ಐಪಿಎಲ್‌ನಲ್ಲಿ ರೂಲ್ಸ್ ಚೇಂಜ್! – ಹೊಸ ನಿಯಮ ಪ್ಲೇಯರ್ಸ್ ಮೇಲೆ ಯಾವ ರೀತಿ ಎಫೆಕ್ಟ್ ಆಗುತ್ತೆ?
ಈವರೆಗಿನದ್ದು ಒಂದು ರೂಲ್ಸ್.. ಇನ್ನು ಮುಂದಿನದ್ದೇ ಮತ್ತೊಂದು ರೂಲ್ಸ್. ಐಪಿಎಲ್-2024ರ ರೂಲ್ಸ್ನಲ್ಲಿ ಕೆಲ ಮಹತ್ವದ ಬದಲಾವಣೆಗಳಾಗಿವೆ. ಈಗಾಗ್ಲೇ ಜಾಗತಿಕ ಕ್ರಿಕೆಟ್ನ ದಿಕ್ಕೇ ಬದಲಿಸಿರುವ ಐಪಿಎಲ್ ಈಗ ಕ್ರಿಕೆಟ್ ರೂಲ್ಸ್ ವಿಚಾರವಾಗಿಯೂ ಕ್ರಾಂತಿಕಾರಕ ನಿರ್ಧಾರಗಳನ್ನ ಕೈಗೊಳ್ತಿದೆ. ಐಪಿಎಲ್ನಲ್ಲಾಗ್ತಿರುವ ರೂಲ್ಸ್ ಚೇಂಜೆಸ್ಗಳನ್ನ ನೆಕ್ಸ್ಟ್ ಐಸಿಸಿ ಕೂಡ ಫಾಲೋ ಮಾಡೀದ್ರೂ ಆಶ್ಚರ್ಯ ಇಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲೂ ಇದೇ ಬದಲಾವಣೆಗಳಾಗಬಹುದು. ಹಾಗಿದ್ರೆ 2024ರ ಐಪಿಎಲ್‌ನಲ್ಲಿ ಏನೆಲ್ಲಾ ಹೊಸ ರೂಲ್ಸ್ಗಳನ್ನ ಜಾರಿಗೊಳಿಸಲಾಗ್ತಿದೆ? ಇದ್ರ ಉದ್ದೇಶವೇನು? ಪ್ಲೇಯರ್ಸ್ ಮೇಲೆ ಯಾವ ರೀತಿ ಎಫೆಕ್ಟ್ ಆಗುತ್ತೆ? ಇವೆಲ್ಲದರ ಬಗ್ಗೆ ಮಾಹಿತಿ ಇಲ್ಲಿದೆ..
ಅಂತಾರಾಷ್ಟ್ರೀಯ ಕ್ರಿಕೆಟ್ನಂತೆ ಐಪಿಎಲ್‌ನಲ್ಲಿ ಕೂಡ ಇದುವರೆಗೆ ಬೌಲರ್ಸ್ಗಳು ಓವರ್ಗೆ ಒಂದು ಬೌನ್ಸರ್ ಮಾತ್ರ ಎಸೆಯಬಹುದಿತ್ತು. ಆದ್ರೆ 2024ರ ಐಪಿಎಲ್‌ನಲ್ಲಿ ಓವರ್ಗೆ ಎರಡು ಬೌನ್ಸರ್ ಎಸೆಯಬಹುದಾಗಿದೆ. ಒಂದೇ ಓವರ್ಗೆ ಎರಡು ಬೌನ್ಸರ್. ಇದ್ರ ಉದ್ದೇಶ ಇಷ್ಟೇ ಬ್ಯಾಟ್ಸ್ಮನ್ ಮತ್ತು ಬಾಲರ್ ನಡುವಿನ ಕಾಂಟೆಸ್ಟ್ನ್ನ ಇನ್ನಷ್ಟು ಕಾಂಪಿಟೇಟಿವ್ ಮಾಡೋಕೆ ಈ ನಿರ್ಧಾರ ಕೈಗೊಳ್ಳಲಾಗಿದೆ. ಫಾಸ್ಟ್ ಬೌಲರ್ಸ್ಗಳು ಎರಡು ಬೌನ್ಸರ್ಗಳನ್ನ ಎಸೆಯೋಕೆ ಸಾಧ್ಯವಾಗೋದ್ರಿಂದ ಬ್ಯಾಟ್ಸ್ಮನ್ ಇನ್ನಷ್ಟು ಚಾಲೆಂಜ್ ಎದುರಿಸಬೇಕಾಗುತ್ತೆ. ಆಗ ಬ್ಯಾಟ್ಸ್ಮನ್ ಮತ್ತು ಬೌಲರ್ಸ್ ನಡುವಿನ ಫೈಟ್ ಇನ್ನಷ್ಟು ತೀವ್ರವಾಗಿರುತ್ತೆ. ಹಾಗಂತಾ ಈ ರೂಲ್ಸ್ನ್ನ ಡಿಢೀರ್ ಅಂತಾ ಜಾರಿ ಮಾಡ್ತಿಲ್ಲ. ಒಂದು ಓವರ್ಗೆ ಎರಡು ಬೌನ್ಸರ್ ಬಗ್ಗೆಯೂ ಒಂದಷ್ಟು ಟೆಸ್ಟ್ ನಡೆಸಲಾಗಿದೆ. 2023ರ ಸೈಯ್ಯದ್ ಮುಷ್ತಾಕ್ ಅಲಿ ಟ್ರೋಫಿ ಟಿ-20 ಟೂರ್ನಿಯಲ್ಲಿ ಅಂದ್ರೆ ನಮ್ಮಲ್ಲಿ ನಡೆಯೋ ಫಸ್ಟ್ ಕ್ಲಾಸ್ ಕ್ರಿಕೆಟ್ ಟೂರ್ನಿಯಲ್ಲಿ ಬೌಲರ್ಸ್ಗಳಿಗೆ ಓವರ್ಗೆ ಎರಡು ಬೌನ್ಸರ್ ಎಸೆಯೋಕೆ ಅವಕಾಶ ನೀಡಲಾಗಿತ್ತು. ಇನ್ನು ಎರಡು ಬೌನ್ಸರ್ಗಳನ್ನ ಎಸೆಯುವಾಗ ಇಲ್ಲಿ ಇನ್ಯಾವುದೇ ರೂಲ್ಸ್ಗಳಿರೋದಿಲ್ಲ. ಬೇಕಿದ್ರೆ ಬೌಲರ್ ಬ್ಯಾಕ್ ಟು ಬ್ಯಾಕ್ ಬೌನ್ಸರ್ ಬೇಕಿದ್ರೂ ಎಸೆಯಬಹುದು. ಅದು ಬೌಲರ್ಗೆ ಬಿಟ್ಟಿರೋದು.
ಇನ್ನು ಫಾಸ್ಟ್ ಬೌಲರ್ಸ್ಗಳ ಪಾಲಿಗಂತೂ ಇದು ನಿಜಕ್ಕೂ ಅಡ್ವಾಂಟೇಜ್. ಟಿ-20 ಕ್ರಿಕೆಟ್ನಲ್ಲಿ ಇದುವರೆಗೂ ಬ್ಯಾಟ್ಸ್ಮನ್ಗಳೇ ಹೆಚ್ಚು ಡಾಮಿನೇಟ್ ಆಗಿದ್ದಾರೆ. ಬೌಲರ್ಸ್ಗಳು ಯಾವಾಗಲೂ ಹೊಡೆಸಿಕೊಳ್ಳೋದೆ ಆಗಿದೆ. ಟಿ-20 ಅನ್ನೋದು ಬೌಲರ್ಸ್ಗಳಿಗೆ ಟಫೆಸ್ಟ್ ಟಾಸ್ಕ್. ಆದ್ರೀಗ ಓವರ್ಗೆ ಎರಡು ಬೌನ್ಸರ್ ಎಸೆಯೋಕೆ ಅವಕಾಶ ನೀಡ್ತಾ ಇರೋದ್ರಿಂದ ಬ್ಯಾಟ್ಸ್ಮನ್ಗಳಿಗೂ ಒಂದಷ್ಟು ಚಾಲೆಂಜ್ ಮಾಡೋಕೆ ಬೌಲರ್ಸ್ಗಳಿಗೆ ಚಾನ್ಸ್ ಸಿಗ್ತಿದೆ. ಯಾಕಂದ್ರೆ ಕೆಲ ಬ್ಯಾಟ್ಸ್ಮನ್ಗಳಿಗೆ ಬೌನ್ಸರ್ಗಳಿಗೆ ಆಡೋಕೆ ಆಗೋದಿಲ್ಲ. ಬೌನ್ಸರ್ ಅನ್ನೋದು ಬ್ಯಾಟ್ಸ್ಮನ್ಗಳ ವೀಕ್ನೆಸ್ ಆಗಿದೆ. ಬೌನ್ಸರ್ ಫೇಸ್ ಮಾಡುವಾಗ ಬ್ಯಾಟ್ಸ್ಮನ್ ತುಂಬಾನೆ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತೆ. ಸರಿಯಾಗಿ ಕನೆಕ್ಟ್ ಆದ್ರೆ ಸಿಕ್ಸ್. ಇಲ್ಲಾಂದ್ರೆ ಕ್ಯಾಚ್. ಹೀಗಾಗಿ ಓವರ್ಗೆ ಎರಡು ಬೌನ್ಸರ್ಗಳು ಅಂದ್ರೆ ಈಗ ಬ್ಯಾಟ್ಸ್ಮನ್ಗಳ ಎದುರು ಬೌಲರ್ಸ್ಗೂ ಅಡ್ವಾಂಟೇಜ್ ಸಿಗಲಿದೆ. ಎಸ್ಪೆಷಲಿ ಡೆತ್ ಓವರ್ಗಳ ಸಂದರ್ಭದಲ್ಲಿ. ಇದುವರೆಗೆ ಡೆತ್ ಓವರ್ಗಳಲ್ಲಿ ರನ್ ಕಂಟ್ರೋಲ್ ಮಾಡೋಕೆ ಬೌಲರ್ಸ್ಗಳಿಗೆ ಯಾರ್ಕರೇ ಮೇನ್ ವೆಪನ್ ಆಗಿತ್ತು. ಬೆಸ್ಟ್ ಯಾರ್ಕರ್ ಎಸೆಯೋ ಬೌಲರ್ಗೆ ಕ್ಯಾಪ್ಟನ್ ಬಾಲ್ ಕೊಡ್ತಿದ್ರು. ಆದ್ರೀಗ ಬೌಲರ್ಸ್ಗಳ ಬತ್ತಳಿಕೆಗೆ ಮತ್ತೊಂದು ಅಸ್ತ್ರ ಸೇರಿಕೊಳ್ತಿದೆ. ಅದು ಬೌನ್ಸರ್.. 2024ರ ಐಪಿಎಲ್‌ನಲ್ಲಿ ಆಡೋ ಪೇಸ್ ಬೌಲರ್ಸ್ಗಳೆಲ್ಲಾ ಈಗ ಬೌನ್ಸರ್ ಎಸೆಯೋಕೆ ಹೆಚ್ಚಿನ ಪ್ರಾಕ್ಟೀಸ್ ಮಾಡಬಹುದು. ಕ್ಯಾಪ್ಟನ್ಗಳೂ ಅಷ್ಟೇ, ಸ್ಲಾಗ್ ಓವರ್ಸ್ಗಳಲ್ಲಿ ಎಫೆಕ್ಟಿವ್ ಆಗಿ ಬೌನ್ಸರ್ ಎಸೆಯೋ ಬೌಲರ್ಗಳಿಗೆ ಬಾಲ್ ನೀಡಬಹುದು.
ಮೇಲ್ನೋಟಕ್ಕೆ ಇದು ಸ್ಮಾಲ್ ಚೇಂಜ್ ಅಷ್ಟೇ ಅಂತಾ ನಮಗೆ ಅನಿಸಬಹುದು. ಆದ್ರೆ ಬೌಲರ್ಸ್ಗಳ ಪಾಲಿಗೆ ಇದು ನಿಜಕ್ಕೂ ಬಿಗ್ ಚೇಂಜ್. ಜೊತೆಗೆ ಓವರ್ಗೆ ಎರಡು ಬೌನ್ಸರ್ನ ಇಂಪ್ಯಾಕ್ಟ್ ಕೂಡ ಬೇರೆ ಲೆವೆಲ್ನಲ್ಲಿರಬಹುದು. ಇದನ್ನ 2024ರ ಐಪಿಎಲ್ ಟೂರ್ನಿಯಲ್ಲಿ ನೀವು ಗಮನಿಸಬಹುದು.
ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ರಿಟೇನ್!
2023ರ ಐಪಿಎಲ್ ಟೂರ್ನಿಯಲ್ಲಿ ಫಾರ್ ದಿ ಫಸ್ಟ್ ಟೈಮ್ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ನ್ನ ಜಾರಿಗೊಳಿಸಲಾಗಿತ್ತು. ಫುಟ್ಬಾಲ್ ಮಾದರಿಯಲ್ಲಿ ಮ್ಯಾಚ್ ಮಧ್ಯೆ ಸಬ್ಸ್ಟಿಟ್ಯೂಟ್ ಪ್ಲೇಯರ್ಸ್ಗಳಿಗೆ ಅವಕಾಶ ನೀಡಲಾಗುತ್ತೆ. ಈ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ನ್ನ ಈಗ ಮತ್ತೆ ರಿಟೇನ್ ಮಾಡಲಾಗಿದೆ. 2024ರ ಐಪಿಎಲ್ ಟೂರ್ನಿಯಲ್ಲೂ ಇಂಪ್ಯಾಕ್ಟ್ ಪ್ಲೇಯರ್ ರೂಲ್ಸ್ ಜಾರಿಯಲ್ಲಿರುತ್ತೆ. ಟಾಸ್ ವೇಳೆಯೇ 4 ಮಂದಿ ಸಬ್ಸ್ಟಿಟ್ಯೂಟ್ ಪ್ಲೇಯರ್ಸ್ಗಳು ಯಾರೆಲ್ಲಾ ಅನ್ನೋದನ್ನ ಎರಡೂ ಟೀಂಗಳೂ ರಿವೀಲ್ ಮಾಡಬೇಕು. ಈ ಪೈಕಿ ಯಾರನ್ನ ಬೇಕಿದ್ರೂ ಇಂಪ್ಯಾಕ್ಟ್ ಪ್ಲೇಯರ್ ಆಗಿ ಆಡಿಸಬಹುದು. ಒಂದು ವೇಳೆ ಟೀಂನಲ್ಲಿ ನಾಲ್ಕು ಮಂದಿ ವಿದೇಶಿ ಆಟಗಾರರು ಇದ್ದಾರೆ ಅಂದ್ರೆ ಆಗ ಇಂಪ್ಯಾಕ್ಟ್ ಪ್ಲೇಯರ್ ಆಗಿ ಕಣಕ್ಕಿಳಿಯುವವನು ಭಾರತೀಯನೇ ಆಗಿರಬೇಕು. ನಾಲ್ಕಕ್ಕಿಂತ ಕಡಿಮೆ ಪ್ಲೇಯರ್ಸ್ ಇದ್ರೆ ಆಗ ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿದೇಶಿ ಆಟಗಾರನನ್ನ ಕೂಡ ಅಖಾಡಕ್ಕಿಳಿಸಬಹುದು.
ಅಂತೂ ಐಪಿಎಲ್‌ನಲ್ಲಿ ಬರ್ತಿರೋ ಹೊಸ ಹೊಸ ರೂಲ್ಸ್ಗಳಿಂದಾಗಿ ಕ್ರಿಕೆಟ್ನ ದಿಕ್ಕೇ ಬದಲಾಗ್ತಿದೆ. ಬ್ರಿಟೀಷರು ಕ್ರಿಕೆಟ್ನ್ನ ಕಂಡು ಹಿಡಿದ್ರೂ ಕೂಡ ಭಾರತೀಯರು ಕ್ರಿಕೆಟ್ನ್ನ ಅಕ್ಷರಶ: ಆಳ್ತಾ ಇದ್ದಾರೆ. ನಾವು 12 ವರ್ಷಗಳಿಂದ ಐಸಿಸಿ ಟೂರ್ನಿ ಗೆದ್ದಿಲ್ಲ ಅನ್ನೋದೇನೋ ನಿಜ. ಆದ್ರೆ ಕಮರ್ಷಿಯಲ್ ವಿಚಾರದಲ್ಲಿ, ಫೈನಾನ್ಷಿಯಲಿ ಎಲ್ಲದರಲ್ಲೂ ಕ್ರಿಕೆಟ್ನ ನೆಕ್ಟ್ಸ್ ಲೆವೆಲ್ಗೆ ತೆಗೆದುಕೊಂಡು ಹೋಗಿರೋದು ಬಿಸಿಸಿಐನೇ. ಅದ್ರಲ್ಲೂ ಐಪಿಎಲ್‌ನಲ್ಲಿ ಸಬ್ಸ್ಟಿಟ್ಯೂಟ್ ಪ್ಲೇಯರ್ಸ್ ಮತ್ತು ಓವರ್ಗೆ ಎರಡು ಬೌನ್ಸರ್ ಅನ್ನೋ ರೂಲ್ಸ್ನಿಂದ ನಿಜಕ್ಕೂ ಕ್ರಿಕೆಟ್ಗೆ ಹೊಸ ಶೇಪ್ ಸಿಗ್ತಾ ಇರೋದು ಸುಳ್ಳಲ್ಲ. ಭವಿಷ್ಯದಲ್ಲಿ ಈ ರೂಲ್ಸ್ಗಳನ್ನ ಐಸಿಸಿ ಅಂತಾರಾಷ್ಟ್ರೀಯ ಕ್ರಿಕೆಟ್ಗೂ ಅಪ್ಲೈ ಮಾಡಿದ್ರೂ ಆಶ್ಚರ್ಯ ಇಲ್ಲ. ನಿಮ್ ಪ್ರಕಾರ ಓವರ್ಗೆ ಎರಡು ಬೌನ್ಸರ್ಗೆ ಅವಕಾಶ ನೀಡ್ತಿರೋದ್ರಿಂದ ಬೌಲರ್ಸ್ಗಳಿಗೆ ಅಡ್ವಾಂಟೇಜ್ ಆಗಲಿದ್ಯಾ? ಅಂತಾರಾಷ್ಟ್ರೀಯ ಟಿ-20 ಕ್ರಿಕೆಟ್ನಲ್ಲೂ ಈ ರೂಲ್ಸ್ ಜಾರಿ ಮಾಡಬೇಕಾ? ಇದು ಎಷ್ಟರ ಮಟ್ಟಿಗೆ ಎಫೆಕ್ಟ್ ಆಗಬಹುದು ಅನ್ನೋದನ್ನು ಕಾದು ನೋಡಬೇಕಿದೆ.