IPL ಹರಾಜು ಬಗ್ಗೆ ಬಿಗ್ ಅಪ್ ಡೇಟ್ – 6 ಜನರ ರಿಟೇನ್ ಗೆ ಒಪ್ಪಿತಾ BCCI?
ಫ್ರಾಂಚೈಸಿ ಮಾಲೀಕರ ಆಸೆ ಈಡೇರಿತಾ?
ಭಾರತೀಯ ಕ್ರಿಕೆಟ್ ಅಭಿಮಾನಿಗಳ ಚಿತ್ತ 2025ರ ಐಪಿಎಲ್ನತ್ತಲೇ ನೆಟ್ಟಿದೆ. ಅದ್ರಲ್ಲೂ ಈ ಬಾರಿ ಮೆಗಾ ಹರಾಜು ಇರೋದ್ರಿಂದ ಫ್ರಾಂಚೈಸಿಗಳ ಐಕಾನ್ ಪ್ಲೇಯರ್ಸ್ ಎನಿಸಿಕೊಂಡಿದ್ದ ಆಟಗಾರರೇ ಬೇರೆ ಬೇರೆ ಟೀಂ ಸೇರಿಕೊಳ್ಳೋದು ಪಕ್ಕಾ ಆಗಿದೆ. ಬಟ್ ಅಭಿಮಾನಿಗಳು ಮತ್ತು ಫ್ರಾಂಚೈಸಿ ಮಾಲೀಕರನ್ನ ಕಾಡ್ತಿರೋ ಪ್ರಶ್ನೆ ಅಂದ್ರೆ ಹರಾಜು ನಿಯಮಗಳು. ಮೆಗಾ ಹರಾಜಿಗೂ ಮುನ್ನ ರಿಟೇನ್ ರೂಲ್ಸ್ ರಿಲೀಸ್ಗಾಗಿ ಎಲ್ರೂ ಕಾಯ್ತಿದ್ದಾರೆ. ಇದ್ರ ನಡುವೆ ಮುಂಬರುವ ಸೀಸನ್‌ನಲ್ಲಿ ರೈಟ್-ಟು-ಮ್ಯಾಚ್ ನಿಯಮ ಇರುವುದಿಲ್ಲ ಎನ್ನಲಾಗಿದೆ. ಅಷ್ಟಕ್ಕೂ ಮುಂದಿನ ಐಪಿಎಲ್ಗೆ ಏನೆಲ್ಲಾ ರೂಲ್ಸ್ ಇರಬಹುದು ಅನ್ನೋದನ್ನೇ ಹೇಳ್ತೇನೆ ನೋಡಿ.
ಇದನ್ನೂ ಓದಿ: ಬಾಂಗ್ಲಾ 2ನೇ ಟೆಸ್ಟ್ ಗಿಲ್ಲ ಬುಮ್ರಾ – ಕುಲ್ದೀಪ್ ಗೆ ಚಾನ್ಸ್ ಕೊಡಿ ಎಂದಿದ್ದೇಕೆ?
ಐಪಿಎಲ್ ಹೊಸ ರೂಲ್ಸ್!
18ನೇ ಸೀಸನ್ ಐಪಿಎಲ್ನಲ್ಲಿ ಏನೆಲ್ಲಾ ರೂಲ್ಸ್ ಬರಬಹುದು ಅನ್ನೋದ್ರ ಬಗ್ಗೆ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. ಈ ವರದಿ ಪ್ರಕಾರ, ಹರಾಜಿಗೂ ಮೊದಲು RTM ಅನ್ನು ನೀಡದೆ, BCCI ಪ್ರತಿ ಫ್ರಾಂಚೈಸಿಗೆ ಐದು ಆಟಗಾರರ ರಿಟೇನ್ಗೆ ಅವಕಾಶ ನೀಡುವ ಸಾಧ್ಯತೆಯಿದೆ. ಈ ರೀತಿ ಮಾಡಿದ್ರೆ ಉತ್ತಮ ಆಟಗಾರರನ್ನು ಹೊಂದಿರುವ ಫ್ರಾಂಚೈಸಿಗಳು ತಮ್ಮ ಪ್ರಬಲ 11ರ ಅರ್ಧದಷ್ಟು ಆಟಗಾರರನ್ನು ಉಳಿಸಿಕೊಳ್ಳಬಹುದು. ಇದು ಭವಿಷ್ಯದ ಸೀಸನ್‌ನಲ್ಲಿ ತಮ್ಮ ತಂಡದ ಉತ್ತಮ ಆಟಗಾರರನ್ನು ತಮ್ಮ ಬಳಿಯೇ ಇರಿಸಿಕೊಳ್ಳೋಕೆ ಸಹಾಯ ಮಾಡಲಿದೆ. ಅಲ್ಲದೇ ಬಿಸಿಸಿಐ ಅಧಿಕಾರಿಗಳ ಜೊತೆಗಿನ ಸಭೆಯಲ್ಲಿ ಫ್ರಾಂಚೈಸಿಗಳ ಮಾಲೀಕರೂ ಕೂಡ 5-6 ಆಟಗಾರರನ್ನು ಉಳಿಸಿಕೊಳ್ಳೋ ಬಗ್ಗೆಯೇ ಒಲವು ತೋರಿದ್ದರು. ಅಲ್ದೇ ಬಹುಪಾಲು ಫ್ರಾಂಚೈಸಿಗಳು ನಾಲ್ಕು ಅಥವಾ ಐದು ವರ್ಷಗಳ ಅವಧಿಗೊಮ್ಮೆ ಮೆಗಾ ಹರಾಜು ನಡೆಸುವಂತೆ ಕೇಳಿಕೊಂಡಿವೆ. ಇದರಿಂದಾಗಿ ಬಿಡ್ ಮಾಡಿದ ಪ್ರತಿಭಾವಂತ ಆಟಗಾರರನ್ನು ತಮ್ಮ ತಂಡದಲ್ಲಿ ಹೆಚ್ಚಿನ ಸಮಯ ಉಳಿಸಿಕೊಳ್ಳಬಹುದು ಅನ್ನೋದು ಅವ್ರ ವಾದ. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್, ರಾಜಸ್ಥಾನ್ ರಾಯಲ್ಸ್, ಸನ್‌ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್‌ನಂತಹ ಇತರ ಫ್ರಾಂಚೈಸಿಗಳೊಂದಿಗೆ ಕೋಲ್ಕತ್ತಾ ನೈಟ್ ರೈಡರ್ಸ್ ಮಾಲೀಕ ಶಾರುಖ್ ಖಾನ್ ಕೂಡ ಈ ನಿಯಮದ ಪರವಾಗಿದ್ರು. ಅಷ್ಟಕ್ಕೂ ಇಲ್ಲಿ ಐದು ಆಟಗಾರರನ್ನ ಉಳಿಸಿಕೊಳ್ಳೋಕೆ ಮಾಲೀಕರು ಇಂಟ್ರೆಸ್ಟ್ ತೋರಿಸ್ತಾ ಇರೋದಕ್ಕೆ ಕಾರಣ ಕೂಡ ಇದೆ. ಸ್ಟಾರ್ ಆಟಗಾರರು ಹೆಚ್ಚಚ್ಚು ವರ್ಷ ತಮ್ಮ ತಂಡದಲ್ಲೇ ಇರೋದ್ರಿಂದ ಬ್ರ್ಯಾಂಡ್ ಮೌಲ್ಯವನ್ನು ದೀರ್ಘಕಾಲದವರೆಗೆ ಕಾಪಾಡಿಕೊಳ್ಳಬಹುದು. ಆಟಗಾರರು ಆಗಾಗ್ಗೆ ಫ್ರಾಂಚೈಸಿಗಳನ್ನು ಬದಲಾಯಿಸೋದ್ರಿಂದ ಪಾಪ್ಯುಲಾರಿಟಿಯೂ ಕಡಿಮೆ ಆಗುತ್ತೆ. ಫಾರ್ ಎಕ್ಸಾಂಪಲ್ ಆರ್ಸಿಬಿ ಅಂದ್ರೆ ವಿರಾಟ್ ಕೊಹ್ಲಿ, ಚೆನ್ನೈ ಅಂದ್ರೆ ಧೋನಿ, ಮುಂಬೈ ಅಂದ್ರೆ ರೋಹಿತ್ ಹೀಗೆ.
ಒಟ್ನಲ್ಲಿ ಆಟಗಾರರನ್ನು ರಿಟೇನ್ ಮಾಡಿಕೊಳ್ಳುವುದು ಅಧಿಕೃತವಾಗಿ ಘೋಷಣೆಯಾದರೆ ಯಾವ ಫ್ರಾಂಚೈಸಿ ಯಾವ ಆಟಗಾರನನ್ನ ಉಳಿಸಿಕೊಳ್ಳುತ್ತೆ. ಯಾರನ್ನ ಹರಾಜಿಗೆ ಬಿಡ್ಬೇಕು ಅನ್ನೋದನ್ನ ಡಿಸೈಡ್ ಮಾಡಲಿದ್ದಾರೆ. ಅಲ್ದೇ ಯಂಗ್ಸ್ಟರ್ಸ್ ಮತ್ತು ಅವಕಾಶ ವಂಚಿತರು ಬೇರೆ ತಂಡಗಳನ್ನ ಸೇರಿಕೊಂಡು ಅಲ್ಲಿಯಾದ್ರೂ ಮೈದಾನಕ್ಕಿಳಿಯೋ ಅವಕಾಶ ಪಡೆಯಬಹುದು.