ತವರಿನಲ್ಲೇ ಆರ್​ಸಿಬಿಗೆ ಹೀನಾಯ ಸೋಲು – ಲಕ್ನೋ ಸೂಪರ್​ ಜೈಂಟ್ಸ್​ಗೆ 28 ರನ್‌ಗಳ ಸೂಪರ್‌ ಜಯ

ತವರಿನಲ್ಲೇ ಆರ್​ಸಿಬಿಗೆ ಹೀನಾಯ ಸೋಲು – ಲಕ್ನೋ ಸೂಪರ್​ ಜೈಂಟ್ಸ್​ಗೆ 28 ರನ್‌ಗಳ ಸೂಪರ್‌ ಜಯ

ಹೊಸ ಅಧ್ಯಾಯ ಅಂತಾ ಹೇಳಿಕೊಂಡು ಹಳೇ ಸಂಪ್ರದಾಯವನ್ನು ಮುಂದುವರೆಸಿದೆ ಆರ್‌ಸಿಬಿ ತಂಡ. ಆಟದಲ್ಲಿ ಹೊಸತನವೂ ಕಾಣುತ್ತಿಲ್ಲ. ಸೋಲುವ ರೀತಿಯೂ ಬದಲಾಗಿಲ್ಲ. ಮಂಗಳವಾರ ಲಖನೌ ಸೂಪರ್‌ ಜೈಂಟ್ಸ್‌ ವಿರುದ್ಧ ಆರ್‌ಸಿಬಿ ಟೀಮ್‌ ಹೀನಾಯ ಸೋಲು ಕಂಡಿದೆ.

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ವಿರುದ್ಧ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಹೀನಾಯವಾಗಿ ಸೋತಿದೆ. ಲಕ್ನೋ ನೀಡಿದ ಬಿಗ್​ ಟಾರ್ಗೆಟ್​ ಬೆನ್ನತ್ತಿದ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡದ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಕೇವಲ 16 ಬಾಲ್​ನಲ್ಲಿ 1 ಸಿಕ್ಸರ್​​, 2 ಫೋರ್​ ಸಮೇತ 22 ರನ್​ ಗಳಿಸಿ ಔಟಾಗಿ ನಿರಾಸೆ ಮೂಡಿಸಿದ್ರು. ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ 3 ಫೋರ್​ ಸಮೇತ 19 ರನ್​​ ಪೇರಿಸಿದ್ರು.

ಇದನ್ನೂ ಓದಿ: ಬಿಸಿಲಿನ ಝಳಕ್ಕೆ ರಾಜ್ಯದ ಜನ ತತ್ತರ! – ಮುಂದಿನ 3 ತಿಂಗಳು ಕಾಡಲಿದೆ ರಣಬಿಸಿಲು!

ಇನ್ನು, ಮ್ಯಾಕ್ಸ್​ವೆಲ್​ ಈ ಪಂದ್ಯದಲ್ಲೂ ಡಕೌಟ್​​ ಆದರು. ಕ್ಯಾಮರಾನ್​ ಗ್ರೀನ್​​​ 9 ಬಾಲ್​ಗೆ 9 ರನ್​ ಗಳಿಸಿ ಬೌಲ್ಡ್​ ಆದರು. ಹೀಗಾಗಿ, ಆರ್​​ಸಿಬಿ ಫ್ಯಾನ್ಸ್​​ ಮ್ಯಾಕ್ಸ್​ವೆಲ್​​, ಫಾಫ್​​ ವಿರುದ್ಧ ಭಾರೀ ಆಕ್ರೋಶ ಹೊರಹಾಕಿದ್ದಾರೆ.

ಬಳಿಕ ಕ್ರೀಸ್​ಗೆ ಬಂದ ಮಹಿಪಾಲ್​ ಲೋಮ್ರೋರ್​​ ಲಕ್ನೋ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 13 ಬಾಲ್​ನಲ್ಲಿ 3 ಸಿಕ್ಸರ್​​, 3 ಫೋರ್​ ಸಮೇತ 33 ರನ್​ ಸಿಡಿಸಿದ್ರು. ತನ್ನ ಸ್ಫೋಟಕ ಬ್ಯಾಟಿಂಗ್​ ಮೂಲಕ ಗೆಲುವಿನ ಭರವಸೆ ಮೂಡಿಸಿದ್ರು. ಮೊಹಮ್ಮದ್​ ಸಿರಾಜ್​ 12 ರನ್​ ಗಳಿಸಿದ್ರು. ಆರ್​​ಸಿಬಿ 19.4 ಓವರ್​ಗಳಲ್ಲಿ 153 ರನ್​ಗೆ ಆಲೌಟ್​ ಆಗಿದೆ.

ಟಾಸ್​​ ಸೋತು ಫಸ್ಟ್​ ಬ್ಯಾಟಿಂಗ್​ ಮಾಡಿದ ಲಕ್ನೋ ಸೂಪರ್​ ಜೈಂಟ್ಸ್​ ತಂಡದ ಪರ ಓಪನರ್​ ಆಗಿ ಬಂದ ಕೆ.ಎಲ್​ ರಾಹುಲ್​​ 2 ಫೋರ್​ ಸಮೇತ ಕೇವಲ 20 ರನ್​ ಗಳಿಸಿ ಔಟಾದ್ರು. ಬಹುತೇಕ ಕೊನೆವರೆಗೂ ಕ್ರೀಸ್​ನಲ್ಲಿದ್ದ ಕ್ವಿಂಟನ್​ ಡಿಕಾಕ್​​ ಕೇವಲ 56 ಬಾಲ್​ನಲ್ಲಿ 5 ಸಿಕ್ಸರ್​​, 8 ಫೋರ್​ ಸಮೇತ 81 ರನ್​ ಸಿಡಿಸಿದ್ರು.

ಇನ್ನು, ಮಾರ್ಕಸ್​ ಸ್ಟೊಯ್ನೀಸ್​ 2 ಸಿಕ್ಸರ್​​, 1 ಫೋರ್​ ಸಮೇತ 24, ಕೊನೆಗೆ ಬಂದ ನಿಕೋಲಸ್​ ಪೂರನ್​ ಕೇವಲ 21 ಬಾಲ್​ನಲ್ಲಿ 5 ಸಿಕ್ಸರ್​, 1 ಫೋರ್​ ಸಮೇತ 40 ರನ್​ ಸಿಡಿಸಿದ್ರು. ಪಡಿಕ್ಕಲ್​​​ ಕೇವಲ 6 ರನ್​ ಗಳಿಸಿ ಕೈ ಎತ್ತಿದ್ರು.

Shwetha M