ಕೊಹ್ಲಿಗೆ ಬೆದರಿಕೆ.. ಆರ್‌ಸಿಬಿ ಅಭ್ಯಾಸ ರದ್ದು! – ನಾಲ್ವರು ಶಂಕಿತ ಉಗ್ರರು ಅರೆಸ್ಟ್‌

ಕೊಹ್ಲಿಗೆ ಬೆದರಿಕೆ.. ಆರ್‌ಸಿಬಿ ಅಭ್ಯಾಸ ರದ್ದು! – ನಾಲ್ವರು ಶಂಕಿತ ಉಗ್ರರು ಅರೆಸ್ಟ್‌

ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್‌ ಎಲಿಮಿನೇಟರ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್‌ ರಾಯಲ್ಸ್‌ ತಂಡಗಳು ಸೆಣಸಾಡಲಿದೆ. ಆದರೆ ಇದಕ್ಕೂ ಮುನ್ನ ಭದ್ರತೆಯ ಕಾರಣದಿಂದ ಬೆಂಗಳೂರಿನ ಅಭ್ಯಾಸವನ್ನು ರದ್ದುಗೊಳಿಸಲಾಗಿದೆ.

ಇದನ್ನೂ ಓದಿ: MIಗೆ ರೋಹಿತ್ ಗುಡ್ ಬೈ ಫಿಕ್ಸ್  – ಸೂರ್ಯ, ಬುಮ್ರಾನೂ ಕೈ ಕೊಟ್ರಾ?

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಆರ್‌ಸಿಬಿ ಹಾಗೂ ಆರ್‌ ಆರ್‌ ನಡುವೆ ರಾತ್ರಿ 7.30 ರಿಂದ ಆರಂಭವಾಗಲಿದೆ. ಇದೀಗ ವಿರಾಟ್ ಕೊಹ್ಲಿಯ ಸುರಕ್ಷತೆ ಆರ್​ಸಿಬಿಗೆ ದೊಡ್ಡ ಆತಂಕ ತಂದೊಡ್ಡಿದೆ. ಹೀಗಾಗಿ ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ವಿರಾಟ್ ಕೊಹ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಅಭ್ಯಾಸವನ್ನು ರದ್ದುಗೊಳಿಸಿದೆ.  ಹೀಗಾಗಿ ಆರ್‌‌ಸಿಬಿ ತಂಡವು ಯಾವುದೇ ಅಭ್ಯಾಸವಿಲ್ಲದೇ ನೇರವಾಗಿ ಇದೀಗ ರಾಜಸ್ಥಾನ್‌ ವಿರುದ್ಧ ಕಣಕ್ಕಿಳಿಯಬೇಕಿದೆ.

ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ಅಹಮದಾಬಾದ್ ವಿಮಾನ ನಿಲ್ದಾಣದಿಂದ ಭಯೋತ್ಪಾದಕ ಚಟುವಟಿಕೆಗಳ ಶಂಕೆ ಮೇರೆಗೆ ಗುಜರಾತ್ ಪೊಲೀಸರು ನಾಲ್ವರು ಶಸ್ತ್ರಾಸ್ತ್ರಧಾರಿಗಳನ್ನು ಸೋಮವಾರ ರಾತ್ರಿ ಬಂಧಿಸಿದ್ದಾರೆ. ನಾಲ್ವರು ಆರೋಪಿಗಳ ಬಗ್ಗೆ ಮಾಹಿತಿ ನೀಡಿರುವ ಪೊಲೀಸರು, ಅವರಿಂದ ಶಸ್ತ್ರಾಸ್ತ್ರಗಳು, ಅನುಮಾನಾಸ್ಪದ ವೀಡಿಯೊಗಳು ಮತ್ತು ಪಠ್ಯ ಸಂದೇಶಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದಿದ್ದಾರೆ.

ಎಲಿಮಿನೇಟರ್ ಪಂದ್ಯಕ್ಕೂ ಮುನ್ನ ನಾಲ್ವರು ಶಂಕಿತರ ಬಂಧನದಿಂದಾಗಿ ಆರ್‌ಸಿಬಿ ಟೆನ್ಷನ್‌ಗೆ ಒಳಗಾಗಿದ್ದು, ಈ ಕಾರಣಕ್ಕಾಗಿ ವಿರಾಟ್ ಕೊಹ್ಲಿ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಆರ್‌ಸಿಬಿ ಅಭ್ಯಾಸವನ್ನು ರದ್ದುಗೊಳಿಸಿದೆ. ಆದರೆ, ಈ ಘಟನೆಯ ನಂತರವೂ ರಾಜಸ್ಥಾನ ತಂಡ ಮೈದಾನದಲ್ಲಿ ಅಭ್ಯಾಸ ನಡೆಸಿದೆ. ಮತ್ತೊಂದೆಡೆ, ಎರಡೂ ತಂಡಗಳು ಪತ್ರಿಕಾಗೋಷ್ಠಿಯನ್ನು ರದ್ದುಗೊಳಿಸಿವೆ. ಅಭ್ಯಾಸದ ಅವಧಿಯನ್ನು ಏಕೆ ರದ್ದುಗೊಳಿಸಲಾಯಿತು ಎಂಬುದರ ಬ್ಗಗೆ ಆರ್​ಸಿಬಿ ಫ್ರಾಂಚೈಸಿ ಯಾವುದೇ ಅಧಿಕೃತ ಹೇಳಿಕೆಯಲ್ಲಿ ತಿಳಿಸದಿದ್ದರೂ, ವಿರಾಟ್ ಅವರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಭ್ಯಾಸವನ್ನು ರದ್ದುಗೊಳಿಸಲಾಗಿದೆ ಎಂದು ವರದಿ ಹೇಳುತ್ತಿದೆ.

Shwetha M