LSG ವಿರುದ್ಧ ಮುಂಬೈ ಇಂಡಿಯನ್ಸ್ ಸೋಲು – 12  ರನ್‌ಗಳಿಂದ ಗೆದ್ದ ಲಕ್ನೋ

LSG ವಿರುದ್ಧ ಮುಂಬೈ ಇಂಡಿಯನ್ಸ್ ಸೋಲು – 12  ರನ್‌ಗಳಿಂದ ಗೆದ್ದ ಲಕ್ನೋ

ಮುಂಬೈ ಇಂಡಿಯನ್ಸ್‌ ಹಾಗೂ ಲಕ್ನೋ ಸೂಪರ್‌ ಜೆಂಟ್ಸ್‌ ನಡುವೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ LSG 12‌ ರನ್‌ಗಳಿಂದ ರೋಚಕ ಗೆಲುವು ಸಾಧಿಸಿದೆ. ಈ ಮೂಲಕ ಲಕ್ನೋ ತಂಡ ನಾಲ್ಕು ಪಂದ್ಯಗಳಲ್ಲಿ 2ನೇ ಗೆಲುವು ದಾಖಲಿಸಿದ್ರೆ, ಹಾರ್ದಿಕ್‌ ಪಾಂಡ್ಯ ನಾಯಕತ್ವದ ಮುಂಬೈ ಇಂಡಿಯನ್ಸ್‌ 4 ಪಂದ್ಯಗಳಲ್ಲಿ 3ನೇ ಸೋಲು ಕಂಡು ಭಾರೀ ಮುಖಭಂಗ ಅನುಭವಿಸಿದೆ.

ಇದನ್ನೂ ಓದಿ: ಜಸ್ಪ್ರೀತ್ ಫಿಟ್ನೆಸ್ನಲ್ಲಿ ಶಾಕಿಂಗ್!! ಬುಮ್ರಾ IPL ಆಡೋದೆೇ ಡೌಟ್!?

ಟಾಸ್ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಲಕ್ನೋ ತಂಡ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್‌ ನಷ್ಟಕ್ಕೆ 203 ರನ್‌ ಕಲೆಹಾಕಿತು. ಈ ಬೃಹತ್‌ ಮೊತ್ತವನ್ನು ಬೆನ್ನಟ್ಟಿದ ಮುಂಬೈ ಓವರ್‌ಗಳಲ್ಲಿ ನಿಗದಿತ ಓವರ್‌ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 191 ರನ್‌ ರನ್‌ಗಳಿಸಿ ಸೋಲು ಕಂಡಿತು. ಕೊನೇ ಓವರ್‌ ಥ್ರಿಲ್ಲರ್‌ ಕೊನೆಯ ಓವರ್‌ನಲ್ಲಿ ಮುಂಬೈ ಗೆಲುವಿಗೆ 22 ರನ್‌ಗಳ ಅಗತ್ಯವಿತ್ತು. ಅತ್ತ ಹಾರ್ದಿಕ್‌ ಪಾಂಡ್ಯ ಸ್ಟ್ರೈಕ್‌ನಲ್ಲಿದ್ದರೆ, ಅವೇಶ್‌ ಖಾನ್‌ ಬೌಲಿಂಗ್‌ನಲ್ಲಿದ್ದರು. ಕೊನೇ ಓವರ್‌ ಮೊದಲ ಎಸೆತವನ್ನೇ ಹಾರ್ದಿಕ್‌ ಪಾಂಡ್ಯ ಸಿಕ್ಸರ್‌ ಚಚ್ಚಿದಾಗ ಮುಂಬೈ ಗೆದ್ದೇ ಬಿಟ್ಟಿತು ಎನ್ನುವಂತೆ ಅಭಿಮಾನಿಗಳು ಕುಣಿದು ಕುಪ್ಪಳಿಸಿದ್ರು, ಮರು ಎಸೆತದಲ್ಲಿ 2 ರನ್‌ ಕದ್ದಾಗ ಈ ಹುಮ್ಮಸ್ಸು ಇನ್ನಷ್ಟು ಹೆಚ್ಚಾಯ್ತು. ಆದ್ರೆ ಪಾಂಡ್ಯನ ಪರಾಕ್ರಮಕ್ಕೆ ಬ್ರೇಕ್‌ ಹಾಕಿದ ಅವೇಶ್‌ ಖಾನ್‌ ಮುಂದಿನ ಎರಡೂ ಎಸೆತಗಳಲ್ಲಿ ರನ್‌ ಕೊಡದೇ ಬಿಗಿ ಹಿಡಿತ ಸಾಧಿಸಿದ್ರು. 5ನೇ ಎಸೆತದಲ್ಲಿ ಕೇವಲ 1 ರನ್‌ ಮುಂಬೈಗೆ ಸೇರ್ಪಡೆ ಆಯಿತು. ಕೊನೇ ಎಸೆತದಲ್ಲೂ ಯಾವುದೇ ರನ್‌ ಬಾರದ ಕಾರಣ ಲಕ್ನೋ ತಂಡ 12 ರನ್‌ಗಳ ಗೆಲುವು ಸಾಧಿಸಿತು.

ಮುಂಬೈ ಪರ ಸೂರ್ಯಕುಮಾರ್ ಯಾದವ್ 43 ಎಸೆತಗಳಲ್ಲಿ 1 ಸಿಕ್ಸರ್‌, 9 ಬೌಂಡರಿ ನೆರವಿಂದ 67 ರನ್‌, ನಮನ್ ಧೀರ್ 24 ಎಸೆತಗಳಲ್ಲಿ 3 ಸಿಕ್ಸರ್‌, 4 ಬೌಂಡರಿ ಸಿಡಿಸಿ 46 ರನ್‌ ಕಲೆಹಾಕಿದರು. ತಿಲಕ್‌ ವರ್ಮ 25 ರನ್, ಹಾರ್ದಿಕ್‌ ಪಾಂಡ್ಯ 28 ರನ್‌ ಕೊಡುಗೆ ಕೊಟ್ಟರು.

ಲಕ್ನೋ ಪರ ಆಕಾಶ್ ದೀಪ್, ಶಾರ್ದೂಲ್ ಠಾಕೂರ್, ದಿಗ್ವೇಶ್ ಸಿಂಗ್ ರಾಠಿ, ಅವೇಶ್ ಖಾನ್ ತಲಾ ಒಂದೊಂದು ವಿಕೆಟ್‌ ಉರುಳಿಸಿದರು.

ಲಕ್ನೋ ಪರ ಮಿಚೆಲ್ ಮಾರ್ಷ್ 31 ಎಸೆತಗಳಲ್ಲಿ 9 ಬೌಂಡರಿ, ಎರಡು ಸಿಕ್ಸರ್‌ ನೆರವಿನಿಂದ 60 ರನ್‌, ಏಡೆನ್ ಮಾರ್ಕ್ರಾಮ್ 38 ಎಡೆತಗಳಲ್ಲಿ ನಾಲ್ಕು ಸಿಕ್ಸರ್‌, 2 ಬೌಂಡರಿ ನೆರವಿಂದ 53 ರನ್‌, ಆಯುಷ್ ಬಡೋನಿ 19 ಎಸೆತಗಳಲ್ಲಿ 4 ಬೌಂಡರಿ ಸಿಡಿಸಿ 30 ರನ್‌, ಡೆವಿಡ್‌ ಮಿಲ್ಲರ್‌ 14 ಎಸೆತಗಳಲ್ಲಿ 27 ರನ್‌ ಕಲೆ ಹಾಕಿದರು.

ಮುಂಬೈ ಪರ ಹಾರ್ದಿಕ್ ಪಾಂಡ್ಯ 5 ವಿಕೆಟ್‌, ವಿಘ್ನೇಶ್ ಪುತ್ತೂರು, ಅಶ್ವನಿ ಕುಮಾರ್ ಹಾಗೂ ಟ್ರೆಂಟ್ ಬೌಲ್ಟ್ ತಲಾ ಒಂದೊಂದು ವಿಕೆಟ್‌ ಕಬಳಿಸಿದರು.

Shwetha M