SRH ವಿರುದ್ಧ ಗುಜರಾತ್ ಗೆ ಭರ್ಜರಿ ಗೆಲುವು –  ಪ್ಲೇ ಆಫ್​ನಿಂದ ಹೊರ ಬಿದ್ದ ಸನ್​ರೈಸರ್ಸ್​ ಹೈದ್ರಾಬಾದ್​

SRH ವಿರುದ್ಧ ಗುಜರಾತ್ ಗೆ ಭರ್ಜರಿ ಗೆಲುವು –  ಪ್ಲೇ ಆಫ್​ನಿಂದ ಹೊರ ಬಿದ್ದ ಸನ್​ರೈಸರ್ಸ್​ ಹೈದ್ರಾಬಾದ್​

ಗುಜರಾತ್‌ ಟೈಟಾನ್ಸ್‌ ಹಾಗೂ ಸನ್‌ರೈಸರ್ಸ್‌ ಹೈದರಾಬಾದ್‌ ನಡುವೆ ನಡೆದ ಹೈವೋಲ್ಟೇಜ್‌ ಮ್ಯಾಚ್‌ನಲ್ಲಿ ಜಿಟಿ ಗೆದ್ದು ಬೀಗಿದೆ. ಎಸ್‌ಆರ್‌ಹೆಚ್‌ ವಿರುದ್ಧ  ಗುಜರಾತ್‌ 38 ರನ್‌ಗಳ ಭರ್ಜರಿ ಜಯ ಸಾಧಿಸಿದೆ.

ಇದನ್ನೂ ಓದಿ: ದಾಸ ಈಗ ಫಿಟ್‌ ಆಂಡ್‌ ಫೈನ್‌! – ಡೆವಿಲ್ ಶೂಟಿಂಗ್‌ ಮಧ್ಯೆ ದರ್ಶನ್‌ ರೇಂಜ್‌ ರೋವರ್‌ ಕಾರ್‌ನಲ್ಲಿ ಬಿಂದಾಸ್‌ ಡ್ರೈವಿಂಗ್‌

ಟಾಸ್‌ ಸೋತು ಮೊದಲು ಬ್ಯಾಟಿಂಗ್‌ ಮಾಡಿದ ಗುಜರಾತ್‌ 6 ವಿಕೆಟ್‌ ನಷ್ಟಕ್ಕೆ 224 ರನ್‌ ಗಳಿಸಿತು. ಕಠಿಣ ಸವಾಲನ್ನು ಬೆನ್ನಟ್ಟಿದ ಹೈದರಾಬಾದ್‌ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 186 ರನ್‌ ಗಳಿಸಿ ಸೋಲನ್ನು ಒಪ್ಪಿಕೊಂಡಿತು.

ಹೈದರಾಬಾದ್‌ ಆರಂಭ ಉತ್ತಮವಾಗಿತ್ತು. ಮೊದಲ ವಿಕೆಟಿಗೆ ಟ್ರಾವಿಸ್‌ ಹೆಡ್‌ ಮತ್ತು ಅಭಿಶೇಕ್‌ ಶರ್ಮಾ 27 ಎಸೆತಗಳಲ್ಲಿ 49 ರನ್‌ ಜೊತೆಯಾಟವಾಡಿದ್ದರು. ಹೆಡ್‌ 20 ರನ್‌ ಗಳಿಸಿ ಔಟಾದರೆ ಇಶನ್‌ ಕಿಶನ್‌ 13 ರನ್‌ ಗಳಿಸಿ ಔಟಾಗುವ ಮೂಲಕ ಮತ್ತೆ ವಿಫಲರಾದರು.

ನಂತರ ಅಭಿಶೇಕ್‌ ಶರ್ಮಾ ಮತ್ತು ಕ್ಲಾಸೆನ್‌ 33 ಎಸೆತಗಳಲ್ಲಿ 57 ರನ್‌ ಜೊತೆಯಾಟವಾಡಿದರು. ಉತ್ತಮವಾಗಿ ಆಡುತ್ತಿದ್ದ ಅಭಿಶೇಕ್‌ ಶರ್ಮಾ 74 ರನ್‌(41 ಎಸೆತ, 4 ಬೌಂಡರಿ, 6 ಸಿಕ್ಸ್‌ ಹೊಡೆದು) ಔಟಾದರು. ಶರ್ಮಾ ಔಟಾದ ಬೆನ್ನಲ್ಲೇ ಹೈದರಾಬಾದ್‌ ಕ್ಲಾಸೆನ್‌, ಅಂಕಿತ್‌ ವರ್ಮಾ, ಮೆಂಡೀಸ್‌ ಔಟಾದರು. ನಿತಿಶ್‌ ಕುಮಾರ್‌ ರೆಡ್ಡಿ ಔಟಾಗದೇ 21 ರನ್‌, ಪ್ಯಾಟ್‌ ಕಮಿನ್ಸ್‌ ಔಟಾಗದೇ ಔಟಾಗದೇ 19 ರನ್‌ (10 ಎಸೆತ, 1 ಬೌಂಡರಿ, 1 ಸಿಕ್ಸ್‌ ) ಹೊಡೆದರು.

ಸಿರಾಜ್‌ ಮತ್ತು ಪ್ರಸಿದ್ಧ್‌ ಕೃಷ್ಣ ತಲಾ 2 ವಿಕೆಟ್‌ ಪಡೆದರೆ ಇಶಾಂತ್‌ ಶರ್ಮಾ ಮತ್ತು ಜೆರಾಲ್ಡ್ ಕೋಟ್ಜೀ ತಲಾ ಒಂದೊಂದು ವಿಕೆಟ್‌ ಪಡೆದರು.

ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ಪರ ಆರಂಭಿಕ ಆಟಗಾರರಾದ ಸಾಯಿ ಸುದರ್ಶನ್‌ ಮತ್ತು ನಾಯಕ ಶುಭಮನ್‌ ಗಿಲ್‌ 41 ಎಸೆತಗಳಲ್ಲಿ 87 ರನ್‌ ಜೊತೆಯಾಟವಾಡಿದರು. ಸಾಯಿ ಸುದರ್ಶನ್‌ 48 ರನ್‌(23 ಎಸೆತ, 9 ಬೌಂಡರಿ ಹೊಡೆದು ಔಟಾದರು. ನಂತರ ಎರಡನೆ ವಿಕೆಟಿಗೆ ಗಿಲ್‌ ಮತ್ತು ಜೋಸ್‌ ಬಟ್ಲರ್‌ 37 ಎಸೆತಗಳಲ್ಲಿ 62 ರನ್‌ ಹೊಡೆದರು.

ಗಿಲ್‌ 76 ರನ್‌(38 ಎಸೆತ, 10 ಬೌಂಡರಿ, 2 ಸಿಕ್ಸ್‌) ಗಳಿಸಿದ್ದಾಗ ರನೌಟ್‌ ಆದರು. ಬಟ್ಲರ್‌ 64 ರನ್‌(37 ಎಸೆತ, 3 ಬೌಂಡರಿ, 4 ಸಿಕ್ಸ್‌) ಹೊಡೆದು ಕ್ಯಾಚ್‌ ನೀಡಿ ಹೊರನಡೆದರು.

Shwetha M

Leave a Reply

Your email address will not be published. Required fields are marked *