IND Vs PAK ದಾಖಲೆ ಮುರಿದ RCB – IPL ಫೈನಲ್ ಮ್ಯಾಚ್ ನೋಡಿದವರೆಷ್ಟು?
ಚೊಚ್ಚಲ ಕಪ್.. ರಜತ್ ಪಡೆ ರೆಕಾರ್ಡ್

ಐಪಿಎಲ್ನಲ್ಲಿ 10 ಫ್ರಾಂಚೈಸಿಗಳು ಇದ್ರೂ ಕೂಡ ಆರ್‌ಸಿಬಿ ಅಂದ್ರೆ ಒಂದು ಗತ್ತು ಒಂದು ಗಮ್ಮತ್ತು. ಬೆಂಗಳೂರು ಟೀಂ ಮ್ಯಾಚ್ ಆಡ್ತಿದೆ ಅಂದ್ರೆ ಅದು ಯಾವುದೇ ಸ್ಟೇಡಿಯಂ ಆಗಿದ್ರೂ ಫುಲ್ ಆಗೋದು ಪಕ್ಕಾ. ಇನ್ನು ವ್ಯೂವರ್ಶಿಪ್ ಅಂತಾ ಬಂದಾಗ್ಲೂ ರಾಯಲ್ ಪಡೆಯದ್ದೇ ಮೇಲುಗೈ. ಇದೀಗ ಆರ್‌ಸಿಬಿ ವರ್ಸಸ್ ಪಂಜಾಬ್ ನಡುವಿನ ಐಪಿಎಲ್ ಫೈನಲ್ ಪಂದ್ಯ ಹೊಸ ಇತಿಹಾಸ ಸೃಷ್ಟಿಸಿದೆ. ಅಂತಾರಾಷ್ಟ್ರೀಯ ಪಂದ್ಯಗಳ ದಾಖಲೆಯನ್ನೇ ಬ್ರೇಕ್ ಮಾಡಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಂ ಐಪಿಎಲ್ನಲ್ಲಿ ಒಂದು ಬ್ರ್ಯಾಂಡ್ ಆಗಿ ಬೆಳೆದಿದೆ. ಸತತ 17 ವರ್ಷಗಳ ಕಾಲ ಕಪ್ ಗೆಲ್ಲದೆಯೂ ಆರ್‌ಸಿಬಿ ಟೀಂ ವ್ಯಾಲ್ಯೂ ಟಾಪ್ನಲ್ಲೇ ಇದೆ. ಅದ್ರಲ್ಲೂ ಈ ಸೀಸನ್ನಲ್ಲಿ ಕಪ್ ಗೆದ್ದ ಮೇಲಂತೂ ಪಾಪ್ಯುಲಾರಿಟಿ ಮತ್ತಷ್ಟು ಹೆಚ್ಚಾಗಿದೆ. ಆರ್‌ಸಿಬಿ ಕಪ್ ಗೆಲ್ಲಲಿ ಅಂತಾ ಬರೀ ಮ್ಯಾನೇಜ್ಮೆಂಟ್, ಆಟಗಾರರು ಮಾತ್ರ ಅಲ್ಲ. ಇಡೀ ಜಗತ್ತೇ ಕಾಯ್ತಿತ್ತು ಅನ್ನೋದು ಐಪಿಎಲ್ ಫೈನಲ್ ಪಂದ್ಯದಿಂದ ಗೊತ್ತಾಗಿದೆ. ಯಾಕಂದ್ರೆ ದಾಖಲೆಯ ಮಟ್ಟದಲ್ಲಿ ಜನ ಪಂದ್ಯವನ್ನ ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ : PAK ಕ್ರಿಕೆಟ್ ನಲ್ಲಿ ಅಲ್ಲೋಲ ಕಲ್ಲೋಲ – ತ್ರಿವಳಿ ಸ್ಟಾರ್ಸ್ ಗೆ PCB ಗೇಟ್ ಪಾಸ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಐಪಿಎಲ್ 2025 ರ ಫೈನಲ್ ಪಂದ್ಯ ಭಾರತದಲ್ಲಿ ಟಿವಿ ರೇಟಿಂಗ್ಸ್ ನಲ್ಲಿ ವೀಕ್ಷಕರ ದಾಖಲೆ ಬರೆದಿದೆ. ಬಾರ್ಕ್ ಅಂದ್ರೆ ಬ್ರಾಡ್‌ಕಾಸ್ಟ್ ಆಡಿಯನ್ಸ್ ರಿಸರ್ಚ್ ಕೌನ್ಸಿಲ್ ಡಾಟಾ ಪ್ರಕಾರ 169 ಮಿಲಿಯನ್ ವೀಕ್ಷಕರು ಪಂದ್ಯ ವೀಕ್ಷಣೆ ಮಾಡಿದ್ದಾರೆ. ಜೂನ್ 3 ರಂದು ನಡೆದ ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18 ವರ್ಷಗಳ ಬಳಿಕ ತಮ್ಮ ಮೊದಲ ಐಪಿಎಲ್ ಟ್ರೋಫಿಯನ್ನ ಗೆದ್ದುಕೊಂಡಿದ್ರು. ಈ ಪಂದ್ಯವನ್ನ ಕೋಟ್ಯಂತರ ಅಭಿಮಾನಿಗಳು ನೋಡಿದ್ದು 2021 ರ ಟಿ 20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ದಾಖಲೆಯನ್ನ ಬ್ರೇಕ್ ಮಾಡಿದೆ. ಭಾರತ ಮತ್ತು ಪಾಕ್ ಪಂದ್ಯದ ವೇಳೆ 166 ಮಿಲಿಯನ್ ವೀಕ್ಷಕರು ಮ್ಯಾಚ್ ನೋಡಿದ್ರು.
ಮಾರ್ಚ್ 22 ರಂದು ಪ್ರಾರಂಭವಾದ ಈ ಟೂರ್ನಿಯ ವೇಳಾಪಟ್ಟಿಯಲ್ಲಿ ಸಾಕಷ್ಟು ಬದಲಾವಣೆಯಾಗಿತ್ತು. ಇಂಡಿಯಾ ಪಾಕ್ ನಡುವೆ ಸಂಘರ್ಷ ಉಂಟಾಗಿದ್ದರಿಂದ ಟೂರ್ನಿಯಲ್ಲಿ 9 ದಿನಗಳ ಕಾಲ ಪೋಸ್ಟ್ಪೋನ್ ಮಾಡಿದ್ರು, ಆ ಬಳಿಕ ಉಳಿದ 17 ಪಂದ್ಯಗಳು ಮೇ 17 ರಂದು ಪುನರಾರಂಭಗೊಂಡು ಜೂನ್ 3 ರಂದು ಮುಕ್ತಾಯಗೊಂಡವು. ಅಂದ್ರೆ ಮೊದಲ ವೇಳಾಪಟ್ಟಿಯಲ್ಲಿ ಮೇ 25 ಕ್ಕೆ ಅಂದ್ರೆ ಭಾನುವಾರ ಫೈನಲ್ ಪಂದ್ಯವನ್ನ ನಿಗದಿ ಮಾಡ್ಲಾಗಿತ್ತು. ಆದ್ರೆ ಪೋಸ್ಟ್ಪೋನ್ನಿಂದಾಗಿ ಫೈನಲ್ ಪಂದ್ಯ ಜೂನ್ 3ಕ್ಕೆ ನಿಗದಿ ಮಾಡಲಾಗಿತ್ತು. ಅದೂ ಕೂಡ ಮಂಗಳವಾರ. ಸೋ ವಾರದ ನಡುವೆಯೇ ಫೈನಲ್ ಮ್ಯಾಚ್ ನಡೆದ್ರೂ ಕೂಡ ವ್ಯೂವರ್ಶಿಪ್ಗೇನು ಕೊರತೆ ಆಗ್ಲಿಲ್ಲ. ಡಿಜಿಟಲ್‌ನಲ್ಲಿ 690 ಮಿಲಿಯನ್ ವೀಕ್ಷಣೆಗಳು ಕಂಡ್ರೆ ಟಿವಿಯಲ್ಲಿ ಬಾರ್ಕ್ ಡೇಟಾ ಪ್ರಕಾರ 169 ಮಿಲಿಯನ್ ವೀಕ್ಷಕರು ಮ್ಯಾಚ್ ನೋಡಿದ್ದಾರೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಪಂಜಾಬ್ ಕಿಂಗ್ಸ್ ನಡುವಣ ಐಪಿಎಲ್ ಫೈನಲ್ ಪಂದ್ಯದ ವೀಕ್ಷಣೆಯು ಡಿಜಿಟಲ್ ವೇದಿಕೆಯಲ್ಲೂ ಹೊಸ ದಾಖಲೆ ಬರೆದಿದೆ. ಜಿಯೊ ಹಾಟ್‌ಸ್ಟಾರ್‌ನಲ್ಲಿ ಸುಮಾರು 67.8 ಕೋಟಿಗೂ ಹೆಚ್ಚು ವೀಕ್ಷಣೆಯಾಗಿದೆ. ಇದೇ ವರ್ಷ ಫೆಬ್ರವರಿಯಲ್ಲಿ ನಡೆದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಪಾಕಿಸ್ತಾನ ನಡುವಣ ಪಂದ್ಯದ ವೀಕ್ಷಣೆಯ ದಾಖಲೆಯನ್ನು ಮುರಿದಿದೆ. ಚಾಂಪಿಯನ್ಸ್ ಟ್ರೋಫಿ 60 ಕೋಟಿಗೂ ಹೆಚ್ಚು ವೀಕ್ಷಣೆ ಪಡೆದುಕೊಂಡಿತ್ತು. ಇನ್ನು ಫೈನಲ್ ಪಂದ್ಯದಲ್ಲಿ ಟಾಸ್ ಸೋತ ಆರ್‌ಸಿಬಿ ಬ್ಯಾಟಿಂಗ್ ಆರಂಭಿಸಿದಾಗ ಡಿಜಿಟಲ್ ವೇದಿಕೆಯಲ್ಲಿ 4.3 ಕೋಟಿ ವೀಕ್ಷಣೆ ದಾಖಲಾಗಿದ್ದು, ಫಿಲ್ ಸಾಲ್ಟ್ ಸಿಕ್ಸರ್ ಸಿಡಿಸ್ತಾ ಇದ್ದಂತೆ ವೀಕ್ಷಣೆಯ ಸಂಖ್ಯೆಯಲ್ಲಿ ದಿಢೀರ್ ಏರಿಕೆಯಾಗಿತ್ತು. 11 ನೇ ಓವರ್‌ನ ಹೊತ್ತಿಗೆ, ವೀಕ್ಷಣೆಯು 11 ಕೋಟಿಗೂ ಹೆಚ್ಚು ತಲುಪಿತ್ತು. ವಿರಾಟ್ ಕೊಹ್ಲಿ ಔಟ್ ಆಗುವ ವೇಳೆ ವೀಕ್ಷಣೆಯು 26.5 ಕೋಟಿ ತಲುಪಿದ್ದು, ಆರ್‌ಸಿಬಿ ಇನ್ನಿಂಗ್ಸ್ ಅಂತ್ಯದ ವೇಳೆಗೆ ವೀಕ್ಷಣೆಯ ಸಂಖ್ಯೆ 35 ಕೋಟಿ ತಲುಪಿತ್ತು. ಪಂದ್ಯದ ಅಂತ್ಯದ ವೇಳೆ ವೀಕ್ಷಣೆಯ ಸಂಖ್ಯೆ 67.8 ಕೋಟಿ ದಾಟಿತ್ತು. ಇದೇ ಕಾರಣಕ್ಕೆ ಆರ್‌ಸಿಬಿ ಅಂದ್ರೆ ಬಿಸಿಸಿಐ ಪಾಲಿಗೆ ಚಿನ್ನದ ಮೊಟ್ಟೆ ಇಡೋ ಕೋಳಿಯಂತಾಗಿದೆ.
ಐಪಿಎಲ್ ನ ಅತ್ಯಂತ ಜನಪ್ರಿಯ ತಂಡವಾಗಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಫೈನಲ್ ಪಂದ್ಯದಲ್ಲಿ ಕಪ್ ಗೆದ್ದಿದ್ದು ಬಿಸಿಸಿಐಗೆ ಭರ್ಜರಿ ಲಾಭವನ್ನೇ ತಂದಿದೆ. ಪ್ರಸಾರ ಹಕ್ಕು, ಪ್ರಾಯೋಜಕತ್ವ ಮತ್ತು ಟಿಕೆಟ್ ಮಾರಾಟದಿಂದ ಬಿಸಿಸಿಐ ಭರ್ಜರಿ ಆದಾಯ ಸಿಕ್ಕಿದೆ. ಬಿಸಿಸಿಐಗೆ ಒಟ್ಟಾರೆ 2024-25ರಲ್ಲಿ 20,686 ಕೋಟಿ ರೂಪಾಯಿ ಆದಾಯ ಬಂದಿದೆ. 2023-24 ರಲ್ಲಿ ಬಿಸಿಸಿಐ 16,493 ಕೋಟಿ ರೂಪಾಯಿ ಆದಾಯವನ್ನು ಘೋಷಿಸಿತ್ತು. ಅಂದರೆ ಈ ಬಾರಿ ಆದಾಯ 4,193 ಕೋಟಿ ರೂಪಾಯಿಯಷ್ಟು ಹೆಚ್ಚಾಗಿದೆ.

ನೋಡಿರಿ

