SRH ವಿರುದ್ಧ KKRಗೆ ಭರ್ಜರಿ ಜಯ – ಫೈನಲ್ ಗೆ ಪ್ರವೇಶಿಸಿದ ಶ್ರೇಯಸ್ ಅಯ್ಯರ್ ಪಡೆ
ಸನ್ರೈಸರ್ಸ್ ಹೈದರಾಬಾದ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಕೊಲ್ಕತ್ತಾ ಗೆದ್ದು ಬೀಗಿದೆ. ಕ್ವಾಲಿಫೈಯರ್ 1ರ ಪಂದ್ಯದಲ್ಲಿ ಸನ್ರೈಸರ್ಸ್ ವಿರುದ್ಧ 8 ವಿಕೆಟ್ಗಳಿಂದ ಕೊಲ್ಕತ್ತಾ ಗೆದ್ದು ಬೀಗಿದೆ. ಈ ಮೂಲಕ ಕೆಕೆಆರ್ ನೇರವಾಗಿ ಫೈನಲ್ಗೆ ಪ್ರವೇಶಿಸಿದೆ.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ ಹೈದರಾಬಾದ್ ಕೆಕೆಆರ್ಗೆ ಸಾಧಾರಣ ಮೊತ್ತದ ಟಾರ್ಗೆಟ್ ನೀಡಿತ್ತು. ಆರಂಭದಲ್ಲೇ 4 ವಿಕೆಟ್ ಕಳೆದುಕೊಂಡ ಹೈದರಾಬಾದ್ ಪರ ಬಂಡೆಯಂತೆ ನಿಂತಿದ್ದು ರಾಹುಲ್ ತ್ರಿಪಾಠಿ.
ಇದನ್ನೂ ಓದಿ: ಗೂಗಲ್ ಪೇ ಬಳಸ್ತಾ ಇದ್ದೀರಾ? – ಜೂನ್ 4ರಿಂದ ಈ ಆ್ಯಪ್ ಸ್ಥಗಿತ?
ಇನ್ನು, ಪಂದ್ಯ ಆರಂಭವಾಗುತ್ತಿದ್ದಂತೆ ಹೈದರಾಬಾದ್ ಪರ ಓಪನರ್ ಆಗಿ ಬಂದ ಸ್ಫೋಟಕ ಬ್ಯಾಟರ್ ಟ್ರಾವಿಸ್ ಹೆಡ್ ಔಟ್ ಆಗಿದ್ದಾರೆ. ಮೊದಲನೇ ಓವರ್ನ 2ನೇ ಬಾಲ್ಗೆ ಬೌಲ್ಡ್ ಆಗಿದ್ದಾರೆ. ಟ್ರಾವಿಸ್ ವಿಕೆಟ್ ತೆಗೆದದ್ದು ಮಿಚೆಲ್ ಸ್ಟಾರ್ಕ್. ಇವರ ಬೆನ್ನಲ್ಲೇ ಮತ್ತೋರ್ವ ಸ್ಫೋಟಕ ಬ್ಯಾಟರ್ ಅಭಿಷೇಕ್ ಶರ್ಮಾ ಕೂಡ ರಸ್ಸೆಲ್ ಬೌಲಿಂಗ್ನಲ್ಲಿ ಕೇವಲ 3 ರನ್ ಗಳಿಸಿ ಕ್ಯಾಚ್ ನೀಡಿ ಪೆವಿಲಿಯನ್ಗೆ ತೆರಳಿದ್ರು.
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಹೈದರಾಬಾದ್ ಪರ ಸ್ಫೋಟಕ ಬ್ಯಾಟರ್ ರಾಹುಲ್ ತ್ರಿಪಾಠಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಜವಾಬ್ದಾರಿಯಿಂದಲೇ ಆಕ್ರಮಣಕಾರಿ ಬ್ಯಾಟಿಂಗ್ ಮಾಡಿದ ರಾಹುಲ್ ಅರ್ಧಶತಕ ಸಿಡಿಸಿದ್ರು.
ತಾನು ಆಡಿದ 35 ಬಾಲ್ನಲ್ಲಿ ಬರೋಬ್ಬರಿ 55 ರನ್ ಸಿಡಿಸಿದ್ರು. ಈ ಪೈಕಿ 1 ಸಿಕ್ಸರ್ ಮತ್ತು 7 ಫೋರ್ ಚಚ್ಚಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ 155ಕ್ಕೂ ಹೆಚ್ಚಿತ್ತು. ನರೈನ್ ಬೌಲಿಂಗ್ ಮಾಡುವಾಗ 13ನೇ ಓವರ್ 2ನೇ ಬಾಲ್ಗೆ ರನ್ ಓಡುವಾಗ ಔಟಾದ್ರು. ರಸ್ಸೆಲ್ ರಾಹುಲ್ ತ್ರಿಪಾಠಿಯನ್ನು ರನೌಟ್ ಮಾಡಿದ್ರು. ರನೌಟ್ ಆದ ಬಳಿಕ ರಾಹುಲ್ ತ್ರಿಪಾಠಿ ಮೈದಾನದಲ್ಲೇ ಗಳಗಳನೇ ಅತ್ತುಬಿಟ್ಟರು. ಪ್ಯಾಟ್ ಕಮಿನ್ಸ್ 24 ಬಾಲ್ನಲ್ಲಿ 30 ರನ್ ಕಲೆ ಹಾಕಿದ್ರು. ಹೈದರಾಬಾದ್ 19.3 ಓವರ್ನಲ್ಲಿ ಆಲೌಟ್ ಆಗಿತ್ತು.
ಹೈದರಾಬಾದ್ ಟಾರ್ಗೆಟ್ ಬೆನ್ನತ್ತಿದ್ದ ಕೆಕೆಆರ್ 2 ವಿಕೆಟ್ ನಷ್ಟಕ್ಕೆ 13.4 ಓವರ್ನಲ್ಲಿ 164 ರನ್ ಗಳಿಸಿ ಗೆದ್ದು ಬೀಗಿದೆ. ಕೆಕೆಆರ್ ಪರ ಗುರ್ಬಾಜ್ 23, ನರೈನ್ 21, ವೆಂಕಟೇಶ್ ಅಯ್ಯರ್ 51, ಶ್ರೇಯಸ್ ಅಯ್ಯರ್ 58 ರನ್ ಗಳಿಸಿದ್ರು.