ಆರ್ ಸಿಬಿಗೆ ಮಿಡಲ್ ಆರ್ಡರ್ ಬ್ಯಾಟಿಂಗ್ ಟೆನ್ಷನ್ – ಲಕ್ನೋ ವಿರುದ್ಧದ ಪಂದ್ಯಕ್ಕೆ ಏನೆಲ್ಲಾ ಸವಾಲ?

ಆರ್ಸಿಬಿ ಜರ್ನಿ ಇಷ್ಟು ದಿನದ್ದೇ ಒಂದು ಲೆಕ್ಕ ಇನ್ಮುಂದಿನ ಲೆಕ್ಕವೇ ಇನ್ನೊಂದು ಥರ ಅನ್ನೋ ಹಾಗಿದೆ. ಕೀ ಪ್ಲೇಯರ್ಗಳ ಇಂಜುರಿ, ಫಾರ್ಮ್ನಲ್ಲಿ ಇದ್ದವ್ರ ರಿಪ್ಲೇಸ್ಮೆಂಟ್ ಹೊಡೆತ ಕೊಡುತ್ತಾ ಅನ್ನೋ ಆತಂಕ ಕಾಡ್ತಿದೆ. ಈ ಬಾರಿಯ ಐಪಿಎಲ್ನ ಮೊದಲಾರ್ಧದಲ್ಲಿ ಕಾಣಿಸಿಕೊಂಡಿದ್ದ ಜೋಶ್ ಹೇಝಲ್ವುಡ್, ಆ ಬಳಿಕ ತವರಿಗೆ ತೆರಳಿದ್ದರು. ಭುಜದ ನೋವಿನ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಇದೀಗ ಸಂಪೂರ್ಣ ಫಿಟ್ನೆಸ್ನೊಂದಿಗೆ ಮರಳಿದ್ದಾರೆ. ಅಲ್ಲದೆ ಆರ್ಸಿಬಿ ಪರ ಅಭ್ಯಾಸವನ್ನು ಸಹ ಆರಂಭಿಸಿದ್ದಾರೆ. ಆರ್ಸಿಬಿ ಪರ ಕಳೆದ 10 ಪಂದ್ಯಗಳಲ್ಲಿ 36.5 ಓವರ್ಗಳನ್ನು ಎಸೆದಿದ್ದ ಹೇಝಲ್ವುಡ್ ಒಟ್ಟು 18 ವಿಕೆಟ್‌ಗಳನ್ನು ಕಬಳಿಸಿ ಮಿಂಚಿದ್ದರು. ಇದೀಗ ಅವರ ಆಗಮನವು ಆರ್ಸಿಬಿ ಬೌಲಿಂಗ್ ಬಲಿಷ್ಠತೆಯನ್ನು ಹೆಚ್ಚಿಸಿದೆ. ಸೋ ಮಸ್ಟ್ ವಿನ್ ಮ್ಯಾಚ್ ಆಗಿರೋ ಲಕ್ನೋ ವಿರುದ್ಧ ಆರ್ಸಿಬಿಯ ಪ್ಲೇಯಿಂಗ್ 11 ಹೇಗಿರಬಹುದು?
ಇದನ್ನೂ ಓದಿ : RCBಗೆ ಬದಲಿ ಆಟಗಾರರ ಟೆನ್ಷನ್ – LSG ಸದೆ ಬಡಿದ್ರೆ ಟಾಪ್-2 ಫಿಕ್ಸ್
ಲಕ್ನೋ ವಿರುದ್ಧ ಸಂಭಾವ್ಯ ಪ್ಲೇಯಿಂಗ್ 11
ವಿರಾಟ್ ಕೊಹ್ಲಿ
ಫಿಲ್ ಸಾಲ್ಟ್
ಮಯಾಂಕ್ ಅಗರ್ವಾಲ್
ರಜತ್ ಪಟಿದಾರ್
ಲಿಯಾಮ್ ಲಿವಿಂಗ್ ಸ್ಟೋನ್
ಜಿತೇಶ್ ಶರ್ಮಾ
ರೊಮ್ಯಾರಿಯೋ
ಕೃನಾಲ್ ಪಾಂಡ್ಯ
ಭುವನೇಶ್ವರ್ ಕುಮಾರ್
ಜೋಶ್ ಹೇಜಲ್‌ವುಡ್
ಯಶ್ ದಯಾಳ್
ಆರಂಭದ ಪಂದ್ಯಗಳಲ್ಲಿ ಆರ್ಸಿಬಿ ಟಾಪ್ ಬ್ಯಾಟರ್ಸ್ ಜೊತೆ ಮಿಡಲ್ ಆರ್ಡರ್ ಕೂಡ ಸ್ಟ್ರಾಂಗ್ ಆಗಿತ್ತು. ಬಟ್ ಹೈದ್ರಾಬಾದ್ ವಿರುದ್ಧದ ಪಂದ್ಯದ್ಲಲಿ ಮಿಡಲ್ ಆರ್ಡರ್ ಬ್ಯಾಟರ್ಸ್ ಕೈಕೊಟ್ಟಿದ್ರು. ಕೊನೆಯ ಹದಿನಾರು ರನ್‌ಗಳಿಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡಿದ್ರು. ಪಾಟಿದಾರ್, ಜಿತೇಶ್ ಕಡೆಯಿಂದ ಹೇಳಿಕೊಳ್ಳುವಂತ ಇನ್ನಿಂಗ್ಸ್ ಬರ್ತಿಲ್ಲ. ಕೃನಾಲ್ ಕೂಡ ಜಸ್ಟ್ ಬೌಲರ್ ಆಗಿದ್ದಾರೆ. ಟಿಮ್ ಡೇವಿಡ್ ಕೂಡ ಇಲ್ದೇ ಇರೋದು ಹೊಡೆತ ಕೊಡಲಿದೆ.
ಅಷ್ಟಕ್ಕೂ ಈಗಾಗ್ಲೇ ಪ್ಲೇಆಫ್ನಿಂದ ಹೊರಬಿದ್ದಿರೋ ಲಕ್ನೋಗೆ ಆರ್ಸಿಬಿ ವಿರುದ್ಧದ ಮ್ಯಾಚ್ ಗೆದ್ರೂ ಸೋತ್ರೂ ನೋ ಲಾಸ್. ಯಾಕಂದ್ರೆ ಈಗಾಗ್ಲೇ ಪ್ಲೇಆಫ್ ರೇಸ್ನಿಂದ ಹೊರ ಬಿದ್ದಿದೆ. ಬಟ್ ಸೀಸನ್ನಲ್ಲಿ ಒಂದು ಸ್ಥಾನ ಮೇಲಕ್ಕೇರೋಕೆ ಅವಕಾಶ ಇದೆ. ಅಂದ್ರೆ ಪ್ರಸ್ತುತ 12 ಅಂಕಗಳೊಂದಿಗೆ ಲಕ್ನೋ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದೆ. ಒಂದು ವೇಳೆ ಆರ್ಸಿಬಿ ವಿರುದ್ಧ ಗೆದ್ರೆ 14 ಅಂಕಗಳು ಸಿಕ್ಕಂತಾಗುತ್ತೆ. ಆಗ 13 ಅಂಕಗಳೊಂದಿಗೆ 6ನೇ ಸ್ಥಾನದಲ್ಲಿರೋ ಹೈದ್ರಾಬಾದ್ನ ಬೀಟ್ ಮಾಡಿ ಲಕ್ನೋ ಆರನೇ ಸ್ಥಾನಕ್ಕೆ ಜಂಪ್ ಆಗಬಹುದು. ಹೀಗಾಗಿ ಈ ಮ್ಯಾಚ್ ಲಕ್ನೋ ಪಾಲಿಗೆ ಪ್ಯೂರ್ ಪ್ರತಿಷ್ಠೆಯಾಗಲಿದೆ. ಅದೂ ಅಲ್ದೇ ಕಳೆದ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಸೋಲಿಸಿ ಫುಲ್ ಕಾನ್ಫಿಡೆಂಟಾಗಿ ಕಣಕ್ಕಿಳಿಯಲಿದೆ. ಈ ಋತುವಿನಲ್ಲಿ LSG ಪರ ಅತ್ಯುತ್ತಮ ಪ್ರದರ್ಶನ ನೀಡಿದ ಐಡೆನ್ ಮಾರ್ಕ್ರಮ್, ಮಿಚೆಲ್ ಮಾರ್ಷ್ ಮತ್ತು ನಿಕೋಲಸ್ ಪೂರನ್ 2 ವಿಕೆಟ್ ನಷ್ಟಕ್ಕೆ 235 ರನ್ ಗಳಿಸಿದ್ರು. ಇದೇ ಮೊಮೆಂಟಮ್ ಕಂಟಿನ್ಯೂ ಆದ್ರೆ ಆರ್ಸಿಬಿಗೆ ಗೆಲುವಿಗೆ ಅಡ್ಡಗಾಲು ಆಗೋದ್ರಲ್ಲಿ ಡೌಟೇ ಇಲ್ಲ.
ಇನ್ನು ಐಪಿಎಲ್ನಲ್ಲಿ ಇದುವರೆಗೆ ಲಕ್ನೋ ಮತ್ತು ಬೆಂಗಳೂರು ತಂಡಗಳು 5 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಯಾಕಂದ್ರೆ ಲಕ್ನೋ ಫ್ರಾಂಚೈಸಿ ಐಪಿಎಲ್ಗೆ ಕಾಲಿಟ್ಟಿದ್ದೇ 2022ರಲ್ಲಿ. ಸೋ ಕಳೆದ ಮೂರು ವರ್ಷಗಳಲ್ಲಿ 5 ಬಾರಿ ಕಣಕ್ಕಿಳಿದಿವೆ. ಈ ಸೀಸನ್ನಲ್ಲಿ ಉಭಯ ತಂಡಗಳೂ ಮೊದಲ ಬಾರಿಗೆ ಎದುರು ಬದುರಾಗ್ತಿದೆ. ಇನ್ನು ಆಡಿರೋ 5 ಮ್ಯಾಚ್ಗಳಲ್ಲಿ ಆರ್ಸಿಬಿ 3ರಲ್ಲಿ ವಿನ್ ಆಗಿದೆ. ಲಕ್ನೋ ಎರಡು ಸಲ ಗೆಲುವು ಕಂಡಿದೆ.