ಪ್ಲೇಆಫ್ಸ್ ಹೊಸ್ತಿಲಲ್ಲೇ ತಂಡಗಳಿಗೆ ಫಾರಿನ್ ಪ್ಲೇಯರ್ಸ್ ಶಾಕ್ – ರಾಷ್ಟ್ರೀಯ ಪಂದ್ಯಗಳಿಗಾಗಿ ತವರಿಗೆ ವಾಪಸ್

ಐಪಿಎಲ್ ರೀ ಶೆಡ್ಯೂಲ್ ಆಯ್ತು. ಆರ್ಸಿಬಿ ವರ್ಸಸ್ ಕೆಕೆಆರ್ದೇ ಫಸ್ಟ್ ಮ್ಯಾಚ್. ಅದೂ ಕೂಡ ಬೆಂಗಳೂರಲ್ಲೇ ಅಂತಾ ಹ್ಯಾಪಿಯಾಗಿರೋ ಫ್ಯಾನ್ಗೆ ದಿನಕ್ಕೊಂದು ಶಾಕಿಂಗ್ ಸುದ್ದಿ ಹೊರ ಬೀಳ್ತಿದೆ. ಪ್ಲೇಆಫ್ಸ್ ಹೊಸ್ತಿಲಲ್ಲಿರೋ ರೆಡ್ ಆರ್ಮಿಯಿಂದ ಪ್ರಮುಖ ಆಟಗಾರರೇ ಹೊರ ನಡೆಯುತ್ತಿದ್ದಾರೆ. ಡಬ್ಲ್ಯೂಟಿಸಿ ಫೈನಲ್, ಇಂಗ್ಲೆಂಡ್, ವೆಸ್ಟ್ ಇಂಡೀಸ್ ಸಿರೀಸ್ನಿಂದಾಗಿ ಫಾರಿನ್ ಪ್ಲೇಯರ್ಸ್ ಐಪಿಎಲ್ನಿಂದ ಹಿಂದೆ ಸರಿಯಬೇಕಾದ ಅನಿವಾರ್ಯತೆ ಸೃಷ್ಟಿ ಆಗಿದೆ.
ಇದನ್ನೂ ಓದಿ : ಕೊಹ್ಲಿ ನಿವೃತ್ತಿ ಕೊಡಿಸಿದ್ದೇ ಗಂಭೀರ್? – ಡಬಲ್ ಗೇಮ್ ಆಡಿತಾ BCCI?
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದ ಎಫೆಕ್ಟ್ ಈಗ ಐಪಿಎಲ್ಗೂ ತಟ್ಟಲಿದೆ. ಇಂಗ್ಲೆಂಡ್ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಮತ್ತು ಸೌತ್ ಆಫ್ರಿಕಾ ನಡುವಿನ ಪಂದ್ಯ ಜೂನ್ 11 ರಿಂದ ಪ್ರಾರಂಭವಾಗಲಿದೆ. ಇಲ್ಲಿ ಐಪಿಎಲ್ ಫೈನಲ್ ಪಂದ್ಯ ಜೂನ್ 3ರಂದು ನಡೆಯಲಿದೆ. ಅಂದ್ರೆ ಡಬ್ಲ್ಯೂಟಿಸಿ ಫೈನಲ್ಗಿಂತ ಒಂದು ವಾರ ಮೊದಲು ಕೊನೆಗೊಳ್ಳುತ್ತದೆ. ಸೋ ಇಂಥಾ ಟೈಮಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾದ ಆಟಗಾರರು ಆದಷ್ಟು ಬೇಗ ಇಂಗ್ಲೆಂಡ್ ತಲುಪಬೇಕಾಗುತ್ತೆ. ಪ್ರಾಕ್ಟೀಸ್ ಶುರು ಮಾಡ್ಬೇಕಾಗುತ್ತೆ. ಯಾಕಂದ್ರೆ ವೈಟ್ ಬಾಲ್ನಲ್ಲಿ ಬ್ಯುಸಿಯಾಗಿರೋ ಇವ್ರೆಲ್ಲಾ ರೆಡ್ ಬಾಲ್ ಫಾರ್ಮೆಟ್ಗೆ ಹೊಂದಿಕೊಳ್ಳೋಕೆ ಸ್ವಲಪ್ ಟೈಂ ಬೇಕಾಗುತ್ತೆ. ಇದ್ರ ಜೊತೆಗೆ ವೆಸ್ಟ್ ಇಂಡೀಸ್ ತಂಡವು ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸವನ್ನೂ ಮಾಡಬೇಕಾಗಿದೆ. ವೆಸ್ಟ್ ಇಂಡೀಸ್ ಮತ್ತು ಐರ್ಲೆಂಡ್ ನಡುವಿನ ಪಂದ್ಯಗಳು ಮೇ 21 ರಿಂದ ಮತ್ತು ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವಿನ ಪಂದ್ಯಗಳು ಮೇ 29 ರಿಂದ ಶುರುವಾಗಲಿದೆ. ಅಂದ್ರೆ ಐಪಿಎಲ್ ನಡುವೆಯೇ ಈ ಸರಣಿಗಳೂ ಕೂಡ ಆರಂಭವಾಗಿರುತ್ತೆ. ಹೀಗಾಗಿ ಐಪಿಎಲ್ನಲ್ಲಿ ಬ್ಯುಸಿಯಾಗಿರೋ ಈ ದೇಶಗಳ ಆಟಗಾರರನ್ನ ಆಯಾ ಕ್ರಿಕೆಟ್ ಮಂಡಳಿಗಳು ವಾಪಸ್ ಕರೆಸಿಕೊಳ್ಳುತ್ತವೆ.
ಇಲ್ಲಿ ವಿದೇಶಿ ಆಟಗಾರರು ಅಂತಾರಾಷ್ಟ್ರೀಯ ಪಂದ್ಯಗಳಿಗಾಗಿ ವಾಪಸ್ ಆದ್ರೆ ಅತಿ ದೊಡ್ಡ ನಷ್ಟ ಉಂಟಾಗೋದು ಆರ್ಸಿಬಿಗೇ. ಅದ್ರಲ್ಲೂ ಇಂಗ್ಲೆಂಡ್ ಮತ್ತು ವೆಸ್ಟ್ ಇಂಡೀಸ್ ಮಂಡಳಿಗಳು ತಮ್ಮ ಆಟಗಾರರನ್ನು ವಾಪಸ್ ಕರೆಸಿದ್ರೆ ಇಬ್ಬರು ಪ್ಲೇಯರ್ಸ್ನ ಆರ್ಸಿಬಿ ಕಳಿಸಿಕೊಡ್ಬೇಕಾಗುತ್ತೆ. ರೆಡ್ ಆರ್ಮಿಯ ಓಪನಿಂಗ್ ಬ್ಯಾಟ್ಸ್ಮನ್ ಫಿಲ್ ಸಾಲ್ಟ್, ಯುವ ಆಟಗಾರ ಜಾಕೋಬ್ ಬೆಥೆಲ್, ಆಲ್ರೌಂಡರ್ ಲಿಯಾಮ್ ಲಿವಿಂಗ್ಸ್ಟೋನ್ ಈ ಮೂವರು ಇಂಗ್ಲೆಂಡ್ ಪ್ಲೇಯರ್ಸ್. ಸದ್ಯ ವೆಸ್ಟ್ ಇಂಡಿಸ್ ವಿರುದ್ಧದ ಪಂದ್ಯಕ್ಕೆ ಟಿ-20, ಒಡಿಐ ಮಾದರಿ ಕ್ರಿಕೆಟ್ಗೆ ಜಾಕೊಬ್ ಬೆಥೆಲ್ ಸ್ಥಾನ ಪಡೆದಿದ್ದಾರೆ. ಟಿ-20ಗೆ ಫಿಲ್ ಸಾಲ್ಟ್ ಸೆಲೆಕ್ಟ್ ಆಗಿದ್ದಾರೆ. ಹಾಗೇ ಐರ್ಲೆಂಡ್ ವಿರುದ್ಧದ ವೆಸ್ಟ್ ಇಂಡೀಸ್ ಸರಣಿಗೆ ರೊಮ್ಯಾರಿಯೋ ಶೆಫರ್ಡ್ ಸೆಲೆಕ್ಟ್ ಆಗಿದ್ದಾರೆ. ಹೀಗಾಗಿ ಈ ಪಂದ್ಯಗಳಿಗಾಗಿ ತಮ್ಮ ರಾಷ್ಟ್ರಗಳಿಗೆ ವಾಪಸ್ ಆಗ್ಬೇಕಾಗುತ್ತೆ. ಲಿಯಾಮ್ ಲಿವಿಂಗ್ ಸ್ಟೋನ್ ಸೆಲೆಕ್ಟ್ ಆಗಿಲ್ಲದೇ ಇರೋದ್ರಿಂದ ಆರ್ಸಿಬಿಯಲ್ಲಿ ಕಂಟಿನ್ಯೂ ಆಗ್ಬೋದು. ಬಟ್ ಆಲ್ರೆಡಿ ಇವ್ರು ಫಾರ್ಮ್ ಕಳೆದುಕೊಂಡಿರೋದು ರೆಡ್ ಆರ್ಮಿಗೆ ಟೆನ್ಷನ್ ತಂದಿಟ್ಟಿದೆ.