ಗುಜರಾತ್ ಟೈಟಾನ್ಸ್‌ ಗೆ ರೋಚಕ ಸೋಲು – – 9 ವಿಕೆಟ್ ಗಳಿಂದ ಗೆದ್ದು ಬೀಗಿದ ಆರ್ ಸಿಬಿ!

ಗುಜರಾತ್ ಟೈಟಾನ್ಸ್‌ ಗೆ ರೋಚಕ ಸೋಲು – – 9 ವಿಕೆಟ್ ಗಳಿಂದ ಗೆದ್ದು ಬೀಗಿದ ಆರ್ ಸಿಬಿ!

ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಹಾಗೂ ಗುಜರಾತ್‌ ಟೈಟಾನ್ಸ್‌ ತಂಡ ವಿರುದ್ಧ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಆರ್‌ಸಿಬಿ ಗೆದ್ದು ಬೀಗಿದೆ.  9 ವಿಕೆಟ್‌ಗಳ ಅಂತರದಲ್ಲಿ ಆರ್‌ಸಿಬಿ ಭರ್ಜರಿ ಜಯ ಸಾಧಿಸಿದೆ.

ನರೇಂದ್ರ ಮೋದಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ  ​ ಹೈವೋಲ್ಟೇಜ್​ ಪಂದ್ಯದಲ್ಲಿ  ಗುಜರಾತ್​ ಟೈಟನ್ಸ್​​ ನೀಡಿದ ಬೃಹತ್​ ರನ್​ಗಳ ಗುರಿ ಬೆನ್ನತ್ತಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಪರ ಕ್ಯಾಪ್ಟನ್​​​ ಫಾಫ್​ ಡುಪ್ಲೆಸಿಸ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಬಿರುಸಿನ ಬ್ಯಾಟಿಂಗ್​ ಮಾಡೋ ಭರದಲ್ಲಿ ಫಾಫ್​​ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಕ್ಯಾಚ್​ ನೀಡಿದ್ರು.

ಇದನ್ನೂ ಓದಿ:ಕ್ರಿಕೆಟ್.. ಕಾರು ಮತ್ತು ಕಾವ್ಯಾ!.. ಗಜಕೇಸರಿ ಯೋಗದಿಂದ SRH ಗೆಲುವು! – ಭಾರತದ ಹೊಸ ನ್ಯಾಷನಲ್ ಕ್ರಷ್!

ಫಾಫ್​ ಆಡಿದ 12 ಬಾಲ್​ನಲ್ಲಿ 24 ರನ್​ ಚಚ್ಚಿದ್ರು. ಬ್ಯಾಕ್​ ಟು ಬ್ಯಾಕ್​ ಮೂರು ಸಿಕ್ಸ್​ ಸಿಡಿಸಿದ ಫಾಫ್​​ 4ನೇ ಸಿಕ್ಸ್​ಗೆ ಟ್ರೈ ಮಾಡಿ ಔಟಾದ್ರು. ಜತೆಗೆ ಒಂದು ಫೋರ್​ ಕೂಡ ಬಾರಿಸಿದ್ರು. ಈ ಹಿಂದೆಯೂ ಹಲವು ಬಾರಿ ಕೆಟ್ಟ ಹೊಡೆತಗಳಿಗೆ ಕೈ ಹಾಕಿ ಫಾಫ್​ ಔಟಾಗಿದ್ದರು. ಹೀಗಾಗಿ ಎಷ್ಟು ಬಾರಿ ಔಟಾದ್ರೂ ಫಾಫ್​​ ಇನ್ನೂ ಬುದ್ಧಿ ಕಲಿತಿಲ್ಲ ಎಂದು ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ.

ಡುಪ್ಲೆಸಿಸ್​ ಔಟಾದ್ರೂ ಕ್ರೀಸ್​ನಲ್ಲೇ ನಿಂತು ತಾಳ್ಮೆಯಿಂದ ಬ್ಯಾಟ್​ ಬೀಸಿದ ವಿರಾಟ್​ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ರು. ಕೇವಲ 44 ಬಾಲ್​ನಲ್ಲಿ ಕೊಹ್ಲಿ 3 ಸಿಕ್ಸರ್​​, 6 ಫೋರ್​ ಸಮೇತ 70 ರನ್​ ಸಿಡಿಸಿದ್ರು.

ಇನ್ನಿಂಗ್ಸ್​ ಉದ್ಧಕ್ಕೂ ಬೆಂಡೆತ್ತಿದ ವಿಲ್​ ಜಾಕ್ಸ್​​ ಕೇವಲ 41 ಬಾಲ್​ನಲ್ಲಿ 10 ಸಿಕ್ಸರ್​​, 5 ಫೋರ್​ ಸಮೇತ ಶತಕ ಸಿಡಿಸಿದ್ರು. ಆರ್​​ಸಿಬಿ ಕೇವಲ 16 ಓವರ್​ನಲ್ಲಿ ಕೇವಲ 1 ವಿಕೆಟ್​ ನಷ್ಟಕ್ಕೆ 206 ರನ್​ ಗಳಿಸೋ ಮೂಲಕ ಗೆಲುವು ಸಾಧಿಸಿದೆ.

Shwetha M

Leave a Reply

Your email address will not be published. Required fields are marked *