RCB ಸ್ಪಿನ್ ಅಸ್ತ್ರ ಕೃನಾಲ್ ಪಾಂಡ್ಯ – ಚೆನ್ನೈ ಪಡೆಗೆ ಪಾಂಡ್ಯ ಸವಾಲ್

18ನೇ ಸೀಸನ್ ಐಪಿಎಲ್ನ ಮೊದಲ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ ಅವ್ರದ್ದೇ ಹೋಂ ಗ್ರೌಂಡ್ನಲ್ಲಿ ಸೋಲಿಸಿರೋ ಆರ್ಸಿಬಿಯ ಕಾನ್ಫಿಡೆನ್ಸ್ ಹೆಚ್ಚಾಗಿದೆ. ಮೊದಲ ಪಂದ್ಯದಲ್ಲಿ RCB ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡರಲ್ಲೂ ಸಾಲಿಡ್ ಪರ್ಫಾಮೆನ್ಸ್ ನೀಡಿದೆ. ಆರಂಭದಲ್ಲಿ ಹೊಡಿಬಡಿ ಆಟವಾಡ್ತಿದ್ದ ಕೆಕೆಆರ್ನ ಕಟ್ಟಿ ಹಾಕುವಲ್ಲಿ ಆರ್‌ಸಿಬಿ ಬೌಲರ್ಸ್ ಯಶಸ್ವಿಯಾಗಿದ್ರು. ಈ ಮ್ಯಾಚ್ ಮೇಲೆ ಜಾಸ್ತಿ ಇಂಪ್ಯಾಕ್ಟ್ ಮಾಡಿದ್ದು ಕೃನಾಲ್ ಪಾಂಡ್ಯ. ಕೃನಾಲ್ ರ ಪರ್ಫಾಮೆನ್ಸ್ ಬಗ್ಗೆ ಆಸ್ಟ್ರೇಲಿಯಾದ ಮಾಜಿ ಬ್ಯಾಟ್ಸ್‌ಮನ್ ಮ್ಯಾಥ್ಯೂ ಹೇಡನ್ ಕೊಂಡಾಡಿದ್ದಾರೆ. ಬೆಂಗಳೂರು ಫ್ರಾಂಚೈಸಿ ಕೃನಾಲ್ ಪಾಂಡ್ಯರನ್ನು ಆಯ್ಕೆ ಮಾಡಿ ದೊಡ್ಡ ಲಾಭ ಪಡೆದಿದೆ ಎಂದಿದ್ದಾರೆ.
ಇದನ್ನೂ ಓದಿ : ಐಪಿಎಲ್ ನಲ್ಲಿ ಧೂಳೆಬ್ಬಿಸಿದ ಶ್ರೇಯಸ್ & ಇಶಾನ್ – ಬಿಸಿಸಿಐ ಒಪ್ಪಂದ ಮತ್ತೆ ಸಿಗುತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಿದ ತಮ್ಮ ಮೊದಲ ಪಂದ್ಯದಲ್ಲೇ ಸದ್ದು ಮಾಡಿದ್ದು ಕೃನಾಲ್ ಪಾಂಡ್ಯ. 4 ಓವರ್ಗಳನ್ನ ಬೌಲ್ ಮಾಡಿ 29 ರನ್ ನೀಡಿ ಪ್ರಮುಖ 3 ವಿಕೆಟ್ಗಳನ್ನ ಪಡೆದರು. 56 ರನ್ ಗಳಿಸಿ ಸೆಟಲ್ ಆಗಿದ್ದ ಕ್ಯಾಪ್ಟನ್ ಅಜಿಂಕ್ಯ ರಹಾನೆಯನ್ನ ಮೊದ್ಲು ಪೆವಿಲಿಯನ್ ಸೇರಿಸಿದ್ರು. ಆ ನಂತ್ರ ಸೆಟಲ್ ಆಗೋ ಮೊದ್ಲೇ 6 ರನ್ಗಳಿಗೆ ವೆಂಕಟೇಶ್ ಅಯ್ಯರ್ ವಿಕೆಟ್ ಉರುಳಿಸಿದ್ರು. ಇನ್ನು ಹೊಡಿಬಡಿ ಆಟಗಾರ ರಿಂಕು ಸಿಂಗ್ರನ್ನ 12 ರನ್ಗಳಿಗೆ ಔಟ್ ಮಾಡಿದ್ರು. ಟಾಪ್ ಆರ್ಡರ್ಬ ಮೂವರು ಬ್ಯಾಟರ್ಗಳನ್ನ ಔಟ್ ಮಾಡಿದ್ರು. ಅದ್ರಲ್ಲೂ ಮಿಡಲ್ ಆರ್ಡರ್ನಲ್ಲಿ ರಿಂಕು ಹಾಗೂ ವೆಂಕಟೇಶ್ ಔಟ್ ಆಗಿದ್ದೇ ಕೆಕೆಆರ್ ಗೆ ದೊಡ್ಡ ಹೊಡೆತ ನೀಡಿತ್ತು. ಕಡಿಮೆ ಮೊತ್ತದ ರನ್ ಗಳಿಸೋಕೆ ಸಾದ್ಯವಾಯ್ತು. ಇದೀಗ ಆರ್‌ಸಿಬಿ ಮಾರ್ಚ್ 28ಕ್ಕೆ ಸಿಎಸ್ಕೆ ಎದುರು ಪಂದ್ಯವನ್ನ ಆಡಲಿದೆ. ಈ ಪಂದ್ಯದಲ್ಲೂ ಕೃನಾಲ್ ಮೇಲೆ ಹೆಚ್ಚಿನ ನಿರೀಕ್ಷೆಗಳನ್ನ ಇಟ್ಟುಕೊಳ್ಳಲಾಗಿದೆ.
ಆರ್‌ಸಿಬಿ ವರ್ಸಸ್ ಸಿಎಸ್ಕೆ ಮ್ಯಾಚ್ ನಡೆಯೋದು ಚೆನ್ನೈನ ಚೆಪಾಕ್ ಮೈದಾನದಲ್ಲಿ. ಭಾರತದಲ್ಲಿ ಅತ್ಯಂತ ಬ್ಯಾಲೆನ್ಸ್ಡ್ ಪಿಚ್ ಅಂತಾನೇ ಕರೆಸಿಕೊಳ್ಳೋ ಚೆಪಾಕ್ ಪಿಚ್ ಗೆ ಕೆಂಪು ಮಣ್ಣನ್ನ ಬಳಸಲಾಗಿದೆ. ಇಲ್ಲಿ ವೇಗಿಗಳಿಗಿಂತ ಜಾಸ್ತಿ ಸ್ಪಿನ್ನರ್ಸ್ ಸ್ನೇಹಿಯಾಗಿದೆ. ಹೀಗಾಗಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಕೃನಾಲ್ ಪಾಂಡ್ಯ ಜಾದೂ ಮಾಡಬಹುದು. ಸ್ಪಿನ್ನರ್ ಆಲ್ರೌಂಡರ್ ಆಗಿರೋ ಕೃನಾಲ್ ಪಾಂಡ್ಯ ತಮ್ಮ ಫಸ್ಟ್ ಮ್ಯಾಚ್ನಲ್ಲೇ ತಮ್ಮ ಪವರ್ ಏನು ಅನ್ನೋದನ್ನ ತೋರಿಸಿದ್ದಾರೆ. ಅಲ್ದೇ ಐಪಿಎಲ್ 2022 ರ ನಂತರದ ಪಂದ್ಯದಲ್ಲಿ ಮೂರು ವಿಕೆಟ್‌ಗಳನ್ನು ಪಡೆದ ಮೊದಲ ಆರ್‌ಸಿಬಿ ಸ್ಪಿನ್ನರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಕೃನಾಲ್‌ಗಿಂತ ಮೊದಲು, ಆರ್‌ಸಿಬಿ ಪರ ವನಿಂದು ಹಸರಂಗ ಮಾತ್ರ ಮೂರು ವಿಕೆಟ್‌ಗಳನ್ನು ಪಡೆದರು. 2022ರಲ್ಲಿ ಹೈದ್ರಾಬಾದ್ ವಿರುದ್ಧ ವನಿಂದು ಹಸರಂಗ 18 ರನ್ಗಳನ್ನ ನೀಡಿ 5 ವಿಕೆಟ್ ಉರುಳಿಸಿದ್ರು. ಹಾಗೇ ಅದೇ ವರ್ಷ ಕೆಕೆಆರ್ ವಿರುದ್ಧ 20 ರನ್ಗಳನ್ನಷ್ಟೇ ನೀಡಿ 4 ವಿಕೆಟ್ ಬೇಟೆಯಾಡಿದ್ರು. ಇದೀಗ 2025ರಲ್ಲಿ 29 ರನ್ ನೀಡಿ ಕೃನಾಲ್ ಪಾಂಡ್ಯ 3 ವಿಕೆಟ್ ಉರುಳಿಸಿದ್ದಾರೆ.
2016ರಲ್ಲಿ ಐಪಿಎಲ್ ಕರಿಯರ್ ಸ್ಟಾರ್ಟ್ ಮಾಡಿದ ಕೃನಾಲ್ ಪಾಂಡ್ಯ ಮುಂಬೈ ಪರ 2021ರವರೆಗೆ ಆಡಿದ್ದರು. ಆ ನಂತ್ರ 2022 ರಿಂದ ಎಲ್ ಎಸ್ ಜಿ ಪರ ಕಣಕ್ಕಿಳಿಯುತ್ತಿದ್ರು. ಬಟ್ ಈ ಬಾರಿ ಮೆಗಾ ಹರಾಜಿನಲ್ಲಿದ್ದ ಕೃನಾಲ್ರನ್ನ ಬೆಂಗಳೂರು ಫ್ರಾಂಚೈಸಿ 5.75 ಕೋಟಿ ರೂಪಾಯಿಗೆ ಖರೀದಿ ಮಾಡಿತ್ತು. ಇನ್ನು ಕೃನಾಲ್ ಪಾಂಡ್ಯ ಈವರೆಗೂ ಐಪಿಎಲ್‌ನಲ್ಲಿ 128 ಪಂದ್ಯಗಳನ್ನು ಆಡಿದ್ದು 1647 ರನ್ ಕಲೆ ಹಾಕಿದ್ದಾರೆ. ಹಾಗೇ 79 ವಿಕೆಟ್‌ಗಳನ್ನು ಪಡೆದಿದ್ದಾರೆ. ಆರ್ಸಿಬಿಯ ಫಸ್ಟ್ ಮ್ಯಾಚ್ನಲ್ಲೇ ಅದ್ಭುತ ಪ್ರದರ್ಶನ ನೀಡಿದ್ದು ಮುಂದಿನ ಮ್ಯಾಚ್ಗಳಲ್ಲೂ ಗೇಮ್ ಚೇಂಜಿಂಗ್ ಪರ್ಫಾಮೆನ್ಸ್ ಕೊಡೋಕೆ ರೆಡಿಯಾಗಿದ್ದಾರೆ.