ಕನ್ನಡಿಗ ಕೆ.ಎಲ್ ರಾಹುಲ್ ಮುಂದೆ ಮಂಡಿಯೂರಿದ ಸಿಎಸ್ಕೆ – ಗೆದ್ದು ಬೀಗಿದ ಲಕ್ನೋ ಸೂಪರ್ ಜೈಂಟ್ಸ್
ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವೆ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಎಲ್ಎಸ್ಜಿ ಗೆದ್ದು ಬೀಗಿದೆ.
ಲಕ್ನೋ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಪಂದ್ಯದಲ್ಲಿ ಸಿಎಸ್ಕೆ ನೀಡಿದ ಟಾರ್ಗೆಟ್ ಬೆನ್ನತ್ತಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪರ ಕ್ಯಾಪ್ಟನ್ ಕನ್ನಡಿಗ ಕೆ.ಎಲ್ ರಾಹುಲ್ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಇನ್ನಿಂಗ್ಸ್ ಉದ್ಧಕ್ಕೂ ಚೆನ್ನೈ ಬೌಲರ್ಗಳ ಬೆಂಡೆತ್ತಿದ್ರು. ಕೇವಲ 31 ಎಸೆತಗಳಲ್ಲಿ ತನ್ನ ಅರ್ಧಶತಕ ಸಿಡಿಸಿದ್ರು. ಬಳಿಕ ಬ್ಯಾಟಿಂಗ್ ಮುಂದುವರಿಸಿದ ರಾಹುಲ್ ತಾನು ಆಡಿದ 52 ಬಾಲ್ನಲ್ಲಿ ಬರೋಬ್ಬರಿ 3 ಸಿಕ್ಸರ್, 9 ಫೋರ್ ಸಮೇತ 82 ರನ್ ಬಾರಿಸಿದ್ರು. ಕನ್ನಡಿಗನ ಆರ್ಭಟಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತತ್ತರಿಸಿ ಹೋಗಿದೆ.
ಇದನ್ನೂ ಓದಿ: ಏಪ್ರಿಲ್ 25, 26 ರಂದು ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ – ಕಾರಣವೇನು ಗೊತ್ತಾ?
ಇನ್ನೊಂದೆಡೆ ಕನ್ನಡಿಗ ರಾಹುಲ್ಗೆ ಸಾಥ್ ನೀಡಿದ ಕ್ವಿಂಟನ್ ಡಿಕಾಕ್ ತಾನು ಆಡಿದ 43 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ ಅರ್ಧಶತಕ ಸಿಡಿಸಿದ್ರೆ, ಬಳಿಕ ಬಂದ ಪೂರನ್ ಕೇವಲ 12 ಬಾಲ್ನಲ್ಲಿ 23 ರನ್ ಬಾರಿಸಿ ಲಕ್ನೋ ತಂಡವನ್ನು ಗೆಲ್ಲಿಸಿದ್ರು.
ಟಾಸ್ ಸೋತರೂ ಫಸ್ಟ್ ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪರ ಓಪನರ್ ಆಗಿ ಬಂದ ರಹಾನೆ 24 ಬಾಲ್ನಲ್ಲಿ 1 ಸಿಕ್ಸರ್, 5 ಫೋರ್ ಸಮೇತ 36 ರನ್ ಸಿಡಿಸಿದ್ರು. ಕ್ಯಾಪ್ಟನ್ ಗಾಯಕ್ವಾಡ್ 17 ರನ್ ಪೇರಿಸಿದ್ರು.
ರವೀಂದ್ರ ಜಡೇಜಾ 1 ಸಿಕ್ಸರ್, 5 ಫೋರ್ ಸಮೇತ 57 ರನ್ ಗಳಿಸಿದ್ರು. ಮೋಯಿನ್ ಅಲಿ 20 ಬಾಲ್ನಲ್ಲಿ 3 ಫೋರ್ ಸಮೇತ 30 ರನ್ ಬಾರಿಸಿದ್ರು. ಕೊನೆಗೆ ಬಂದ ಎಂ.ಎಸ್ ಧೋನಿ ಭರ್ಜರಿ ಬ್ಯಾಟಿಂಗ್ ಮಾಡಿದ್ರು. ಕೇವಲ 9 ಬಾಲ್ನಲ್ಲಿ 2 ಸಿಕ್ಸರ್, 3 ಫೋರ್ ಸಮೇತ 28 ರನ್ ಸಿಡಿಸಿ ಚೆನ್ನೈ ಬೃಹತ್ ಮೊತ್ತ ಕಲೆ ಹಾಕಲು ಸಹಾಯ ಮಾಡಿದ್ರು. ಈ ಮೂಲಕ ಲಕ್ನೋಗೆ ಚೆನ್ನೈ ಬರೋಬ್ಬರಿ 177 ರನ್ ಟಾರ್ಗೆಟ್ ಕೊಟ್ಟಿತ್ತು.