ಡೆಲ್ಲಿ ಮತ್ತು ಪಂಜಾಬ್ ಪಂದ್ಯ ಮೇ 24ಕ್ಕೆ – IPLಗೆ 7 ನಗರಗಳನ್ನ ಕೈಬಿಟ್ಟ ಬಿಸಿಸಿಐ!

ಐಪಿಎಲ್ ರೀ ಶೆಡ್ಯೂಲ್ಗೂ ಮುನ್ನ ತುಂಬಾ ಅಭಿಮಾನಿಗಳನ್ನ ಕಾಡಿದ್ದ ವಿಚಾರ ಅಂದ್ರೆ ಅರ್ಧಕ್ಕೇ ನಿಂತಿದ್ದ ಪಂಜಾಬ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವನ್ನ ಮತ್ತೆ ಆಡಿಸ್ತಾರಾ ಅಥವಾ ತಲಾ ಒಂದೊಂದು ಅಂಕಗಳನ್ನ ನೀಡ್ತಾರಾ ಅನ್ನೋದು. ಕೊನೆಗೂ ಈ ಪಂದ್ಯವನ್ನ ಮರು ಆಯೋಜನೆ ಮಾಡಲು ನಿರ್ಧಾರ ಮಾಡ್ಲಾಗಿದೆ. ಮೇ 8 ರಂದು ಅರ್ಧದಲ್ಲೇ ಸ್ಥಗಿತಗೊಂಡಿದ್ದ ಪಂದ್ಯವನ್ನ 24 ರಂದು ಮತ್ತೆ ನಡೆಸಲಾಗುತ್ತೆ. ಈ ಮ್ಯಾಚ್ಗೆ ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂ ಈ ಪಂದ್ಯಕ್ಕೆ ಆತಿಥ್ಯವಹಿಸಲಿದೆ. ಆರಂಭದಲ್ಲಿ ತಲಾ ಒಂದೊಂದು ಅಂಕಗಳನ್ನ ನೀಡಲು ಬಿಸಿಸಿಐ ಮುಂದಾಗಿತ್ತು. ಆದ್ರೆ ಫ್ರಾಂಚೈಸಿ ಮಾಲೀಕರು ಪ್ಲೇಆಫ್ಸ್ ಲೆಕ್ಕಾಚಾರದಿಂದಾಗಿ ಮ್ಯಾಚ್ ಮರುನಿಗದಿಗೆ ಒತ್ತಾಯಿಸಿದ್ದಾರೆ. ಇದೇ ಕಾರಣಕ್ಕೆ ಮೇ 24ಕ್ಕೆ ಮತ್ತೆ ಉಭಯ ತಂಡಗಳು ಕಣಕ್ಕಿಳಿಯಲಿವೆ. ಸೋ ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ 2 ಅಂಕಗಳು ಸಿಗಲಿದೆ.
ಇದನ್ನೂ ಓದಿ : ಕೊಹ್ಲಿಗೆ ಆಸ್ಟ್ರೇಲಿಯಾ ಅಂದ್ರೆ ಕ್ರೇಜ್ -ಬೆಂಗಳೂರ್ ಮೇಲೆ ಸಖತ್ ಲವ್
ಪ್ರಸ್ತುತ ಟೂರ್ನಿಯ ಉಳಿದ 17 ಪಂದ್ಯಗಳನ್ನು 6 ನಗರಗಳಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಇದಕ್ಕೂ ಮುನ್ನ ಐಪಿಎಲ್ 2025ರಲ್ಲಿ 13 ನಗರಗಳಲ್ಲಿ ಆಯೋಜಿಸಲಾಗಿತ್ತು. ಇದೀಗ 7 ಸ್ಟೇಡಿಯಂಗಳನ್ನು ಕೈ ಬಿಡಲಾಗಿದ್ದು, ಉಳಿದ 17 ಪಂದ್ಯಗಳಿಗೆ 6 ಸ್ಟೇಡಿಯಂಗಳನ್ನು ಮಾತ್ರ ಆಯ್ಕೆ ಮಾಡಲಾಗಿದೆ. ಬೆಂಗಳೂರು, ಜೈಪುರ, ದೆಹಲಿ, ಲಕ್ನೋ, ಮುಂಬೈ ಮತ್ತು ಅಹಮದಾಬಾದ್ನಲ್ಲಿ ಪಂದ್ಯಾವಳಿ ಆಯೋಜಿಸಲು ನಿರ್ಧರಿಸಲಾಗಿದೆ. ಹಾಗೇ ಧರ್ಮಶಾಲಾ, ಮುಲ್ಲನ್ಪುರ್ ಹಾಗೂ ಕೊಲ್ಕತ್ತಾದ ಸ್ಟೇಡಿಯಂಗಳನ್ನು ಬಿಸಿಸಿಐ ಕೈ ಬಿಟ್ಟಿದೆ. ಈ ನಗರಗಳು ಭಾರತದ ಗಡಿಗೆ ಹತ್ತಿರದಲ್ಲಿರುವ ಕಾರಣ ಪಂದ್ಯವನ್ನು ನಡೆಸದಿರಲು ನಿರ್ಧರಿಸಲಾಗಿದೆ. ಹಾಗೇ ಗುವಾಹಟಿ, ಹೈದರಾಬಾದ್, ವಿಶಾಖಪಟ್ಟಣ ಮತ್ತು ಚೆನ್ನೈನಲ್ಲೂ ಪಂದ್ಯಗಳು ನಡೆಯೋದಿಲ್ಲ.
ಇನ್ನು ಈ ಸೀಸನ್ನಲ್ಲಿ 11 ಪಂದ್ಯಗಳಲ್ಲಿ 8 ಗೆಲುವು ಮತ್ತು 3 ಸೋಲು ಕಂಡಿರುವ ಆರ್ ಸಿಬಿಯು 16 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ. ಅಷ್ಟೇ ಅಂಕಗಳನ್ನು ಕಲೆ ಹಾಕಿರುವ ಗುಜರಾತ್ ಜೈಂಟ್ಸ್ ಫಸ್ಟ್ ಪ್ಲೇಸ್ನಲ್ಲಿದೆ. ಅಂದ್ರೆ ನೆಟ್ರನ್ ರೇಟ್ ಸ್ವಲ್ಪ ಜಾಸ್ತಿ ಇದೆ. 15 ಅಂಕ ಗಳಿಸಿರುವ ಪಂಜಾಬ್ ಕಿಂಗ್ಸ್ 3ನೇ ಸ್ಥಾನದಲ್ಲಿ, 14 ಅಂಕ ಗಳಿಸಿರುವ ಮುಂಬೈ ಇಂಡಿಯನ್ಸ್ 4ನೇ ಸ್ಥಾನದಲ್ಲಿ ಇವೆ. 13 ಅಂಕ ಗಳಿಸಿರುವ ಡೆಲ್ಲಿ ಕ್ಯಾಪಿಟಲ್ಸ್ 5, 12 ಅಂಕ ಗಳಿಸಿರುವ ಕೋಲ್ಕತಾ ನೈಟ್ ರೈಡರ್ಸ್ 6 ಮತ್ತು 10 ಅಂಕ ಗಳಿಸಿರುವ ಲಖನೌ 7ನೇ ಸ್ಥಾನದಲ್ಲಿವೆ. ಸೋ ಈ ಏಳೂ ತಂಡಗಳಿಗೂ ಪ್ಳೇಆಫ್ ಚಾನ್ಸಸ್ ಇದ್ದೇ ಇದೆ. ರೇಸ್ನಲ್ಲಿವೆ. ಬಟ್ ಈ ಸೀಸನ್ನಲ್ಲಿ ತಲಾ ಮೂರು ಮೂರು ಪಂದ್ಯಗಳನ್ನ ಮಾತ್ರ ಗೆದ್ದಿರೋ ಸನ್ ರೈಸರ್ಸ್ ಹೈದರಾಬಾದ್, ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ಪ್ಲೇ ಆಫ್ ರೇಸ್ ನಿಂದ ಹೊರಬಿದ್ದಿವೆ.