ಆರ್ ಸಿಬಿಯಲ್ಲಿ ಮ್ಯಾಚ್ ವಿನ್ನಿಂಗ್ ಫಾರಿನ್ ಪ್ಲೇಯರ್ಸ್ – ಬೌಲಿಂಗ್ & ಬ್ಯಾಟಿಂಗ್ ಬೊಂಬಾಟ್!

17 ಸೀಸನ್ ಆಡಿದ್ರೂ ಆರ್ಸಿಬಿ ಒಂದೇ ಒಂದು ಕಪ್ ಗೆಲ್ಲೋಕೆ ಸಾಧ್ಯವಾಗ್ಲಿಲ್ಲ. ಅದಕ್ಕೆ ಮೇನ್ ರೀಸನ್ ಟೀಂ ಅನ್ ಬ್ಯಾಲೆನ್ಸ್ಡ್ ಆಗಿ ಇದ್ದದ್ದು. ಬ್ಯಾಟಿಂಗ್ ಡೆಪ್ತ್ ಇರ್ಲಿಲ್ಲ. ಎಷ್ಟೇ ಹೈಸ್ಕೋರ್ ಹೊಡೆದ್ರೂ ಡಿಫೆನ್ಸ್ ಮಾಡಿಕೊಳ್ಳುವಂಥ ಬೌಲಿಂಗ್ ಸ್ಟ್ರೆಂಥ್ ಇರ್ಲಿಲ್ಲ. ಬಟ್ ಈ ಸಲ ಟೀಂ ಕಂಪ್ಲೀಟ್ ಫುಲ್ ಪ್ಯಾಕೇಜ್ನಂತಿದೆ. ಅದ್ರಲ್ಲೂ ಫಾರಿನ್ ಪ್ಲೇಯರ್ಸ್ ಎಲ್ರೂ ತಮ್ಮ ರೋಲ್ನ ಅಚ್ಚುಕಟ್ಟಾಗಿ ನಿಭಾಯಿಸ್ತಾ ಇದ್ದಾರೆ.
ಇದನ್ನೂ ಓದಿ :ಪ್ಲೇಆಫ್ಸ್ ಗೆ ಕೈಕೊಟ್ಟ RCB ಸ್ಟಾರ್ಸ್ – ಸಾಲ್ಟ್, ಶೆಫರ್ಡ್, ಜೋಶ್ ಆಡಲ್ವಾ?
8 ವಿದೇಶಿ ಪ್ಲೇಯರ್ಸ್!
ಆಟಗಾರರು ದೇಶ ಮೊತ್ತ
ಲಿಯಾಮ್ ಲಿವಿಂಗ್ ಸ್ಟೋನ್ ಇಂಗ್ಲೆಂಡ್ 8.75 ಕೋಟಿ
ಫಿಲ್ ಸಾಲ್ಟ್ ಇಂಗ್ಲೆಂಡ್ 11.50 ಕೋಟಿ
ಜಾಕೋಬ್ ಬೆಥೆಲ್ ಇಂಗ್ಲೆಂಡ್ 2.60 ಕೋಟಿ
ಜೋಶ್ ಹ್ಯಾಜಲ್ ವುಡ್ ಆಸ್ಟ್ರೇಲಿಯಾ 12.50 ಕೋಟಿ
ಟಿಮ್ ಡೇವಿಡ್ ಆಸ್ಟ್ರೇಲಿಯಾ 3 ಕೋಟಿ
ರೊಮಾರಿಯೊ ಶೆಫರ್ಡ್ ವೆಸ್ಟ್ ಇಂಡೀಸ್ 1.50 ಕೋಟಿ
ಲುಂಗಿ ಎನ್ ಗಿಡಿ ದಕ್ಷಿಣ ಆಫ್ರಿಕಾ 1 ಕೋಟಿ
ನುವಾನ್ ತುಷಾರ ಶ್ರೀಲಂಕಾ 1.60 ಕೋಟಿ
ಹೀಗೆ 8 ಆಟಗಾರರನ್ನ ಆರ್ ಸಿಬಿ ಹರಾಜಿನಲ್ಲಿ ಖರೀದಿ ಮಾಡಿತ್ತು. ಇವ್ರ ಪೈಕಿ ಶ್ರೀಲಂಕಾ ಮೂಲದ ಆಟಗಾರ ನುವಾನ್ ತುಷಾರ ಒಬ್ರನ್ನ ಬಿಟ್ಟು ಉಳಿದವ್ರೆಲ್ಲಾ ಪ್ಲೇಯಿಂಗ್ 11ನಲ್ಲಿ ಕಣಕ್ಕಿಳಿದಿದ್ದಾರೆ. ಆರ್ ಸಿಬಿ ಪರ ಬೆಸ್ಟ್ ಪರ್ಫಾಮೆನ್ಸ್ ನೂ ಕೊಟ್ಟಿದ್ದಾರೆ. ಏಕಾಂಗಿಯಾಗಿ ಮ್ಯಾಚ್ ವಿನ್ ಮಾಡಿಸಿದ್ದಾರೆ.