾಂಕ್ ಅಗರ್ ವಾಲ್ – ಮೂಲ ಬೆಲೆ 1 ಕೋಟಿ, ಕೆ. ಗೌತಮ್ – ಮೂಲ ಬೆಲೆ 1 ಕೋಟಿ, ಮನೀಶ್ ಪಾಂಡೆ – ಮೂಲ ಬೆಲೆ 75 ಲಕ್ಷ, ಲುವ್ನಿತ್ ಸಿಸೋಡಿಯಾ – ಮೂಲ ಬೆಲೆ 30 ಲಕ್ಷ, ಸ್ಮರಣ್ ರವಿಚಂದ್ರನ್ – ಮೂಲ ಬೆಲೆ 30 ಲಕ್ಷ, ಎಲ್.ಆರ್ ಚೇತನ್ – ಮೂಲ ಬೆಲೆ 30 ಲಕ್ಷ, ಮನೋಜ್ ಭಾಂಡಗೆ – ಮೂಲ ಬೆಲೆ 30 ಲಕ್ಷ, ಅಭಿಲಾಷ್ ಶೆಟ್ಟಿ – ಮೂಲ ಬೆಲೆ 30 ಲಕ್ಷ, ವೈಶಾಖ್ ವಿಜಯ್ ಕುಮಾರ್ – ಮೂಲ ಬೆಲೆ 30 ಲಕ್ಷ, ಪ್ರವೀಣ್ ದುಬೆ – ಮೂಲ ಬೆಲೆ 30 ಲಕ್ಷ, ಮನ್ವಂತ್ ಕುಮಾರ್ – ಮೂಲ ಬೆಲೆ 30 ಲಕ್ಷ, ಶ್ರೇಯಸ್ ಗೋಪಾಲ್ – ಮೂಲ ಬೆಲೆ 30 ಲಕ್ಷ, ಹಾರ್ದಿಕ್ ರಾಜ್ – ಮೂಲ ಬೆಲೆ 30 ಲಕ್ಷ, ಅಭಿನವ್ ಮಹೋಹರ್ – ಮೂಲ ಬೆಲೆ 30 ಲಕ್ಷ, ಬಿ.ಆರ್ ಶರತ್ – ಮೂಲ ಬೆಲೆ 30 ಲಕ್ಷ, ಶ್ರೀಜಿತ್ ಕೃಷ್ಣನ್ – ಮೂಲ ಬೆಲೆ 30 ಲಕ್ಷ, ವಿದ್ವತ್ ಕಾವೇರಪ್ಪ – ಮೂಲ ಬೆಲೆ 30 ಲಕ್ಷ, ದೀಪಕ್ ದೇವಾಡಿಗ – ಮೂಲ ಬೆಲೆ 30 ಲಕ್ಷ, ವಿದ್ಯಾಧರ್ ಪಾಟೀಲ್ – ಮೂಲ ಬೆಲೆ 30 ಲಕ್ಷ, ಶುಭಾಂಗ್ ಹೆಗಡೆ – ಮೂಲ ಬೆಲೆ 30 ಲಕ್ಷ, ಸಮರ್ಥ್ ನಾಗರಾಜ್ – ಮೂಲ ಬೆಲೆ 30 ಲಕ್ಷ, ಅಲ್ಲಿಗೆ ಕರ್ನಾಟಕದ ಮೂವರು ಆಟಗಾರರು ತಮ್ಮ ಮೂಲ ಬೆಲೆಯನ್ನ 2 ಕೋಟಿಗೆ ಫಿಕ್ಸ್ ಮಾಡಿಕೊಂಡಿದ್ದಾರೆ. ಆಲ್ಮೋಸ್ಟ್ ತುಂಬಾ ಪ್ಲೇಯರ್ಸ್ 30 ಲಕ್ಷಕ್ಕೆ ಹರಾಜಿನಲ್ಲಿದ್ದಾರೆ. ಬಟ್ ಇವ್ರೆಲ್ಲರ ನಡುವೆ ಕೆಎಲ್ ರಾಹುಲ್ ಮೇಲೆ ತುಂಬಾನೇ ನಿರೀಕ್ಷೆ ಇದೆ. ಹೈಯೆಸ್ಟ್ ಅಮೌಂಟ್ಗೆ ಬಿಡ್ ಆಗೋ ಸ್ಟಾರ್ ಆಟಗಾರರ ಲಿಸ್ಟ್ನಲ್ಲಿದ್ದಾರೆ. ಅದೂ ಕೂಡ ನಮ್ಮ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರಲಿ ಅನ್ನೋದು ಅಭಿಮಾನಿಗಳ ಕನಸೂ ಹೌದು. ಫೈನಲ್ಲಾಗಿ ಯಾವ್ಯಾವ ಕನ್ನಡಿಗರು ಯಾವ್ಯಾವ ತಂಡ ಸೇರಿಕೊಳ್ತಾರೆ ಅನ್ನೋದೇ ಈಗಿರೋ ಪ್ರಶ್ನೆ.