RCB ತರಕಾರಿ ವ್ಯಾಪಾರ ಮಾಡಿತಾ? – ದುಡ್ಡಿದ್ರೂ ಸೈಲೆಂಟ್ ಗೇಮ್ ಬೇಕಿತ್ತಾ?
2ನೇ ದಿನ ಹೈಯೆಸ್ಟ್ ಬಿಡ್ ಆಗಿದ್ಯಾರು?

RCB ತರಕಾರಿ ವ್ಯಾಪಾರ ಮಾಡಿತಾ? – ದುಡ್ಡಿದ್ರೂ ಸೈಲೆಂಟ್ ಗೇಮ್ ಬೇಕಿತ್ತಾ?2ನೇ ದಿನ ಹೈಯೆಸ್ಟ್ ಬಿಡ್ ಆಗಿದ್ಯಾರು?

ಸೌದಿ ಅರೇಬಿಯಾದಲ್ಲಿ ನಡೆಯುತ್ತಿರುವ ಮೆಗಾ ಹರಾಜಿನಲ್ಲಿ ಸ್ಟಾರ್ ಹಾಗೂ ಪಂದ್ಯ ಗೆಲ್ಲಿಸಬಹುದಾದ ಆಟಗಾರರ ಖರೀದಿಗೆ ಫ್ರಾಂಚೈಸಿಗಳು ಮುಗಿಬಿದ್ದಿವು.  ಕೆಲವು ಆಟಗಾರರಿಗೆ ಬಂಪರ್ ಹಣ ಸಿಕ್ಕಿದ್ದರೆ ಇನ್ನೂ ಕೆಲವು ಸ್ಟಾರ್ ಆಟಗಾರರು ಅನ್‌ಸೋಲ್ಡ್ ಆಗುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಎಲ್ಲಾ 10 ಫ್ರಾಂಚೈಸಿಗಳು ಟೀಂ  ಗೆಲ್ಲಿಸಬಹುದಾದ ಆಟಗಾರರನ್ನ ಮುಗಿಬಿದ್ದು ಖರೀದಿಸಿವೆ. ಹಾಗಿದ್ರೆ ಎರಡನೇ ದಿನ ಯಾವ್ಯಾವ ಆಟಗಾರರನ್ನ ಯಾವ್ಯಾವ ಟೀಂ ಖರೀದಿ ಮಾಡಿವೆ ಅನ್ನೋ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: RCB ಸೇರಿದ ಪಾಂಡ್ಯ.. ರಹಾನೆ, ಮಯಾಂಕ್ UNSOLD – ಡೆಲ್ಲಿ ಪಾಲಾದ ಫಾಫ್ ಡುಪ್ಲೆಸಿಸ್

10.75 ಕೋಟಿಗೆ ಭುವಿ RCB ಪಾಲು

ಟೀಮ್ ಇಂಡಿಯಾದ ಪರ ಮೂರು ಫಾರ್ಮೆಟ್‌ಗಳಲ್ಲಿ ಆಡಿ ಸೈ ಎನಿಸಿಕೊಂಡ ಆಟಗಾರ ಭುವನೇಶ್ವರ್‌ ಕುಮಾರ್ ಆರ್‌ಸಿಬಿಗೆ ಎಂಟ್ರಿಕೊಟ್ಟಿದ್ದಾರೆ. 35 ವರ್ಷದ ಭರವಸೆಯ ಬೌಲರ್‌ ಡೆತ್‌ ಓವರ್ ಹಾಗೂ ಪವರ್‌ ಪ್ಲೇನಲ್ಲಿ ದಾಳಿ ನಡೆಸಬಲ್ಲಆಟಗಾರ. ಇವರನ್ನ ಐಪಿಎಲ್ ಬಿಡ್‌ನಲ್ಲಿ  ಆರ್‌ಸಿಬಿ 10.75 ಕೋಟಿ ಕೊಟ್ಟು ತಂಡಕ್ಕೆ ಬರಮಾಡಿಕೊಂಡಿದೆ.  ಭಾರತದ ಪರ 21 ಟೆಸ್ಟ್‌, 121 ಏಕದಿನ ಪಂದ್ಯ, 87 ಟಿ20 ಪಂದ್ಯಗಳನ್ನು ಆಡಿ ಅಬ್ಬರಿಸಿದ್ದಾರೆ. ಒಟ್ಟಾರೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 290ಕ್ಕೂ ಹೆಚ್ಚು ವಿಕೆಟ್‌ ಕಬಳಿಸಿದ್ದಾರೆ. ಇವರನ್ನು ಬಹು ವರ್ಷಗಳ ಕಾಲ ಸನ್‌ರೈಸರ್ಸ್‌ ಹೈದರಾಬಾದ್ ತಂಡ ತನ್ನನ್ನೇ ಇಟ್ಟಿಕೊಂಡಿತ್ತು.. ಈ ಬಾರಿ SRH ಕೈ ಬಿಟ್ಟಿತು. ಹೀಗಾಗಿ ಈಗ ಭುವಿ ಆರ್‌ಸಿಬಿ ಪಾಲಾಗಿದ್ದಾರೆ. 2011 ರಿಂದ ಐಪಿಎಲ್ ಟೂರ್ನಿಯಲ್ಲಿ ಆಡುತ್ತಿರುವ ಭುವನೇಶ್ವರ್ ಅನುಭವಿ ಬೌಲರ್‌ ಆಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿವರೆಗೆ ಭುವಿ ಐಪಿಎಲ್‌ನಲ್ಲಿ 176 ಪಂದ್ಯಗಳಲ್ಲಿ 7.56 ರ ಎಕಾನಮಿಯಲ್ಲಿ 181 ವಿಕೆಟ್‌ ಪಡೆದಿದ್ದಾರೆ.   19 ರನ್‌ಗಳಿಗೆ 5 ವಿಕೆಟ್ ಪಡೆದಿರುವುದು ಅವರ ಅತ್ಯುತ್ತಮ ಪ್ರದರ್ಶನವಾಗಿದೆ.

ಮುಂಬೈಗೆ ದೀಪಕ್ ಚಹರ್‌ ಎಂಟ್ರಿ

ಇನ್ನು ಚೆನ್ನೈ ಸೂಪರ್ ಕಿಂಗ್ಸ್‌ ನಲ್ಲಿದ್ದ ವೇಗಿ ದೀಪಕ್ ಚಹರ್ ಮುಂಬೈ ಪಾಲಾಗಿದ್ದಾರೆ. ಮೂಲ ಬೆಲೆ 2 ಕೋಟಿ ಹೊಂದಿದ್ದ ದೀಪಕ್‌ನನ್ನ ಮುಂಬೈ ತಂಡ 9.25 ಕೋಟಿ ನೀಡಿ ಖರೀದಿ ಮಾಡಿದೆ.

ಮುಕೇಶ್ ಕುಮಾರ್ ಖರೀದಿಗೆ ಪೈಪೋಟಿ

ಟೀ ಇಂಡಿಯಾದ ವೇಗಿ ಮುಖೇಶ್ ಕುಮಾರ್‌ ಖರೀದಿಗೆ ತಂಡಗಳ ನಡುವೆ ಭಾರಿ ಪೈಪೋಟಿ ನಡೆಯಿತು.. ಅಂತಿಮವಾಗಿ ಡೆಲ್ಲಿ ಕ್ಯಾಪಿಟಲ್ಸ್ 8 ಕೋಟಿಗೆ ಮುಕೇಶ್‌ನನ್ನ ಖರೀದಿ ಮಾಡಿದೆ.

 RCB ಅಂಗಳಕ್ಕೆ ಬಂದ  ಕೃನಾಲ್ ಪಾಂಡ್ಯ

ಮುಂಬೈ ಇಂಡಿಯನ್ಸ್‌ನೊಂದಿಗೆ ವೃತ್ತಿಜೀವನವನ್ನು ಪ್ರಾರಂಭಿಸಿ ನಂತರ ಲಕ್ನೋ ಸೂಪರ್ ಜೈಂಟ್ಸ್ಗೆ ತೆರಳಿದ್ದ ಕೃನಾಲ್ ಪಾಂಡ್ಯ ಈಗ ಹೊಸ ಆರ್‌ಸಿಬಿ  ತಂಡ ಸೇರಿಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಕೃನಾಲ್ ಪಾಂಡ್ಯರನ್ನು 5.75 ಕೋಟಿ ರೂಗೆ ಖರೀದಿಸುವಲ್ಲಿ ಆರ್ಸಿಬಿ ಯಶಸ್ವಿಯಾಯಿತು. ಕೃನಾಲ್ ಪಾಂಡ್ಯ ಖರೀದಿಗಾಗಿ ಬೆಂಗಳೂರು ಮತ್ತು ರಾಜಸ್ಥಾನ ನಡುವೆ ಹಣಾಹಣಿ ಏರ್ಪಟ್ಟಿತ್ತು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತನ್ನ ತೆಕ್ಕೆಗೆ ಹಾಕಿಕೊಳ್ಳುವಲ್ಲಿ ಯಶಸ್ವಿಯಾಯಿತು. ಐಪಿಎಲ್‌ನಲ್ಲಿ 127 ಪಂದ್ಯಗಳನ್ನು ಆಡಿರುವ ಕೃನಾಲ್ 132.82 ರ ಸ್ಟ್ರೈಕ್ ರೇಟ್ ಹಾಗೂ 22.56ರ ಸರಾಸರಿಯೊಂದಿಗೆ 1,647 ರನ್‌ ಕಲೆಹಾಕಿದ್ದಾರೆ. ಹಾಗೆಯೇ ಸ್ಪಿನ್ ಬೌಲರ್ ಆಗಿರುವ ಕೃನಾಲ್, ಇದುವರೆಗೆ ಆಡಿರುವ 127 ಪಂದ್ಯಗಳಲ್ಲಿ 34.28 ರ ಸರಾಸರಿ ಮತ್ತು 7.36 ರ ಎಕಾನಮಿ ದರದಲ್ಲಿ 76 ವಿಕೆಟ್‌ಗಳನ್ನು ಪಡೆದಿದ್ದಾರೆ.

ಈರುಳ್ಳಿ ಖರೀದಿಯಂತೆ ಆರ್‌ಸಿಬಿ ಬಿಡ್ಡಿಂಗ್

ಎಲ್ಲಾ ಪ್ರಾಂಚೈಸಿಗೂ ಒಳ್ಳೆ ಆಟಗಾರ ಬಂದಾಗ ಬಿಡ್ ಮಾಡೋಕೆ ಮುಂದಾದ್ರೆ, ಆರ್‌ಸಿಬಿ ಮಾತ್ರ ಬಿಡ್‌ ಕಡೆ ಮುಖನೇ ಮಾಡುತ್ತಿರಲಿಲ್ಲ. ಮೊದಲ ದಿನದಂತೆ ಎರಡನೇ ದಿನ ಕೂಡ ಬೆಂಗಳೂರು ಪ್ರಾಂಚೈಸಿ ತನ್ನ ನವರಂಗಿಯಾಟ ಮುಂದುವರಿಸಿತ್ತು. ಸಂತೆಯಲ್ಲಿ ಲಾಸ್ಟ್‌ ಗೆ ಹೋದ್ರೆ ಅಳಿದುಳಿದ ಈರುಳ್ಳಿ ಕಮ್ಮಿಗೆ ಸಿಗುತ್ತೆ ಅಂತಾ ತಂದ ಹಾಗೇ ಆರ್‌ಸಿಬಿ ಕೂಡ ಸಂತೆಯಲ್ಲಿ ವ್ಯಾಪಾರ ಮಾಡಿದಂತೆ ಬಿಡ್ಡಿಂಗ್ ಮಾಡಿದೆ.. ಈ ಸಲ ಕಪ್ಪಿನ ಆಸೆಯನ್ನ ಆರ್‌ಸಿಬಿ ಅಭಿಮಾನಿಗಳು ಬಿಟ್ಟಿದ್ದಾರೆ..

Shwetha M

Leave a Reply

Your email address will not be published. Required fields are marked *