ಕನ್ನಡಿಗ ಕೆ.ಎಲ್​​ ರಾಹುಲ್​ ಮುಂದೆ ಮಂಡಿಯೂರಿದ ಸಿಎಸ್‌ಕೆ – ಗೆದ್ದು ಬೀಗಿದ ಲಕ್ನೋ ಸೂಪರ್​ ಜೈಂಟ್ಸ್​

ಕನ್ನಡಿಗ ಕೆ.ಎಲ್​​ ರಾಹುಲ್​ ಮುಂದೆ ಮಂಡಿಯೂರಿದ ಸಿಎಸ್‌ಕೆ – ಗೆದ್ದು ಬೀಗಿದ ಲಕ್ನೋ ಸೂಪರ್​ ಜೈಂಟ್ಸ್​

ಚೆನ್ನೈ ಸೂಪರ್​ ಕಿಂಗ್ಸ್​  ಹಾಗೂ ಲಕ್ನೋ ಸೂಪರ್​ ಜೈಂಟ್ಸ್ ತಂಡಗಳ ನಡುವೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಎಲ್‌ಎಸ್‌ಜಿ ಗೆದ್ದು ಬೀಗಿದೆ.

ಲಕ್ನೋ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ  ಪಂದ್ಯದಲ್ಲಿ ಸಿಎಸ್‌ಕೆ ನೀಡಿದ ಟಾರ್ಗೆಟ್​​ ಬೆನ್ನತ್ತಿದ ಲಕ್ನೋ ಸೂಪರ್​ ಜೈಂಟ್ಸ್​​ ತಂಡದ ಪರ ಕ್ಯಾಪ್ಟನ್​ ಕನ್ನಡಿಗ ಕೆ.ಎಲ್​​ ರಾಹುಲ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಇನ್ನಿಂಗ್ಸ್​ ಉದ್ಧಕ್ಕೂ ಚೆನ್ನೈ ಬೌಲರ್​ಗಳ ಬೆಂಡೆತ್ತಿದ್ರು. ಕೇವಲ 31 ಎಸೆತಗಳಲ್ಲಿ ತನ್ನ ಅರ್ಧಶತಕ ಸಿಡಿಸಿದ್ರು. ಬಳಿಕ ಬ್ಯಾಟಿಂಗ್​ ಮುಂದುವರಿಸಿದ ರಾಹುಲ್​​ ತಾನು ಆಡಿದ 52 ಬಾಲ್​ನಲ್ಲಿ ಬರೋಬ್ಬರಿ 3 ಸಿಕ್ಸರ್​​, 9 ಫೋರ್​ ಸಮೇತ 82 ರನ್​ ಬಾರಿಸಿದ್ರು. ಕನ್ನಡಿಗನ ಆರ್ಭಟಕ್ಕೆ ಚೆನ್ನೈ ಸೂಪರ್​ ಕಿಂಗ್ಸ್​ ತತ್ತರಿಸಿ ಹೋಗಿದೆ.

ಇದನ್ನೂ ಓದಿ: ಏಪ್ರಿಲ್‌ 25, 26 ರಂದು ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ – ಕಾರಣವೇನು ಗೊತ್ತಾ?

ಇನ್ನೊಂದೆಡೆ ಕನ್ನಡಿಗ ರಾಹುಲ್​ಗೆ ಸಾಥ್​ ನೀಡಿದ ಕ್ವಿಂಟನ್​ ಡಿಕಾಕ್​​ ತಾನು ಆಡಿದ 43 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ ಅರ್ಧಶತಕ ಸಿಡಿಸಿದ್ರೆ, ಬಳಿಕ ಬಂದ ಪೂರನ್​ ಕೇವಲ 12 ಬಾಲ್​ನಲ್ಲಿ 23 ರನ್​ ಬಾರಿಸಿ ಲಕ್ನೋ ತಂಡವನ್ನು ಗೆಲ್ಲಿಸಿದ್ರು.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಪರ ಓಪನರ್​ ಆಗಿ ಬಂದ ರಹಾನೆ 24 ಬಾಲ್​ನಲ್ಲಿ 1 ಸಿಕ್ಸರ್​​, 5 ಫೋರ್​ ಸಮೇತ 36 ರನ್​ ಸಿಡಿಸಿದ್ರು. ಕ್ಯಾಪ್ಟನ್​ ಗಾಯಕ್ವಾಡ್​​​ 17 ರನ್​ ಪೇರಿಸಿದ್ರು.

ರವೀಂದ್ರ ಜಡೇಜಾ 1 ಸಿಕ್ಸರ್​​, 5 ಫೋರ್​ ಸಮೇತ 57 ರನ್​​​ ಗಳಿಸಿದ್ರು. ಮೋಯಿನ್​ ಅಲಿ 20 ಬಾಲ್​ನಲ್ಲಿ 3 ಫೋರ್​ ಸಮೇತ 30 ರನ್​ ಬಾರಿಸಿದ್ರು. ಕೊನೆಗೆ ಬಂದ ಎಂ.ಎಸ್​ ಧೋನಿ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಕೇವಲ 9 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​ ಸಮೇತ 28 ರನ್​ ಸಿಡಿಸಿ ಚೆನ್ನೈ ಬೃಹತ್​ ಮೊತ್ತ ಕಲೆ ಹಾಕಲು ಸಹಾಯ ಮಾಡಿದ್ರು. ಈ ಮೂಲಕ ಲಕ್ನೋಗೆ ಚೆನ್ನೈ ಬರೋಬ್ಬರಿ 177 ರನ್​​ ಟಾರ್ಗೆಟ್​ ಕೊಟ್ಟಿತ್ತು.

Shwetha M