ಗುಜರಾತ್ ಟೈಟಾನ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ – ಗುಜರಾತ್​ ​ಗೆ ಹೀನಾಯ ಸೋಲು!

ಗುಜರಾತ್ ಟೈಟಾನ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ – ಗುಜರಾತ್​ ​ಗೆ ಹೀನಾಯ ಸೋಲು!

ಡೆಲ್ಲಿ ಕ್ಯಾಪಿಟಲ್ಸ್‌  ಹಾಗೂ ಗುಜರಾತ್​ ಟೈಟನ್ಸ್ ನಡುವೆ ನಡೆದ ಹೈವೋಲ್ಟೇಜ್‌ ಪಂದ್ಯದಲ್ಲಿ ಡೆಸಿ ಗೆದ್ದು ಬೀಗಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡ ಗುಜರಾತ್ ಟೈಟಾನ್ಸ್ ವಿರುದ್ಧ 4 ರನ್‌ಗಳ ರೋಚಕ ಗೆಲುವು ಸಾಧಿಸಿದೆ.

ನ್ಯೂಡೆಲ್ಲಿ ಅರುಣ್​ ಜೇಟ್ಲಿ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​   ಪಂದ್ಯದಲ್ಲಿ ಡೆಲ್ಲಿ ನೀಡಿದ ಬಿಗ್ ಟಾರ್ಗೆಟ್​ ಬೆನ್ನತ್ತಿದ ಗುಜರಾತ್​ ಟೈಟನ್ಸ್​ ಆರಂಭದಲ್ಲೇ ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಕ್ಯಾಪ್ಟನ್​ ಶುಭ್ಮನ್​ ಗಿಲ್​ ಕೇವಲ 6 ರನ್​ಗೆ ವಿಕೆಟ್ ಒಪ್ಪಿಸಿದ್ರು. ವೃದ್ಧಿಮಾನ್​ ಸಾಹ 1 ಸಿಕ್ಸರ್​, 5 ಫೋರ್​ ಸಮೇತ 39 ರನ್​ ಸಿಡಿಸಿದ್ರು.

ಇದನ್ನೂ ಓದಿ: CSK ಸೋಲಿಗೆ ಧೋನಿ ಕಾರಣನಾ? – ಚಹಾರ್ ಗೆ ಬೌಲಿಂಗ್ ಕೊಟ್ಟಿಲ್ಲ ಯಾಕೆ? -ತಲೈವಾ ಫ್ಯಾನ್ಸ್ ರೊಚ್ಚಿಗೆದ್ದಿದ್ದೇಕೆ?

ಬಳಿಕ ಬಂದ ಸಾಯಿಸುದರ್ಶನ್​​ ಅದ್ಭುತ ಬ್ಯಾಟಿಂಗ್​ ಮಾಡಿದ್ರು. ಕೇವಲ 39 ಬಾಲ್​ನಲ್ಲಿ 2 ಸಿಕ್ಸರ್​​, 7 ಫೋರ್​​ ಸಮೇತ 65 ರನ್​ ಚಚ್ಚಿದ್ರು. ಇವರಿಗೆ ಸಾಥ್​ ಕೊಟ್ಟ ಡೇವಿಡ್​ ಮಿಲ್ಲರ್​ 23 ಬಾಲ್​ನಲ್ಲಿ 3 ಸಿಕ್ಸರ್​​, 6 ಫೋರ್​ನೊಂದಿಗೆ 55 ರನ್​​ ಬಾರಿಸಿದ್ರು. ಶಾರುಖ್​ ಖಾನ್​ 8, ಸಾಯ್​ ಕಿಶೋರ್​ 13, ರಶೀದ್ ಖಾನ್​​ 21 ರನ್​ ಗಳಿಸಿದ್ರೂ ಸೋತರು. ಗುಜರಾತ್​​ 20 ಓವರ್​ಗಳಲ್ಲಿ 220 ರನ್​ ಗಳಿಸಿ ಫೈಟ್​ ನೀಡಿತ್ತು.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್​​ ಪರ ಓಪನರ್​ ಆಗಿ ಬಂದ ಪೃಥ್ವಿ ಶಾ ಕೇವಲ 11 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಬಳಿಕ ಮತ್ತೋರ್ವ ಓಪನರ್​ ಜೇಕ್ ಫ್ರೇಸರ್​​ ಅವರು 14 ಬಾಲ್​ನಲ್ಲಿ 2 ಸಿಕ್ಸರ್​, 2 ಫೋರ್​ ಸಮೇತ 23 ರನ್​ ಸಿಡಿಸಿದ್ರು.

ಬಳಿಕ ಬಂದ ಅಕ್ಷರ್​ ಪಟೇಲ್​​ ಕೇವಲ 43 ಬಾಲ್​ನಲ್ಲಿ 4 ಸಿಕ್ಸರ್​​, 5 ಫೋರ್​ನೊಂದಿಗೆ 66 ರನ್​ ಚಚ್ಚಿದ್ರು. ಇವರಿಗೆ ಸಾಥ್​ ಕೊಟ್ಟ ರಿಷಭ್​ ಪಂತ್​​ ಕೇವಲ 43 ಬಾಲ್​ನಲ್ಲಿ 8 ಸಿಕ್ಸರ್​​, 5 ಫೋರ್​ನೊದಿಗೆ 88 ರನ್​ ಸಿಡಿಸಿದ್ರು. ಕೊನೆಗೆ ಬಂದ ಸ್ಟಬ್ಸ್​ 7 ಬಾಲ್​ನಲ್ಲಿ 2 ಸಿಕ್ಸರ್​​, 3 ಫೋರ್​​ ಸಮೇತ 26 ರನ್​ ಬಾರಿಸಿದ್ರು. ಡೆಲ್ಲಿ ಕ್ಯಾಪಿಟಲ್ಸ್​ ನಿಗದಿತ 20 ಓವರ್​ನಲ್ಲಿ 4 ವಿಕೆಟ್​ ನಷ್ಟಕ್ಕೆ 224 ರನ್​ ಕಲೆ ಹಾಕಿತ್ತು.

Shwetha M