ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿನ್ನದಂಥ ಗೆಲುವು – ಪಂಜಾಬ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚಿನ್ನದಂಥ ಗೆಲುವು – ಪಂಜಾಬ್ ವಿರುದ್ಧ ಆರ್‌ಸಿಬಿಗೆ 4 ವಿಕೆಟ್‌ಗಳ ರೋಚಕ ಜಯ

ಪಂಜಾಬ್​ ವಿರುದ್ಧದ ಕದನದಲ್ಲಿ ಆರ್​​ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ಮೊದಲ ಪಂದ್ಯದಲ್ಲಿ ಸೋತಿದ್ದ ಆರ್​ಸಿಬಿ, ಬೆಂಗಳೂರಲ್ಲಿ ರೋಚಕ ರೀತಿಯಲ್ಲಿ ಕಮ್​ಬ್ಯಾಕ್​ ಮಾಡಿ ಗೆಲುವಿನ ಖಾತೆ ತೆರೆದಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿಯ ಅಬ್ಬರದ ಬ್ಯಾಟಿಂಗ್ ಮುಂದೆ ಪಂಜಾಬ್ ಕಿಂಗ್ಸ್ ನೀಡಿದ 177ರನ್ ಟಾರ್ಗೆಟನ್ನು ಆರ್‌ಸಿಬಿ 6 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕೊಹ್ಲಿ ವಿಕೆಟ್ ಪತನದ ಬಳಿಕ ತಂಡದ ಆತಂಕ ಹೆಚ್ಚಾಗಿತ್ತು. ಆದರೆ ಮಹಿಪಾಲ್ ಲೊಮ್ರೊರ್ ಹಾಗೂ ದಿನೇಶ್ ಕಾರ್ತಿಕ್ ಹೋರಾಟದಿಂದ ಆರ್‌ಸಿಬಿ ಗೆಲುವಿನ ದಡ ಸೇರಿತು.

ಇದನ್ನೂ ಓದಿ: ಮಾರ್ಚ್​​ನಲ್ಲಿ ವಿದ್ಯುತ್ ಬಿಲ್ ಪಾವತಿ ವಿಳಂಬವಾದರೆ ಪೆನಾಲ್ಟಿ ಚಿಂತೆ ಬೇಡ! – ಯಾಕೆ ಗೊತ್ತಾ?

177 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದ ಆರ್‌ಸಿಬಿಗೆ ವಿರಾಟ್ ಕೊಹ್ಲಿ ಉತ್ತಮ ಆರಂಭ ನೀಡಿದರು. ಆದರೆ ನಾಯಕ ಫಾಫ್ ಡುಪ್ಲೆಸಿಸ್ ಬಹುಬೇಗನೆ ವಿಕೆಟ್ ಕೈಚೆಲ್ಲಿ ನಿರಾಸೆ ಮೂಡಿಸಿದರು. ಡುಪ್ಲಿಸಿ ವಿಕೆಟ್ ಪತನ ಆರ್‌ಸಿಬಿ ಅಭಿಮಾನಿಗಳ ಆತಂಕ ಹೆಚ್ಚಿಸಿತ್ತು. ಇದರ ಬೆನ್ನಲ್ಲೇ ಕ್ಯಾಮರೂನ್ ಗ್ರೀನ್ ವಿಕೆಟ್ ಪತನಗೊಂಡಿತು. ಡುಪ್ಲಿಸಿಸ್ ಹಾಗೂ ಗ್ರೀನ್ ತಲಾ 3 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು.

ಗ್ಲೆನ್ ಮ್ಯಾಕ್ಸ್‌ವೆಲ್ ಪಂಜಾಬ್ ವಿರುದ್ಧವೂ ಮುಗ್ಗರಿಸಿದರು. ಕೇವಲ 3 ರನ್ ಸಿಡಿಸಿ ಔಟಾದರು. ಆದರೆ ಕೊಹ್ಲಿ ಹೋರಾಟ ಮುಂದುವರಿದಿತ್ತು.ಕೊಹ್ಲಿ ಕ್ರೀಸ್‌ನಲ್ಲಿರುವುದೇ ಅಭಿಮಾನಿಗಳ ಆತ್ಮವಿಶ್ವಾಸ ಹೆಚ್ಚಿಸಿತ್ತು. ಇತ್ತ ರಜತ್ ಪಾಟೀದಾರ್ ಸಾಥ್ ಹೆಚ್ಚು ಹೊತ್ತು ಇರಲಿಲ್ಲ. ಪಾಟೀದಾರ್ 18 ರನ್ ಸಿಡಿಸಿ ಔಟಾದರು. ಕೊಹ್ಲಿ ತಮ್ಮ ಏಕಾಂಗಿ ಹೋರಾಟ ಮುಂದುವರಿಸಿದರು.

ಹಾಫ್ ಸೆಂಚುರಿ ಸಿಡಿಸಿದ ವಿರಾಟ್ ಕೊಹ್ಲಿ ತಂಡವನ್ನು ಗೆಲುವಿನ ದಡ ಸೇರಿಸಲು ಮತ್ತಷ್ಟು ಅಗ್ರೆಸ್ಸೀವ್ ಆಟಕ್ಕೆ ಮುಂದಾದರು. 49 ಎಸೆತದಲ್ಲಿ 11 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ ಕೊಹ್ಲಿ 77 ರನ್ ಸಿಡಿಸಿ ಔಟಾದರು. ಕೊಹ್ಲಿ ವಿಕೆಟ್ ಪತನ ತಂಡದ ಆತಂಕ ಹೆಚ್ಚಿಸಿತ್ತು. ಇತ್ತ ಅಭಿಮಾನಿಗಳಲ್ಲೂ ಸೋಲಿನ ಭಯ ಕಾಡತೊಡಗಿತ್ತು. ಇದರ ಬೆನ್ನಲ್ಲೇ ಅನೂಜ್ ರಾವತ್ 11 ರನ್ ಸಿಡಿಸಿ ಔಟಾದರು.  ಆದರೆ ಮಹಿಪಾಲ್ ಲೊಮ್ರೊರ್ ಹಾಗೂ ದಿನೇಶ್ ಕಾರ್ತಿಕ್ ಆಟ ಪಂದ್ಯದ ಗತಿಯನ್ನು ಬದಲಿಸಿತು.

ಅಂತಿಮ ಓವರ್‌ನಲ್ಲಿ 10 ರನ್ ಅವಶ್ಯಕತೆ ಇತ್ತು. ಮೊದಲ ಎಸೆತವನ್ನೇ ಸಿಕ್ಸರ್ ಸಿಡಿಸಿದ ಕಾರ್ತಿಕ್, ಮರು ಎಸೆತದಲ್ಲಿ ಬೌಂಡರಿ ಸಿಡಿಸಿ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು. ಲೊಮ್ರೊರ್ ಹಾಗೂ ಕಾರ್ತಿಕ್ ಬೌಂಡರಿ ಸಿಕ್ಸರ್ ಆಟ ಬೆಂಗಳೂರು ತಂಡಕ್ಕೆ ಗೆಲುವಿನ ಸಿಹಿ ನೀಡಿತು. ಕಾರ್ತಿಕ್ 10 ಎಸೆತದಲ್ಲಿ ಅಜೇಯ 28 ರನ್ ಸಿಡಿಸಿದರೆ, ಲೊಮ್ರೊರ್ ಅಜೇಯ 17 ರನ್ ಸಿಡಿಸಿದರು. 19.2 ಓವರ್‌ಗಳಲ್ಲಿ ಆರ್‌ಸಿಬಿ 4 ವಿಕೆಟ್ ಗೆಲುವು ಕಂಡಿತು.

Shwetha M