RCB ಟಿಕೆಟ್ ಇಷ್ಟೊಂದು ಕಾಸ್ಟ್ಲಿ – ಫ್ಯಾನ್ಸ್ ನಿಷ್ಠೆಯೇ ಬಂಡವಾಳವಾಯ್ತಾ?

18ನೇ ಸೀಸನ್ ಐಪಿಎಲ್ಗೆ ಕೌಂಟ್ಡೌನ್ ಶುರುವಾಯ್ತು. ಶನಿವಾರ ಹಾಲಿ ಚಾಂಪಿಯನ್ ಕೆಕೆಆರ್ ಮತ್ತು ಆರ್‌ಸಿಬಿ ನಡುವೆ ಉದ್ಘಾಟನಾ ಪಂದ್ಯ ನಡೆಯಲಿದೆ. ಎರಡು ಬಲಿಷ್ಠ ತಂಡಗಳು ಗೆಲುವಿನ ಶುಭಾರಂಭಕ್ಕಾಗಿ ಪೈಪೋಟಿ ನಡೆಸಲಿವೆ. ಮಾರ್ಚ್ 28ರಂದು ಆರ್‌ಸಿಬಿ ಚೆನ್ನೈ ವಿರುದ್ಧ ಚಿದಂಬರಂ ಸ್ಟೇಡಿಯಮ್ನಲ್ಲಿ ತನ್ನ ಎರಡನೇ ಪಂದ್ಯವನ್ನಾಡಲಿದೆ. ಆ ಬಳಿಕ ಏಪ್ರಿಲ್ 2 ರಂದು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ಮೂರನೇ ಪಂದ್ಯವನ್ನ ಗುಜರಾತ್ ವಿರುದ್ಧ ಆಡಲಿದೆ. ತನ್ನ ತವರಿನ ಮೊದಲ ಪಂದ್ಯದ ಟಿಕೆಟ್ ಮಾರಾಟವನ್ನ ಫ್ರಾಂಚೈಸಿ ಈಗ್ಲೇ ಶುರು ಮಾಡಿದೆ.
ಇದನ್ನೂ ಓದಿ : ದುಬಾರಿಯಾಯ್ತು ಆರ್‌ಸಿಬಿ ಮ್ಯಾಚ್ ಟಿಕೆಟ್ ದರ! – ಕನಿಷ್ಠ, ಗರಿಷ್ಠ ಬೆಲೆ ಎಷ್ಟು ಗೊತ್ತಾ?
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ ತವರಿನ ಪಂದ್ಯಗಳಿಗೆ ಆನ್ ಲೈನ್ ಮೂಲಕ ಟಿಕೆಟ್ ಮಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಟಿಕೆಟ್ ಸೋಲ್ಡ್ ಔಟ್ ಆಗಿವೆ. ಒಂದು ಅಕೌಂಟ್ ಮೂಲಕ ಕೇವಲ 2 ಟಿಕೆಟ್ ಗಳನ್ನ ಮಾತ್ರ ಬುಕ್ ಮಾಡಬಹುದು. ಟಿಕೆಟ್ ಒಂದ್ಸಲ ಬುಕ್ ಆದ್ಮೇಲೆ ಮತ್ತೆ ಕ್ಯಾನ್ಸಲ್ ಮಾಡಿದ್ರೆ ಹಣ ವಾಪಸ್ ಕೊಡೋದಿಲ್ಲ. ಇನ್ನೂ ಕೆಲ ಟಿಕೆಟ್‌ಗಳನ್ನು ಮೈದಾನಕ್ಕೆ ಹೋಗಿಯೇ ಖರೀದಿಸಬಹುದಾಗಿದೆ.. ಆನ್‌ಲೈನ್ ಟಿಕೆಟ್ ಬುಕಿಂಗ್‌ಗಾಗಿ ಕೆಲವು ಅಧಿಕೃತ ವೆಬ್ಸೈಟ್ಗಳಿದ್ದು, ಅಲ್ಲಿಂದ ನೀವು ಟಿಕೆಟ್‌ಗಳನ್ನು ಖರೀದಿಸಬಹುದು. ಮೊದಲನೆಯದು IPLT20.com, ಇದು IPL ನ ಅಧಿಕೃತ ವೆಬ್‌ಸೈಟ್ ಆಗಿದೆ. ಇದಲ್ಲದೆ, BookMyShow, Paytm Insider ಮತ್ತು TicketGenie ನಲ್ಲಿ ಆನ್‌ಲೈನ್ ಟಿಕೆಟ್ ಬುಕಿಂಗ್ ಸೌಲಭ್ಯ ಲಭ್ಯವಿದೆ. ಸಾಮಾನ್ಯ, ಪ್ರೀಮಿಯಂ ಮತ್ತು ವಿಐಪಿ ಹೀಗೆ 3 ವಿಭಾಗಗಳ ಆಸನ ವ್ಯವಸ್ಥೆ ಇರಲಿದೆ. ಅದರಲ್ಲಿ ನಿಮಗೆ ಬೇಕಾದ ಆಸನಗಳನ್ನು ನೀವು ಆಯ್ಕೆ ಮಾಡಬಹುದು. ಬಳಿಕ ಹೆಸರು, ಇಮೇಲ್, ಫೋನ್ ಸಂಖ್ಯೆಯಂತಹ ನಿಮ್ಮ ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಡೆಬಿಟ್/ಕ್ರೆಡಿಟ್ ಕಾರ್ಡ್, ಯುಪಿಐ ಅಥವಾ ನೆಟ್ ಬ್ಯಾಂಕಿಂಗ್ ಮೂಲಕ ಹಣವನ್ನು ಪಾವತಿಸಬೇಕು. ಆ ಬಳಿಕ ಇಮೇಲ್ ಅಥವಾ SMS ಮೂಲಕ ಕನ್ಫರ್ಮೇಷನ್ ಮೆಸೇಜ್ ಬರುತ್ತೆ. ಇಲ್ಲದೇ ಇದ್ರೂ ಡೈಕೆಕ್ಟ್ ಸ್ಟೇಡಿಯಮ್ಗಳಿಗೆ ಹೋಗಿಯೂ ಟಿಕೆಟ್ಗಳನ್ನ ಖರೀದಿ ಮಾಡಬಹುದು.
ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಬೆಂಗಳೂರಲ್ಲಿ ನಡೆಯಲಿರುವ ಮೊದಲ ನಾಲ್ಕು ಪಂದ್ಯಗಳ ಟಿಕೆಟ್ಗಳನ್ನ ಮಾತ್ರ ಮಾರಾಟ ಮಾಡ್ತಿದೆ. ಈ 4 ಪಂದ್ಯಗಳ ಟಿಕೆಟ್‌ಗಳನ್ನು ಮಾತ್ರ ಆರ್‌ಸಿಬಿ ಫ್ರಾಂಚೈಸಿಯ ಅಧಿಕೃತ ವೆಬ್‌ಸೈಟ್ ಮೂಲಕ ಖರೀದಿಸಬಹುದಾಗಿದೆ. ಬಟ್ ವಿಷ್ಯ ಏನಂದ್ರೆ ನೀವು ಪ್ರತೀ ವರ್ಷದ ಶೆಡ್ಯೂಲ್ ಓಪನ್ ಮಾಡಿದ್ರೂ ಬೆಂಗಳೂರು ತಂಡದ ಮ್ಯಾಚ್ಗಳ ಪಂದ್ಯದ ಟಿಕೆಟ್ಗಳೇ ಹೆಚ್ಚು ರೇಟ್ ಫಿಕ್ಸ್ ಮಾಡ್ಲಾಗುತ್ತೆ. ಅದ್ರಲ್ಲೂ ಬೆಂಗಳೂರಲ್ಲಿ ಮ್ಯಾಚ್ ನಡೆದ್ರಂತೂ ಮುಗ್ದೇ ಹೋಯ್ತು. ಈ ವರ್ಷವೂ ಅದೇ ಆಗ್ತಿದೆ. ಚಿನ್ನಸ್ವಾಮಿ ಮೈದಾನದ ಪಿ2 ಸ್ಟ್ಯಾಂಡ್ನಲ್ಲಿ ಒಂದು ಟಿಕೆಟ್ಗೆ 58,800 ರೂಪಾಯಿ ಬೆಲೆ ನಿಗಧಿ ಪಡಿಸಲಾಗಿದ್ರೆ, ಪ್ಲಾಟಿನಮ್ ಲಾಂಚ್ನ ಟಿಕೆಟ್ ಬೆಲೆ 32,500 ಆಗಿದೆ. ಪೆವಿಲಿಯನ್ ಟೆರೆಸ್ನ ಒಂದು ಟಿಕೆಟ್ ಬೆಲೆ 19500 ಆಗಿದ್ರೆ, ಇ ಎಕ್ಸಿಕ್ಯುಟಿವ್ ಲಾಂಚ್ ಹಾಗೂ ಗ್ರ್ಯಾಂಡ್ ಟೆರೆಸ್ನಲ್ಲಿ 13 ಸಾವಿರ ರೂಪಾಯಿಯಾಗಿದೆ. P1 ಅನೆಕ್ಸ್ನಲ್ಲಿ 7,800, GT ಅನೆಕ್ಸ್ನಲ್ಲಿ 5,200, ಡಿ ಕಾರ್ಪೋರೇಟ್ ಹಾಗೂ ಬಿ ಮತ್ತು ಸಿ ಸ್ಟ್ಯಾಂಡ್ನಲ್ಲಿ 4,290 ಎಂದು ನಿಗದಿ ಪಡಿಸಲಾಗಿದೆ. ಎ ಸ್ಟ್ಯಾಂಡ್ನ ಒಂದು ಟಿಕೆಟ್ ಬೆಲೆ 2990 ರೂಪಾಯಿಗಳಾಗಿವೆ.
ಮ್ಯಾಚ್ ಗೆಲ್ಲೀ ಬಿಡ್ಲಿ ಅಭಿಮಾನಿಗಳು ಯಾವತ್ತೂ ಟೀಮ್ನ ಬಿಟ್ಟು ಕೊಡಲ್ಲ. ಇದೇ ಕಾರಣಕ್ಕೋ ಏನೋ ಫ್ರಾಂಚೈಸಿ ಫ್ಯಾನ್ಸ್ ಬಳಿ ಸುಲಿಗೆ ಮಾಡ್ತಿದೆ. ಅನ್ಬಾಕ್ಸ್ ಇವೆಂಟ್ ನಲ್ಲೂ ಕೂಡ ಟಿಕೆಟ್ ಇಟ್ಟು ಹಣ ಕಲೆಕ್ಟ್ ಮಾಡ್ಕೊಂಡಿದೆ. ಸ್ಟೇಡಿಯಂಗೆ ಎಂಟ್ರಿಯಾಗೋ ಟಿಕೆಟ್ ಬೆಲೆ ಕನಿಷ್ಟ 2 ಸಾವಿರ ಇತ್ತು. ಸ್ಟೇಡಿಯಂ ಹೋಗದೇ ಆನ್‌ಲೈನ್ ನಲ್ಲಿ ಇವೆಂಟ್ ನೋಡೋಕೆ ಕೂಡ ಆರ್‌ಸಿಬಿ ಆ್ಯಪ್ನಲ್ಲಿ 99 ರೂಪಾಯಿ ಚಾರ್ಜ್ ಮಾಡಲಾಗಿತ್ತು. ಹೀಗೆ ಕಂಡಕಂಡಲ್ಲೆಲ್ಲಾ ಹಣ ಮಾಡ್ಕೊಳ್ಳೋದೇ ಕಾಯಕ ಮಾಡ್ಕೊಂಡಿದ್ದಾರೆ.