ಪಂತ್ ಅನುಪಸ್ಥಿತಿಯಲ್ಲಿ ಆರ್​ಸಿಬಿ ವಿರುದ್ಧ ಡೆಲ್ಲಿಗೆ ಸೋಲು – ಪ್ಲೇ ಆಫ್‌ ಕನಸು ಜೀವಂತವಾಗಿರಿಸಿಕೊಂಡ ಬೆಂಗಳೂರು ತಂಡ

ಪಂತ್ ಅನುಪಸ್ಥಿತಿಯಲ್ಲಿ ಆರ್​ಸಿಬಿ ವಿರುದ್ಧ ಡೆಲ್ಲಿಗೆ ಸೋಲು – ಪ್ಲೇ ಆಫ್‌ ಕನಸು ಜೀವಂತವಾಗಿರಿಸಿಕೊಂಡ ಬೆಂಗಳೂರು ತಂಡ

ರಾಯಲ್ ಚಾಲೆಂಜರ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ನಡವೆ ನಡೆದ ಪಂದ್ಯದಲ್ಲಿ ಆರ್‌ಸಿಬಿ ಭರ್ಜರಿ ಗೆಲುವು ಸಾಧಿಸಿದೆ. ತವರಿನಲ್ಲೇ 47 ರನ್‌ಗಳ ಭರ್ಜರಿ ಜಯ ಸಾಧಿಸಿದ ಆರ್‌ಸಿಬಿ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ರಿಷಬ್ ಪಂತ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಅಕ್ಸರ್ ಪಟೇಲ್ ಮುನ್ನಡೆಸಿದ್ದರು. ಟಾಸ್​ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್​ ಆರ್​ಸಿಬಿಯನ್ನು ಬ್ಯಾಟಿಂಗ್​ಗೆ ಆಹ್ವಾನಿಸಿತ್ತು. ನಿಗದಿತ 20 ಓವರ್​ನಲ್ಲಿ ಆರ್​ಸಿಬಿ 9 ವಿಕೆಟ್ ಕಳೆದುಕೊಂಡು 187 ರನ್​ಗಳ ಸಾಧಾರಣ ಟಾರ್ಗೆಟ್ ನೀಡಿತ್ತು.

ಇದನ್ನೂ ಓದಿ: ರಾಜಸ್ಥಾನ್ ರಾಯಲ್ಸ್​ ವಿರುದ್ಧ ಚೆನ್ನೈಗೆ ಐದು ವಿಕೆಟ್​​ಗಳ ಗೆಲುವು – ಸಿಎಸ್‌ಕೆ ಗೆ ಪ್ಲೇ ಆಫ್‌ ಹಾದಿ ಮತ್ತಷ್ಟು ಹತ್ತಿರ

ಈ ಗುರಿಯನ್ನು ಬೆನ್ನು ಹತ್ತಿದ್ದ ಡೆಲ್ಲಿ ಕ್ಯಾಪಿಟಲ್ಸ್​.. ಆಘಾತದ ಮೇಲೆ ಆಘಾತ ಅನುಭವಿಸಿತು. ಆರ್​ಸಿಬಿಯ ಮಾರಕ ಬೌಲಿಂಗ್ ದಾಳಿ ಹಾಗೂ ಫೀಲ್ಡಿಂಗ್​ನಲ್ಲಿ ನಡೆದ ಚಮತ್ಕಾರದಿಂದ 187 ರನ್​ಗಳನ್ನು ಡಿಫೆನ್ಸ್​ ಮಾಡಿಕೊಳ್ಳುವಲ್ಲಿ ಯಶಸ್ವಿ ಆಯಿತು. 19.1 ಓವರ್​​ನಲ್ಲಿ 140 ರನ್​ಗಳಿಸಿ ಡೆಲ್ಲಿ ಕ್ಯಾಪಿಟಲ್ಸ್ ಆಲ್​ಔಟ್ ಆಯಿತು. ಈ ಮೂಲಕ ಆರ್​ಸಿಬಿ 46 ರನ್​ಗಳ ಭರ್ಜರಿ ಗೆಲುವು ಸಾಧಿಸಿತು. ಯಶ್ ದಯಾಳ್, ಗ್ರೀನ್ ತಲಾ ಒಂದೊಂದು ರನೌಟ್​ ಮೂಲಕ ವಿಕೆಟ್ ಪಡೆದರು. ಆರ್​ಸಿಬಿ ಪರ ಯಶ್ ದಯಾಳ್ 3, ಸಿರಾಜ್ 1, ಫರ್ಗುಸನ್ 2, ಸ್ವಪ್ನಿಲ್ ಸಿಂಗ್ 1, ಗ್ರೀನ್ 1 ವಿಕೆಟ್​​ ಪಡೆದರು.

ಇಲ್ಲಿಯವರೆಗೆ 13 ಪಂದ್ಯಗಳನ್ನು ಆಡಿರುವ ಆರ್​ಸಿಬಿ 6 ಪಂದ್ಯಗಳನ್ನು ಗೆದ್ದುಕೊಂಡಿದೆ. ಒಟ್ಟು 12 ಪಾಯಿಂಟ್ಸ್​ಗಳನ್ನು ಹೊಂದಿರುವ ಆರ್​ಸಿಬಿ, ಪ್ಲೇ-ಆಫ್​ಗೆ ಪ್ರವೇಶ ಮಾಡಲು ಸಣ್ಣ ಅವಕಾಶ ಇದೆ. ಇವತ್ತಿನ ಪಂದ್ಯ ಗೆದ್ದ ಹಿನ್ನೆಲೆಯಲ್ಲಿ ನೆಟ್ ರನ್​​ ರೇಟ್ ಕೂಡ ಸುಧಾರಿಸಿದೆ. ಮುಂದಿನ ಶನಿವಾರ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಆರ್​ಸಿಬಿ ಎದುರಿಸಲಿದೆ. ಅಲ್ಲಿ ಏನಾದರೂ ಚಮತ್ಕಾರ ಮಾಡಿದರೆ ಆರ್​ಸಿಬಿ ಪ್ಲೇ-ಆಫ್​ಗೆ ಹೋಗೋದು ಬಹುತೇಕ ಪಕ್ಕಾ ಆಗಿದೆ.

Shwetha M